Belthangady: ಹೂಳಲಾಗಿದ್ದ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ
ಮೃತ ಡೀಕಯ್ಯ ಸಹೋದರಿಯ ಗಂಡ ಪದ್ಮನಾಭ ಎಂಬುವರಿಂದ ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿತ್ತು. ಪೊಲೀಸರು ತಹಶೀಲ್ದಾರ್ ಸಮ್ಮುಖದಲ್ಲಿ ಮೃತದೇಹ ಹೊರತೆಗೆದರು. ಪರೀಕ್ಷೆ ವರದಿ ಬಳಿಕ ಸಾವಿನ ಸತ್ಯಾಂಶ ಬಯಲಾಗುವ ಸಾಧ್ಯತೆಯಿದೆ.
ದಕ್ಷಿಣ ಕನ್ನಡ: ಹೂಳಲಾಗಿದ್ದ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿರುವ (post mortem) ವಿರಳ ಘಟನೆ ಬೆಳ್ತಂಗಡಿ ತಾಲೂಕಿನ (Belthangady) ಪದ್ಮುಂಜ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪಿ. ಡೀಕಯ್ಯ ಎಂಬುವವರು ಮೆದುಳಿನ ರಕ್ತಸ್ರಾವದಿಂದ ಮೃತಪಟ್ಟಿದ್ದರು. ಬಹುಜನ ಚಳವಳಿ ನಾಯಕ ಡೀಕಯ್ಯ ಅವರು ಸಾಹಿತಿ ಅತ್ರಾಡಿ ಅಮೃತಾ ಶೆಟ್ಟಿಯವರ ಪತಿ. ಜುಲೈ 8ರಂದು ಸಾರ್ವಜನಿಕರ ಅಂತಿಮ ದರ್ಶನ ಬಳಿಕ ಅಂತ್ಯಕ್ರಿಯೆ ಆಗಿ 1 ವಾರದ ಬಳಿಕ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ. ಡೀಕಯ್ಯ ಸಹೋದರಿಯ ಗಂಡ ಪದ್ಮನಾಭ ಎಂಬುವರಿಂದ ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿತ್ತು. ಪೊಲೀಸರು ತಹಶೀಲ್ದಾರ್ ಸಮ್ಮುಖದಲ್ಲಿ ಮೃತದೇಹ ಹೊರತೆಗೆದರು. ಪರೀಕ್ಷೆ ವರದಿ ಬಳಿಕ ಸಾವಿನ ಸತ್ಯಾಂಶ ಬಯಲಾಗುವ ಸಾಧ್ಯತೆಯಿದೆ.