Davanagere News: ಸ್ವಂತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದ ಅಪರಾಧಿ ತಂದೆಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್
ಬಟ್ಟೆ ಹಾಗೂ ತಿಂಡಿ ಕೊಡುತ್ತಾ ಮಗಳ ಮೇಲೆ ಅತ್ಯಾಚಾರ ಮಾಡುತ್ತಿದ್ದ. ವಿಚಾರ ತಿಳಿದ ನಂತರ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಶ್ರೀಪಾದ ಎನ್ ತೀರ್ಪು ನೀಡಿದ್ದಾರೆ.
ದಾವಣಗೆರೆ: ತನ್ನ ಮಗಳ(Daughter) ಮೇಲೆಯೇ ಅತ್ಯಾಚಾರ ಎಸಗಿದ್ದ ಅಪರಾಧಿ ತಂದೆಗೆ(Father) 20 ವರ್ಷ ಜೈಲು ಶಿಕ್ಷೆ ವಿಧಿಸಿ ದಾವಣಗೆರೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಎಫ್ಟಿಎಸ್ಪಿ (ಪೋಕ್ಸೋ ಕೋರ್ಟ) ತೀರ್ಪು ನೀಡಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಿವಾಸಿ ಶಿಕ್ಷೆಗೊಳಗಾದ ಪಾಪಿ ತಂದೆ. ಈ ಅಪರಾಧಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ತಗಡಿನ ಶೀಟ್ ಮನೆಯಲ್ಲಿ ಮಗಳ ಮೇಲೆ ನಿರಂತರ ಅತ್ಯಾಚಾರ ನಡೆಸುತ್ತಿದ್ದ. ಬಟ್ಟೆ ಹಾಗೂ ತಿಂಡಿ ಕೊಡುತ್ತಾ ಮಗಳ ಮೇಲೆ ಅತ್ಯಾಚಾರ ಮಾಡುತ್ತಿದ್ದ. ವಿಚಾರ ತಿಳಿದ ನಂತರ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಶ್ರೀಪಾದ ಎನ್, ಆರೋಪಿ ತಂದೆಗೆ 20 ವರ್ಷ ಜೈಲು ಶಿಕ್ಷೆ, 12 ಸಾವಿರ ದಂಡ ಹಾಗೂ ಸಂತ್ರಸ್ತೆಗೆ ಸರ್ಕಾರದಿಂದ ಐದು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕಿ ಸುನಂದಾ ಮಡಿವಾಳರ ಸಾಕ್ಷಿಗಳ ವಿಚಾರಣೆ ಮಾಡಿದ್ರೆ, ಕೆಜಿ ಜಯಪ್ಪ ಸಂತ್ರಸ್ಥೆ ಪರ ವಾದ ಮಂಡನೆ ಮಾಡಿದ್ರು.
15 ವರ್ಷದ ಮಗಳ ಮೇಲೆಯೇ ತಂದೆಯ ಕೌರ್ಯ
ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲೂ ಕೂಡ ಇಂತದೇ ಘಟನೆ ನಡೆದಿತ್ತು. ಅಪ್ಪನೇ ನನ್ನ ಮೊದಲ ಹೀರೋ, ನನ್ನ ಕೈ ಹಿಡಿದು ಜಗತ್ತು ಪರಿಚಯಿಸಿದಾತ ಎಂದು ಅಂದು ಕೊಂಡಿದ್ದ ತನ್ನ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದ. ಈ ಸಂಬಂಧ ಕುರ್ಸಿಯಾಂಗ್ ಹೆಚ್ಚುವರಿ ಸೆಷನ್ಸ್ ಮತ್ತು ವಿಶೇಷ ನ್ಯಾಯಾಲಯವು 25 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಅಪರಾಧಿ ತಂದೆಗೆ ಶಿಕ್ಷೆ ನೀಡಿತ್ತು. ಈ ಕೇಸ್ನ ಪಬ್ಲಿಕ್ ಪ್ರಾಸಿಕ್ಯೂಟರ್ ರಮೇಶ್ ಅಗರ್ವಾಲ್ ಪ್ರಕಾರ, 2017ರ ಡಿಸೆಂಬರ್ನಲ್ಲಿ 15 ವರ್ಷದ ಅಪ್ರಾಪ್ತ ವಯಸ್ಕ ತನ್ನ 35 ವರ್ಷದ ತಂದೆ ತಮ್ಮ ಮನೆಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿ, ದೈಹಿಕ ಕಿರುಕುಳ ನೀಡಿದ್ದಾರೆ ಎಂದು 2018ರ ಜನವರಿ 9 ರಂದು ಕುರ್ಸಿಯಾಂಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಇದನ್ನೂ ಓದಿ: Tumakuru: ಲಂಚ ಪಡೆದಿದ್ದ ಮಹಿಳಾಧಿಕಾರಿಗೆ ಕಡ್ಡಾಯ ನಿವೃತ್ತಿಗೊಳಿಸಿ ಆದೇಶ
ಪೋಕ್ಸೊ ಕಾಯ್ದೆಯಡಿ ದೂರು ನೀಡಿದ್ದು ತನ್ನ ತಂದೆಯಿಂದ ಪ್ರತಿದಿನವೂ ಹಲವಾರು ರೀತಿಯಲ್ಲಿ ನಿಂದನೆಗೆ ಒಳಗಾಗಿದ್ದ ಅಪ್ರಾಪ್ತ ಮಗಳು, ತನ್ನ ಮಲತಾಯಿಯ ಬಳಿ ತನಗಾದ ಸಂಕಟವನ್ನು ವಿವರಿಸಿದ್ದಳು. ತನ್ನ ತಂದೆಯಿಂದ ದೈಹಿಕ ಕಿರುಕುಳ ಸೇರಿದಂತೆ ಲೈಂಗಿಕ ಕಿರುಕುಳದ ಬಗ್ಗೆ 2018ರ ಜನವರಿ 9 ರಂದು ಕುರ್ಸಿಯಾಂಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಆರೋಪಿ ತಂದೆಯನ್ನು ಬಾಲಕಿಯ ಅತ್ಯಾಚಾರದ ಆರೋಪದ ಆಧಾರದ ಮೇಲೆ ಬಂಧಿಸಲಾಗಿತ್ತು. ಪೋಕ್ಸೊ ಕಾಯ್ದೆಯ ಸೆಕ್ಷನ್ 6ರ ಅಡಿ ಕುರ್ಸಿಯಾಂಗ್ ವಿಶೇಷ ನ್ಯಾಯಾಲಯದಲ್ಲಿ (ಪೋಕ್ಸೊ) ಪ್ರಕರಣದ ವಿಚಾರಣೆ ನಡೆಸಿತ್ತು.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ