AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾರಿಗೆ ಅಧಿಕಾರಿ ಉಸ್ತುವಾರಿಯಲ್ಲೇ ಭಾರಿ ತೆರಿಗೆ ವಂಚನೆ ದಂಧೆ: ಕೋಟಿ ರೂ. ಬೆಲೆಯ ಐಷಾರಾಮಿ ಕಾರಿಗೆ ಲಕ್ಷ ಮೌಲ್ಯದ ನೋಂದಣಿ!

ಮಂಗಳೂರಿನಲ್ಲಿ ಕೋಟಿ ರೂ ಮೌಲ್ಯದ ಐಷಾರಾಮಿ ಕಾರಿಗೆ ಲಕ್ಷಾಂತರ ರೂ ಮೌಲ್ಯದ ನೋಂದಣಿಯ ದಾಖಲೆಯನ್ನು ಸೃಷ್ಟಿಸಿ ಸರ್ಕಾರಕ್ಕೆ ಭಾರಿ ತೆರಿಗೆ ವಂಚಿಸಿರುವಂತಹ ಘಟನೆ ಬೆಳಕಿಗೆ ಬಂದಿದೆ. ಅದರಲ್ಲೂ ಸಾರಿಗೆ ಅಧಿಕಾರಿಯ ಉಸ್ತುವಾರಿಯಲ್ಲೇ ಕೋಟ್ಯಂತರ ರೂ ಬೆಲೆಯ ಕಾರಿನ ನಕಲಿ ದಾಖಲೆ ಸೃಷ್ಟಿಸಲಾಗಿದೆ.

ಸಾರಿಗೆ ಅಧಿಕಾರಿ ಉಸ್ತುವಾರಿಯಲ್ಲೇ ಭಾರಿ ತೆರಿಗೆ ವಂಚನೆ ದಂಧೆ: ಕೋಟಿ ರೂ. ಬೆಲೆಯ ಐಷಾರಾಮಿ ಕಾರಿಗೆ ಲಕ್ಷ ಮೌಲ್ಯದ ನೋಂದಣಿ!
ಮರ್ಸಿಡಿಸ್-ಬೆಂಜ್ ಕಾರು, ನಕಲಿ ದಾಖಲೆ
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ಗಂಗಾಧರ​ ಬ. ಸಾಬೋಜಿ|

Updated on:Jun 25, 2025 | 12:06 PM

Share

ಮಂಗಳೂರು, ಜೂನ್​ 25: ಈಗಾಗಲೇ ನಗರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಮಧ್ಯೆ ಕೋಟ್ಯಂತರ ರೂ ತೆರಿಗೆ (Tax) ವಂಚನೆ ದಂಧೆಯೊಂದು ಬೆಳಕಿಗೆ ಬಂದಿದೆ. ಮಂಗಳೂರು ಸಾರಿಗೆ ಅಧಿಕಾರಿ ಉಸ್ತುವಾರಿಯಲ್ಲೇ ಕೋಟ್ಯಂತರ ರೂ ಬೆಲೆಯ ಕಾರಿನ (luxury car) ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಭಾರಿ ವಂಚನೆ ಮಾಡಿರುವುದು ಪತ್ತೆ ಆಗಿದೆ. ಐಶಾರಾಮಿ ಕಾರುಗಳ ತಪಾಸಣೆ ವೇಳೆ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ. ಸದ್ಯ ಕಾರು ಸೀಜ್​ ಮಾಡಿ ಆರ್​ಸಿ ಬ್ಲಾಕ್​ ಲಿಸ್ಟ್​​ಗೆ ಸೇರಿಸಲಾಗಿದ್ದು, ಶಿವಮೊಗ್ಗ ವಿಭಾಗದ ಸಾರಿಗೆ ಇಲಾಖೆ ಜಂಟಿ ಆಯುಕ್ತರಿಂದ ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

ತೆರಿಗೆ ಉಳಿಸಲು ಕಾರಿನ ನಕಲಿ ದಾಖಲೆ ಸೃಷ್ಟಿ

ಕಾರಿನ ಮೌಲ್ಯ ಕಡಿಮೆ ಮಾಡಿ ಭಾರಿ ತೆರಿಗೆ ವಂಚನೆ ಮೆಗಾ ದಂಧೆ ನಡೆದಿದೆ. ಪ್ರಸ್ತುತ Mercedes-Benz AMG G 63 ಕಾರಿಗೆ 2 ರಿಂದ 2.50 ಕೋಟಿ ಮೌಲ್ಯ ಹೊಂದಿದ್ದರೆ, Mercedes-Benz GLA 200 CDA ಕಾರು ಸುಮಾರು 50 ಲಕ್ಷದವರೆಗೆ ಮೌಲ್ಯ ಹೊಂದಿದೆ. 2.50 ಕೋಟಿ ಮೌಲ್ಯದ ಕಾರಿಗೆ 50 ಲಕ್ಷ ರೂ ತೆರಿಗೆ ಕಟ್ಟಬೇಕು. ಆದರೆ 50 ಲಕ್ಷ ರೂ ಮೌಲ್ಯದ ಕಾರಿಗೆ 5 ರಿಂದ 6 ಲಕ್ಷ ರೂ ತೆರಿಗೆ ಕಟ್ಟಿದರೆ ಸಾಕು. ಇದೇ ಕಾರಣಕ್ಕೆ ಭಾರೀ ತೆರಿಗೆ ಉಳಿಸಲು ಕಾರಿನ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ವಂಚನೆ ಮಾಡಲಾಗಿದೆ. ತೆರಿಗೆ ವಂಚಿಸಲು ಮಂಗಳೂರು ಸಾರಿಗೆ ಅಧಿಕಾರಿ ಶ್ರೀಧರ್ ಮಲ್ಲಾಡ್ ಸಾಥ್ ನೀಡಿದ್ದಾರೆ.

ಇದನ್ನೂ ಓದಿ: ಮಂಗಳೂರು: ನಿವೃತ್ತರಾಗಿ 15 ವರ್ಷ ಕಳೆದರೂ ಹುದ್ದೆಯಲ್ಲಿ ಮುಂದುವರಿದ ಅಧಿಕಾರಿ!

ಇದನ್ನೂ ಓದಿ
Image
ಪರಿಚಯವಾಗಿ ಹತ್ತೇ ದಿನಕ್ಕೆ ವಿವಾಹಿತ ಮಹಿಳೆ ಕೊಲೆ: ಚಿನ್ನಾಭರಣ ದೋಚಿದ ಯುವಕ
Image
ನಿವೃತ್ತರಾಗಿ 15 ವರ್ಷ ಕಳೆದರೂ ಹುದ್ದೆಯಲ್ಲಿ ಮುಂದುವರಿದ ಅಧಿಕಾರಿ!
Image
ಮಂಗಳೂರು ವಿಮಾನ ನಿಲ್ದಾಣದಿಂದ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ
Image
ಮಂಗಳೂರು: ಒಂದೇ ಮನೆಯ 7 ದನ ಕರುಗಳು ನರಳಿ ನರಳಿ‌ ನಿಗೂಢ ಸಾವು

2017ರಲ್ಲಿ ಮಂಗಳೂರಿನ ನಿಹಾಲ್ ಅಹ್ಮದ್ ಎಂಬುವವರು ಬೆಂಗಳೂರಿನಲ್ಲಿ 2.50 ಕೋಟಿ ಮೌಲ್ಯದ ಮರ್ಸಿಡಿಸ್-ಬೆಂಜ್​ ಎಎಂಜಿ ಜಿ 63 (Mercedes-Benz AMG G 63) ಕಾರು ಖರೀದಿಸಿದ್ದರು. ತಾತ್ಕಾಲಿಕವಾಗಿ  ನೋಂದಾಣಿ ಮಾಡಿ 2017 ರಿಂದ 2025ರವರೆಗೆ ಚಲಾಯಿಸಲಾಗಿದೆ. ಬಳಿಕ 2025ರಲ್ಲಿ ನೇರವಾಗಿ ಮಂಗಳೂರಿನ ನೀರಜ್ ಕುಮಾರ್ ಶರ್ಮಾ ಎಂಬುವವರ ಹೆಸರಿನಲ್ಲಿ ಕಾರು ನೋಂದಾಣಿ ಮಾಡಿಸಲಾಗಿದೆ.

ಇದನ್ನೂ ಓದಿ: ಕತಾರ್ ಮೇಲೆ ಇರಾನ್ ದಾಳಿ: ಮಂಗಳೂರು ವಿಮಾನ ನಿಲ್ದಾಣದಿಂದ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ

ಕಾರು ನೋಂದಾಣಿಗೂ ಮುನ್ನವೇ ಮಂಗಳೂರು ಸಾರಿಗೆ ಅಧಿಕಾರಿ ಶ್ರೀಧರ್ ಮಲ್ಲಾಡ್​ ಕಾರಿನ ದಾಖಲೆ ಮಾರ್ಪಾಡು ಮಾಡಿದ್ದಾರೆ. ಆ ಮೂಲಕ ಲಕ್ಷಾಂತರ ರೂ. ತೆರಿಗೆ ವಂಚಿಸಲು ಮುಂದಾಗಿದ್ದಾರೆ. 2025ರ ಜನವರಿಯಲ್ಲೇ ದಾಖಲೆ ಬದಲಿಸಲಾಗಿದೆ. WDB4632722X261301 ಚಾಸಿಸ್ ನಂಬರ್​ನ Benz AMG G 63 ಕಾರಿಗೆ ಅದೇ ಚಾಸಿಸ್ ನಂಬರ್​ನಲ್ಲಿ Benz GLA 200 CDA ಕಾರಿನ ನಕಲಿ ದಾಖಲೆ ಸೃಷ್ಟಿ ಮಾಡಲಾಗಿದೆ. 15798460107755 ಇಂಜಿನ್ ನಂಬರ್ ಸರಿಯಾಗಿದ್ದರೂ ಕಾರಿನ ಮಾಡೆಲ್ ಮಾರ್ಪಡಿಸಲಾಗಿದೆ. ಮಂಗಳೂರು ಆರ್​ಟಿಓದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಉಡುಪಿ ಆರ್​​ಟಿಓದಲ್ಲಿ ಕಾರು ನೋಂದಾಣಿ ಮಾಡಲಾಗಿದೆ. ಸದ್ಯ ಮೈಸೂರಿನಲ್ಲಿ ತಪಾಸಣೆ ವೇಳೆ ಕಾರಿನ ನಕಲಿ ದಾಖಲೆ ಮಾಹಿತಿ ಬಹಿರಂಗವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:57 am, Wed, 25 June 25

Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!