ವರದಕ್ಷಿಣೆ ಕಾಟ, ಹೆಣ್ಣು ಮಗು ಜನನ, ಮಿತಿಮೀರಿದ ಗಂಡನ ಮನೆ ಕಾಟ -ಅಷ್ಟಕ್ಕೆ ಮುದ್ದಾದ ಮಗುವಿನ ಜೊತೆ ಸೂಳೆಕೆರೆಗೆ ಹಾರಿ ಮೃತಪಟ್ಟ ಗೃಹಿಣಿ
ಮೃತ ಕವಿತಾ ಚನ್ನಗಿರಿ ತಾಲೂಕಿನ ಯರೆಹಳ್ಳಿ ನಿವಾಸಿ. 2017ರಲ್ಲಿ ಇದೇ ತಾಲೂಕಿನ ಹೊನ್ನೆಬಾಗಿ ಗ್ರಾಮದ ನಿವಾಸಿ ತಿಪ್ಪೇಶಪ್ಪ ಚಂದ್ರಮ್ಮ ದಂಪತಿಯ ಪುತ್ರ ಮಂಜುನಾಥನ ಜೊತೆ ಮದ್ವೆ ಆಗಿತ್ತು. ಸಾಕಷ್ಟು ವರದಕ್ಷಿಣೆ ಕೊಟ್ಟು ಹಾವಿನಹೊಳೆ ಕಲ್ಯಾಣ ಮಂಟಪದಲ್ಲಿ ಮದ್ವೆ ಮಾಡಿ ಕೊಡಲಾಗಿತ್ತು. ಇದಾದ ಬಳಿಕ ಚೆನ್ನಾಗಿಯೇ ಇದ್ದರು. ಪುತ್ರಿ ನಿಹಾರಿಕಾಳ ಜನನವಾಯಿತು. ಆದ್ರೆ ಗಂಡ ಮಾವ ಅತ್ತೆಗೆ ಗಂಡುಮಗು ಬೇಕಿತ್ತಂತೆ...
ಅದೊಂದು ಸಮೃದ್ಧ ಸಂಸಾರ. ಮದ್ದಾದ ಪುಟ್ಟ ಮಗಳು. ಅಡಿಕೆ ತೋಟ. ಒಂದು ಮನೆ ಇದ್ದರೂ ಇನ್ನೊಂದು ಹೈಟೆಕ್ ಮನೆ ಕಟ್ಟ ನಿರ್ಮಾಣ ಹಂತದಲ್ಲಿದೆ. ಇಂತಹ ಮನೆ ಮಾಲೀಕನಿಗೆ ಹಣದ ಭೂತ ಮಾತ್ರ ಬಿಟ್ಟಿರಲಿಲ್ಲ. ಬೆಳಗಾದ್ರೆ ಸಾಕು ದುಡ್ಡು ದುಡ್ಡು, ರಾತ್ರಿ ಆದ್ರೆ ಸಾಕು ದುಡ್ಡು ದುಡ್ಡು ದುಡ್ಡು. ಇಂತಹ ಕಿರಿಕಿರಿಗೆ ಬೇಸತ್ತಿದ್ದ ಆ ಮುದ್ದಾದ ಗೃಹಿಣಿ ಇದಕ್ಕಿದ್ದಂತೆ ಐದು ವರ್ಷದ ಮುದ್ದಾದ ಮಗಳ ಜೊತೆ ಕಣ್ಮರೆ ಆಗಿದ್ದಳು. ಆ ಮೇಲೆ ಕಂಡಿದ್ದು ನೋಡಬಾರದ ನೋಟ… ಮಗಳನ್ನ ಗಟ್ಟಿಯಾಗಿ ತಬ್ಬಿಕೊಂಡ ತಾಯಿ-ಮಗಳ ಶವ ಸೂಳೆಕೆರೆಯಲ್ಲಿ. ಇದು ವರದಕ್ಷಿಣೆ ಎಂಬ ಭೂತಕ್ಕೆ ಬಲಿಯಾದ ತಾಯಿ ಮಗಳ ಸ್ಟೋರಿ.
ಸೂಳೆಕೆರೆಯಲ್ಲಿ ಪತ್ತೆಯಾದ ತಾಯಿ ಮಗಳ ಶವಗಳು. ಸಾವಿನಲ್ಲಿಯೂ ಮಗಳನ್ನ ಗಟ್ಟಿಯಾಗಿ ಬಿಗಿದಪ್ಪಿಕೊಂಡಿದ್ದಾಳೆ ತಾಯಿ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಗ್ರಾಮದ ಮಂಜುನಾಥನ ಪತ್ನಿ 27 ವರ್ಷದ ಕವಿತಾ ಹಾಗೂ ಐದು ವರ್ಷದ ಪುತ್ರಿ ನಿಹಾರಿಕಾ ಬಗ್ಗೆ. ಈ ತಾಯಿ ಮಗಳು ಮೊನ್ನೆ ಶುಕ್ರವಾರದಿಂದ ನಾಪತ್ತೆಯಾಗಿದ್ದರು. ಪತಿ ಪೊಲೀಸರಿಗೆ ದೂರು ಕೊಟ್ಟಿದ್ದ. ನಾಪತ್ತೆಯಾದ ಮೂರನೇ ದಿನಕ್ಕೆ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ಬಿಳಿ ಇರುವ ಐತಿಹಾಸಿಕ ಸೂಳೆಕೆರೆಯಲ್ಲಿ ಶವಗಳು ಪತ್ತೆಯಾಗಿದ್ದವು.
ಈ ಮಾಹಿತಿ ಚನ್ನಗಿರಿ ಪೊಲೀಸರಿಗೆ ಗೊತ್ತಾಗಿದ್ದೆ ತಡ ಹೋಗಿ ನೋಡಿದಾಗ ಅದೇ ತಾಯಿ ಮಗಳ ಶವಗಳು. ದಿಟ್ಟ ನಿರ್ಧಾರ ತೆಗೆದುಕೊಂಡು ಪುತ್ರಿಯಲ್ಲಿ ಗಟ್ಟಿಯಾಗಿ ಕಟ್ಟಿಕೊಂಡು ಸಾವಿನ ಮನೆಗೆ ತೆರಳಲು ನಿರ್ಧಾರ ಮಾಡಿಯೇ ಬಿಟ್ಟಿದ್ದಳು ಎಂಬಂತೆ ಕಾಣುತ್ತದೆ. ಆದ್ರೆ ಇದು ಆತ್ಮಹತ್ಯೆಯಲ್ಲ ದುಡ್ಡಿಗಾಗಿ ಪತಿ ಹಾಗೂ ಅತ್ತೆ ಮಾವ ಸೇರಿ ಹೊಡೆದು ಕೆರೆಗೆ ಹಾಕಿದ್ದಾರೆ ಎಂಬುದು ಕವಿತಾಳ ಕುಟುಂಬ ಸದಸ್ಯರ ಆರೋಪ.
ಕವಿತಾ ಚನ್ನಗಿರಿ ತಾಲೂಕಿನ ಯರೆಹಳ್ಳಿ ನಿವಾಸಿ. ಜನವರಿ 19, 2017ರಲ್ಲಿ ಇದೇ ತಾಲೂಕಿನ ಹೊನ್ನೆಬಾಗಿ ಗ್ರಾಮದ ನಿವಾಸಿ ತಿಪ್ಪೇಶಪ್ಪ ಚಂದ್ರಮ್ಮ ದಂಪತಿಯ ಪುತ್ರ ಮಂಜುನಾಥ ಎಚ್ ಟಿ ಜೊತೆ ಮದ್ವೆ ಆಗಿತ್ತು. 80 ಗ್ರಾಂ ಚಿನ್ನ ಹಾಗೂ 1.5 ಲಕ್ಷ ರೂಪಾಯಿ ನಗದು ಹಾಗೂ ಚನ್ನಗಿರಿ ತಾಲೂಕಿನ ಹಾವಿನಹೊಳೆ ಕಲ್ಯಾಣ ಮಂಟಪದಲ್ಲಿ ಮದ್ವೆ ಮಾಡಿ ಕೊಡಲಾಗಿತ್ತು.
Also Read: ಮದುವೆಯಾಗಿ 5 ವರ್ಷಗಳಲ್ಲಿ ಸ್ಮಶಾನ ಸೇರಿದ ಗೃಹಿಣಿ, ಗಂಡನ ವಿವಾಹೇತರ ಸಂಬಂಧ ಕಾರಣವಾಯಿತಾ?
ಇದಾದ ಬಳಿಕ ಚೆನ್ನಾಗಿಯೇ ಇದ್ದರು. ಪುತ್ರಿ ನಿಹಾರಿಕಾಳ ಜನನವಾಯಿತು. ಆದ್ರೆ ಗಂಡ ಮಾವ ಅತ್ತೆಗೆ ಗಂಡುಮಗು ಬೇಕಿತ್ತಂತೆ. ಅದೇ ಕಾರಣಕ್ಕೆ ಜಗಳ ಶುರುವಾಗಿತ್ತು. ಕೆಲ ವರ್ಷಗಳ ಬಳಿಕ… ಹೊಸ ಮನೆ ಕಟ್ಟಲು ಆರಂಭಿಸಿದ್ದ ಮಂಜುನಾಥ. ಇದಕ್ಕೆ ಹಣ ತರುವಂತೆ ಒತ್ತಾಯಿಸಿ ತಗಾದೆ ಶುರು ಮಾಡಿದ್ದ.
ಇದೇ ಕಾರಣಕ್ಕೆ ಶುಕ್ರವಾರ ಮನೆ ಬಿಟ್ಟು ಹೋಗಿದ್ದಳು ಕವಿತಾ. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕಳ ಐಪಿಸಿ ಕಲಂ 498ಎ, 302, 304ಬಿ ಅನ್ವಯ ಕೇಸ್ ದಾಖಲಾಗಿದೆ. ಪತಿ ಅತ್ತೆ ಮಾವ ತಲೆ ಮರೆಸಿಕೊಂಡಿದ್ದಾರೆ. ಇದೇ ಕಾರಣ ಕವಿತಾಳ ಅಂತ್ಯ ಸಂಸ್ಕಾರ ಸಹ ತವರಿನವರೇ ಮಾಡಿದ್ದಾರೆ.
ಇದೀಗ ಪತಿಯ ಮನೆಗೆ ಬೀಗ ಬಿದ್ದಿದೆ. ಅಲ್ಲಿಯೇ ಬಾಳಿ ಬದುಕಬೇಕಾದ ಕವಿತಾ ತನ್ನ ರಕ್ತ ಹಂಚಿಕೊಂಡು ಹುಟ್ಟಿದ ಪುತ್ರಿಯ ಸಹಿತ ಶವವಾಗಿದ್ದಾಳೆ. ಇನ್ನು ಕವಿತಾ ತವರು ಯರೆಹಳ್ಳಿಯ ಮನೆಯಲ್ಲಿ ಕಣ್ಣೀರಿನ ಕಥೆ ಇದೆ. ಇತ್ತ ಪೊಲೀಸರು ಕೇಸ್ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
ವರದಕ್ಷಿಣೆಗಾಗಿ ಅಮಾಯಕ ಎರಡು ಜೀವಗಳು ಬಲಿಯಾಗಿವೆ. ಒಂದು ಪತ್ರ ಮನೆಯಲ್ಲಿ ಸಿಕ್ಕಿದೆ – ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿದೆ. ಅದು ಕವಿತಾಳ ಹಸ್ತಾಕ್ಷರವೇ ಎಂದು ಪೊಲೀಸರು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಇನ್ನಷ್ಟು ತನಿಖೆ ನಡೆಯಬೇಕಿದೆ. ಸದ್ಯಕ್ಕೆ ಆರೋಪಿಗಳನ್ನ ಬಂಧಿಸಬೇಕಾಗಿದೆ.
ಮತ್ತಷ್ಟು ಕ್ರೈಂ ನ್ಯೂಸ್ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ