ಕೈ-ಕಾಲು, ತಲೆ ಕಡಿದು ದೆಹಲಿ ಮೈನ್ ಗೇಟ್​ನಲ್ಲಿ ನೇತು ಹಾಕುತ್ತೇವೆ: ಹಿಂದೂ ಮುಖಂಡನಿಗೆ ಜೈಷ್ ಉಗ್ರ ಸಂಘಟನೆ ಹೆಸರಿನಲ್ಲಿ ಬೆದರಿಕೆ

ಕೋಮು ದ್ವೇಷದ ಹತ್ಯೆ ಪ್ರಕರಣಗಳಿಂದ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ ಉದ್ವಿಗ್ನಗೊಂಡಿರುವ ಸಂದರ್ಭದಲ್ಲೇ ಭಯೋತ್ಪಾದಕ ಸಂಘಟನೆ ಜೈಷ್ ಎ ಮೊಹಮ್ಮದ್ ಹೆಸರಿನಲ್ಲಿ ಹಿಂದೂ ಮುಖಂಡರೊಬ್ಬರಿಗೆ ಕೊಲೆ ಬೆದರಿಕೆ ಬಂದಿದೆ. ಹಿಂದೂ ಮುಖಂಡರ ಪಟ್ಟಿ ಸಿದ್ಧ ಮಾಡಿರುವುದಾಗಿಯೂ, ಅತಿ ಭಯಾನಕವಾಗಿ ಹತ್ಯೆ ಮಾಡುವುದಾಗಿಯೂ ಪಾಕಿಸ್ತಾನ, ಅಫ್ಘಾನಿಸ್ತಾನ, ಸೌದಿ ಅರೇಬಿಯಾ ವಾಟ್ಸ್​ಆ್ಯಪ್ ಸಂದೇಶದಲ್ಲಿ ಬೆದರಿಕೆಯೊಡ್ಡಲಾಗಿದೆ.

ಕೈ-ಕಾಲು, ತಲೆ ಕಡಿದು ದೆಹಲಿ ಮೈನ್ ಗೇಟ್​ನಲ್ಲಿ ನೇತು ಹಾಕುತ್ತೇವೆ: ಹಿಂದೂ ಮುಖಂಡನಿಗೆ ಜೈಷ್ ಉಗ್ರ ಸಂಘಟನೆ ಹೆಸರಿನಲ್ಲಿ ಬೆದರಿಕೆ
ಬೆದರಿಕೆ ಸಂದೇಶ ಹಾಗೂ ದೂರಿನ ಪ್ರತಿ
Updated By: Ganapathi Sharma

Updated on: May 30, 2025 | 7:36 AM

ಮಂಗಳೂರು, ಮೇ 30: ‘ನಿನ್ನ ಸ್ನೇಹಿತನ ಕೈ ಕಾಲು ಕಡಿಯುತ್ತೇವೆ. ನಂತರ ತಲೆ ಕಡಿದು ದೆಹಲಿಯ ಮೈನ್ ಗೇಟ್​​ನಲ್ಲಿ ನೇತು ಹಾಕುತ್ತೇವೆ. ನಾವು ಹಿಂದೂ ಮುಖಂಡರ ಲಿಸ್ಟ್ ರೆಡಿ ಮಾಡಿದ್ದೇವೆ. ನಾವು ಈಗಲೇ ದೆಹಲಿ ತಲುಪಿಯಾಗಿದೆ’. ಹೀಗೆಂದು ಜೈಷ್ ಎ ಮೊಹಮ್ಮದ್ (Jaish-e-Mohammed) ಉಗ್ರ ಸಂಘಟನೆ ಹೆಸರಿನಲ್ಲಿ ಮಂಗಳೂರಿನ ಹಿಂದೂ ಜಾಗರಣ ವೇದಿಕೆ (Hindu Jagarana Vedike) ಮುಖಂಡನಿಗೆ ವಿದೇಶಿ ಸಂಖ್ಯೆಯಿಂದ ಬೆದರಿಕೆ ಸಂದೇಶ (Threat) ಬಂದಿದೆ. ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಎಂಬವರಿಗೆ ವಾಟ್ಸ್​ಆ್ಯಪ್ ಮೂಲಕ ಉರ್ದು ಬಾಷೆಯಲ್ಲಿ ಆಡಿಯೋ ಮೆಸೇಜ್ ಬಂದಿದೆ.

ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ಹೆಸರಿನಲ್ಲಿ ಬಂದ ಸಂದೇಶ

‘ಹಲವು ಹಿಂದೂ ಮುಖಂಡರ ಪಟ್ಟಿ ಸಿದ್ಧ ಮಾಡಿದ್ದೇವೆ. ನಿನ್ನ (ನರಸಿಂಹ ಮಾಣಿ) ಹೆಸರು ಲಿಸ್ಟ್ ನಲ್ಲಿ ಮೊದಲಿಗಿದೆ. ನಿನ್ನ ಎಲ್ಲಾ ಚಲನವಲನಗಳನ್ನು ಗಮನಿಸುತ್ತಿದ್ದೇವೆ. ಕೊಲೆಯಾದ ಸುಹಾಸ್ ಶೆಟ್ಟಿ ಕೂಡಾ ನಮ್ಮ ಪಟ್ಟಿಯಲ್ಲಿದ್ದ. ಆದರೆ, ಯಾರೋ ಒಳ್ಳೆಯ ಜನ ಅವನನ್ನು‌ ಕೊಂದು‌ಹಾಕಿದ್ದಾರೆ. ನಿನ್ನ ಸ್ನೇಹಿತ ರಂಜಿತ್ ಎಂಬವನನ್ನು ಕೊಲ್ಲುತ್ತೇವೆ. ತಲೆ ಕಡಿದು ಸುಲಭವಾಗಿ ಕೊಲ್ಲುವುದಿಲ್ಲ. ಮೊದಲು ಆತನ ಕೈ ಕಾಲು ಕಡಿಯುತ್ತೇವೆ. ನಂತರ ತಲೆ ಕಡಿದು‌ ದೆಹಲಿಯ ಮೈನ್ ಗೇಟ್​​ನಲ್ಲಿ ನೇತು ಹಾಕುತ್ತೇವೆ. ನಾವು ದೆಹಲಿಗೆ ಬಂದು ತಲುಪಿಯಾಗಿದೆ. ನಿಮ್ಮ ಉಲ್ಟಾ ಲೆಕ್ಕಾಚಾರ ಸ್ಟಾರ್ಟ್ ಆಗಿದೆ’ ಎಂದು ಉಗ್ರರ ಹೆಸರಿನಲ್ಲಿ ಬಂದ ಸಂದೇಶದಲ್ಲಿದೆ.

‘ನಿನ್ನನ್ನು ಹೇಗೆ ಕೊಲ್ಲುತ್ತೇವೆಂದು ಅಲ್ಲಾನಿಗೂ ಗೊತ್ತಿಲ್ಲ’

‘ನಿನ್ನನ್ನು (ನರಸಿಂಹ ಮಾಣಿ) ಹೇಗೆ ಕೊಲ್ಲುತ್ತೇವೆ ಎಂದು ಅಲ್ಲಾನಿಗೆ ಕೂಡ ಗೊತ್ತಿಲ್ಲ. ನಿನ್ನನ್ನು ಕೊಲೆ ಮಾಡಿದ ರೀತಿಯನ್ನು ನೋಡಿ ಜನ ಕೊಲ್ಲುವ ವಿಧಾನವನ್ನೇ ಮರೆಯಲಿದ್ದಾರೆ. ಮುಸ್ಲಿಮರಿಗೆ ತೊಂದರೆ ಕೊಡುವುದನ್ನು ಬಿಟ್ಟು ನಿನ್ನ ಬಗ್ಗೆ ಯೋಚಿಸು. ನಿಮ್ಮ ಪಾರ್ಟಿ ಅಥವಾ ಯಾವುದೇ ಮುಖಂಡರು ನಿಮ್ಮನ್ನು ರಕ್ಷಿಸಲು ಸಾಧ್ಯವಿಲ್ಲ. ನಿಮ್ಮ ಜೊತೆಗೆ ನಿಮ್ಮ ಮುಖಂಡರನ್ನು ಮುಗಿಸಲಾಗುವುದು. ಇದು ಮುಜಾಹಿದೀನ್ ಸಂದೇಶ’ ಎಂದು ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ಹೆಸರಿನಲ್ಲಿ ಬಂದ ಸಂದೇಶದಲ್ಲಿ ಹೇಳಲಾಗಿದೆ.

ಇದನ್ನೂ ಓದಿ
ದಕ್ಷಿಣ ಕನ್ನಡದಲ್ಲಿ ಸರಣಿ ಕೊಲೆ: ಐಪಿಎಸ್ ಅಧಿಕಾರಿಗಳ ಎತ್ತಂಗಡಿ
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ಬಂಟ್ವಾಳ ರಹಿಮಾನ್ ಹಂತಕರ ಬಂಧನ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್

ವಿದೇಶಿ ಸಂಖ್ಯಗಳಿಂದ ಸಂದೇಶ: ಬಂಟ್ವಾಳ ಪೊಲೀಸರಿಗೆ ದೂರು

ಬೆದರಿಕೆ ಸಂದೇಶ ಪಾಕಿಸ್ತಾನ, ಅಫ್ಘಾನಿಸ್ತಾನ, ಸೌದಿ ಅರೇಬಿಯಾ ಮೊಬೈಲ್ ಸಂಖ್ಯೆಯಿಂದ ಬಂದಿದೆ. ಬೆದರಿಕೆ ಸಂದೇಶದ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರಿಗೆ ದೂರು ದಾಖಲಿಸಲಾಗಿದೆ. ‘ಮುಸ್ಲಿಮ್ ಸಹೋದರನ ಕೊಲೆಯಲ್ಲಿ ಶಾಮೀಲಾಗಿರುವ ರಾಕೇಶ್ ಬುಡೋಳಿ, ನಿಮ್ಮ ಸಹಚರ ನರಸಿಂಹ ಮಾಣಿ ಹಾಗೂ ಇತರ ಎಲ್ಲ ಹೆಸರುಗಳು ನಮ್ಮ ಪಟ್ಟಿಗೆ ಸೇರಿಸಲಾಗಿದೆ. ನಾವು ದೂರವಿಲ್ಲ ನಾವು ನಿಮ್ಮ ಮನೆ ತಲುಪಿದ್ದೇವೆ. ಈಗ ನರಸಿಂಹನ ಕ್ಷಣಗಣನೆ ಆರಂಭವಾಗಿದೆ. ಸತ್ತ ಸುಹಾಶ್ ಶೆಟ್ಟಿ ಅವನಂತೆ ನಿಮ್ಮಿಬ್ಬರನ್ನು ನಾವು ಕೊಲ್ಲುತ್ತೇವೆ. ಜೈಶ್-ಎ-ಮೊಹಮ್ಮದ್‌ನ ಮುಜಾಹಿದ್ದೀನ್​ಗಳಾದ ನಾವು ನವದೆಹಲಿಯನ್ನು ತಲುಪಿದ್ದೇವೆ. ನಾವು ದೆಹಲಿಯಲ್ಲಿದ್ದೇವೆ ಎಂದು ಹೇಳಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯನ್ನು ಒಡ್ಡಿರುತ್ತಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಸರಣಿ ಕೊಲೆ: ಐಪಿಎಸ್ ಅಧಿಕಾರಿಗಳ ಎತ್ತಂಗಡಿ, ಹೊಸಬರ ನೇಮಕ

ಕೆಲವೇ ದಿನಗಳ ಹಿಂದಷ್ಟೇ ಹಿಂದೂ ಮುಖಂಡ ಸುಹಾಸ್ ಶೆಟ್ಟಿಯನ್ನು ಮಂಗಳೂರಿನ ಬಜ್ಪೆ ಸಮೀಪ ಕೊಲೆ ಮಾಡಲಾಗಿತ್ತು. ಅದಕ್ಕೂ ಕೆಲ ದಿನಗಳ ಮೊದಲು ಕೇರಳ ಮೂಲದ ಮುಸ್ಲಿಂ ವ್ಯಕ್ತಿಯ ಹತ್ಯೆಯಾಗಿತ್ತು. ಇದೀಗ ಬಂಟ್ವಾಳದಲ್ಲಿ ಅಬ್ದುಲ್ ರಹಿಮಾನ್ ಎಂಬಾತನ ಹತ್ಯೆ ನಂತರ ಕರಾವಳಿ ಜಿಲ್ಲೆ ಮತ್ತೆ ಉದ್ವಿಗ್ನಗೊಂಡಿದೆ. ಅಂಥ ಸಂದರ್ಭದಲ್ಲೇ ಈ ಸಂದೇಶ ಬಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:05 am, Fri, 30 May 25