ಮಗ ಮನೆಬಿಟ್ಟು ಹೋಗಿ ದಶಕಗಳಾದರೂ ಕೈಯಲ್ಲಿ ಮಗನ ಪೋಟೋ ಹಿಡಿದುಕೊಂಡು ಊರೂರು ಸುತ್ತುತ್ತಿರುವ ತಂದೆ

ವ್ಯಕ್ತಿಯೊಬ್ಬರು ದಶಕದ ಹಿಂದೆ ನಾಪತ್ತೆಯಾದ ತನ್ನ ಮಗನನ್ನು ಹುಡುಕಾಡುತ್ತಲೇ ಇದ್ದಾರೆ. ಈಗಲೂ ಹಗಲು ರಾತ್ರಿ ಎನ್ನದೇ ಸುತ್ತದ ಬೀದಿಗಳಿಲ್ಲ, ಹೋಗದ ನಗರಗಳಿಲ್ಲ. ಈ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

ಮಗ ಮನೆಬಿಟ್ಟು ಹೋಗಿ ದಶಕಗಳಾದರೂ ಕೈಯಲ್ಲಿ ಮಗನ ಪೋಟೋ ಹಿಡಿದುಕೊಂಡು ಊರೂರು ಸುತ್ತುತ್ತಿರುವ ತಂದೆ
ಮಗ ಮನೆಬಿಟ್ಟು ಹೋಗಿ ದಶಕಗಳಾದರೂ ಕೈಯಲ್ಲಿ ಮಗನ ಪೋಟೋ ಹಿಡಿದುಕೊಂಡು ಊರೂರು ಸುತ್ತುತ್ತಿರುವ ತಂದೆ
Follow us
TV9 Web
| Updated By: Rakesh Nayak Manchi

Updated on:Nov 13, 2022 | 9:26 AM

ದಾವಣಗೆರೆ: ತಂದೆ ಮಗನ ಪ್ರೀತಿ ಅಂದರೆ ಅದಕ್ಕೊಂದು ಇತಿಹಾಸ ಇದೆ. ತನ್ನಿಂದಾಗ ಸಾಧನೆ ಮಗನಿಂದಾಗಲೇ ಎನ್ನುವ ತಂದೆಯಂದಿರೇ ಹೆಚ್ಚು. ಇದೇ ಕಾರಣಕ್ಕೆ ತಂದೆ ಆದಾತ ಮಗನನ್ನ ಹೆಗಲಮೇಲೆ ಹೊತ್ತು ತಿರುಗುತ್ತಾನೆ. ತನಗೆ ಕಾಣದ ಜಗತ್ತು ಮಗನಿಗಾದರೂ ಕಾಣಲಿ ಎಂಬ ಸಂಕಲ್ಪ ತಂದೆಯದ್ದು. ಆದರೆ ಇಲ್ಲೊಬ್ಬರು ದಶಕದ ಹಿಂದೆ ನಾಪತ್ತೆಯಾದ ತನ್ನ ಮಗನ ಹುಡುಕಾಟದಲ್ಲೇ ಮಗ್ನರಾಗಿದ್ದಾರೆ. ಮಗನ ಫೋಟೋ ಕೈಯಲ್ಲಿ ಹಿಡಿದುಕೊಂಡು ಹಗಲು ರಾತ್ರಿ ಎನ್ನದೆ ಊರೂರು ಸುತ್ತುತ್ತಿದ್ದಾರೆ. ಹೀಗೆ ಕೈಯಲ್ಲಿ ಮಗನ ಪೋಟೋ ಹಿಡಿದು ಕೊಂಡು ಸುತ್ತುತ್ತಿರುವ ತಂದೆ ಹೆಸರು ಮಹಾಬಳೇಶ್ವರಪ್ಪ. ಹೀಗೆ ಕಳೆದ ಹತ್ತು ವರ್ಷಗಳಿಂದ ತನ್ನ ಮಗನ ಪತ್ತೆಗಾಗಿ ಮಹಾಬಳೇಶ್ವರಪ್ಪ ಅವರು  ಈಗಲೂ ಹಗಲು ರಾತ್ರಿ ಎನ್ನದೇ ಸುತ್ತದ ಬೀದಿಗಳಿಲ್ಲ, ಹೋಗದ ನಗರಗಳಿಲ್ಲ. ತನ್ನ ಮಗನ ಮೇಲಿನ ತಂದೆಯ ಪ್ರೀತಿ ನೋಡಿದರೆ ನಿಜಕ್ಕೂ ಕಣ್ಣೀರು ಬರುತ್ತಿವೆ.

ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಇಟ್ಟಿಗಿ ಗ್ರಾಮ ಕೋಟೆ ಪ್ರದೇಶದ ನಿವಾಸಿ ಮಹಾಬಳೇಶ್ವರಪ್ಪ ಅವರ ಪುತ್ರ ಪತ್ರಿ ಬಸನಗೌಡ 2011ರ ಎಪ್ರೀಲ್ 1ರಂದು ತಾನು ಕೆಲಸ ಮಾಡುತ್ತಿದ್ದ ಇಟ್ಟಿಗಿ ಗ್ರಾಮದ ಜಮೀನಿನಿಂದ ಹೋದಾತ ವಾಪಸ್ಸು ಮನೆಗೆ ಬಂದಿಲ್ಲ. ಆತ ಮನೆ ಬಿಟ್ಟು ಹೋದಾಗ ಇತನಿಗೆ 28 ವರ್ಷ ವಯಸ್ಸಾಗಿತ್ತು. ಇನ್ನೇನು ಸಂಭ್ರಮದಿಂದ ಮಗನ ಮದುವೆ ಮಾಡಬೇಕು ಎಂದು ಕನಸು ಕಂಡಿದ್ದ ಮಹಾಬಳೇಶ್ವರಪ್ಪ, ತನ್ನ ಮಗನ ಹುಡುಕಾಟದಲ್ಲಿ ತೊಡಗಿಕೊಳ್ಳುವಂತಾಯಿತು. ಅಂದಿನಿಂದ ಇಂದಿನವರೆಗೆ ಮಗನಿಗಾಗಿ ಹುಡುಕಾಡುತ್ತಲೇ ಇದ್ದಾರೆ.

ಹೀಗೆ ನಾಪತ್ತೆಯಾದ ಮಗ ಬಸನಗೌಡ ದಾವಣಗೆರೆಗೆ ಬಂದ ಬಗ್ಗೆ ಮಾಹಿತಿ ತಿಳಿದ್ದು, ತಿಂಗಳಿಗೊಮ್ಮೆ ತಮ್ಮೂರಿನಿಂದ ದಾವಣಗೆರೆಗೆ ಬಂದು ಮಗನನ್ನ ಹುಡುಕುವ ಕೆಲಸ ಮಾಡುತ್ತಿದ್ದಾರೆ. ಪೊಲೀಸ್ ಠಾಣೆಗೆ ದೂರು, ಬಳ್ಳಾರಿ ಜಿಲ್ಲಾಧಿಕಾರಿಗೆ ದೂರು, ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಹೀಗೆ ಸಾಲುಸಾಲು ದೂರುಗಳನ್ನು ನೀಡಿದ್ದಾರೆ. ಇರುವ ಐದು ಎಕರೆ ಜಮೀನಿನಲ್ಲಿ ಬೇಸಾಯ ಮಾಡಿ ಬದುಕು ಸಾಗಿಸುತ್ತಿರುವ ಮಹಾಬಳೇಶ್ವರಪ್ಪ, ಎಲ್ಲಿದ್ದೀಯೋ ಮಗನೆ ಅಂತ ಹುಡುಕಾಡುತ್ತಲೇ ಇದ್ದಾರೆ.

ತನ್ನ ಮಗನಿಗಾಗಿ ಹುಡುಕಲು ಬದವಾದ ಕಾರಣವಿದೆ. ಆಸ್ತಿಗಾಗಿ ಮನೆಯಲ್ಲಿ ಅಣ್ಣ ತಮ್ಮಂದಿರಿಗೆ ಜಗಳವಿತ್ತು. ಆಸ್ತಿಯಲ್ಲಿ ಪಾಲು ಮಾಡದ ಹಿನ್ನೆಲೆ ಮಹಾಬಳೇಶ್ವರನ ಸಹೋದರು ಇವರ ಮೂರು ಜನ ಸಹೋದರಿಯನ್ನ ಕರೆತಂದು ಪಾಲು ಮಾಡುವಂತೆ ಒತ್ತಡ ಹೇರಲು ಮುಂದಾಗಿದ್ದರು. ಈ ವಿಚಾರಕ್ಕಾಗಿ ಜಗಳ ಕೂಡಾ ಆಗಿದೆ. ಹೀಗಾಗಿ ತನ್ನ ಮಗನ ಜೀವಕ್ಕೂ ಅಪಾಯ ಆಗಿರುವ ಸಾಧ್ಯತೆ ಇರಬಹುದು ಎಂಬ ಆತಂಕ ಕೂಡಾ ತಂದೆಗಿದೆ. ಈಗ ತಂದೆ ಜೊತೆಗೆ ಸುತ್ತಾಡುತ್ತಿರುವ ಕಿರಿಯ ಪುತ್ರ ಮಲ್ಲಿಕಾರ್ಜುನ ಮೇಲೆ ಸಹ ಕೆಲವರು ಆಸ್ತಿ ವಿಚಾರಕ್ಕೆ ಹಲ್ಲೆ ಮಾಡಿದ್ದರು. ಹಿರಿಯ ಮಗನಿಗೂ ಅದೇ ರೀತಿ ಆಗಿರಬೇಕು ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ.

ನಿಜಕ್ಕೂ ತಂದೆ ಪ್ರೀತಿ ಅಂದರೆ ಅದಕ್ಕೆ ನಿದರ್ಶನವೇ ಮಹಾಬಳೇಶ್ವರಪ್ಪ. ಕಾರಣ ಪುತ್ರ ಪತ್ರಿ ಬಸನಗೌಡ ಮನೆ ಬಿಟ್ಟಾಗ 28 ವರ್ಷ ವಯಸ್ಸು. ಈಗ ಆತನಿಗೆ 38 ವರ್ಷ ವಯಸ್ಸು ಎಲ್ಲಿದ್ದಾನೋ ಎನು ಮಾಡುತ್ತಿದ್ದಾನೋ ಆತನ ಜೀವಕ್ಕೇನಾದರೂ ಅಪಾಯ ಆಗಿದೇಯೋ ಹೀಗೆ ಸಾವಿರಾರು ಪ್ರಶ್ನೆಗಳನ್ನ ಮನಸ್ಸಿನಟ್ಟಿಕೊಂಡು ತಂದೆ ಮಾತ್ರ ಸುತ್ತಾಡುತ್ತಲೇ ಇದ್ದಾರೆ. ಈ ಅಪರೂಪದ ತಂದೆಗೆ ಮಗ ಸಿಗುವನೇ ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲಿ ಹುಟ್ಟುತ್ತದೆ. ಆದರೆ ತಂದೆ ಮಾತ್ರ ಮಗನಿಗಾಗಿ ಹುಡುಕಾಡುವುದನ್ನು ನಿಲ್ಲಿಸುತ್ತಿಲ್ಲ.

ವರದಿ: ಬಸವರಾಜ್ ದೊಡ್ಮನಿ, ಟಿವಿ9 ದಾವಣಗೆರೆ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:23 am, Sun, 13 November 22

ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?