ಘರ್ಜಿಸಿದ ನಮ್ಮ ರಾಜ್ಯದ ಹೆಮ್ಮೆಯ ದೇಶಿ ತಳಿ ಮುಧೋಳ್ ಶ್ವಾನ

| Updated By: ವಿವೇಕ ಬಿರಾದಾರ

Updated on: Apr 07, 2025 | 11:02 PM

ದಾವಣಗೆರೆಯಲ್ಲಿ ಏಪ್ರಿಲ್ 7 ರಂದು ನಡೆದ 7ನೇ ವಾರ್ಷಿಕ ರಾಜ್ಯಮಟ್ಟದ ಡಾಗ್ ಮತ್ತು ಕ್ಯಾಟ್ ಶೋ ಅತ್ಯಂತ ಯಶಸ್ವಿಯಾಯಿತು. ಕರ್ನಾಟಕ, ಮಹಾರಾಷ್ಟ್ರ, ಕೇರಳ ಮುಂತಾದ ರಾಜ್ಯಗಳಿಂದ 200 ಕ್ಕೂ ಹೆಚ್ಚು ನಾಯಿಗಳು ಭಾಗವಹಿಸಿದವು. ವಿವಿಧ ತಳಿಯ ನಾಯಿಗಳು ಮತ್ತು ಬೆಕ್ಕುಗಳು ತಮ್ಮ ಸೌಂದರ್ಯ ಮತ್ತು ಚಲನವಲನಗಳಿಂದ ಎಲ್ಲರ ಗಮನ ಸೆಳೆದವು. ದೇಶಿಯ ಮುಧೋಳ್ ನಾಯಿಗಳಿಗೆ ಪ್ರತ್ಯೇಕ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಘರ್ಜಿಸಿದ ನಮ್ಮ ರಾಜ್ಯದ ಹೆಮ್ಮೆಯ ದೇಶಿ ತಳಿ ಮುಧೋಳ್ ಶ್ವಾನ
ದಾವಣಗೆರೆಯಲ್ಲಿ ನಾಯಿ ಸ್ಪರ್ಧೆ
Follow us on

ದಾವಣಗೆರೆ, ಏಪ್ರಿಲ್​ 07: ದಾವಣಗೆರೆ (Davangere) ನಗರದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಲವ್ ಪೆಟ್ ಅಸೋಷಿಯೇಷನ್​ನಿಂದ ಸೋಮವಾರ (ಏ.07) ನಾಯಿ ಮತ್ತು ಬೆಕ್ಕು ಪ್ರದರ್ಶನ (Dog and Cat Show) ಹಾಗೂ ಸ್ಪರ್ಧೆ ಆಯೋಜಿಸಲಾಗುತ್ತಿತ್ತು. 7 ನೇ ಬಾರಿಯ ರಾಜ್ಯಮಟ್ಟದ ಶೋನಲ್ಲಿ ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರ ಸೇರಿದಂತೆ ಹಲವು ರಾಜ್ಯಗಳಿಂದ ವಿವಿಧ ತಳಿಯ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿವೆ.

ಡಾಬರ್ ಮೆನ್, ಜರ್ಮನ್ ಶಫರ್ಡ, ರೂಬಿ, ಫಮೆರಿಯನ್, ಫಗ್, ರೆಟ್ರಿವರ್ ಸೇರಿದಂತೆ ದೇಶಿಯ ಮುಧೋಳು ಶ್ವಾನ ಸೇರಿದಂತೆ ಹಲವು ತಳಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಇದರಲ್ಲಿ ಒಂದು ವರ್ಷದೊಳಗೆ ಮತ್ತು ನಂತರ ಹೀಗೆ ವಿವಿಧ ಹಂತಗಳ ಶ್ವಾನಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಈ ಶೋನಿಂದ ಮನರಂಜನೆ ಮತ್ತು ಉದ್ಯಮ ಬಗ್ಗೆ ಜನರಲ್ಲಿ ಆಸಕ್ತಿ, ಆಕರ್ಷಣೆ ಬರಲೆಂದು ಆಯೋಜಿಸಲಾಗಿದೆ ಎಂದು ಪೆಟ್ ಅಸೋಸಿಯೇಷನ್ ಹೇಳಿದೆ.

ವಿಶೇಷ ಎಂದರೆ ಈ ಬಾರಿ ಬೀದಿ ನಾಯಿಗಳನ್ನು ಸಾಕುತ್ತಿರುವ ಮಾಲೀಕರಿಗೂ ಕೂಡ ಅವಕಾಶ ನೀಡಲಾಗಿತ್ತು. ಅವುಗಳ ಪ್ರದರ್ಶನವನ್ನೂ ಕೂಡ ಆಯೋಜಿಸಲಾಗಿತ್ತು. ಅದರಲ್ಲೂ ದೇಶಿಯ ತಳಿ ನಮ್ಮ ರಾಜ್ಯದ ಹೆಮ್ಮೆಯ ನಾಯಿಗಳಾದ ಮುಧೋಳ ನಾಯಿಗಳಿಗೆ ಪ್ರತ್ಯೇಕವಾದ ಸ್ಪರ್ಧೆ ಆಯೋಜಿಸಲಾಗಿತ್ತು. ನೆರೆದಿರುವ ಜನರು ಮುಧೋಳ ನಾಯಿಗಳನ್ನು ನೋಡಿ‌ ಫುಲ್ ಫಿಧಾ ಆಗಿದ್ದಾರೆ. ದೇಶಿ ತಳಿಗಳ ಸ್ಪರ್ಧೆಯಲ್ಲಿ ಮುಧೋಳ್ ನಾಯಿಗೆ ಪ್ರಥಮ ಸ್ಥಾನ ಸಿಕ್ಕಿದ್ದು ವಿಶೇಷವಾಗಿದೆ. ಇಂಥ ಪ್ರದರ್ಶನದಿಂದ ತುಂಬಾ ಖುಷಿಯಾಗಿದೆ ಹತ್ತಾರು ಬಗೆಯ ಸಾಕು ಪ್ರಾಣಿ ಶ್ವಾನ ಹಾಗೂ ಬೆಕ್ಕುಗಳನ್ನ ನೋಡಲು ಉತ್ತಮ ವೇದಿಕೆ ಎಂದು ಪ್ರಾಣಿ ಪ್ರಿಯರು ಹೇಳಿದರು.

ಇದನ್ನೂ ಓದಿ
ದಾವಣಗೆರೆಯಲ್ಲೊಂದು ಅಮಾನುಷ ಕೃತ್ಯ: ಮರಕ್ಕೆ ಕಟ್ಟಿ ಚಿತ್ರಹಿಂಸೆ
ಎಚ್ಚರ: ಬುರ್ಖಾ ಧರಿಸಿ ಬರ್ತಾರೆ, ಚಿನ್ನ-ಬೆಳ್ಳಿ ಎಗರಿಸಿ ಪರಾರಿಯಾಗ್ತಾರೆ!
ಜಾತ್ರೆಗೆ ಬಂದಿದ್ದ ದಲಿತ ಮಹಿಳೆ ಮೇಲೆ ಬಸ್​ನಲ್ಲಿ ಲೈಂಗಿಕ ದೌರ್ಜನ್ಯ ಯತ್ನ
ದಾವಣಗೆರೆ ಮಠದಲ್ಲಿದೆ ​ನಟ ಸುನಿಲ್​ ಶೆಟ್ಟಿ ಕಳುಹಿಸಿದ ರೋಬೋಟಿಕ್​ ಆನೆ

ವಿಡಿಯೋ ನೋಡಿ: ಹರಪನಹಳ್ಳಿ: ಒಂದೇ ಫಾರಂನಲ್ಲಿನ ಮೂರು ಸಾವಿರ ಕೋಳಿಗಳ ಸಾವು

ರಾಜ್ಯ ಹಾಗೂ ಹೊರ ರಾಜ್ಯದಿಂದ 200ಕ್ಕೆ ಹೆಚ್ಚು ಮುದ್ದಾದ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಶ್ವಾನಗಳು ತಮ್ಮ ಚಲನವಲನ, ಸೌಂದರ್ಯದಿಂದ ಎಲ್ಲರ ಗಮನ ಸೆಳೆದವು. ಈ ಅಪರೂಪದ ಶ್ವಾನ ಪ್ರದರ್ಶನಕ್ಕೆ ನೂರಾರು ಮಂದಿ ಸಾಕ್ಷಿಯಾದರು. ಈ ಪ್ರದರ್ಶನದಲ್ಲಿ ಭಾಗಹಿಸುವ ಮೂಲಕ ಸಖತ್ ಎಂಜಾಯ್ ಮಾಡಿದರು. ಹತ್ತಾರು ಬಗೆಯ ಶ್ವಾನ ನೋಡುವ ಮೂಲಕ ಖುಷಿಪಟ್ಟರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:54 pm, Mon, 7 April 25