ದಾವಣಗೆರೆ, ಮೇ 07: ದಾವಣಗೆರೆ ಸಂಸದ ಸಿದ್ದೇಶ್ವರ್ (GM Siddeshwara) ಮತದಾನದ ಗೌಪ್ಯತೆ ಕಾಪಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಬಿಜೆಪಿ ಅಭ್ಯರ್ಥಿ, ಪತ್ನಿ ಗಾಯತ್ರಿ ಸಿದ್ದೇಶ್ವರ್ (Gayatri Siddheshwar) ಮತವನ್ನು ತಾವೇ ಹಾಕುವ ಮೂಲಕ ಜಿ.ಎಂ.ಸಿದ್ದೇಶ್ವರ್‌ರಿಂದ ಚುನಾವಣಾ ಮಾರ್ಗಸೂಚಿ ಉಲ್ಲಂಘನೆ ಆಗಿದೆ. ದಾವಣಗೆರೆಯ ಮಾಗನೂರು ಬಸಪ್ಪ ಶಾಲೆಯ ಮತಗಟ್ಟೆಯಲ್ಲಿ ಘಟನೆ ನಡೆದಿದೆ. ಮತದಾನಕ್ಕೆ ಮತಗಟ್ಟೆಗೆ ದಂಪತಿ ಸಮೇತರಾಗಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಹಾಗೂ ಸಂಸದ ಜಿಎಂ ಸಿದ್ದೇಶ್ವರ್ ಆಗಮಿಸಿದ್ದರು. ಈ ವೇಳೆ ಗಾಯತ್ರಿ ಸಿದ್ದೇಶ್ವರ್ ಮತ ಹಾಕಲು ಗೊಂದಲ್ಲಕೊಳ್ಳಗಾಗಿದ್ದರು. ಪತ್ನಿಗೆ ಸಹಾಯ ಮಾಡಲು ಹೋಗಿ ಜಿಎಂ ಸಿದ್ದೇಶ್ವರ್ ತಾವೇ ಮತದಾನ ಮಾಡಿದ್ದಾರೆ.
ಸದ್ಯ ಈ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ತನ್ನ ಮತ ತಾನೇ ಹಾಕಿಕೊಳ್ಳದ ಬಿಜೆಪಿ ಅಭ್ಯರ್ಥಿ ಆಡಳಿತ ಹೇಗೆ ನಡೆಸುತ್ತಾರೆ ಎಂದು ಸಾಮಾಜಿಕಜಾಲ ತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಯಾರೇ ಗೆದ್ದರು ಸಂಸತ್ತಿಗೆ ಹೋಗುವುದು ಮಹಿಳೆಯರೇ
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪ್ರಥಮ ಸಲ ಮಹಿಳೆ ಸ್ಪರ್ಧಾ ಕಣಕಿಳಿದಿದ್ದಾರೆ. ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ದಾವಣಗೆರೆ ನಗರದ ಬೂದಿಹಾಳ್ ರಸ್ತೆಯ ಬಿಜೆಪಿ ಕೀ ಓಟರ್ಸ್ ಮನೆಗಳಿಗೆ ಭೇಟಿ ನೀಡಿದ್ದರು. ಬೂದಿಹಾಳ್ ರಸ್ತೆ, ಶಿವಾಜಿ ನಗರ, ಎಸ್ ಎಂ ಕೃಷ್ಣ ನಗರ ನಗರ ಸೇರಿದಂತೆ ಬಹುತೇಕ ಕಡೆ ಮತಯಾಚನೆ ಮಾಡಿದ್ದರು.
ಈ ವೇಳೆ ಟಿವಿ9 ಜೊತೆ ಮಾತಾಡಿದ್ದ ಗಾಯತ್ರಿ ಸಿದ್ದೇಶ್ವರ, ಕ್ಷೇತ್ರದಲ್ಲಿ ತಮ್ಮ ಬಗ್ಗೆ ಇವರ ಉತ್ಸಾಹ ಗೆಲುವುದು ನಿಶ್ಚಿತ ಎಂದು ಅವರು ಹೇಳಿದ್ದರು.
ದಾವಣಗೆರೆ ಜಿಲ್ಲಾಡಳಿತ ಮತದಾನಕ್ಕೆ ಸಲಕ ಸಿದ್ದತೆ ಮಾಡಿಕೊಂಡಿದೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯಲಿದೆ. ದಾವಣಗೆರೆ ಲೋಕ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಕಲಂ 144 ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮತದಾನ ಪ್ರಮಾಣ ಹೆಚ್ಚಳಕ್ಕೆ ನೂರಕ್ಕೂ ಹೆಚ್ಚು ಮತದಾನ ಜಾಗೃತಿ ಕಾರ್ಯಕ್ರಮ ಮಾಡಲಾಗಿದೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ಲೋಕಸಭಾ ಚುನಾವಣೆ ಸ್ಪರ್ಧಿಗಳಿಂದ ಪಾಲಿಕೆ ಆಯುಕ್ತವರೆಗೂ ಮಹಿಳೆಯರದ್ದೇ ಪ್ರಾಬಲ್ಯ
ದಾವಣಗೆರೆ ಕ್ಷೇತ್ರದಲ್ಲಿ ಪರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ಕ್ಷೇತ್ರದಲ್ಲಿ ಮಹಿಳಾ ಮತದಾರರ ಆಕರ್ಷಣೆಗೆ 35 ಸಖಿ ಮತಗಟ್ಟೆ ಆರಂಭಿಸಲಾಗಿದೆ. ಜಿಲ್ಲಾಧಿಕಾರಿ ಡಾ. ಎಂವಿ ವೆಂಕಟೇಶ್ ಮಾಹಿತಿ ನೀಡಿದ್ದಾರೆ.
ಪುರುಷರು -851990, ಮಹಿಳೆಯರು – 857117, ಇತರರು -137, ಒಟ್ಟು -1709244 . ಮತಗಟ್ಟೆಗಳು ಒಟ್ಟು – 1946, ಕ್ರಿಟಿಕಲ್ ಮತಗಟ್ಟೆ- 390, ಸಖಿ ಮತಗಟ್ಟೆ-35, ಸಾಂಪ್ರದಾಯಿಕ ಮತಗಟ್ಟೆ-07. ದಿವ್ಯಾಂಗ ಮತಗಟ್ಟೆ -7. ಯುವ ಮತಗಟ್ಟೆ – 07 ಥೀಮ್ ಮತಗಟ್ಟೆ – 07. ವಿವಿಪ್ಯಾಟ್ – 2575. ಸುರಕ್ಷತೆ ಬಗ್ಗೆ ಒಟ್ಟು 1141 ಮತಗಟ್ಟೆಗಳ ವೆಬ್ ಕಾಸ್ಟಿಂಗ್ ಗೆ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗಾಗಿ 3500 ಭದ್ರತಾ ಸಿಬ್ಬಂದಿ ನೇಮಕ ಚುನಾವಣೆ ಗಾಗಿ 8996 ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ.
ಮತ್ತಷ್ಟು ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:24 pm, Tue, 7 May 24