Karnataka Politics: ಗಣಿ ಸಚಿವ ಮಲ್ಲಿಕಾರ್ಜುನ್ ಅವರನ್ನು ನಾಯಿಗೆ ಹೋಲಿಸಿದ ಸಂಸದ ಜಿಎಂ ಸಿದ್ದೇಶ್ವರ
ಆಗ ಶಾಮನೂರು ಶಿವಶಂಕರಪ್ಪ ಅವರೂ ತೆರಿಗೆ ಪಾವತಿ ಮಾಡುವುದಕ್ಕಾಗಿ ಸಾಲ ಪಡೆದಿದ್ದರು. ಚುನಾವಣೆ ವೇಳೆ ಸಮಯಕ್ಕೆ ಸರಿಯಾಗಿ ಸಾಲ ವಾಪಸ್ ಕೊಡಲಿಲ್ಲ, ನಂತರ ಬಡ್ಡಿ ಸಮೇತ ವಸೂಲಿ ಮಾಡಿದ್ದೆ ಎಂದು ಸಿದ್ದೇಶ್ವರ ಹೇಳಿದ್ದಾರೆ.
ದಾವಣಗೆರೆ: ಗಣಿ ಸಚಿವ ಮಲ್ಲಿಕಾರ್ಜುನ್ (SS Mallikarjun) ಅವರನ್ನು ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ (GM Siddeswara) ಪರೋಕ್ಷವಾಗಿ ನಾಯಿಗೆ ಹೋಲಿಸಿದ್ದಾರೆ. ಆಸ್ತಿ ಬಗ್ಗೆ ಸಚಿವ ಮಲ್ಲಿಕಾರ್ಜುನ್ ಪ್ರಶ್ನಿಸಿದ್ದಕ್ಕೆ ಸಿಟ್ಟಿನಿಂದ ಪ್ರತಿಕ್ರಿಯಿಸಿದ ಸಿದ್ದೇಶ್ವರ, ಆನೆ ಹೋಗುವಾಗ ನಾಯಿ ಬೊಗಳುವುದು ಸಹಜ ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಮಲ್ಲಿಕಾರ್ಜುನ್ ನನ್ನ ಆಸ್ತಿ ಬಗ್ಗೆ ಕೇಳ್ತಾರೆ. ಮಲ್ಲಿಕಾರ್ಜುನ್ ತಂದೆ ಶಾಮನೂರು ಶಿವಶಂಕರಪ್ಪಗೆ 1994 ರಲ್ಲಿ ಸಾಲ ಕೊಟ್ಟಿದ್ದೆ. ನಾನು, ಶಾಮನೂರು ಮಾವ ಚನ್ನಾಗಿದ್ವಿ. 1996 ರಲ್ಲೂ ಶಿವಶಂಕರಪ್ಪ ಅವರು ಸಾಲ ಇಸ್ಕೊಂಡಿದ್ರು. 1997 ರಲ್ಲಿ ಆಸ್ತಿ ಸೆಲ್ಫ್ ಡೆಕ್ಲರೆಷನ್ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಿತ್ತು. ಆಗ ನಾನು 6 ಕೋಟಿ ರೂ. ಘೋಷಣೆ ಮಾಡಿಕೊಂಡು 1.80 ಕೋಟಿ ರೂ. ತೆರಿಗೆ ಕಟ್ಟಿದ್ದೆ. ಆಗ ಶಾಮನೂರು ಶಿವಶಂಕರಪ್ಪ ಅವರೂ ತೆರಿಗೆ ಪಾವತಿ ಮಾಡುವುದಕ್ಕಾಗಿ ಸಾಲ ಪಡೆದಿದ್ದರು. ಚುನಾವಣೆ ವೇಳೆ ಸಮಯಕ್ಕೆ ಸರಿಯಾಗಿ ಸಾಲ ವಾಪಸ್ ಕೊಡಲಿಲ್ಲ, ನಂತರ ಬಡ್ಡಿ ಸಮೇತ ವಸೂಲಿ ಮಾಡಿದ್ದೆ ಎಂದು ಸಿದ್ದೇಶ್ವರ ಹೇಳಿದ್ದಾರೆ.
ಕಾಲೇಜು ಮೇಲೆ ಕಾಲೇಜು, ಜಮೀನಿನ ಮೇಲೆ ಜಮೀನು ತೆಗೆದುಕೊಳ್ತಾ ಇದ್ದೀನಿ ಅಂತ ಆರೋಪ ಮಾಡಿದ್ದಾರೆ. ಹೌದು, ತಗೊಳ್ತಿನಿ, ದುಡಿದಿದ್ದೀನಿ ತೆಗೆದುಕೊಳ್ತಿನಿ. ನಾನು ಭ್ರಷ್ಟಾಚಾರ ಮಾಡಿಲ್ಲ, ದುಡ್ಡು ಹೊಡೆದಿಲ್ಲ. ಆದಾಯ, ತೆರಿಗೆ ಇಲಾಖೆ ಇದ್ದಾವೆ, ಅವು ನೋಡಿಕೊಳ್ತಾವೆ. ದಾವಣಗೆರೆಯಲ್ಲಿ ಸ್ಮಾರ್ಟ್ ಸಿಟಿ, ಆಶ್ರಯ ಮನೆ ಹಂಚಿಕೆ ತನಿಖೆ ಮಾಡಿಸ್ತಾರಂತೆ. ಅವನು, ಮಲ್ಲಿಕಾರ್ಜುನ್ ಹಿಂದೆ ಮಂತ್ರಿ ಆಗಿದ್ನಾಲ್ಲ ಆಗಿನಿಂದಲೂ ತನಿಖೆ ಮಾಡ್ಲಿ. ಎಲ್ಲವೂ ತನಿಖೆ ಮಾಡ್ಲಿ, ನನಗೇನು ಭಯ ಇಲ್ಲ ಎಂದು ಸಿದ್ದೇಶ್ವರ ಸವಾಲೆಸೆದಿದ್ದಾರೆ.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ