ಹರಪನಹಳ್ಳಿಯಲ್ಲಿ ಹೊತ್ತಿ ಉರಿದ ಡೀಸೆಲ್ ಟ್ಯಾಂಕರ್! ಬೈಕ್ ಸವಾರ ಸಜೀವ ದಹನ

ಬೈಕ್ ಹಾಗೂ ಡೀಸೆಲ್ ಟ್ಯಾಂಕರ್ ನಡುವೆ ಮುಖಾ ಮುಖಿ ಡಿಕ್ಕಿಯಾಗಿದ್ದು, ಡಿಕ್ಕಿಯಾಗುತ್ತಿದ್ದಂತೆ ಬೈಕ್ ಸವಾರ ಲಾರಿ ಅಡಿ ಸಿಲುಕಿದ್ದ. ಈ ವೇಳೆ ಬೈಕ್ ಹಾಗೂ ಸವಾರನ ಮೇಲೆ ಡೀಸೆಲ್ ತುಂಬಿದ್ದ ಲಾರಿ ಬಿದ್ದಿದೆ.

ಹರಪನಹಳ್ಳಿಯಲ್ಲಿ ಹೊತ್ತಿ ಉರಿದ ಡೀಸೆಲ್ ಟ್ಯಾಂಕರ್! ಬೈಕ್ ಸವಾರ ಸಜೀವ ದಹನ
ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುತ್ತಿದೆ
TV9kannada Web Team

| Edited By: sandhya thejappa

Jul 24, 2022 | 1:17 PM

ದಾವಣಗೆರೆ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ರೈಲ್ವೆ ಗೇಟ್ ಬಳಿ ಡೀಸೆಲ್ ಟ್ಯಾಂಕರ್ (Diesel Tanker) ಪಲ್ಟಿಯಾಗಿದ್ದು, ಬೈಕ್ (Bike) ಸವಾರನೊಬ್ಬ ಸಜೀವ ದಹನವಾಗಿದ್ದಾನೆ. ಬೈಕ್​ಗೆ ಡಿಕ್ಕಿ ಹೊಡೆದ ಬಳಿಕ ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿದೆ. ಪಲ್ಟಿಯಾಗುತ್ತಿದ್ದಂತೆ ಲಾರಿ ಧಗಧಗನೇ ಹೊತ್ತಿ ಉರಿದಿದೆ. ಇನ್ನು ಲಾರಿಯಿಂದ ಹಾರಿ ಬಚಾವ್ ಆದ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದೆ. ಸದ್ಯ ಸ್ಥಳಕ್ಕೆ ಹರಪನಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಬೈಕ್ ಹಾಗೂ ಡೀಸೆಲ್ ಟ್ಯಾಂಕರ್ ನಡುವೆ ಮುಖಾ ಮುಖಿ ಡಿಕ್ಕಿಯಾಗಿದ್ದು, ಡಿಕ್ಕಿಯಾಗುತ್ತಿದ್ದಂತೆ ಬೈಕ್ ಸವಾರ ಲಾರಿ ಅಡಿ ಸಿಲುಕಿದ್ದ. ಈ ವೇಳೆ ಬೈಕ್ ಹಾಗೂ ಸವಾರನ ಮೇಲೆ ಡೀಸೆಲ್ ತುಂಬಿದ್ದ ಲಾರಿ ಬಿದ್ದಿದೆ. ಪೆಟ್ರೋಲ್ ಟ್ಯಾಂಕ್ ಓಪನ್ ಆಗಿ ಅವಘಡ ಸಂಭವಿಸಿದೆ. ಬೆಂಕಿ ಬೈಕ್​ಗೆ ತಗುಲುತ್ತಿದ್ದಂತೆ ಲಾರಿಗೂ ವ್ಯಾಪಿಸಿದೆ.

ಇದನ್ನೂ ಓದಿ: ‘ರಕ್ಕಮ್ಮ’ ಬಂದ ಮರುದಿನವೇ ಬರಲಿದೆ ‘ರಕ್ಕಂ’; ನೈಜ ಘಟನೆ ಆಧಾರಿತ ಚಿತ್ರ ಜುಲೈ 29ಕ್ಕೆ ರಿಲೀಸ್​

ಅಪಘಾತವಾಗುತ್ತಿದ್ದಂತೆ ಲಾರಿಯಿಂದ ಚಾಲಕ ಮಹದೇವಪ್ಪ ಹಾರಿದ್ದಾನೆ. ಸುಟ್ಟಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಡಿಸೇಲ್ ಲಾರಿ ಹೆಚ್.ಪಿ ಕಂಪನಿಗೆ ಸೇರಿದ್ದಾಗಿದೆ.

35 ವರ್ಷದ ನಾಗರಾಜ್ ಮೃತ ಬೈಕ್ ಸವಾರ. ಸವಾರ ಹರಪನಹಳ್ಳಿಯಿಂದ ದಾವಣಗೆರೆಗೆ ಹೋಗುವ ಮಾರ್ಗ ಮಧ್ಯೆ ಈ ಘಟನೆ ನಡೆದಿದೆ. ಭೀಕರ ಅಪಘಾತದಲ್ಲಿ ನಾಗರಾಜ್ ಸ್ಥಳದಲ್ಲೇ ಮೃತಪಟ್ಟರೆ, ಹಿಂಬದಿ ಸವಾರ ಚಂದ್ರು ಗೆ ಗಂಭೀರಗಾಯವಾಗಿದೆ. ಗಾಯಾಳು ಚಂದ್ರುನನ್ನ ದಾವಣಗೆರೆ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೃತದೇಹವನ್ನ ಹರಪನಹಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ

ಇದನ್ನೂ ಓದಿ: Gadag News: ಹೆಸರು, ಶೇಂಗಾ ಬೆಳೆಗಳಿಗೆ ಹಳದಿ ನಂಜಾಣು ರೋಗ ಹಾಗೂ ಕೀಟ ಬಾಧೆ; ಅನ್ನದಾತ ಕಂಗಾಲು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada