AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಾಪಾರಕ್ಕೆಂದು ದೂರದ ಊರಿನಿಂದ ದಾವಣಗೆರೆಗೆ ಬಂದಿದ್ದ ದಂಪತಿಯ ಮಗು ಕಿಡ್ನ್ಯಾಪ್

ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಒಂದು ವರ್ಷದ ಮಗುವಿನ ಅಪಹರಣ ಘಟನೆ ನಡೆದಿದ್ದು, ಒಂದು ತಿಂಗಳಾದರೂ ಪೊಲೀಸರು ಮಗುವನ್ನು ಪತ್ತೆಹಚ್ಚಿಲ್ಲ. ಅಲೆಮಾರಿ ದಂಪತಿಯ ಮಗುವಿನ ಅಪಹರಣದಿಂದಾಗಿ ಪೋಷಕರು ತೀವ್ರ ಆತಂಕಕ್ಕೀಡಾಗಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಮಂಡ್ಯದಲ್ಲಿ ಹೆಜ್ಜೇನು ದಾಳಿಗೆ ರೈತ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ.

ವ್ಯಾಪಾರಕ್ಕೆಂದು ದೂರದ ಊರಿನಿಂದ ದಾವಣಗೆರೆಗೆ ಬಂದಿದ್ದ ದಂಪತಿಯ ಮಗು ಕಿಡ್ನ್ಯಾಪ್
ವ್ಯಾಪಾರಕ್ಕೆಂದು ದೂರದ ಊರಿನಿಂದ ದಾವಣಗೆರೆಗೆ ಬಂದಿದ್ದ ದಂಪತಿಯ ಮಗು ಕಿಡ್ನ್ಯಾಪ್
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Dec 16, 2024 | 7:04 PM

Share

ದಾವಣಗೆರೆ, ಡಿಸೆಂಬರ್​ 16: ಅಲೆಮಾರಿ ದಂಪತಿಯ 1 ವರ್ಷ ಗಂಡು ಮಗುವನ್ನು (child) ಕಿರಾತಕರು ಅಪಹರಣ ಮಾಡಿರುವಂತಹ ಘಟನೆ ನ.16ರಂದು ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹರಪನಹಳ್ಳಿ ಪೊಲೀಸ್ ಠಾಣೆಗೆ ಮಗವಿನ ತಂದೆ ಯುವರಾಜ್ ದೂರು ನೀಡಿದ್ದರು. ದೂರು ನೀಡಿ 1 ತಿಂಗಳಾದರೂ ಪೊಲೀಸರು ಪತ್ತೆಹಚ್ಚಿಲ್ಲ. ಹೀಗಾಗಿ ಹೆತ್ತವರು ಅಳಲು ತೋಡಿಕೊಂಡಿದ್ದಾರೆ.

ಅಳಲು ತೋಡಿಕೊಂಡ ಹೆತ್ತವರು 

ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಚಿಕ್ಕಳ್ಳಿ ಮೂಲದ ಯುವರಾಜ್, ಸಾರಿಕಾ ದಂಪತಿ, ಮಗು ಅಪಹರಣವಾಗಿ 1 ತಿಂಗಳಾದರೂ ಸುಳಿವು ಸಿಕ್ಕಿಲ್ಲವೆಂದು ಅಳಲು ತೋಡಿಕೊಂಡಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಚಿಕ್ಕಳ್ಳಿ ಮೂಲದ ಕುಟುಂಬ ಗಂಧದ ಎಣ್ಣೆ ವ್ಯಾಪಾರಕ್ಕೆಂದು ಹರಪನಹಳ್ಳಿಗೆ ಬಂದಿದ್ದರು.

ಇದನ್ನೂ ಓದಿ: ಪತಿಯ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದು ಪತ್ನಿ ಸಾವು: ಸಾವಿನಲ್ಲೂ ಒಂದಾದ ದಂಪತಿ

ಈ ವೇಳೆ ಹರಪನಹಳ್ಳಿಯ ಯಮಹಾ ಶೋರೂಮ್ ಬಳಿ ಟೆಂಟ್ ಹಾಕಿದ್ದರು. ಪುತ್ರ ಆರ್ಯನ್ ಜತೆ ಟೆಂಟ್​ನಲ್ಲೇ ಯುವರಾಜ್, ಸಾರಿಕಾ ನೆಲೆಸಿದ್ದರು. ನವೆಂಬರ್ 16ರ ರಾತ್ರಿ ಟೆಂಟ್​ನಲ್ಲಿ ಮಲಗಿದ್ದಾಗ ಮಗುವಿನ ಅಪಹರಣ ಮಾಡಲಾಗಿದೆ.

ಹೆಜ್ಜೇನು ದಾಳಿಗೆ ರೈತ ಸಾವು

ಮತ್ತೊಂದು ಪ್ರಕಣದಲ್ಲಿ ಕಂದೇಗಾಲ ಗ್ರಾಮದಲ್ಲಿ ಹೆಜ್ಜೇನು ದಾಳಿಗೆ ರೈತ ಸಾವನ್ನಪ್ಪಿರುವಂತಹ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಂದೇಗಾಲದಲ್ಲಿ ನಡೆದಿದೆ. ರೈತ ನಿಂಗೇಗೌಡ (50) ಮೃತ ರೈತ. ರೇಷ್ಮೆ ಸೊಪ್ಪು ಕಟಾವು ವೇಳೆ ನಿಂಗೇಗೌಡರ ಮೇಲೆ ಹೆಜ್ಜೇನು ದಾಳಿ ಮಾಡಿದೆ. ಈ ವೇಳೆ ಅಸ್ವಸ್ಥರಾಗಿದ್ದ ಅವರನ್ನು ಮಳವಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಹಾಡುಹಗಲೇ ಕುರಿಗಳನ್ನು ಹೊತ್ತೊಯ್ದ ಕಳ್ಳರು 

ಮನೆಯ ಮುಂದೆ ಕಟ್ಟಿದ್ದ ಎರಡು‌ ಕುರಿಗಳನ್ನು ಹಾಡುಹಗಲೇ ಕಳ್ಳರು ಹೊತ್ತೊಯ್ದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಟೋದಲ್ಲಿ ಬಂದು‌ ಜ್ಞಾನೇಶ್ ಎಂಬುವವರಿಗೆ ಸೇರಿದ್ದ ಕುರಿಗಳನ್ನು ಕಳ್ಳತನ ಮಾಡಲಾಗಿದೆ. ಕಳ್ಳತನದ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್