ಬೆಳ್ತಂಗಡಿ ಠಾಣೆಗೆ ಕೇಸ್ ವರ್ಗಾವಣೆ: ಗಿರೀಶ್ ಮಟ್ಟಣ್ಣನವರ್​ಗೆ​ ಮತ್ತೊಂದು ಸಂಕಷ್ಟ!

ಧರ್ಮಸ್ಥಳದಲ್ಲಿ ಶವ ಹೂತಿದ್ದಾಗಿ ಹೇಳಿದ್ದ ಚಿನ್ನಯ್ಯ ಬಂಧನ ವಿಚಾರವಾಗಿ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ತಮ್ಮನ ಮನೆಯಲ್ಲಿ ಎಸ್ಐಟಿ ಶೋಧ ನಡೆಸಿದಿದೆ. ಈ ಮಧ್ಯೆ ಗಿರೀಶ್ ಮಟ್ಟಣ್ಣನವರ್​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಜೈನ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಿಡಿ ಧಾರವಾಡದಲ್ಲಿ ದಾಖಲಾಗಿ ಪ್ರಕರಣವನ್ನು ಬೆಳ್ತಂಗಡಿ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಬೆಳ್ತಂಗಡಿ ಠಾಣೆಗೆ ಕೇಸ್ ವರ್ಗಾವಣೆ: ಗಿರೀಶ್ ಮಟ್ಟಣ್ಣನವರ್​ಗೆ​ ಮತ್ತೊಂದು ಸಂಕಷ್ಟ!
ಗಿರೀಶ್ ಮಟ್ಟಣ್ಣನವರ್
Updated By: ಗಂಗಾಧರ​ ಬ. ಸಾಬೋಜಿ

Updated on: Aug 26, 2025 | 6:03 PM

ಮಂಗಳೂರು, ಆಗಸ್ಟ್​ 26: ಜೈನ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಡಿ ಗಿರೀಶ್ ಮಟ್ಟಣ್ಣನವರ್ (Girish Mattannavar) ವಿರುದ್ಧ ಧಾರವಾಡದಲ್ಲಿ (Dharwad) ದಾಖಲಾಗಿದ್ದ ಪ್ರಕರಣವನ್ನು ಇದೀಗ ಬೆಳ್ತಂಗಡಿ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಆ ಮೂಲಕ ಗಿರೀಶ್ ಮಟ್ಟಣ್ಣನವರ್​ಗೆ ಮತ್ತೊಂದು ಸಂಕಷ್ಟ ಶುರುವಾಗಿದೆ. ಯೂಟ್ಯೂಬ್​​ ಚಾನಲ್ ಒಂದರಲ್ಲಿ ಜೈನ ಧರ್ಮದ ವಿರುದ್ಧ ಮಟ್ಟಣ್ಣನವರ್ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎನ್ನಲಾಗಿತ್ತು.

ಗಿರೀಶ್ ಮಟ್ಟಣ್ಣನವರ್ ಹೇಳಿದ್ದೇನು?

ಯೂಟ್ಯೂಬ್​​ ಚಾನಲ್ ಒಂದರಲ್ಲಿ ಮಾತನಾಡಿದ್ದ ಗಿರೀಶ್ ಮಟ್ಟಣ್ಣನವರ್, ‘ಮದುವೆಯಾದ ಹೆಣ್ಣುಮಗಳು ಜೈನ ರಾಜರೊಂದಿಗೆ ಮೊದಲರಾತ್ರಿ ಕಳೆಯಬೇಕಿತ್ತು. ಏಕಾಶಿಲಾ ಮೂರ್ತಿ ನಿರ್ಮಾಣ ಮಾಡಿದ ಶಿಲ್ಪಿಗಳ ಕೈ ಕತ್ತರಿಸುತ್ತಿದ್ದರು’ ಎಂದು ಸಂದರ್ಶನದಲ್ಲಿ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಸರ್ಕಾರದ ಇಂಧನ ಖರ್ಚಾಗುವುದು ಬೇಡ ಅಂತ ಅರೆಸ್ಟ್ ಆಗಲು ನಾವೇ ಠಾಣೆಗೆ ಬಂದಿದ್ದೇವೆ: ಗಿರೀಶ್ ಮಟ್ಟಣ್ಣನವರ್

ಇದನ್ನೂ ಓದಿ
ತಿಮರೋಡಿ ಜತೆಗಿನ ನಂಟಿನ ಬಗ್ಗೆ SIT ಅಧಿಕಾರಿಗಳಿಗೆ ಮಾಹಿತಿ ಕೊಟ್ಟ ಚಿನ್ನಯ್ಯ
ಧರ್ಮಸ್ಥಳ ಕೇಸ್: ಯುಟ್ಯೂಬರ್ ಸಮೀರ್ ಖಜಾನೆಗೆ ಕೈ ಹಾಕಿದ ಖಾಕಿ
ನನ್ನನ್ನು ಎಸ್​ಐಟಿ ವಿಚಾರಣೆಗೆ ಕರೆದರೆ ಹೋಗುತ್ತೇನೆ: ಗಿರೀಶ್ ಮಟ್ಟಣ್ಣನವರ್
ನಿಯಮಗಳನ್ನು ಉಲ್ಲಂಘಿಸಿ ತಿಮರೋಡಿಯವರನ್ನು ಬಂಧಿಸಲಾಗಿದೆ: ಮಟ್ಟಣ್ಣನವರ್

ಇನ್ನು ಈ ಹೇಳಿಕೆ ವಿಚಾರವಾಗಿ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಮಂಜುನಾಥ್​ ಎಂಬುವವರು ದೂರು  ಧಾರವಾಡ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.​ ಹಾಗಾಗಿ ಗಿರೀಶ್ ಮಟ್ಟಣ್ಣನವರ್ ಮತ್ತು ಯೂಟ್ಯೂಬ್​ ಚಾನಲ್​ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು.

ಗಿರೀಶ್ ಮಟ್ಟಣ್ಣನವರ್​​ಗೆ ಶಿಕ್ಷೆ ಆಗಬೇಕು ಎಂದ ದೂರುದಾರ

ಇತ್ತ ಪ್ರಕರಣ ಬೆಳ್ತಂಗಡಿ ಠಾಣೆಗೆ ವರ್ಗಾವಣೆ ಆಗುತ್ತಿದ್ದಂತೆ ದೂರುದಾರ ಮಂಜುನಾಥ್​ರನ್ನ ಬೆಳ್ತಂಗಡಿ ಠಾಣಾ ಪೊಲೀಸರು ಕರೆಸಿ ದಾಖಲೆ ಪಡೆದುಕೊಂಡಿದ್ದಾರೆ. ಗಿರೀಶ್ ಮಟ್ಟಣ್ಣನವರ್​​ಗೆ ಶಿಕ್ಷೆ ಆಗಬೇಕು, ಕ್ಷಮೆಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಟಿವಿ9ಗೆ ದೂರುದಾರ ಮಂಜುನಾಥ್​ ಹೇಳಿದ್ದಾರೆ.

ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಮಟ್ಟಣ್ಣನವರ್‌ ವಿರುದ್ಧ FIR!

ಇನ್ನು ಇತ್ತೀಚೆಗೆ ಬಿ.ಎಲ್.ಸಂತೋಷ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅರೆಸ್ಟ್ ಆಗಿದ್ದರು. ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಗಿರೀಶ್ ಮಟ್ಟಣ್ಣನವರ್ ವಿರುದ್ಧ ಎಫ್​​ಐಆರ್​ ದಾಖಲಾಗಿತ್ತು. ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದಿದ್ದ ಮಟ್ಟಣ್ಣನವರ್, ಪೊಲೀಸರು ಬೇಕಾದರೆ ನನ್ನನ್ನು ಬಂಧಿಸಲಿ ಅಂತಾ ಸವಾಲು ಹಾಕಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.