AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಗ್ಗಂಟಾದ ಮಂಗಳೂರಿನ ಆಕಾಂಕ್ಷ ಸಾವಿನ ಪ್ರಕರಣ: ಪಂಜಾಬ್ ಸಿಎಂಗೆ ಪತ್ರ ಬರೆದ ಕುಟುಂಬಸ್ಥರು

ಧರ್ಮಸ್ಥಳದ ಆಕಾಂಕ್ಷ ಪಂಜಾಬ್​​ನಲ್ಲಿ ನಿಗೂಢ ಸಾವು ಕೇಸ್​ ಸದ್ಯ ಕಗ್ಗಂಟಾಗಿದೆ. ಕಾಲೇಜಿನಲ್ಲಿ ಈ ಹಿಂದೆ ಇಂತಹ ಘಟನೆಗಳು ನಡೆದಿರುವುದರಿಂದ ಕಾಲೇಜಿನ ಮೇಲೆ ಅನುಮಾನ ವ್ಯಕ್ತವಾಗಿದ್ದು, ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಆಕಾಂಕ್ಷ ಪೋಷಕರು ಪಂಜಾಬ್ ಸಿಎಂ ಭಗವಂತ್​ ಮಾನ್​ಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.

ಕಗ್ಗಂಟಾದ ಮಂಗಳೂರಿನ ಆಕಾಂಕ್ಷ ಸಾವಿನ ಪ್ರಕರಣ: ಪಂಜಾಬ್ ಸಿಎಂಗೆ ಪತ್ರ ಬರೆದ ಕುಟುಂಬಸ್ಥರು
ಮೃತ ಆಕಾಂಕ್ಷ, ಪಂಜಾಬ್ ಸಿಎಂ ಭಗವಂತ್​ ಮಾನ್
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ಗಂಗಾಧರ​ ಬ. ಸಾಬೋಜಿ|

Updated on: May 19, 2025 | 4:29 PM

Share

ಮಂಗಳೂರು, ಮೇ 19: ಪಂಜಾಬ್​​ನಲ್ಲಿ ಧರ್ಮಸ್ಥಳದ (Dharmasthala) ಆಕಾಂಕ್ಷ ನಿಗೂಢ ಸಾವು ಕೇಸ್​​ಗೆ ಸಂಬಂಧಿಸಿದಂತೆ ಪ್ರೇಮ ವೈಫಲ್ಯದಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದು ಈಗಾಗಲೇ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ ಆಕಾಂಕ್ಷ ಸಾವಿನಲ್ಲಿ ಕಾಲೇಜಿನ ಮೇಲೆ ಸಾಕಷ್ಟು ಅನುಮಾನಗಳು ಮೂಡಿವೆ. ಈ ಹಿನ್ನೆಲೆ ಪಂಜಾಬ್ ಸಿಎಂ ಭಗವಂತ್​ ಮಾನ್​ಗೆ (Bhagwant Mann) ಮೃತಾ ಆಕಾಂಕ್ಷ ಪೋಷಕರು ಪತ್ರ ಬರೆದಿದ್ದು, ಸರ್ಕಾರ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವಂತೆ ಮನವಿ ಮಾಡಿದ್ದಾರೆ.

ಈ ಹಿಂದೆ ಎಲ್​​ಪಿಸಿ ಕ್ಯಾಂಪಸ್​ನಲ್ಲಿ ಇದೇ ರೀತಿ ಹಲವು ಅಸಹಜ ಸಾವುಗಳಾಗಿವೆ. ಇದರಲ್ಲಿ ಕಾಲೇಜಿನ ಕೈವಾಡ ಹೆಚ್ಚಾಗಿ ಕಂಡು ಬರುತ್ತಿದೆ. ಸರಿಯಾದ ತನಿಖೆ ನಡೆದರೆ ಮಾತ್ರ ಸತ್ಯ ಹೊರಬರುತ್ತದೆ. ಸರಿಯಾಗಿ ತನಿಖೆ ನಡೆಸುವಂತೆ ಪಂಜಾಬ್​ ಸಿಎಂಗೆ ಪತ್ರ ಬರೆದಿದ್ದಾರೆ.

ಪ್ರಕರಣ ತಿರುಚಲು ಯತ್ನ: ಕಾಲೇಜು ಮತ್ತು ಪೊಲೀಸ್ ಇಲಾಖೆ ವಿರುದ್ಧ ಆರೋಪ

ಇನ್ನು ಪ್ರಕರಣ ತಿರುಚಲು ಯತ್ನಿಸುತ್ತಿದ್ದಾರೆ ಎಂದು ಆಕಾಂಕ್ಷ ಪೋಷಕರು ಕಾಲೇಜು ಮತ್ತು ಪೊಲೀಸ್ ಇಲಾಖೆ ವಿರುದ್ಧ ಆರೋಪ ಮಾಡಿದ್ದಾರೆ. ಇನ್ನು ಕೂಡ ಎಫ್​​ಐಆರ್​​ ದಾಖಲಾಗಿಲ್ಲ. ಎಫ್​ಐಆರ್​ ದಾಖಲಾಗದಿರುವುದರಿಂದ ಮರಣೋತ್ತರ ಪರೀಕ್ಷೆ ಕೂಡ ಆಗಿಲ್ಲ.

ಇದನ್ನೂ ಓದಿ: ಪಂಜಾಬ್​ನಲ್ಲಿ ಧರ್ಮಸ್ಥಳದ ಯುವತಿ ಸಾವಿನ ಕಾರಣ ಕೊನೆಗೂ ಬಹಿರಂಗ

ಕಾಲೇಜಿನವರು ನೀಡಿದ ಮಾಹಿತಿ ಆಧಾರದಲ್ಲಿ ಎಫ್​ಐಆರ್​ ಮಾಡಲು ಬಿಡಲ್ಲವೆಂದು ಪೋಷಕರು ಪಟ್ಟು ಹಿಡಿದಿದ್ದು, ಇತ್ತ ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರೊಫೆಸರ್ ವಿರುದ್ಧ ಎಫ್​​ಐಆರ್ ಹಾಕಲು ಪೊಲೀಸರು ಹಿಂದೇಟು ಆರೋಪ ಕೇಳಿಬಂದಿದೆ. ಇದರಿಂದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆಕಾಂಕ್ಷ ಪೋಷಕರು ದೂರು ನೀಡಿದ್ದಾರೆ.

ಆಕಾಂಕ್ಷ ಪೋಷಕರನ್ನು ಭೇಟಿ ಮಾಡಿದ ಹಿರಿಯ ಪೊಲೀಸ್ ಅಧಿಕಾರಿಗಳು

ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಆಕಾಂಕ್ಷ ಪೋಷಕರನ್ನು ಜಲಂಧರ್​ನ ಡಿಐಜಿ ನವೀನ್ ಸಿಂಗ್ಲಾ ಮತ್ತು ಎಸ್​​ಪಿ ರೂರೇಂಧರ್​ ಭಾಟ್ಟಿ ಕೌರ್ ಭೇಟಿ ಮಾಡಿದ್ದಾರೆ. ಈ ವೇಳೆ ಘಟನೆಯನ್ನು ವಿವರಿಸಿ ಪೋಷಕರ ಅಹವಾಲು ಸ್ವೀಕರಿಸಿದ್ದಾರೆ. ಕಾಲೇಜಿನ ವಿರುದ್ಧ ಪ್ರಕರಣ ದಾಖಲಿಸುವಂತೆ ಪೋಷಕರು ಆಗ್ರಹಿಸಿದ್ದಾರೆ. ಆದರೆ ಆ ರೀತಿ ಮಾಡಲು ಆಗಲ್ಲ ಅಂತಾ ಪೊಲೀಸರು ಹೇಳಿದ್ದಾರೆ. ಹಾಗಾಗಿ ಆಕಾಂಕ್ಷ ಸಾವು ಪ್ರಕರಣ ಇನ್ನು ಕೂಡ ಕಗ್ಗಂಟಾಗಿದೆ.

ಇದನ್ನೂ ಓದಿ: ಪಂಜಾಬ್​​ನಲ್ಲಿ ಧರ್ಮಸ್ಥಳ ಯುವತಿ ನಿಗೂಢ ಸಾವು: ಸರ್ಟಿಫಿಕೇಟ್ ತರಲು ಹೋಗಿ ದುರಂತ ಅಂತ್ಯ

22 ವರ್ಷದ ಆಕಾಂಕ್ಷ ಪಂಜಾಬ್​ನ ಪಗ್ವಾರದಲ್ಲಿರುವ ಲವ್ಲಿ ಪ್ರೊಫೆಷನಲ್​ ಕಾಲೇಜ್​ನಲ್ಲಿ ಏರೋನಾಟಿಕ್ ಇಂಜಿನಿಯರಿಂಗ್ ಮುಗಿಸಿದ್ದಳು. 6 ತಿಂಗಳಿಂದ ದೆಹಲಿಯ ಸ್ಪೈಸ್ ಜೆಟ್ ಏರೋಸ್ಪೇಸ್​ನಲ್ಲಿ ಕೆಲಸ ಮಾಡುತ್ತಿದ್ದಳು. ಹೆಚ್ಚುವರಿ ಕೋರ್ಸ್​​ಗಾಗಿ ಜರ್ಮನಿಗೆ ತೆರಳೋದಕ್ಕಾಗಿ ಸಜ್ಜಾಗಿದ್ದಳು. ಅಷ್ಟರಲ್ಲಿ ದುರಂತ ಸಂಭವಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.