ದಾವಣಗೆರೆ: ಮರ್ಮಾಂಗ ಕತ್ತರಿಸಿಕೊಳ್ಳಲು ಮುಂದಾದ ಮಾನಸಿಕ ಅಸ್ವಸ್ಥ

ಮಾನಸಿಕ ಅಸ್ವಸ್ಥನೊಬ್ಬ ಮರ್ಮಾಂಗ ಕತ್ತರಿಸಿಕೊಳ್ಳಲು ಯತ್ನಿಸಿದ ಘಟನೆ ದಾವಣಗೆರೆ ನಗರದ ಶಾಮನೂರು ಬಳಿ ನಡೆದಿದೆ. ಮೊದಲು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದಾಗ ಪೊಲೀಸರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ತಪ್ಪಿಸಿಕೊಂಡ ಆತ, ಶಾಮನೂರು ಬಳಿ ಹೊಟ್ಟೆಗೆ ಚಾಕು ಚುಚ್ಚಿ ಬಳಿಕ ಮರ್ಮಾಂಗ ಕತ್ತರಿಸಲು ಮುಂದಾಗಿದ್ದಾನೆ.

ದಾವಣಗೆರೆ: ಮರ್ಮಾಂಗ ಕತ್ತರಿಸಿಕೊಳ್ಳಲು ಮುಂದಾದ ಮಾನಸಿಕ ಅಸ್ವಸ್ಥ
ದಾವಣಗೆರೆಯಲ್ಲಿ ಮರ್ಮಾಂಗ ಕತ್ತರಿಸಿಕೊಳ್ಳಲು ಮುಂದಾದ ಮಾನಸಿಕ ಅಸ್ವಸ್ಥ
Edited By: Rakesh Nayak Manchi

Updated on: Mar 03, 2024 | 10:01 PM

ದಾವಣಗೆರೆ, ಮಾ.3: ಮಾನಸಿಕ ಅಸ್ವಸ್ಥನೊಬ್ಬ ಮರ್ಮಾಂಗ ಕತ್ತರಿಸಿಕೊಳ್ಳಲು ಯತ್ನಿಸಿದ ಘಟನೆ ದಾವಣಗೆರೆ (Davanagere) ನಗರದ ಶಾಮನೂರು ಬಳಿ ನಡೆದಿದೆ. ಉತ್ತರ ಭಾರತ ಮೂಲದ ಮಾನಸಿಕ ಅಸ್ವಸ್ಥ ಚೇತನ್​ನನ್ನು ಸಾರ್ವಜನಿಕರು ಮತ್ತು ಪೊಲೀಸರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೊದಲು ಬಸ್ ನಿಲ್ದಾಣದಲ್ಲಿ ಕತ್ತು ಕೊಯ್ದುಕೊಂಡಿದ್ದನು.

ಕೂಡಲೇ ಎಚ್ಚೆತ್ತ ಸ್ಥಳೀಯರು ಚೇತನ್​ನನ್ನು ಪೊಲೀಸರಿಗೆ ಮಾಹಿತಿ ನೀಡಿ ಌಂಬುಲೆನ್ಸ್‌ ಮೂಲಕ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಮತ್ತು ಸಿಬ್ಬಂದಿ ಚಿಕಿತ್ಸೆ ನೀಡಲು ಸಿದ್ಧತೆ ಮಾಡುತ್ತಿದ್ದರು. ಆದರೆ, ಚಿಕಿತ್ಸೆ ನೀಡಲು ತಡವಾಗಿದ್ದರಿಂದ ಜಿಲ್ಲಾ ಆಸ್ಪತ್ರೆಯಿಂದ ಚೇತನ್ ತಪ್ಪಿಸಿಕೊಂಡಿದ್ದಾನೆ.

ಇದನ್ನೂ ಓದಿ: ಕೀಟನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಯುವಕ, ಹೆಗಲ ಮೇಲೆ ಹೊತ್ತು ಓಡಿ ಪ್ರಾಣ ಉಳಿಸಿದ ಕಾನ್ಸ್ಟೇಬಲ್

ಆಸ್ಪತ್ರೆಯಿಂದ ತಪ್ಪಿಸಿಕೊಂಡ ಚೇತನ್, ರಸ್ತೆಯ ಮೂಲಕ ಓಡಿ ಹೋಗಿ ಹೈವೇಯಲ್ಲಿ ನಿಂತುಕೊಂಡು ಹೊಟ್ಟೆಗೆ ಇರಿದುಕೊಂಡಿದ್ದಾನೆ. ಬಳಿಕ ತನ್ನ ಮರ್ಮಾಂಗ ಕತ್ತರಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆಯೂ ಸ್ಥಳೀಯರು ಚೇತನ್​ನನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಪೊಲೀಸರ ಸಹಾಯದಿಂದ ಮತ್ತೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us