ದಾವಣಗೆರೆ: ಕವಾಡಿಗರಹಟ್ಟಿಯ 5 ಜನರ ಸಾವಿಗೆ ಸೂಳೆಕೆರೆಯ ಪಂಪ್ ಹೌಸ್ನ ಕೆಟ್ಟುನಿಂತ ಫಿಲ್ಟರ್ಗಳು ಕಾರಣ ?
ಕಳೆದ ವಾರ ಕೋಟೆನಾಡು ಚಿತ್ರದುರ್ಗ ನಗರದ ಕವಾಡಿಗರಹಟ್ಟಿ ಬಡಾವಣೆಯಲ್ಲಿ ಕಲುಷಿತ ನೀರು ಸೇವಿಸಿ ಐವರು ಸಾವಿಗೀಡಾಗಿದ್ದು, 200 ಹೆಚ್ಚು ಜನರು ಅಸ್ವಸ್ಥರಾಗಿದ್ದರು. ಈ ದುರಂತ ಈ ದುರಂತ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಕವಾಡಿಗರಹಟ್ಟಿಗೆ ಕುದ್ದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ದಾವಣಗೆರೆ: ಕಳೆದ ವಾರ ಕೋಟೆನಾಡು ಚಿತ್ರದುರ್ಗ (Chitradurga) ನಗರದ ಕವಾಡಿಗರಹಟ್ಟಿ ಬಡಾವಣೆಯಲ್ಲಿ ಕಲುಷಿತ ನೀರು (Polluted Water) ಸೇವಿಸಿ ಐವರು ಸಾವಿಗೀಡಾಗಿದ್ದು, 200 ಹೆಚ್ಚು ಜನರು ಅಸ್ವಸ್ಥರಾಗಿದ್ದರು. ಈ ದುರಂತ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಕವಾಡಿಗರಹಟ್ಟಿಗೆ ಕುದ್ದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಅವಘಡಕ್ಕೆ ದಾವಣಗೆರೆ (Davangere) ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಬಳಿ ಇರುವ ಏಷ್ಯಾದ ಎರಡನೇ ಅತಿ ದೊಡ್ಡ ಸೂಳೆಕೆರೆ ನೀರು ಕಾರಣವಾಯಿತಾ ಎಂಬ ಅನುಮಾನ ವ್ಯಕ್ತವಾಗಿದೆ. ಹೌದು ಚನ್ನಗಿರಿ ಮತ್ತು ಜಗಳೂರು ಪಟ್ಟಣ ಸೇರಿದಂತೆ 89 ಗ್ರಾಮ ಹಾಗೂ ಚಿತ್ರದುರ್ಗ ನಗರ ಸೇರಿದಂತೆ ಜಿಲ್ಲೆಯ 98 ಗ್ರಾಮಗಳಿಗೆ ಸೂಳೆಕೆರೆ ನೀರು ಪೂರೈಕೆಯಾಗುತ್ತಿದೆ.
ಘಟನೆಯ ನಂತರ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ವೈದ್ಯರು ನೀರನ್ನು ಪರೀಕ್ಷಿಸಲು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಪ್ರಯೋಗಾಲಯ ಸೂಳೆಕೆರೆ ನೀರು ಕುಡಿಯಲು ಯೋಗ್ಯವಲ್ಲವೆಂದು ವರದಿ ನೀಡಿದೆ. ಇದೀಗ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ: ಏಷ್ಯಾದ ಎರಡನೇ ಅತಿ ದೊಡ್ಡ ಕೆರೆ ನೀರು ಕುಡಿಯಲು ಯೋಗ್ಯವಲ್ಲ: ಪ್ರಯೋಗಾಲಯದ ವರದಿಯಲ್ಲಿ ಬಹಿರಂಗ
ಕೆಟ್ಟುನಿಂತ ಸೂಳೆಕೆರೆ ಪಂಪ್ ಹೌಸ್ ಫಿಲ್ಟರ್ಗಳು
ಈ ಕರೆಯ ನೀರನ್ನು ಶುದ್ದೀಕರಿಸಿ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಶುದ್ದೀಕರಣ ಘಟಕದ ಫಿಲ್ಟರ್ ಗಳು ಬಹುದಿನಗಳಿಂದ ಹಾಳಾಗಿವೆ. ಇದನ್ನು ಗಮನಿಸಿದೆ ನೀರು ಪೂರೈಕೆ ಮಾಡಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ.
15 ದಿನಗಳಲ್ಲಿ ಶುದ್ಧೀಕರಣ ಘಟಕ ದುರಸ್ಥಿ
ಈ ಬಗ್ಗೆ ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಮಾತನಾಡಿ ಫಿಲ್ಟರ್ಗಳು ಹಾಳಾಗಿದ್ದರಿಂದ ತೊಂದರೆ ಆಗಿದೆ. ಈ ಹಿಂದಿನ ಶಾಸಕರಾಗಲಿ, ಅಧಿಕಾರಿಗಳಾಗಲಿ ಗಮನಿಸಿಲ್ಲ. ಮೇಲಾಗಿ ಇತ್ತೀಚಿಗೆ ಮಳೆಯಾಗಿ ಅಕ್ಕ-ಪಕ್ಕದ ಗದ್ದೆ ಹಾಗೂ ಅಡಿಕೆ ತೋಟಗಳಿಂದ ನೀರು ಹರಿದು ಬಂದು ಕೆರೆಗೆ ಸೇರಿದೆ. ತೋಟಗಳಿಗೆ ರಸಗೊಬ್ಬರ ಹಾಗೂ ಕ್ರಿಮಿನಾಶಕ ಬಳಸುವುದರಿಂದ ನೀರು ಕಲುಷಿತವಾಗಿದೆ ಈಗಾಗಲೇ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, 15 ದಿನಗಳಲ್ಲಿ ಶುದ್ಧೀಕರಣ ಘಟಕ ದುರಸ್ಥಿ ಮಾಡಿ ನೀರು ಪೂರೈಕೆ ಮಾಡಲಾಗುವುದು ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:39 am, Mon, 14 August 23