ಶ್ವಾಸಕೋಶ ಸಂಶೋಧನೆ ಮಾಡಲು ಹೋಗಿ ಮಗುವಿನ ಬ್ರೈನ್ ಡ್ಯಾಮೇಜ್: ದಯಾಮರಣ ಕೋರಿದ ತಂದೆ
ಚಿತ್ರದುರ್ಗದ ಓರ್ವ ವ್ಯಕ್ತಿಯ ಪತ್ನಿ ಏಳು ತಿಂಗಳ ಗರ್ಭಿಣಿಯಾಗಿದ್ದಾಗ ದಾವಣಗೆರೆ ಆಸ್ಪತ್ರೆಯಲ್ಲಿ ಶ್ವಾಸಕೋಶ ಸಂಶೋಧನೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಇದರಿಂದ ಮಗುವಿಗೆ ಮೆದುಳಿನ ಹಾನಿಯಾಗಿದೆ. ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಮಗುವಿಗೆ ತೀವ್ರ ಸಮಸ್ಯೆ ಎದುರಾಗಿದೆ ಎಂದು ಓರ್ವ ವ್ಯಕ್ತಿ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ವಿಡಿಯೋ ಕೂಡ ವೈರಲ್ ಆಗಿದೆ.
ದಾವಣಗೆರೆ, ಜನವರಿ 13: ಗರ್ಭಿಣಿಗೆ ಚಿಕಿತ್ಸೆ ನೀಡುವಾಗ ಮಗುವಿನ ಶ್ವಾಸಕೋಶ ಸಂಬಂಧಿ ಸಂಶೋಧನೆ ಮಾಡಿದ ಹಿನ್ನಲೆ ಮಗುವಿಗೆ ಬ್ರೈನ್ ಡ್ಯಾಮೇಜ್ ಆರೋಪ ಕೇಳಿಬಂದಿದೆ. ದಾವಣಗೆರೆಯ ಚಾಮರಾಜಪೇಟೆ ಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವಿರುದ್ಧ ಆರೋಪ ಮಾಡಲಾಗಿದ್ದು, ಮಗುವಿಗೆ ಸಮಸ್ಯೆಯಾದ ಹಿನ್ನಲೆ ಓರ್ವ ವ್ಯಕ್ತಿ ಸರ್ಕಾರಕ್ಕೆ ದಯಾಮರಣ (euthanasia) ಕೋರಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಅಕ್ರಮ ಸಂಶೋಧನೆ ಆರೋಪ
ಚಿತ್ರದುರ್ಗ ಮೂಲದ ಗೋಪಾಲ ಮತ್ತು ಮಗು ಇಬ್ಬರಿಗೂ ದಯಾ ಮರಣಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿ. ವಿಡಿಯೋ ಮೂಲಕ ರಾಜ್ಯ ಸರ್ಕಾರಕ್ಕೆ ಡಿಮ್ಯಾಂಡ್ ಆನ್ ಡೆತ್ ಅರ್ಜಿಯನ್ನು ಗೋಪಾಲ ಅವರು ಸಲ್ಲಿಸಿದ್ದಾರೆ.
ಇದನ್ನೂ ಓದಿ: ಕನಿಷ್ಠ ವೇತನ ಜಾರಿ ಆಗಲೆಂದು ಹರಕೆ ಹೊತ್ತು ಅಯ್ಯಪ್ಪಸ್ವಾಮಿ ಮಾಲೆ ಧರಿಸಿದ ಮುಸ್ಲಿಂ ಯುವಕ
ಇನ್ನು ಹರಿಬಿಟ್ಟ ವಿಡಿಯೋದಲ್ಲಿ ಮಗಳಿಗೆ ಆದ ಆರೋಗ್ಯ ಸಮಸ್ಯೆ ಕುರಿತು ತಂದೆ ಗೋಪಾಲ ಅಳಲು ತೊಡಿಕೊಂಡಿದ್ದಾರೆ. ಮಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಅಕ್ರಮ ಸಂಶೋಧನೆಗೆ ಬಳಕೆ ಆರೋಪ ಮಾಡಿದ್ದಾರೆ.
ಏಳು ತಿಂಗಳ ಗರ್ಭಿಣಿ ಯಾಗಿದ್ದಾಗಲೇ ಸಂಶೋಧನೆಗೆ ಒಳಪಡಿಸಿ ಬಲವಂತವಾಗಿ ನನ್ನ ಪತ್ನಿಯಿಂದ ಸಹಿ ಮಾಡಿಸಿಕೊಂಡಿದ್ದಾರೆ. ಇದರಿಂದ ನನ್ನ ಮಗಳು ಜೀವಂತ ಹೆಣವಾಗಿದ್ದಾಳೆ. ವೈದ್ಯರ ವಿರುದ್ಧ ದೂರು ನೀಡಿದರೂ ಕ್ರಮ ಆಗಿಲ್ಲ ಎಂದಿದ್ದಾರೆ.
ತಾಯಿ ಮತ್ತು ಮಕ್ಕಳನ್ನು ಕಾಪಾಡಿ: ಸರ್ಕಾರಕ್ಕೆ ಮನವಿ
ನಮ್ಮ ಮೂಲಭೂತ ಹಕ್ಕಿಗೆ ಧಕ್ಕೆಯಾಗಿದೆ. ನಾವು ಸಮಾಜದಲ್ಲಿ ಬದುಕುವ ಯೋಗ್ಯತೆ ಕಳೆದುಕೊಂಡಿದ್ದೇವೆ. ನಮಗೆ ನೆಮ್ಮದಿ ಮರಣ ದಯಪಾಲಿಸಿ ಅಂತಾ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಅದೇ ರೀತಿಯಾಗಿ ಗರ್ಭಿಣಿ ಮಹಿಳೆಯರ ಮೇಲೆ ನಡೆಯುತ್ತಿರುವ ಸಂಶೋಧನೆ ನಿಲ್ಲಿಸಿ. ತಾಯಿ ಮತ್ತು ಮಕ್ಕಳನ್ನು ಕಾಪಾಡಿ ಎಂದು ಸರ್ಕಾರಕ್ಕೆ ಗೋಪಾಲ ಒತ್ತಾಯಿಸಿದ್ದಾರೆ.
ಅನುದಾನ ಬಿಡುಗಡೆ ಮಾಡಿ ಇಲ್ಲಾ, ದಯಮರಣಕ್ಕೆ ಅನುಮತಿ ನೀಡಿ: ಗುತ್ತಿಗೆದಾರಿನಿಂದ ಸಿಎಂಗೆ ಪತ್ರ
ಇನ್ನು ಇತ್ತೀಚೆಗೆ ದಾವಣಗೆರೆಯ ಗುತ್ತಿಗೆದಾರರು ದಯಮರಣ ಕೋರಿ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದರು. ಬಿಜೆಪಿ ಸರ್ಕಾರದ ವಿರುದ್ದ 40% ಕಮಿಷನ್ ಬಗ್ಗೆ ಹೋರಾಟ ಮಾಡಿದ ಕಾಂಗ್ರೇಸ್, ಈಗ ಅವರೇ ಅಧಿಕಾರದಲ್ಲಿ ಇದ್ದರೂ ಗುತ್ತಿಗೆದಾರರಿಗೆ ಬಿಡುಗಡೆ ಮಾಡುತ್ತಿಲ್ಲ. ಗುತ್ತಿಗೆದಾರ ಮಹಮ್ಮದ್ ಮಜಾರ್ ಎನ್ನುವರು 2022-23 ಸಾಲಿನಲ್ಲಿ ಎಸ್ಎಫ್ಸಿ ವಿಶೇಷ ಅನುದಾನದಲ್ಲಿ 20 ಲಕ್ಷ ರೂ ವೆಚ್ಚದ ಹರಿಹರ ಪಟ್ಟಣದ ಕೈಲಾಸ ನಗರದಲ್ಲಿರುವ ಖಬರಸ್ಥಾನ ದ ಶೌಚಾಲಯ ಕಾಮಗಾರಿಯನ್ನು ನಡೆಸಿದ್ದರು.
ಇದನ್ನೂ ಓದಿ: ವ್ಯಾಪಾರಕ್ಕೆಂದು ದೂರದ ಊರಿನಿಂದ ದಾವಣಗೆರೆಗೆ ಬಂದಿದ್ದ ದಂಪತಿಯ ಮಗು ಕಿಡ್ನ್ಯಾಪ್
ಅಲ್ಲದೆ 21 ವಾರ್ಡ್ನಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ಕಾಮಗಾರಿ ಮಾಡಿದ್ದರು. ಆದರೆ ಕಾಮಗಾರಿ ಮುಗಿದು ಒಂದು ವರ್ಷವಾದ್ರು ಅನುದಾನ ಬಿಡುಗಡೆಯಾಗಿಲ್ಲ, ಅಲ್ಲದೆ ಇದೇ ಹಣವನ್ನು ನಂಬಿಕೊಂಡು ಮಗಳ ಮದುವೆಯನ್ನು ಒಂದು ವರ್ಷದಿಂದ ಮುಂದೂಡುತ್ತಿದ್ದಾರೆ. ಈಗ ಅನುದಾನ ಬಿಡುಗಡೆ ಮಾಡಿಲ್ಲ. ಹಾಗಾಗಿ ದಯಾಮರಣ ನೀಡಿ ಎಂದು ಗುತ್ತಿಗೆ ದಾರಮಹಮ್ಮದ್ ಮಜಾರ್ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:02 pm, Mon, 13 January 25