AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು: ಮುಸ್ಲಿಂ ವ್ಯಕ್ತಿಯಿಂದ ಸೀತಾ ದೇವಿ ಕುರಿತು ಅವಹೇಳನಕಾರಿ ಕಾಮೆಂಟ್; ಆರೋಪಿ ಅರೆಸ್ಟ್​​

ಸೀತಾ ದೇವಿ ಕುರಿತು ಅವಹೇಳನಕಾರಿ ಕಾಮೆಂಟ್​ ಹಾಕಿದ ಮುಸ್ಲಿಂ ವ್ಯಕ್ತಿಯನ್ನು ಮಂಗಳೂರು ಬಂಧಿಸಿದ್ದಾರೆ.

ಮಂಗಳೂರು: ಮುಸ್ಲಿಂ ವ್ಯಕ್ತಿಯಿಂದ ಸೀತಾ ದೇವಿ ಕುರಿತು ಅವಹೇಳನಕಾರಿ ಕಾಮೆಂಟ್; ಆರೋಪಿ ಅರೆಸ್ಟ್​​
ಆರೋಪಿ ಮೊಹ್ಮದ್​ ಸಲ್ಮಾನ್
Prajwal D'Souza
| Edited By: |

Updated on:Aug 04, 2023 | 1:43 PM

Share

ಮಂಗಳೂರು: ಸೀತಾ (Sita) ದೇವಿ ಕುರಿತು ಅವಹೇಳನಕಾರಿ ಕಾಮೆಂಟ್​ ಹಾಕಿದ ಮುಸ್ಲಿಂ ವ್ಯಕ್ತಿಯನ್ನು ಮಂಗಳೂರು ಬಂಧಿಸಿದ್ದಾರೆ. ಮೊಹ್ಮದ್​ ಸಲ್ಮಾನ್​ (22) ಬಂಧಿತ ಆರೋಪಿ. ಆರೋಪಿ (Accused) ತನ್ನ ಇನ್​ಸ್ಟಾಗ್ರಮ್​​ (Instagram) ಖಾತೆ (D_salman_6) ಮೂಲಕ ಸೀತಾ ದೇವಿಯ ಬಗ್ಗೆ ಅವಹೇಳನಕಾರಿಯಾಗಿ ಕಾಮೆಂಟ್​ ಮಾಡಿದ್ದಾನೆ. ಈ ಕಾಮೆಂಟ್​ ಸ್ಕ್ರೀನ್​ಶಾಟ್​​ ತೆಗೆದು ಬಲಪಂಥೀಯ ವ್ಯಕ್ತಿಯೊಬ್ಬ ಮಂಗಳೂರು ಪೊಲೀಸರಿಗೆ (Mangaluru Police) ಟ್ಯಾಗ್​ ಮಾಡಿ ಟ್ವಿಟರ್​​ನಲ್ಲಿ ಟ್ವೀಟ್​ ಮಾಡಿದ್ದಾರೆ. ಅಲ್ಲದೇ ಈ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಮಂಗಳೂರು ಪೊಲೀಸ್‌ನ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ಕೋಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು ಪುತ್ತೂರು ರೈಲು ಮಾರ್ಗ ವಿದ್ಯುದೀಕರಣ ಪೂರ್ಣ; ಪ್ರಾಯೋಗಿಕ ಸಂಚಾರ ಯಶಸ್ವಿ

ಈ ಬಗ್ಗೆ ಸ್ವಯಂ ಪ್ರೇರಿತ (Suo Motu) ಪಕ್ರರಣ ದಾಖಲಿಸಿಕೊಂಡ ಪೊಲೀಸರು ಗುರುವಾರ ಆರೋಪಿ ಮೊಹ್ಮದ್​ ಸಲ್ಮಾನನ್ನು ಬಂಧಿಸಿದ್ದಾರೆ. ನಂತರ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್​ 67 (ವಿದ್ಯುನ್ಮಾನ ರೂಪದಲ್ಲಿ ಅಶ್ಲೀಲವಾಗಿ ಪೋಸ್ಟ್​ ಮಾಡುವುದು ಅಥವಾ ಶೇರ್​​ ಮಾಡುವ ಶಿಕ್ಷೆ) ಮತ್ತು 153A (ಧರ್ಮ, ಜನಾಂಗ, ಜನ್ಮಸ್ಥಳದ ಆಧಾರದ ಮೇಲೆ ದ್ವೇಷವನ್ನು ಉತ್ತೇಜಿಸುವುದು) 505 (2) (ವರ್ಗಗಳ ನಡುವೆ ದ್ವೇಷ ಅಥವಾ ಕೆಟ್ಟ ಇಚ್ಛೆಯನ್ನು ಸೃಷ್ಟಿಸುವ ಅಥವಾ ಉತ್ತೇಜಿಸುವ ಉದ್ದೇಶ) ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆರೋಪಿಯನ್ನು ಗುರುವಾರ ಮಂಗಳೂರಿನ 7ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಮಂಗಳೂರು ಪೊಲೀಸರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:15 pm, Fri, 4 August 23