AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲೆರಡು ಪರೀಕ್ಷೆಯಲ್ಲಿ ಹಿಜಾಬ್​ಗೆ ಅವಕಾಶ ಕೊಟ್ಟು, 3ನೇ ಬಾರಿಗೆ ತೆಗೆದಿಟ್ಟು ಬರುವಂತೆ ಹೇಳಿದಕ್ಕೆ ಪರೀಕ್ಷೆ ಬಹಿಷ್ಕರಿಸಿದರು

ಪರೀಕ್ಷೆಗೆ ಹಿಜಾಬ್ ತೆಗೆದಿಟ್ಟು ಬರುವಂತೆ ಸೂಚಿಸಿದ ಹಿನ್ನೆಲೆ ಮಂಗಳೂರಲ್ಲಿ PU ವಿದ್ಯಾರ್ಥಿನಿಯರು ಪರೀಕ್ಷೆ ಬಹಿಷ್ಕರಿಸಿದ್ದಾರೆ. ಮಂಗಳೂರಿನ ವಾಮಂಜೂರು ಸೇಂಟ್ ರೆಯಮಂಡ್ ಕಾಲೇಜಿನಲ್ಲಿ ಹಿಜಾಬ್ ವಿವಾದ ಮತ್ತೆ ಹೆಚ್ಚಾಗಿದೆ.

ಮೊದಲೆರಡು ಪರೀಕ್ಷೆಯಲ್ಲಿ ಹಿಜಾಬ್​ಗೆ ಅವಕಾಶ ಕೊಟ್ಟು, 3ನೇ ಬಾರಿಗೆ ತೆಗೆದಿಟ್ಟು ಬರುವಂತೆ ಹೇಳಿದಕ್ಕೆ ಪರೀಕ್ಷೆ ಬಹಿಷ್ಕರಿಸಿದರು
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Mar 21, 2022 | 7:25 PM

Share

ಮಂಗಳೂರು: ಶಾಲಾ ಕಾಲೇಜ್‌ಗಳಲ್ಲಿ ಹಿಜಾಬ್‌ಗೆ(Hijab) ಅವಕಾಶ ಇಲ್ಲ ಎಂದು ಹೇಳುವ ಮೂಲಕ ರಾಜ್ಯದಲ್ಲಿ ಎರಡ್ಮೂರು ತಿಂಗಳಿಂದ ದೊಡ್ಡ ಚರ್ಚೆಗೆ ಕಾರಣವಾಗಿದ್ದ ಹಿಜಾಬ್ ವಿವಾದಕ್ಕೆ ಹೈಕೋರ್ಟ್‌(Karnataka High Court) ತೀರ್ಪು ನೀಡಿ ಫುಲ್ ಸ್ಟಾಪ್ ಇಟ್ಟಿದೆ. ಆದ್ರೆ ಇದನ್ನು ಒಪ್ಪಿಕೊಳ್ಳದ ಕೆಲ ಮುಸ್ಲಿಮರು ಇದಕ್ಕೆ ವಿರೋಧಿಸಿ ಸುಪ್ರೀಂ ಕೋರ್ಟ್(Supreme Court) ಮೊರೆ ಹೋಗಿದ್ದಾರೆ. ಇಷ್ಟೆಲ್ಲದರ ನಡುವೆ ಮಂಗಳೂರಲ್ಲಿ ಹಿಜಾಬ್ ವಿವಾದ ಮುಂದುವರೆದಿದೆ.

ಮೊದಲೆರಡು ಪರೀಕ್ಷೆಗೆ ಹಿಜಾಬ್ ಗೆ ಅವಕಾಶ ಕೊಟ್ಟು, 3 ನೇ ಬಾರಿಗೆ ಸ್ಟ್ರಿಕ್ಟ್ ಆದ ಕಾಲೇಜು ಪರೀಕ್ಷೆಗೆ ಹಿಜಾಬ್ ತೆಗೆದಿಟ್ಟು ಬರುವಂತೆ ಸೂಚಿಸಿದ ಹಿನ್ನೆಲೆ ಮಂಗಳೂರಲ್ಲಿ PU ವಿದ್ಯಾರ್ಥಿನಿಯರು ಪರೀಕ್ಷೆ ಬಹಿಷ್ಕರಿಸಿದ್ದಾರೆ. ಮಂಗಳೂರಿನ ವಾಮಂಜೂರು ಸೇಂಟ್ ರೆಯಮಂಡ್ ಕಾಲೇಜಿನಲ್ಲಿ ಹಿಜಾಬ್ ವಿವಾದ ಮತ್ತೆ ಹೆಚ್ಚಾಗಿದೆ. ಹಿಜಾಬ್ ಧರಿಸಿ ಪಿಯುಸಿ ಪರೀಕ್ಷೆ ಬರೆಯಲು ಆಡಳಿತ ಮಂಡಳಿ ಬಿಡದೆ ವಿದ್ಯಾರ್ಥಿನಿಯರನ್ನು ವಾಪಾಸ್ ಕಳುಹಿಸಿದ್ದಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷೆ ಬಹಿಷ್ಕರಿಸಿದ್ದಾರೆ. 2 ಪರೀಕ್ಷೆಗಳಿಗೆ ಹಿಜಾಬ್ ಧರಿಸಲು ಅವಕಾಶ ನೀಡಲಾಗಿತ್ತು. ಇಂದು ಹಿಜಾಬ್ ಧರಿಸದಂತೆ ಆಡಳಿತ ಮಂಡಳಿ ಸೂಚನೆ ನೀಡಿದೆ. ಹೀಗಾಗಿ ಹಿಜಾಬ್ಗೆ ಅವಕಾಶ ನೀಡದಿದ್ದಕ್ಕೆ ಪರೀಕ್ಷೆ ಬಹಿಷ್ಕಾರ ಮಾಡಲಾಗಿದೆ.

ಅಲ್ಲದೆ ಪರೀಕ್ಷೆಗೆ ಅವಕಾಶ ನೀಡದಿದ್ದಕ್ಕೆ ಪೋಷಕರು ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿದೆ. ಕಾಲೇಜು ಬಳಿ ಆಗಮಿಸಿರುವ ವಿದ್ಯಾರ್ಥಿಗಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಸ್ಥಳೀಯ ಪೊಲೀಸರು ಕೂಡ ಆಗಮಿಸಿದ್ದು ವಿದ್ಯಾರ್ಥಿಗಳನ್ನು ಗುಂಪು ಸೇರದಂತೆ ಬುದ್ದಿ ಹೇಳಿ ಕಳುಹಿಸಿದ್ದಾರೆ.

ಹಿಜಾಬ್ ವಿಚಾರಕ್ಕೆ ಪರೀಕ್ಷೆಗೆ ಗೈರಾದರೆ ಮರು ಪರೀಕ್ಷೆ ಇಲ್ಲ -ಜೆ.ಸಿ.ಮಾಧುಸ್ವಾಮಿ ಮೈಸೂರು: ಹಿಜಾಬ್ ವಿಚಾರಕ್ಕೆ ಪರೀಕ್ಷೆಗೆ ಗೈರಾದರೆ ಮರು ಪರೀಕ್ಷೆ ಇಲ್ಲ ಅಂತ ಮೈಸೂರಿನಲ್ಲಿ ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಹೈಕೋರ್ಟ್ ಆದೇಶ ಪಾಲಿಸುವುದು ಸರ್ಕಾರದ ಕರ್ತವ್ಯ. ಕರ್ತವ್ಯ ಪಾಲಿಸದೆ ಛೀಮಾರಿ ಹಾಕಿಸಿಕೊಳ್ಳಲು ನಾವು ಸಿದ್ಧರಿಲ್ಲ ಎಂದು ಸಚಿವರು ಹೇಳಿದ್ದಾರೆ. ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಕಾಲೇಜಿನ ಒಳಗೆ ಪ್ರವೇಶಕ್ಕೆ ಅನುಮತಿ ಇರಲಿಲ್ಲ. ಹಿಜಾಬ್​ಗೆ ಪಟ್ಟು ಬಿದ್ದು ಕೆಲ ವಿದ್ಯಾರ್ಥಿನಿಯರು ಪರೀಕ್ಷೆ ಬಹಿಷ್ಕಾರ ಮಾಡಿ, ವಾಪಸ್ ಮನೆಗೆ ತರೆಳಿದ್ದರು. ಕೆಲವರು ಪ್ರತಿಭಟನೆ ನಡೆಸಿದ್ದರು. ಆದರೆ ಈ ಇದೇ ರೀತಿ ಮತ್ತೆ ಪರೀಕ್ಷೆಗೆ ಗೈರಾದರೆ ಮರು ಪರೀಕ್ಷೆ ಇರಲ್ಲ ಅಂತ ಸಚಿವರು ಹೇಳಿದರು.

ಇದನ್ನೂ ಓದಿ: Closing Bell: ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 571 ಪಾಯಿಂಟ್ಸ್, ನಿಫ್ಟಿ 169 ಪಾಯಿಂಟ್ಸ್ ಕುಸಿತ

ಹಿಜಾಬ್ ವಿಚಾರಕ್ಕೆ ಪರೀಕ್ಷೆಗೆ ಗೈರಾದರೆ ಮರು ಪರೀಕ್ಷೆ ಇಲ್ಲ; ಮೈಸೂರಿನಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟನೆ

Published On - 5:48 pm, Mon, 21 March 22