ಪಂಜಾಬ್‌ನಲ್ಲಿ ಧರ್ಮಸ್ಥಳ ಯುವತಿ ನಿಗೂಢ ಸಾವು: ಸರ್ಟಿಫಿಕೇಟ್ ತರಲು ಹೋಗಿ ದುರಂತ ಅಂತ್ಯ
ಧರ್ಮಸ್ಥಳ ಮೂಲದ 22 ವರ್ಷದ ಏರೋಸ್ಪೇಸ್ ಇಂಜಿನಿಯರ್ ಯುವತಿ ಪಂಜಾಬ್‌ನಲ್ಲಿ ನಿಗೂಢವಾಗಿ ಮೃತಪಟ್ಟಿರುವಂತಹ ಘಟನೆ ನಡೆದಿದೆ. ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೃತ ಆಕಾಂಕ್ಷಾ ಉದ್ಯೋಗ ಮಾಡಲು ಜಪಾನ್ಗೆ ಹೋಗಲು ಪ್ಲ್ಯಾನ್ ನಡೆಸಿದ್ದರು ಎನ್ನಲಾಗಿದೆ. ಇದಕ್ಕಾಗಿ ಕಾಲೇಜಿನಿಂದ ಸರ್ಟಿಫಿಕೇಟ್ ಸಹ ಪಡೆದುಕೊಂಡಿದ್ದರು.

ಮಂಗಳೂರು, ಮೇ 18: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ (Dharmasthala) ಮೂಲದ ಯುವತಿ (girl) ಪಂಜಾಬ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವಂತಹ ಘಟನೆ ಮೇ. 17 ರಂದು ಸಂಜೆ ನಡೆದಿದೆ. ಏರೋಸ್ಪೇಸ್ನ ಉದ್ಯೋಗಿ ಆಕಾಂಕ್ಷಾ ಎಸ್. ನಾಯರ್(22) ಮೃತ ಯುವತಿ. 3ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಮಗಳ ಸಾವಿನ ವಿಷಯ ತಿಳಿಯುತ್ತಿದ್ದಂತೆ ಮೃತ ಆಕಾಂಕ್ಷಾ ಪೋಷಕರಾದ ಸುರೇಂದ್ರ ಮತ್ತು ಸಿಂಧೂದೇವಿ ನಿನ್ನೆಯೇ ಪಂಜಾಬ್ಗೆ ತೆರಳಿದ್ದಾರೆ. ಜಲಂಧರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಂಜಾಬ್ನ ಎಲ್.ಸಿ.ಯು ಪಗ್ವಾಡ ಕಾಲೇಜಿನಲ್ಲಿ ಓದಿದ್ದ ಆಕಾಂಕ್ಷಾ, 6 ತಿಂಗಳಿಂದ ದೆಹಲಿಯಲ್ಲಿ ಏರೋಸ್ಪೇಸ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಉದ್ಯೋಗಕ್ಕೆ ಜಪಾನ್ಗೆ ಹೋಗಲು ಪ್ಲ್ಯಾನ್ ಕೂಡ ನಡೆಸಿದ್ದರು. ಇದಕ್ಕಾಗಿ ನಿನ್ನೆ ಕಾಲೇಜಿಗೆ ತೆರಳಿ ಸರ್ಟಿಫಿಕೇಟ್ ಪಡೆದುಕೊಂಡು ಬಂದಿದ್ದರು. ಈ ವಿಚಾರವನ್ನು ಫೋನ್ ಮಾಡಿ ಆಕಾಂಕ್ಷಾ ತನ್ನ ಪೋಷಕರಿಗೂ ತಿಳಿಸಿದ್ದಾಳೆ.
ಇದನ್ನೂ ಓದಿ: ಸುಹಾಸ್ ಶೆಟ್ಟಿ ಕೊಲೆಯ ಪ್ರತೀಕಾರಕ್ಕೆ ಹಿಂದೂ ಸಮಾಜ ಕಾದು ಕೂತಿದೆ: ಭಜರಂಗದಳ ಮುಖಂಡ
ಇನ್ನು ಪಂಜಾಬ್ಗೆ ತೆರಳುತ್ತಿದ್ದಾಗ ಮೃತ ಆಕಾಂಕ್ಷಾ ಪೋಷಕರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಶಾಸಕ ಹರೀಶ್ ಪೂಂಜಾ ಸಾಂತ್ವನ ಹೇಳಿದ್ದಾರೆ. ಈ ವೇಳೆ ‘ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಇದು ಕೊಲೆ ಆಗಿರಬಹುದು’ ಎಂದು ಆಕಾಂಕ್ಷಾ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಮೃತ ಆಕಾಂಕ್ಷಾ ತಂದೆ ಸುರೇಂದ್ರ ಹೇಳಿದ್ದಿಷ್ಟು
ಟಿವಿ9 ಜೊತೆ ಮೃತ ಆಕಾಂಕ್ಷಾ ತಂದೆ ಸುರೇಂದ್ರ ಪ್ರತಿಕ್ರಿಯಿಸಿದ್ದು, ಜರ್ಮನ್ಗೆ ಹೋಗಿ ಎರಡು ವರ್ಷ ಕೋರ್ಸ್ ಮಾಡುವ ಆಸೆ ಇತ್ತು. ಅದಕ್ಕಾಗಿ ಸರ್ಟಿಫಿಕೇಟ್ ಒಂದು ಸಿಕ್ಕಿರಲಿಲ್ಲ. ಕಾಲೇಜಿನಲ್ಲಿ ಕೇಳಿದ್ದಕ್ಕೆ, ಕಳಿಸಲು ಆಗಲ್ಲ ಇಲ್ಲಿಗೆ ಬನ್ನಿ ಅಂತಾ ಹೇಳಿದ್ದರಂತೆ. ನಿನ್ನೆ ಪಂಜಾಬ್ಗೆ ಹೋಗಿ ಸ್ನೇಹಿತೆಯರ ರೂಮ್ನಲ್ಲಿ ಉಳಿದುಕೊಂಡಿದ್ದಾಳೆ ಎಂದಿದ್ದಾರೆ.
ಓರ್ವ ಸ್ನೇಹಿತ ಆಕೆಯನ್ನು ಕಾಲೇಜಿಗೆ ಡ್ರಾಪ್ ಮಾಡಿದ್ದಾನೆ. ಬೆಳಗ್ಗೆ 9.30ಕ್ಕೆ ಕಾಲೇಜಿಗೆ ಹೋಗಿದ್ದಾಳೆ. 11.30 ಕಾಲೇಜಿನಲ್ಲೇ ಇದ್ದೇನೆ ಅಂತಾ ಮೆಸೇಜ್ ಮಾಡಿದ್ದಾಳೆ. ಮಧ್ಯಾಹ್ನ ಕರೆ ಮಾಡಿದರೆ ರಿಸೀವ್ ಮಾಡಲಿಲ್ಲ. ಸಂಜೆ ಜಲಂದರ್ ಪೊಲೀಸ್ ಠಾಣೆಯಿಂದ ಕರೆ ಮಾಡಿ ನಿಮ್ಮ ಮಗಳು ಕಾಲೇಜಿನ ನಾಲ್ಕನೇ ಮಹಡಿಯಿಂದ ಬಿದ್ದಿದ್ದಾಳೆ ಎಂದರು. ಹೆಚ್ಚಿನ ಮಾಹಿತಿ ನೀಡುತ್ತಿಲ್ಲ. ಕೇಳಿದರೆ ನೀವು ಬನ್ನಿ ಎಂದು ಹೇಳುತ್ತಿದ್ದಾರೆ. ಸರ್ಟಿಫಿಕೇಟ್ ವಿಚಾರದಲ್ಲಿ ಕಾಲೇಜಿನವರಿಂದ ಏನೋ ತೊಂದರೆ ಆಗಿದೆ ಎನ್ನುವ ಅನುಮಾನವಿದೆ. ಈಗ ದೆಹಲಿ ಏರ್ಪೋರ್ಟ್ನಲ್ಲಿದ್ದೇವೆ. ಮಧ್ಯಾಹ್ನ 2.30ಕ್ಕೆ ಅಮೃತಸರ ವಿಮಾನವಿದೆ. ಸಂಜೆ ವೇಳೆಗೆ ಅಲ್ಲಿ ತಲುಪುತ್ತೇವೆ ಎಂದು ಹೇಳಿದ್ದಾರೆ.
ನಿಂತಿದ್ದ ಕಾಲೇಜ್ ಬಸ್ಗೆ ಖಾಸಗಿ ಬಸ್ ಡಿಕ್ಕಿ: 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ
ನಿಂತಿದ್ದ ಕಾಲೇಜು ಬಸ್ಗೆ ಖಾಸಗಿ ಬಸ್ ಡಿಕ್ಕಿಯಾಗಿ ಅವಘಡ ಸಂಭವಿಸಿರುವಂತಹ ಘಟನೆ ಮಂಗಳೂರು ನಗರದ ಬಲ್ಮಠ ಎಂಬಲ್ಲಿ ನಡೆದಿದೆ. ಸುಮಾರು 10 ರಿಂದ 15 ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಸ್ತೆಬದಿ ನಿಂತಿದ್ದ ಬಲ್ಮಠದ ಖಾಸಗಿ ನರ್ಸಿಂಗ್ ಕಾಲೇಜ್ ಬಸ್ಗೆ ಈ ವೇಳೆ ಏಕಾಏಕಿ ವೇಗವಾಗಿ ಬಂದು ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಮಂಗಳೂರಿನ ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾಗಿದ್ದ ವ್ಯಕ್ತಿ ಭೀಷ್ಮ ಕೆರೆಯಲ್ಲಿ ಶವವಾಗಿ ಪತ್ತೆ
ಕಾಣೆಯಾಗಿದ್ದ ವ್ಯಕ್ತಿ ಗದಗ ನಗರದಲ್ಲಿರುವ ಐತಿಹಾಸಿಕ ಭೀಷ್ಮ ಕೆರೆಯಲ್ಲಿ ಶವವಾಗಿ ಪತ್ತೆ ಆಗಿರುವಂತಹ ಘಟನೆ ನಡೆದಿದೆ. ನಗರದ ತೆಗ್ಗಿನಲಾಟ್ ಓಣಿಯ ಯಲ್ಲಪ್ಪ ಸಲಗಾರ ಮೃತ ವ್ಯಕ್ತಿ. ಮೂತ್ರ ವಿಸರ್ಜನೆಗೆಂದು ಕೆರೆ ಬಳಿ ತೆರಳಿದ್ದ ಯಲ್ಲಪ್ಪ ಸಲಗಾರ, ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು ಸ್ಥಳದಲ್ಲೇ ಕುಸಿದು ಬಿದ್ದಿದ್ದ.
ಇದನ್ನೂ ಓದಿ: ಮಹಿಳೆಗೆ ಗುಪ್ತಾಂಗ ತೋರಿಸಿದ ಉಪಾಧ್ಯಕ್ಷ: ದೂರು ದಾಖಲಾಗುತ್ತಿದ್ದಂತೆಯೇ ಬಿಜೆಪಿಯಿಂದ ಉಚ್ಛಾಟನೆ
ಯಾರೂ ಗಮನಿಸಿದ ಹಿನ್ನಲೆ ಯಲ್ಲಪ್ಪ ಮೃತ ಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆ ಶವ ಪತ್ತೆ ಬಗ್ಗೆ ಕುಟುಂಬಸ್ಥರಿಗೆ ವಾಟರ್ಮ್ಯಾನ್ ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಶಹರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:16 am, Sun, 18 May 25







