ನನಗೆ ಅಡುಗೆ ಮಾಡೋದು ಗೊತ್ತು, ದೇಶ ಸೇವೆಯೂ ಗೊತ್ತು; ಶಾಮನೂರು ಶಿವಶಂಕರಪ್ಪಗೆ ಗಾಯತ್ರಿ ಸಿದ್ದೇಶ್ವರ್ ಟಾಂಗ್​

ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರಗೆ ಜಿಲ್ಲೆ ಬಗ್ಗೆ ಗಂಧಗಾಲಿ ಗೊತ್ತಿಲ್ಲ ಅವರು ಅಡಿಕೆ ಮಾಡಲು ಮಾತ್ರ ಲಾಯಕ್ಕು ಎಂಬ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಗಾಯತ್ರಿ ಸಿದ್ದೇಶ್ವರ್ ತಿರುಗೇಟು ನೀಡಿದ್ದಾರೆ. ನನಗೆ ಅಡುಗೆ ಮಾಡೋದು ಗೊತ್ತು, ದೇಶ ಸೇವೆಯೂ ಗೊತ್ತು ಎಂದು ಟಾಂಗ್ ಕೊಟ್ಟಿದ್ದಾರೆ. ಅಲ್ಲದೆ ಅಡಿಗೆ ಮಾಡಲು ರೆಡಿ ದೇಶ ಸೇವೆಗೂ ರೆಡಿ ಘೋಷಣೆಯೊಂದಿಗೆ ಅಭಿಯಾನ ನಡೆಸಲು ಬಿಜೆಪಿ ಮುಂದಾಗಿದೆ.

ನನಗೆ ಅಡುಗೆ ಮಾಡೋದು ಗೊತ್ತು, ದೇಶ ಸೇವೆಯೂ ಗೊತ್ತು; ಶಾಮನೂರು ಶಿವಶಂಕರಪ್ಪಗೆ ಗಾಯತ್ರಿ ಸಿದ್ದೇಶ್ವರ್ ಟಾಂಗ್​
ಗಾಯತ್ರಿ ಸಿದ್ದೇಶ್ವರ್
Follow us
| Updated By: ಆಯೇಷಾ ಬಾನು

Updated on: Apr 02, 2024 | 11:57 AM

ದಾವಣಗೆರೆ, ಏಪ್ರಿಲ್.02: ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಇತರೆ ಅನೇಕ ಯೋಜನೆಗಳ ಮೂಲಕ ಕಾಂಗ್ರೆಸ್ ಮಹಿಳೆಯರಿಗೆ ಹೆಚ್ಚಿನ ಆಧ್ಯತೆ ನೀಡುತ್ತಿದೆ. ಆದರೆ ಇತ್ತ ಕಾಂಗ್ರೆಸ್ಸಿನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರು (Shamanur Shivashankarappa) ಬಿಜೆಪಿ ಮಹಿಳಾ ಅಭ್ಯರ್ಥಿ ಬಗ್ಗೆ ಹೇಳಿಕೆ ನೀಡಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದರು. ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರಗೆ (Gayatri Siddeshwara) ಜಿಲ್ಲೆ ಬಗ್ಗೆ ಗಂಧಗಾಲಿ ಗೊತ್ತಿಲ್ಲ ಅವರು ಅಡಿಕೆ ಮಾಡಲು ಮಾತ್ರ ಲಾಯಕ್ಕು ಎಂದು ಹೇಳಿಕೆ ನೀಡಿದ್ದರು. ನನಗೆ ಅಡುಗೆ ಮಾಡೋದು ಗೊತ್ತು, ದೇಶ ಸೇವೆಯೂ ಗೊತ್ತು ಎನ್ನುವ ಮೂಲಕ ಶಾಸಕ ಶಾಮನೂರು ಶಿವಶಂಕರಪ್ಪಗೆ ಗಾಯತ್ರಿ ಸಿದ್ದೇಶ್ವರ್ ಟಾಂಗ್​ ಕೊಟ್ಟಿದ್ದಾರೆ.

ದಾವಣಗೆರೆ ಲೋಕಸಭಾ ಕ್ಷೇತ್ರದ BJP ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರು ದಾವಣಗೆರೆ ನಗರದ ಹಳೇ ದುರ್ಗಾಂಭಿಕಾ ದೇವಸ್ಥಾನ ಹಾಗೂ ಶಿವಾಜಿ ನಗರದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ತಿರುಗೇಟು ನೀಡಿದ್ದಾರೆ. ಶಾಮನೂರು ಶಿವಶಂಕರಪ್ಪನವರು ದೊಡ್ಡವರು, ನನಗೆ ಚುನಾವಣೆಗಳು ಹೊಸದಲ್ಲ. ಕಳೆದ ಮೂವತ್ತು ವರ್ಷಗಳಿಂದ ಚುನಾವಣೆ ಮಾಡುತ್ತಾ ಬಂದಿದ್ದೇನೆ.‌ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಮೋದಿ ‌ಹೆಸರಿನ‌ ಜೊತೆಗೆ ಕಳೆದ 2೦ ವರ್ಷಗಳ ನನ್ನ ಪತಿ‌ ಸಂಸದ ಜಿಎಂ ಸಿದ್ದೇಶ್ವರ ಮಾಡಿದ ಅಭಿವೃದ್ದಿ ನಮ್ಮ ಕೈ ಹಿಡಿಯುತ್ತಿವೆ. ಶಾಮನೂರು ಕುಟುಂಬದ ಬಳಿ ಅಧಿಕಾರ ಇದೆ. ಮತ್ತೆ ಅಧಿಕಾರ ಬೇಡುತ್ತಿದ್ದಾರೆ. ಶಾಮನೂರು ಶಿವಶಂಕರಪ್ಪ ಶಾಸಕರಿದ್ದಾರೆ. ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ ಜಿಲ್ಲಾ ಉಸ್ತುವಾರಿ ಸಚಿವ.‌ ಈಗ ಜಿಲ್ಲಾ ಉಸ್ತುವಾರಿ ಸಚಿವನ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ ಕಾಂಗ್ರೆಸ್ ಅಭ್ಯರ್ಥಿ. ಶಾಮನೂರು ಕುಟುಂಬದ ಬಳಿ‌ ಅಧಿಕಾರ ಇದ್ದರೂ ಅವರು ಮತ್ತೆ ಅಧಿಕಾರ ಬೇಡುತ್ತಿದ್ದಾರೆ ಎಂದು ಗಾಯತ್ರಿ ಸಿದ್ದೇಶ್ವರ ಅವರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ವಿಧಾನಸಭಾ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಶಿರಹಟ್ಟಿ ಕ್ಷೇತ್ರದ ಟಿಕೆಟ್ ಮಾರಿಕೊಂಡಿದ್ದರು: ರಾಮಣ್ಣ ಲಮಾಣಿ

ಕಾಂಗ್ರೆಸ್ಸಿನ ಹಿರಿಯ ಶಾಸಕ ಹಾಗೂ ಅಖಿತ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಒಂದಿಲ್ಲೊಂದು ಹೇಳಿಕೆಗಳ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಆದರೆ ಗಾಯತ್ರಿ ಸಿದ್ದೇಶ್ವರಗೆ ಜಿಲ್ಲೆ ಬಗ್ಗೆ ಗಂಧಗಾಲಿ ಗೊತ್ತಿಲ್ಲ, ಅವರು ಅಡಿಕೆ ಮಾಡಲು ಮಾತ್ರ ಲಾಯಕ್ಕು ಎಂದು ದಾವಣಗೆರೆ ಬಂಟರ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಬಗ್ಗೆ ಖ್ಯಾತ ಬ್ಯಾಡ್ಮಿಂಟನ್​ ತಾರೆ ಸೈನಾ ನೆಹ್ವಾಲ್ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ‘ಸಮಾಜದಲ್ಲಿ ಮಹಿಳೆ ಅಬಲೆ ಅಲ್ಲ ಸಬಲೆ. ಪುರುಷರಂತೆ ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂದು ಕಾಂಗ್ರೆಸ್​ ಅಭಿಯಾನವೊಂದನ್ನು ಆರಂಭಿಸಿತ್ತು. ಆದರೆ ಕರ್ನಾಟಕದ ಹಿರಿಯ ಕಾಂಗ್ರೆಸ್​ ನಾಯಕರೊಬ್ಬರು ಮಹಿಳೆಯರ ಬಗ್ಗೆ ಅತ್ಯಂತ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ಇದು ಕಾಂಗ್ರೆಸ್​ನ ನಿಜವಾದ ಮನಸ್ಥಿಯನ್ನು ತೋರಿಸುತ್ತದೆ’ ಎಂದು ಬರೆದು ಖಂಡಿಸಿದ್ದರು. ಇನ್ನು ಬಿಜೆಪಿ ಅಡಿಗೆ ಮಾಡಲು ರೆಡಿ ದೇಶ ಸೇವೆಗೂ ರೆಡಿ ಘೋಷಣೆಯೊಂದಿಗೆ ಅಭಿಯಾನ ಕೂಡ ಆರಂಭ ಮಾಡಲು ಮುಂದಾಗಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ