ದಾವಣಗೆರೆ: ದೇವಸ್ಥಾನದಲ್ಲಿ ಹೂವಿನ ಅಲಂಕಾರ ಮಾಡುತ್ತಿದ್ದ ವ್ಯಕ್ತಿ ವಿದ್ಯುತ್ ತಗುಲಿ ಸಾವು

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 23, 2023 | 11:03 AM

ದೇವಸ್ಥಾನದಲ್ಲಿ ಹೂವಿನ ಅಲಂಕಾರ ಮಾಡುತ್ತಿದ್ದ ವೇಳೆ ವಿದ್ಯುತ್ ತಗುಲಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಜಗಳೂರು ಪಟ್ಟಣದ ಊರಮ್ಮ ದೇವಿ ದೇವಸ್ಥಾನದಲ್ಲಿ ನಡೆದಿದೆ. ಹುಚ್ಚಪ್ಪ (48) ಸಾವನ್ನಪ್ಪಿದ ವ್ಯಕ್ತಿ.

ದಾವಣಗೆರೆ: ದೇವಸ್ಥಾನದಲ್ಲಿ ಹೂವಿನ ಅಲಂಕಾರ ಮಾಡುತ್ತಿದ್ದ ವ್ಯಕ್ತಿ ವಿದ್ಯುತ್ ತಗುಲಿ ಸಾವು
ವಿದ್ಯುತ್​ ತಗುಲಿ ವ್ಯಕ್ತಿ ಸಾವು, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Follow us on

ದಾವಣಗೆರೆ: ದೇವಸ್ಥಾನದಲ್ಲಿ ಹೂವಿನ ಅಲಂಕಾರ ಮಾಡುತ್ತಿದ್ದ ವೇಳೆ ವಿದ್ಯುತ್ ತಗುಲಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಜಗಳೂರು(Jagalur) ಪಟ್ಟಣದ ಊರಮ್ಮ ದೇವಿ ದೇವಸ್ಥಾನದಲ್ಲಿ ನಡೆದಿದೆ. ಹುಚ್ಚಪ್ಪ (48) ಸಾವನ್ನಪ್ಪಿದ ವ್ಯಕ್ತಿ. ಜಗಳೂರು ತಾಲೂಕಿನ ಖಾನಮಡುಗು ಗ್ರಾಮದ ಹುಚ್ಚಪ್ಪ ದೇವಿಗೆ ಹೂವು ತಂದಿದ್ದ. ಹೀಗೆ ತಂದ ಹೂವುಗಳಿಂದ ಅಲಂಕಾರ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾನೆ. ಮನೆಗೆ ಆಧಾರವಾಗಿದ್ದವನ ಕಳೆದುಕೊಂಡು ಕುಟುಂಬ ಸದಸ್ಯರು ಕಣ್ಣೀರಿಡುತ್ತಿದ್ದಾರೆ. ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

2 ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಓರ್ವ ಚಾಲಕ ಸಾವು

ಕಲಬುರಗಿ: ಜಿಲ್ಲೆಯ ಕಮಲಾಪುರ ಪಟ್ಟಣದ ಹೊರವಲಯದಲ್ಲಿ 2 ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಚಾಲಕ ಸಾವನ್ನಪ್ಪಿದ್ದಾನೆ. ರಾಜಸ್ಥಾನ ಮೂಲದ ಲಾರಿ ಚಾಲಕ ಅಬ್ಬಾಸ್(39) ಮೃತ ವ್ಯಕ್ತಿ. ಇನ್ನು ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಮನಾಬಾದ್ ಕಡೆಯಿಂದ ಕಲಬುರಗಿಗೆ ತೆರಳುತ್ತಿದ್ದ ಲಾರಿ ಹಾಗೂ ಜೇವರ್ಗಿಯಿಂದ ಹುಮನಾಬಾದ್​ಗೆ ತೆರಳುತ್ತಿದ್ದ ಮತ್ತೊಂದು ಲಾರಿ ನಡುವೆ ಡಿಕ್ಕಿಯಾಗಿ ಅದರ ರಭಸಕ್ಕೆ ಎರಡು ಲಾರಿಗಳ ಮುಂಭಾಗ ನಜ್ಜುಗುಜ್ಜಾಗಿದೆ. ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಚನ್ನಪಟ್ಟಣ: ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್​ ವೇನಲ್ಲಿ ಭೀಕರ ಅಪಘಾತ; ಐವರ ಸಾವು

ಕುರಿಗಳನ್ನು ತೊಳೆಯಲು ಹೋಗಿದ್ದವರು ಕೆರೆ ಪಾಲು: ಒಂದೇ ಕುಟುಂಬದ ಮೂವರು ದುರ್ಮರಣ

ರಾಮನಗರ: ಕುರಿಗಳ ಮೈತೊಳೆಯಲು ಹೋಗಿದ್ದ ಒಂದೇ ಕುಟುಂಬದ ಮೂವರು ದುರ್ಮರಣ ಹೊಂದಿರುವಂತಹ ದಾರುಣ ಘಟನೆಯೊಂದು ಜಿಲ್ಲೆಯ ಮಾಗಡಿ ತಾಲೂಕಿನ ಮುತ್ತಸಾಗರ ಬಳಿ ಕೆರೆಯಲ್ಲಿ ನಡೆದಿದೆ. ನಾಗರಾಜು(30), ಜ್ಯೋತಿ(35) ಮತ್ತು ಲಕ್ಷ್ಮೀ(22) ಮೃತರು. ಇಬ್ಬರ ಮೃತದೇಹ ಹೊರತೆಗೆದ ಅಗ್ನಿ ಶಾಮಕ ಸಿಬ್ಬಂದಿ, ಮತ್ತೊಂದು ಶವ ಹೊರತೆಗೆಯಲು ಶೋಧಕಾರ್ಯ ನಡೆಸಿದ್ದಾರೆ. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಟಿಪ್ಪರ್ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಕಲಬುರಗಿ ನಗರದ ಉದನೂರು‌ ಕ್ರಾಸ್ ಬಳಿ ನಡೆದಿದೆ. ರಾಣೋಜಿ ವಾಡಿ(42), ಪತ್ನಿ ರೇಣುಕಾ(35) ಮೃತರು. ಕಲಬುರಗಿ ತಾಲೂಕಿನ ಶರಣ ಸಿರಸಗಿ ಗ್ರಾಮದ ನಿವಾಸಿಗಳಾಗಿದ್ದಾರೆ. ಅಪಘಾತ ಬಳಿಕ ಟಿಪ್ಪರ್ ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ