AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ ಪ್ರಸಿದ್ಧ ರಸ್ತೆಯಲ್ಲಿ ಚಿತ್ರ ಸಂತೆ ಆಯೋಜನೆ; ಇಲ್ಲಿದೆ ಝಲಕ್​

ಈ ರಸ್ತೆಯಲ್ಲಿ ನಿತ್ಯ ವಾಹನ ದಟ್ಟಣೆ, ರಸ್ತೆ ದುರಂತ, ಮೇಲಾಗಿ ಇದೊಂದು ಬೆಣ್ಣೆ ನಗರಿಗರ ಪಾಲಿಗೆ ಬೆಂಗಳೂರಿನ ಎಂಜಿ ರೋಡ್ ಇದ್ದಂತೆ. ಇಂತಹ ರಸ್ತೆಯಲ್ಲಿ ಇಂದು ಹಕ್ಕಿಗಳ ಹಾರಾಟ, ಕ್ಯಾನ್​ವಾಸ್ ಮೇಲೆ ಅರಳಿದ ಅದ್ಬುತ ನಿಸರ್ಗದ ನೋಟ. ಮುಂದೆ ಬಂದು ಕುಳಿತರೇ ಸಾಕು ಕ್ಷಣಾರ್ಧದಲ್ಲಿ ನಿಮ್ಮ ಕಲಾಕೃತಿಗೆ ಪೆನ್ಸಿಲ್​ನಲ್ಲಿ ಜೀವ. ಹೀಗೆ ಹತ್ತಾರು ಆಯಾಮಗಳಿಗೆ ವೇದಿಕೆ ಆಗಿತ್ತು ಆ ಪ್ರಸಿದ್ಧ ರಸ್ತೆ. ಇಲ್ಲಿದೆ ನೋಡಿ ವಿಶೇಷ ಚಿತ್ರ ಸಂತೆಯ ಝಲಕ್​.

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: ಕಿರಣ್ ಹನುಮಂತ್​ ಮಾದಾರ್|

Updated on: Mar 03, 2024 | 3:33 PM

Share
ದಾವಣಗೆರೆ ಇತಿಹಾಸದಲ್ಲಿಯೇ ಕಲಾ ಆಸಕ್ತರು ಇಷ್ಟು ಸಂಖ್ಯೆಯಲ್ಲಿ ಇದ್ದಾರೆ ಎಂದು ನಿನ್ನೆ(ಮಾ.02) ದಾವಣಗೆರೆ ಪ್ರಸಿದ್ಧ ರಸ್ತೆಯಲ್ಲಿ ಆಯೋಜಿಸಿದ್ದ ಚಿತ್ರಸಂತೆಯಿಂದ ಗೊತ್ತಾಗಿದೆ. ನಗರದ ಎವಿಕೆ ರಸ್ತೆ ಅಂದ್ರೆ ಇಲ್ಲಿ ಪ್ರಸಿದ್ದಿ, ಎವಿ ಕಮಲಮ್ಮ ಎಂಬ ಮಹಿಳಾ ಕಾಲೇಜು ಕೂಡ ಇದೆ. ಈ ಕಾಲೇಜಿನ ಹೆಸರನ್ನೇ ಈ ರಸ್ತೆಗೆ ಇಡಲಾಗಿದೆ. ಇದೇ ಕಾರಣಕ್ಕೆ ಈ ರಸ್ತೆಗೆ ಇನ್ನಷ್ಟು ಮೆರಗು ಬಂದಿದೆ.

1 / 6
ಹೊಸ ದಾವಣಗೆರೆಯಿಂದ ಹಳೇ ದಾವಣಗೆರೆಗೆ ಸಂಪರ್ಕ ಕಲ್ಪಿಸುವ ಎಕಮುಖ ರಸ್ತೆ ಇದಾಗಿದ್ದು, ಇಡೀ ನಗರದಲ್ಲಿ ಇಷ್ಟು ಸ್ಮಾರ್ಟ ಇರುವ ಯಾವುದೇ ರಸ್ತೆ ಕಾಣಲ್ಲ. ಪ್ರಸಿದ್ಧ ಅಂಗಡಿಗಳು. ರಸ್ತೆ ಬದಿ ವ್ಯಾಪಾರಕ್ಕೆ ಇದು ಪ್ರಸಿದ್ಧ ರಸ್ತೆ. ಇಂತಹ ರಸ್ತೆಯಲ್ಲಿ ಅಂಗಡಿಗಳು ಬಂದ್ ಆಗಿದ್ದವು. ಬದಲಿಗೆ ರಸ್ತೆಯ ಎರಡು ಬದಿಯಲ್ಲಿ ಸ್ಟಾಲ್​ಗಳು ತಲೆ ಎತ್ತಿದ್ದವು.

2 / 6
 ದಾವಣಗೆರೆ ಕಲಾ ಅಕಾಡಮೆಯವರು ಒಂದು ದಿನದ ಚಿತ್ರ ಸಂತೆ ಆಯೋಜಿಸಿದ್ದರು. ಮಹಾರಾಷ್ಟ್ರ, ರಾಜಸ್ತಾನ ಸೇರಿ ಹಲವಾರು ರಾಜ್ಯ ಹಾಗೂ ಬೀದರ್​ದ ಕಟ್ಟಕಡೆಯ ಬಸವಕಲ್ಯಾಣದಿಂದ ಹಿಡಿದು, ಇತ್ತ ಕೊಳ್ಳೇಗಾಲದವರೆಗಿನ ನೂರಾರು ಕಲಾವಿದರು ಇಲ್ಲಿ ಪಾಲ್ಗೊಂಡಿದ್ದರು.

3 / 6
ಲೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿಶೇಷ ಅಂದರೆ ಪೋಟೋ ಸ್ಟುಡಿಯೋದಲ್ಲಿ ಕುಳಿತಂತೆ ಹತ್ತು ನಿಮಿಷ ಕುಳಿತರೇ ಸಾಕು ನಿಮ್ಮ ಭಾವ ಚಿತ್ರ ಇಲ್ಲಿ ಕಲಾವಿದರು ಬಿಡಿಸಿಕೊಡುತ್ತಿದ್ದರು. ಯುವ ಕಲಾವಿದರಂತು ಸಖತ್ ಖುಷಿಯಾಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರು ಚಿತ್ರ ಸಂತೆಗೆ ಚಾಲನೆ ನೀಡಿದರು.

4 / 6
 ನೂರಾರು ಮಹಾತ್ಮರ ಮೂರ್ತಿಗಳನ್ನು ರಾಗಿ,ಗೋಧಿ ಸೇರಿದಂತೆ ಧಾನ್ಯಗಳನ್ನು ಬಳಸಿ ಚಿತ್ರಿಸಲಾಗಿತ್ತು. ಹೀಗೆ ಒಂದಲ್ಲ ಎರಡು ಸಾವಿರಾರು ಪ್ರಕಾರದ ಕಲಾಕೃತಿಗಳ ಪ್ರದರ್ಶನ ಇಲ್ಲಿ ಆಯೋಜನೆ ಆಗಿತ್ತು. 

5 / 6
ಒಂದೇ ದಿನದಲ್ಲಿ ಇಲ್ಲಿನ ಲಕ್ಷಾಂತರ ರೂಪಾಯಿ ವ್ಯವಹಾರ ಸಹ ನಡೆಯಿತು ಎಂಬ ಮಾತುಗಳು ಕೇಳಿ ಬಂದವು. ಮೇಲಾಗಿ ಚಿತ್ರ ಸಂತೆ ಪರಿಕಲ್ಪನೆಯೂ ವಿಭಿನ್ನವಾಗಿತ್ತು. ನಗರದ ಪ್ರಮುಖ ರಸ್ತೆಯೇ ಬಂದ್ ಮಾಡಿ ಚಿತ್ರ ಸಂತೆ ನಡೆಸಲಾಗಿತ್ತು. ದಾವಣಗೆರೆ ಚಿತ್ರಕಲಾ ಪರಿಷತ್ತಿನ ಹತ್ತಾರು ಗೆಳೆಯರು ಸೇರಿಕೊಂಡು ಸತತ ಮೂರು ವರ್ಷಗಳಿಂದ ಇಂತಹ ಚಿತ್ರ ಸಂತೆ ರೂಪಿಸಿದ್ದರು. ನಿಜಕ್ಕೂ ದಾವಣಗೆರೆ ಮಟ್ಟಿಗೆ ಇದೊಂದು ಅದ್ಭುತ ಪ್ರಯೋಗ ಅಂದ್ರೆ ತಪ್ಪಾಗಲಿಕ್ಕಿಲ್ಲ.

6 / 6
ಬಸವರಾಜ್​ ದೊಡ್ಡಮನಿ, ದಾವಣಗೆರೆ
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More
Follow Us
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ

ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ

ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ

ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್

‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ

ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’

ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್

ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು

ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್