
ಮಂಗಳೂರು, (ಮೇ 22): ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣದಲ್ಲಿ (Illegal quarrying) ಬಿಜೆಪಿ ಯುವ ಮುಖಂಡನ ಬಂಧನ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಬೆಳ್ತಂಗಡಿ ಪಿಎಸ್‌ಐಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ (Harish poonja) ವಿರುದ್ಧ ಎರಡು ಕೇಸ್ ದಾಖಲಾಗಿದ್ದು, ಇದೀಗ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದ್ದು, ತನಿಖಾಧಿಕಾರಿಗಳ ಜೊತೆ ಅವರ ವಾಹನದಲ್ಲೇ ಠಾಣೆಗೆ ಬರುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಹರೀಶ್ ಪೂಂಜಾ ಅವರನ್ನು ಬಂಧಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ನೋಟಿಸ್ ಇಲ್ಲದೇ ಹೇಗೆ ವಿಚಾರಣೆಗೆ ಹಾಜರಾಗಬೇಕೆಂದು ಶಾಸಕ ಹರೀಶ್ ಪೂಂಜಾ ಹಾಗೂ ಅವರ ಪರ ವಕೀಲ ಪ್ರಶ್ನಿಸಿದ್ದಾರೆ. ಹೀಗಾಗಿ ಇದೀಗ ಪೊಲೀಸರು, ಹರೀಶ್ ಪೂಂಜಾ ಅವರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದಾರೆ. ಸಬ್ ಇನ್ಸ್‌ಪೆಕ್ಟರ್ ನಂದಕುಮಾರ್ ಪೂಂಜಾಗೆ ನೋಟಿಸ್ ನೀಡಿ ನೀಡಿದ್ದು, ತನಿಖಾಧಿಕಾರಿಗಳ ಜೊತೆ ಠಾಣೆಗೆ ಬರುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: ಪೊಲೀಸರನ್ನು ಬೆದರಿಸಿದ ಪ್ರಕರಣ: ಬಿಜೆಪಿ ಶಾಸಕ ಹರೀಶ್ ಪೂಂಜಾ ಅರೆಸ್ಟ್ ಮಾಡಲು ಪೊಲೀಸರ ಅಗಮನ
ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣದಲ್ಲಿ ಬಿಜೆಪಿ ಯುವ ಮುಖಂಡನ ಬಂಧನ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಬೆಳ್ತಂಗಡಿ ಪಿಎಸ್‌ಐಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಪೂಂಜಾ ವಿರುದ್ಧ ಎರಡು ಕೇಸ್ ದಾಖಲಾಗಿದ್ದು, ಈ ಸಂಬಂಧ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಮಿತ್ತಿಲದಲ್ಲಿರುವ ಶಾಸಕ ಹರೀಶ್ ಪೂಂಜಾ ಮನೆಗೆ ಬಹಳಷ್ಟು ಜನರು ಆಗಮಿಸಿದ್ದಾರೆ. ಅಲ್ಲದೇ ಹರೀಶ್ ಪೂಂಜಾ ಮನೆ ಸುತ್ತಾಮುತ್ತಾ ಸೇರಿದಂತೆ ರಸ್ತೆಯಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಹೀಗಾಗಿ ಹರೀಶ್ ಪೂಂಜಾ ಅವರನ್ನ ಬಂಧನ ಮಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ಬಿಜೆಪಿ ನಾಯಕರು ಸಹ ಹರೀಶ್ ಪೂಂಜಾ ನಿವಾಸಕ್ಕೆ ಆಗಮಿಸಿದ್ದಾರೆ. ಇನ್ನು ಬಿಜೆಪಿ ಕಾರ್ಯಕರ್ತರು ಸಹ ಮನೆ ಬಳಿ ಜಮಾವಣೆಗೊಂಡಿದ್ದು, ರಾಜ್ಯ ಸರ್ಕಾರರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಲ್ ಇನ್ಸ್‌ಪೆಕ್ಟರ್ ಸುಬ್ಬಪೂರ್ ಮಠ್ ಮತ್ತು ಪಿಎಸ್ಐ ಚಂದ್ರಶೇಖರ್ ನೇತೃತ್ವದ ಪೊಲೀಸರ ತಂಡ ಹರೀಶ್ ಪೂಂಜಾ ನಿವಾಸದ ಬಳಿ ಬೀಡುಬಿಟ್ಟಿದೆ. ಆದರೆ, ನೋಟಿಸ್ ನೀಡದೆ ಬಂಧನಕ್ಕೆ ಮುಂದಾಗಲಾಗಿದೆ ಎಂದು ಶಾಸಕರ ಪರ ವಕೀಲರು ಆರೋಪ ಮಾಡಿದ್ದು, ಇದು ಕಾನೂನು ಪ್ರಕಾರ ಅಪರಾಧ ಎಂದು ಆಕ್ರೋಶಗೊಂಡಿದ್ದಾರೆ.
ಇದನ್ನೂ ಓದಿ: ಪದೇಪದೆ ಬಿಜೆಪಿಗರ ಮೇಲೆ ದಬ್ಬಾಳಿಕೆ ಸಹಿಸಲಾಗದು: ಹರೀಶ್ ಪೂಂಜಾ ಬಂಧನ ಯತ್ನಕ್ಕೆ ವಿಜಯೇಂದ್ರ ಕಿಡಿ
ಇನ್ನು ಬಹಳಷ್ಟು ಪೊಲೀಸರು ಹರೀಶ್ ಪೂಂಜಾ ನಿವಾಸದ ಸುತ್ತಾಮುತ್ತಾ ಮೊಕ್ಕಂ ಹೂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಇದರಿಂದ ಬಿಜೆಪಿ ನಾಯಕರು ಮಹತ್ವದ ಸಭೆ ಮಾಡಿದ್ದು, ಒಂದು ವೇಳೆ ಹರೀಶ್ ಪೂಂಜಾ ಅವರನ್ನು ಅರೆಸ್ಟ್ ಮಾಡಿದರೆ ನಾಳೆ (ಮೇ 23) ದಕ್ಷಿಣ ಕನ್ನಡ ಜಿಲ್ಲಾ ಬಂದ್ಗೆ ಕರೆ ಕೊಡುವ ತೀರ್ಮಾನ ಮಾಡಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸದ್ಯ ಬಿಜೆಪಿ ಮುಖಂಡರು ಪೊಲೀಸರ ಮುಂದಿನ ನಡೆಗಾಗಿ ಕಾಯುತ್ತಿದ್ದಾರೆ.
ಇನ್ನು ಈ ಸಂಬಂಧ ಶಾಸಕ ಹರೀಶ್ ಪೂಂಜಾ ಪರ ವಕೀಲ ಶಂಭು ಶರ್ಮಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಟಾರ್ಗೆಟ್ ಮಾಡಿ ಹರೀಶ್ ಪೂಂಜಾ ಅವರನ್ನ ಬಂಧಿಸುವ ಹುನ್ನಾರ ನಡೆದಿದೆ. ಶಾಸಕ ಹರೀಶ್ ಪೂಂಜಾಗೆ ಯಾವುದೇ ನೋಟಿಸ್ ನೀಡಿಲ್ಲ. ನೋಟಿಸ್ ನೀಡದೆ ಪೊಲೀಸರು ವಿಚಾರಣೆಗೆ ಕರೆಯುವಂತಿಲ್ಲ. ಅದು ಕಾನೂನು ಬಾಹಿರ. ನೋಟಿಸ್ ನೀಡಲು ಕೇಳಿದ್ದೇವೆ ಆದರೆ, ಈವರೆಗೂ ನೀಡಿಲ್ಲ. ಶಾಸಕ ಪೂಂಜಾ ವಿರುದ್ಧ ಎರಡು ಎಫ್ಐಆರ್ ದಾಖಲಾಗಿವೆ. ಅದರಲ್ಲಿ ಕೆಲವು ಸೆಕ್ಷನ್ ನಾನ್ ಬೇಲೆಬಲ್ ಇವೆ. ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಬಂಧಿಸಲು ಅವಕಾಶ ಇದೆ. ಆದ್ರೆ, ಎಲ್ಲ ಪ್ರಕರಣಗಳಲ್ಲೂ ಅರೆಸ್ಟ್ ಮಾಡುವ ಅಗತ್ಯವಿಲ್ಲ. ವಿಚಾರಣೆಗೆ ಕಾನ್ಸ್ಟೇಬಲ್ ಮೂಲಕ ನೋಟಿಸ್ ನೀಡಬಹುದು. ಆದರೆ, ಹಿರಿಯ ಅಧಿಕಾರಿಗಳು ಬರುವ ಅಗತ್ಯತೆ ಏನಿದೆ? ಪ್ರಶ್ನಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:49 pm, Wed, 22 May 24