ರಂಜಾನ್ ಉಪವಾಸ ಅಂತ್ಯ ಮಾಡಿ ಪಾನಿಪುರಿ ಸೇವಿಸಿದ್ದ 19 ಮಕ್ಕಳು ಅಸ್ವಸ್ಥ: ನಾಲ್ವರ ಸ್ಥಿತಿ ಗಂಭೀರ
ರಂಜಾನ್ ಹಬ್ಬ ಹಿನ್ನೆಲೆಯಲ್ಲಿ ಮಕ್ಕಳು ಉಪವಾಸ ಇದ್ದರು. ಉಪವಾಸ ಅಂತ್ಯ ಮಾಡಿ ಮಸೀದಿ ಬಳಿ ಪಾನಿಪುರಿ ಸೇವಿಸಿದ್ದಾರೆ. ಬಳಿಕ ವಾಂತಿ ಭೇದಿ, ಹೊಟ್ಟೆ ನೋವಿನಿಂದ 19 ಮಕ್ಕಳು ಬಳಲಿದ್ದಾರೆ. ನಾಲ್ವರ ಸ್ಥಿತಿ ಗಂಭೀರವಾಗಿದ್ದು, ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನೆ ಬಳಿಕ ಪಾನಿಪುರಿ ಅಂಗಡಿ ಮಾಲೀಕ ಪರಾರಿ ಆಗಿದ್ದಾನೆ.
ದಾವಣಗೆರೆ, ಮಾರ್ಚ್ 15: ಪಾನಿಪುರಿ (panipuri) ಸೇವಿಸಿ 19 ಮಕ್ಕಳು ಅಸ್ವಸ್ಥಗೊಂಡಿರುವಂತಹ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರಿನಲ್ಲಿ ನಡೆದಿದೆ. ರಂಜಾನ್ ಹಬ್ಬ ಹಿನ್ನೆಲೆಯಲ್ಲಿ ಮಕ್ಕಳು ಉಪವಾಸ ಇದ್ದರು. ಉಪವಾಸ ಅಂತ್ಯ ಮಾಡಿ ಮಸೀದಿ ಬಳಿ ಪಾನಿಪುರಿ ಸೇವಿಸಿದ್ದಾರೆ. ಬಳಿಕ ವಾಂತಿ ಭೇದಿ, ಹೊಟ್ಟೆ ನೋವಿನಿಂದ 19 ಮಕ್ಕಳು ಬಳಲಿದ್ದಾರೆ. ನಾಲ್ವರ ಸ್ಥಿತಿ ಗಂಭೀರವಾಗಿದ್ದು, ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಈ ವೇಳೆ ಆಸ್ಪತ್ರೆಗೆ ಭೇಟಿ ನೀಡಿರುವ ತಹಶೀಲ್ದಾರ್ ಗುರು ಬಸವರಾಜ್ ಮತ್ತು ಜಿಪಂ ಸಿಇಓ ಸುರೇಶ್ ಹಿಟ್ನಾಳ್ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಘಟನೆ ಬಳಿಕ ಪಾನಿಪುರಿ ಅಂಗಡಿ ಮಾಲೀಕ ಪರಾರಿ ಆಗಿದ್ದಾನೆ. ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೊಳೆತ ಮೊಟ್ಟೆ ತಿಂದು ಸರ್ಕಾರಿ ಶಾಲೆಯ 8 ವಿದ್ಯಾರ್ಥಿಗಳು ಅಸ್ವಸ್ಥ
ಬೆಂಗಳೂರು ಗ್ರಾಮಾಂತರ: ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಜೊತೆ ನೀಡಿದ್ದ ಮೊಟ್ಟೆ ಸೇವಿಸಿ 8 ಮಕ್ಕಳು ಅಸ್ವಸ್ಥರಾಗಿದ್ದ ಘಟನೆ ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ನೆಲವಾಗಿಲು ಗ್ರಾಮದಲ್ಲಿ ನಡೆದಿತ್ತು. ಗ್ರಾಮದ ಸರ್ಕಾರಿ ಹಾಸ್ಟೆಲ್ನಲ್ಲಿ ಓದುತ್ತಿದ್ದ ಮಕ್ಕಳು ಮಧ್ಯಾಹ್ನ ಶಾಲೆಗೆ ಹೋಗಿ ಶಾಲೆಯಲ್ಲಿ ನೀಡಿದ್ದ ಬಿಸಿಯೂಟದ ಜೊತೆಗೆ ಕೊಳೆತ ಮೊಟ್ಟೆಯನ್ನ ಸೇವಿಸಿದ್ದರು ಎನ್ನಲಾಗಿತ್ತು.
ಇದನ್ನೂ ಓದಿ: ಕೊಡಗು: ಎನರ್ಜಿ ಡ್ರಿಂಕ್ ರೆಡ್ ಬುಲ್ ಕುಡಿದು ಯುವಕ ಅಸ್ವಸ್ಥ
ಅಲ್ಲದೆ ಮೊಟ್ಟೆ ಸೇವಿಸಿ ರಾತ್ರಿ ಹಾಸ್ಟೆಲ್ಗೆ ಬಂದ ನಂತರ ಮಕ್ಕಳಲ್ಲಿ ಹೊಟ್ಟೆ ನೋವು ಮತ್ತು ವಾಂತಿಯಾಗಿದೆ. ಹೀಗಾಗಿ ಮಕ್ಕಳನ್ನ ಕೂಡಲೆ ಹೊಸಕೋಟೆಯ ಸರ್ಕಾರಿ ಆಸ್ವತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಅದೃಷ್ಟವಶಾತ್ ಅಸ್ವಸ್ತರಾಗಿದ್ದ 8 ಮಕ್ಕಳು ಯಾವುದೇ ಅಪಾಯವಿಲ್ಲದೆ ಚೇತರಿಸಿಕೊಂಡಿದ್ದು ಆಸ್ವತ್ರೆಯಿಂದ ಹಾಸ್ಟೇಲ್ಗೆ ಮರಳಿದ್ದರು.
ಮಕ್ಕಳು ವಾಪಸ್ ಮರಳುತ್ತಿದ್ದಂತೆ ಹಾಸ್ಟೇಲ್ನ ಅಧಿಕಾರಿಗಳು ಹಾಸ್ಟೇಲ್ಗೆ ಧಾವಿಸಿ ಬಂದು ಮಕ್ಕಳ ಆರೋಗ್ಯ ವಿಚಾರಿಸಿದ್ದರು. ಅಲ್ಲದೆ ಮಕ್ಕಳಿಗೆ ತಂಗಳು ಆಹಾರ ಪದಾರ್ಥಗಳನ್ನ ನೀಡದಂತೆ ಶಾಲಾ ಸಿಬ್ಬಂದಿಗೂ ಎಚ್ಚರಿಕೆ ನೀಡಿದ್ದರು.
ಮೊಸರನ್ನ ಸೇವಿಸಿ ಇಬ್ಬರು ಶಿಕ್ಷಕರು ಸೇರಿ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರು
ತುಮಕೂರು: ಶಾಲೆಯಲ್ಲಿ ಮಧ್ಯಾಹ್ನ ಮೊಸರನ್ನ ಸೇವಿಸಿ ಇಬ್ಬರು ಶಿಕ್ಷಕರು ಸೇರಿ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾದ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಸೀನಪ್ಪನಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಮಧ್ಯಾಹ್ನ ಗ್ರಾಮದ ಶ್ರೀ ಅಂಬಾ ಭವಾನಿ ಅನುದಾನಿತ ಪ್ರೌಡ ಶಾಲೆಯಲ್ಲಿ ಇಬ್ಬರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮೊಸರನ್ನ ಸೇವಿಸಿದ್ದರು.
ಇದನ್ನೂ ಓದಿ: ಚಿಕ್ಕಮಗಳೂರು; ಬಿರಿಯಾನಿ ಸೇವಿಸಿ 17 ಮಂದಿ ಅಸ್ವಸ್ಥ, ಆಸ್ಪತ್ರೆಗೆ ಶಾಸಕ ಭೇಟಿ
ಬಳಿಕ ಸಂಜೆ ಮನೆಗೆ ಹೋದಾಗ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಅಸ್ವಸ್ಥರಾಗಿದ್ದರು. ಕೆಲವರಿಗೆ ವಾಂತಿ ಆಗಿದ್ದು ಕೂಡಲೇ ಕುಣಿಗಲ್ ತಾಲೂಕಿನ ಹಿಪ್ಪಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಕೆಲವರಿಗೆ ಹೆಚ್ಚಿನ ಚಿಕಿತ್ಸೆಗೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.