ಕ್ವಾರಿ ಅಪಾಯ, ಯಾರದೋ ನಿರ್ಲಕ್ಷ್ಯಕ್ಕೆ ಈಜಾಡುವ ಯುವಕರು ಬಲಿ
ಕಲಬುರಗಿ: ಕಲ್ಲಿನ ಕ್ವಾರಿಯಲ್ಲಿ ನಿರ್ಮಾಣವಾದ ಕೆರೆಯಂತಹ ಪ್ರದೇಶದಲ್ಲಿ ಯುವಕರು ಈಜಲು ಹೋಗುತ್ತಿದ್ದಾರೆ. ಯಾರದೋ ನಿರ್ಲಕ್ಷ್ಯದಿಂದ ಇನ್ನ್ಯಾರದೋ ಮಕ್ಕಳು ಬಲಿಯಾಗುತ್ತಿದ್ದಾರೆ. ಸರ್ಕಾರಿ ಕಾನೂನುಗಳನ್ನು ಪಾಲಿಸದೇ ಇರುವುದರಿಂದ ಅಮಾಯಕರ ಪ್ರಾಣ ಹೋಗುವಂತಾಗಿದೆ. ಕಲುಬುರಗಿ ಜಿಲ್ಲೆಯಲ್ಲಿರುವ ಕಲ್ಲು ಗಣಿಗಾರಿಕೆಯಲ್ಲಿ ಇಂತಹ ಪರಿಸ್ಥಿತಿ ಉಂಟಾಗಿದೆ. ಇಲ್ಲಿ ಕಲ್ಲು ಗಣಿಗಾರಿಕೆ ಸರಿಯಾಗಿ ನಡೆದಿದ್ರೆ, ಯಾವುದೇ ಸಮಸ್ಯೆ ಇರ್ತಿರಲಿಲ್ಲಾ. ಆದ್ರೆ, ಕೆಲವರು ಬೇಕಾಬಿಟ್ಟಿಯಾಗಿ ಗಣಿಗಾರಿಕೆ ಮಾಡಿ, ನಂತರ ಅಲ್ಲಿ ನಿರ್ಮಾಣವಾದ ಗುಂಡಿಗಳನ್ನ ಮುಚ್ಚುತ್ತಿಲ್ಲ. ಇದ್ರಿಂದ ಆ ಪ್ರದೇಶದಲ್ಲಿ ನೀರು ತುಂಬಿಕೊಂಡಿದ್ದು, ಅನೇಕರು ಈ ನೀರಿನ ಆಳವನ್ನ […]
ಕಲಬುರಗಿ: ಕಲ್ಲಿನ ಕ್ವಾರಿಯಲ್ಲಿ ನಿರ್ಮಾಣವಾದ ಕೆರೆಯಂತಹ ಪ್ರದೇಶದಲ್ಲಿ ಯುವಕರು ಈಜಲು ಹೋಗುತ್ತಿದ್ದಾರೆ. ಯಾರದೋ ನಿರ್ಲಕ್ಷ್ಯದಿಂದ ಇನ್ನ್ಯಾರದೋ ಮಕ್ಕಳು ಬಲಿಯಾಗುತ್ತಿದ್ದಾರೆ. ಸರ್ಕಾರಿ ಕಾನೂನುಗಳನ್ನು ಪಾಲಿಸದೇ ಇರುವುದರಿಂದ ಅಮಾಯಕರ ಪ್ರಾಣ ಹೋಗುವಂತಾಗಿದೆ.
ಕಲುಬುರಗಿ ಜಿಲ್ಲೆಯಲ್ಲಿರುವ ಕಲ್ಲು ಗಣಿಗಾರಿಕೆಯಲ್ಲಿ ಇಂತಹ ಪರಿಸ್ಥಿತಿ ಉಂಟಾಗಿದೆ. ಇಲ್ಲಿ ಕಲ್ಲು ಗಣಿಗಾರಿಕೆ ಸರಿಯಾಗಿ ನಡೆದಿದ್ರೆ, ಯಾವುದೇ ಸಮಸ್ಯೆ ಇರ್ತಿರಲಿಲ್ಲಾ. ಆದ್ರೆ, ಕೆಲವರು ಬೇಕಾಬಿಟ್ಟಿಯಾಗಿ ಗಣಿಗಾರಿಕೆ ಮಾಡಿ, ನಂತರ ಅಲ್ಲಿ ನಿರ್ಮಾಣವಾದ ಗುಂಡಿಗಳನ್ನ ಮುಚ್ಚುತ್ತಿಲ್ಲ.
ಇದ್ರಿಂದ ಆ ಪ್ರದೇಶದಲ್ಲಿ ನೀರು ತುಂಬಿಕೊಂಡಿದ್ದು, ಅನೇಕರು ಈ ನೀರಿನ ಆಳವನ್ನ ಸರಿಯಾಗಿ ತಿಳಿಯದೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಲಬುರಗಿ ನಗರದ ಹೊರವಲಯದಲ್ಲಿರುವ ರಾಣೇಶ್ ಪೀರ್ ದರ್ಗಾ ಬಳಿಯಿರುವ ಕ್ವಾರಿ ಮತ್ತು ಚಿತ್ತಾಪುರ, ಚಿಂಚೋಳಿಯಲ್ಲಿರುವ ಅನೇಕ ಕಲ್ಲಿನ ಕ್ವಾರಿಗಳಲ್ಲಿ ಈಜಲು ಹೋದವರು ಅನೇಕರು ಮೃತಪಟ್ಟಿದ್ದಾರೆ.
ಇನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರತಿಯೊಂದು ಕಲ್ಲು ಗಣಿಗಾರಿಕೆ ನಡೆಸುವ ಮಾಲೀಕರಿಗೆ ಯಾವೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಅಂತ ಮಾಹಿತಿ ನೀಡುತ್ತಲೇ ಇರುತ್ತೆ. ಕಲ್ಲು ಕ್ವಾರಿಗಳಲ್ಲಿನ ಕಲ್ಲು ತೆಗೆದ ಮೇಲೆ ಅದನ್ನು ಮುಚ್ಚಬೇಕು.
ಅದರ ಸುತ್ತಲೂ ತಂತಿಬೇಲಿ ಹಾಕಿ, ಸಾರ್ವಜನಿಕರು ಮತ್ತು ಜಾನುವಾರುಗಳು ಅತ್ತ ಹೋಗದಂತೆ ತಡೆಯಬೇಕು ಅಂತಾ ಸೂಚನೆ ನೀಡಿದೆ. ಆದ್ರೆ, ಕೆಲವರು ಕಾನೂನುಗಳನ್ನ ಗಾಳಿಗೆ ತೂರಿ, ಗಣಿಗಾರಿಕೆ ಮಾಡಿ, ಗುಂಡಿ ಮುಚ್ಚದೇ ಬಿಡ್ತಿದ್ದಾರೆ. ಇದ್ರಿಂದ ಅಮಾಯಕರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
Published On - 10:13 am, Wed, 20 November 19