ಚಿಕ್ಕಬಳ್ಳಾಪುರದ ರಾಜೀವ್ ಗೌಡನಿಗೂ ಮಂಗಳೂರಿನ ಉದ್ಯಮಿ ಮೈಕಲ್ಗೂ ಎಲ್ಲಿಂದ ನಂಟು? ಇಲ್ಲಿದೆ ಮಾಹಿತಿ
ಮಹಿಳಾ ಅಧಿಕಾರಿಗೆ ಬೆದರಿಕೆ ಕೇಸ್ನಲ್ಲಿ ತಲೆಮರೆಸಿಕೊಂಡಿದ್ದ ರಾಜೀವ್ ಗೌಡನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಜೊತೆಗೆ ಆತನಿಗೆ ಅಶ್ರಯ ನೀಡಿದ್ದ ಮಂಗಳೂರಿನ ಉದ್ಯಮಿ ಮೈಕಲ್ ಕೂಡ ಅರೆಸ್ಟ್ ಆಗಿದ್ದಾರೆ. ಅಷ್ಟಕ್ಕೂ ಚಿಕ್ಕಬಳ್ಳಾಪುರದ ರಾಜೀವ್ ಗೌಡನಿಗೂ ಮಂಗಳೂರಿನ ಉದ್ಯಮಿ ಮೈಕಲ್ಗೂ ಎಲ್ಲಿಂದ ನಂಟು? ಎಂಬ ಕುರಿತು ಮಾಹಿತಿ ಇಲ್ಲಿದೆ.

ಮಂಗಳೂರು, ಜನವರಿ 27: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಪ್ರಕರಣ ಸಂಬಂಧ ಆರೋಪಿ ರಾಜೀವ್ ಗೌಡ ಜೊತೆ ಆತನಿಗೆ ಅಶ್ರಯ ಕೊಟ್ಟಿದ್ದ ಮಂಗಳೂರಿನ ಉದ್ಯಮಿ ಮೈಕಲ್ ರೇಗೋವನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಅಷ್ಟಕ್ಕೂ ಚಿಕ್ಕಬಳ್ಳಾಪುರದ ಶಿಡ್ಲಘಟ್ಟದ ರಾಜೀವ್ ಗೌಡನಿಗೂ ಮಂಗಳೂರಿನ ಉದ್ಯಮಿಗೂ ಎಲ್ಲಿಂದ ನಂಟು? ಆತ ಯಾಕೆ ಆರೋಪಿಗೆ ಅಶ್ರಯ ಕೊಟ್ಟ ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸಿದ್ದವು. ಅವೆಲ್ಲದಕ್ಕೂ ಈಗ ಉತ್ತರ ಸಿಕ್ಕಿದೆ. ರಾಜಕೀಯ ನಂಟೇ ಇಬ್ಬರ ನಡುವೆ ಪರಿಚಯಕ್ಕೆ ಕಾರಣವಾಗಿತ್ತು ಎಂಬ ಅಂಶ ತನಿಖೆ ವೇಳೆ ಬಯಲಾಗಿದೆ.
ಹೌದು, ಮಂಗಳೂರಿನ ಶ್ರೀಮಂತ ಉದ್ಯಮಿಯಾಗಿರುವ ಮೈಕಲ್ ರೇಗೋಗೆ ಬೆಂಗಳೂರಲ್ಲಿಯೂ ವ್ಯಾಪಾರ ವಹಿವಾಟು ಇದೆ. ಬೆಂಗಳೂರಿನ ಉದ್ಯಮಿಗಳು ಹಾಗೂ ರಾಜಕೀಯ ನಾಯಕರ ಸಂಪರ್ಕದಿಂದ ರಾಜೀವ್ ಗೌಡನ ಪರಿಚಯವಾಗಿತ್ತು. ಹೀಗಾಗಿಯೇ ರಾಜೀವ್ ಗೌಡನಿಗೆ ಆಶ್ರಯಕೊಟ್ಟಿದ್ದ ಎನ್ನಲಾಗಿದೆ. ವಾಮಂಜೂರು ಬಳಿಯ ಪಚ್ಚನಾಡಿಯಲ್ಲಿ ಮೈಕಲ್ ವುಡನ್ ವರ್ಕ್ಸ್ ಫ್ಯಾಕ್ಟರಿ ಹೊಂದಿದ್ದು, ಇಂಪೋರ್ಟ್ ಮಾಡಿದ ವಸ್ತುಗಳನ್ನು ಬಳಸಿ ಇಲ್ಲಿ ಹೈಫೈ ವುಡನ್ ವರ್ಕ್ಸ್ ನಡೆಯುತ್ತವೆ. ಇಲ್ಲಿರುವ ಫಾರ್ಮ್ ಹೌಸ್ಗೆ ಸಿಸಿಟಿವಿ ಕ್ಯಾಮರಾ ಕೂಡ ಇಲ್ಲ, ಅನ್ಯ ರಾಜ್ಯದ ಕಾರ್ಮಿಕರನ್ನು ಬಿಟ್ಟರೆ ಸ್ಥಳೀಯರು ಯಾರು ಬರಲ್ಲ. ಹೀಗಾಗಿ ಇದೇ ಸೇಫ್ ಜಾಗ ಎಂದು ಭಾವಿಸಿ ರಾಜೀವ್ ಗೌಡನಿಗೆ ಅಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆ ಆಗಿತ್ತು. ಗುಂಡು ತುಂಡಿನ ಪಾರ್ಟಿಯೂ ನಡೆದಿತ್ತು ಎನ್ನಲಾಗಿದೆ.
ಇದನ್ನೂ ಓದಿ: ಕೈಗೆ ಸಿಗದ ರಾಜೀವ್ ಗೌಡನನ್ನು ಖಾಕಿ ಖೆಡ್ಡಾಕ್ಕೆ ಕೆಡವಿದ್ದೇಗೆ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ
ಇನ್ನು ಪೊಲೀಸರಿಗೆ ಈ ಜಾಗ ಗೊತ್ತಾಗುತ್ತಲೇ ಮೈಕಲ್ ತನ್ನ ಕಾರಿನಲ್ಲಿ ರಾಜೀವ್ ಗೌಡನನ್ನು ಕೇರಳಕ್ಕೆ ಕರೆದುಕೊಂಡು ಹೋಗಿದ್ದ. ಹೀಗಾಗಿ ಇವರು ಎಲ್ಲಿಗೆ ಹೋದ್ರು ಅನ್ನೊದು ಪೊಲೀಸರಿಗೆ ಗೊತ್ತಾಗಿರಲಿಲ್ಲ. ಇನ್ನು ಇವರಿಬ್ಬರಿಗೆ ಖೆಡ್ಡಾ ತೋಡಲು ಪ್ಲ್ಯಾನ್ ಮಾಡಿದ್ದ ಪೊಲೀಸರು ಮೈಕಲ್ ಹಿಸ್ಟರಿ ಕೆದಕಿದ್ರು. ಮರಣ ಹೊಂದಿರೋ ಆತನ ಮಗನ ವಿಚಾರವಿಟ್ಟುಕೊಂಡು ಸಂಬಂಧಿಕರಿಂದ ಮೊಬೈಲ್ ನಂಬರ್ ಪಡೆದು ಅದನ್ನು ಟ್ರೇಸ್ ಮಾಡಿದ್ದರು. ಆ ಮಾಹಿತಿಯ ಆಧಾರದಲ್ಲಿ ರಾಜೀವ್ ಗೌಡ ಸೇರಿ ಮೈಕಲ್ನ ಕೂಡ ಪೊಲೀಸರು ಬಂಧಿಸಿದ್ದಾರೆ. ಆದ್ರೆ ರಾಜೀವ್ ಗೌಡನಿಗೆ ಆಶ್ರಯ ನೀಡಲು ಮೈಕಲ್ ರೇಗೋಗೆ ಯಾರಿಂದಾದರೂ ಅಪ್ಪಣೆ ಬಂದಿತ್ತಾ ಎನ್ನುವ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:07 pm, Tue, 27 January 26