AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ರೇನ್​ನಿಂದ ಬಂದ ವಿದ್ಯಾರ್ಥಿಗೆ ಬಿಜೆಪಿ ಬಾವುಟ ಹಿಡಿದು ಸ್ವಾಗತ; ಬಿಜೆಪಿ ಮುಖಂಡರ ನಡೆಗೆ ಸಾರ್ವಜನಿಕರಿಂದ ವಿರೋಧ

ಸೊಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಸ್ವಾತಿ ತಿಪ್ಪೇಸ್ವಾಮಿಯವರು ವಿದ್ಯಾರ್ಥಿನಿಗೆ ಬಿಜೆಪಿ ಬಾವುಟ ಹಿಡಿದು ಸ್ವಾಗತ ಕೋರಿದ್ದಾರೆ. ಸೊಕ್ಕೆ ಗ್ರಾಮದ ಯುವಕ ಆದರ್ಶ್ ಉಕ್ರೇನ್​ನಲ್ಲಿ ಎಂಬಿಬಿಎಸ್ ಓದುತ್ತಿದ್ದ.

ಉಕ್ರೇನ್​ನಿಂದ ಬಂದ ವಿದ್ಯಾರ್ಥಿಗೆ ಬಿಜೆಪಿ ಬಾವುಟ ಹಿಡಿದು ಸ್ವಾಗತ; ಬಿಜೆಪಿ ಮುಖಂಡರ ನಡೆಗೆ ಸಾರ್ವಜನಿಕರಿಂದ ವಿರೋಧ
ಉಕ್ರೇನ್​ನಿಂದ ಬಂದ ವಿದ್ಯಾರ್ಥಿಗೆ ಸ್ವಾಗತ ಕೋರಿದರು
TV9 Web
| Edited By: |

Updated on:Mar 10, 2022 | 10:12 AM

Share

ದಾವಣಗೆರೆ: ಉಕ್ರೇನ್​ನಿಂದ ಬಂದ ವಿದ್ಯಾರ್ಥಿಗೆ (Student) ಬಿಜೆಪಿ ಬಾವುಟ (BJP Flag) ಹಿಡಿದು ಸ್ವಾಗತ ಕೋರಿದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಸೊಕ್ಕೆ ಗ್ರಾಮದಲ್ಲಿ ನಡೆದಿದೆ. ಸೊಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಸ್ವಾತಿ ತಿಪ್ಪೇಸ್ವಾಮಿಯವರು ವಿದ್ಯಾರ್ಥಿನಿಗೆ ಬಿಜೆಪಿ ಬಾವುಟ ಹಿಡಿದು ಸ್ವಾಗತ ಕೋರಿದ್ದಾರೆ. ಸೊಕ್ಕೆ ಗ್ರಾಮದ ಯುವಕ ಆದರ್ಶ್ ಉಕ್ರೇನ್​ನಲ್ಲಿ ಎಂಬಿಬಿಎಸ್ ಓದುತ್ತಿದ್ದ. ಯುದ್ಧ ಭೂಮಿಯಿಂದ ಆದರ್ಶ್ ಸುರಕ್ಷಿತವಾಗಿ ಇಂದು ಗ್ರಾಮಕ್ಕೆ ಮರಳಿದ್ದಾನೆ. ಈ ವೇಳೆ ಬಿಜಿಪಿ ಬಾವುಟ ಹಿಡಿದು ಸ್ವಾಗತಿಸಿದ್ದಾರೆ. ಬಿಜೆಪಿ ಮುಖಂಡರ ನಡೆಗೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ.

ಉಕ್ರೇನ್​ನಲ್ಲಿ ಕಟ್ಟಡಗಳು ಧ್ವಂಸ: ಉಕ್ರೇನ್​ನಲ್ಲಿ ರಷ್ಯಾ ನಡೆಸುತ್ತಿರುವ ಆಕ್ರಮಣ ಕೇವಲ ಸೈನ್ಯವನ್ನು ಗುರಿಯಾಗಿಸಿಕೊಂಡು ಅಲ್ಲ. ಅಲ್ಲಿನ ಅದೆಷ್ಟೋ ವಸತಿ ಕಟ್ಟಡಗಳು, ಆಸ್ಪತ್ರೆ, ಶಾಲೆಗಳೆಲ್ಲ ರಷ್ಯಾ ಬಾಂಬ್​, ಕ್ಷಿಪಣಿ ದಾಳಿಗೆ ಧ್ವಂಸಗೊಂಡಿವೆ. ಬುಧವಾರ ರಷ್ಯಾ ಸೇನೆ ಮರಿಯುಪೋಲ್​​ನಲ್ಲಿರುವ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯ ಮೇಲೆ ಏರ್​ಸ್ಟ್ರೈಕ್​ ನಡೆಸಿದ್ದು, ಇದರಲ್ಲಿ ಸುಮಾರು 17 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಯಾದ ಪಾವ್ಲೊ ಕೈರಿಲೆಂಕೊ ಹೇಳಿದ್ದಾರೆ. ಈ ವಿಡಿಯೋವನ್ನು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ

ಗ್ರಾಮ ಪಂಚಾಯತಿ ಸದಸ್ಯನ ಮೇಲೆ ಕಳ್ಳತನ ಆರೋಪ: ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ನೆರಿಯಾ ಗ್ರಾಮದ ಕುಲೆನಾಡಿ ಎಂಬಲ್ಲಿ ಗ್ರಾಮ ಪಂಚಾಯತಿ ಸದಸ್ಯನ ಮೇಲೆ ಕಳ್ಳತನ  ಆರೋಪ ಕೇಳಿಬಂದಿದೆ. ನೆರಿಯಾ ಗ್ರಾಮ ಪಂಚಾಯತಿ ಸದಸ್ಯ ಸಚಿನ್ ಮೇಲೆ ಆರೋಪ ಕೇಳಿಬಂದಿದ್ದು, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 2.4 ಲಕ್ಷ ಮೌಲ್ಯದ ನಗದು ಮತ್ತು ಚಿನ್ನಾಭರಣ ಕಳ್ಳತನವಾಗಿದೆ ಅಂತ ಚಿಕ್ಕಮ್ಮ ಚಂದ್ರಾವತಿ ಸಚಿನ್ ಮೇಲೆ ದೂರು ನೀಡಿದ್ದಾರೆ.

ಇದನ್ನೂ ಓದಿ

‘ರಾಧೆ ಶ್ಯಾಮ್​’ ಚಿತ್ರದ ಮುಂಗಡ ಟಿಕೆಟ್​ ಬುಕಿಂಗ್; ಈಗಾಗಲೇ ಹರಿದು ಬಂದಿದ್ದು ಎಷ್ಟು ಕೋಟಿ ರೂಪಾಯಿ​?

Video: ಮರಿಯುಪೋಲ್​ನಲ್ಲಿ ರಷ್ಯಾ ಸೇನೆಯ ದೌರ್ಜನ್ಯ; ಹೆರಿಗೆ ಆಸ್ಪತ್ರೆ ಮೇಲೆ ಏರ್​ಸ್ಟ್ರೈಕ್​​, ಅವಶೇಷಗಳಡಿಯಲ್ಲಿ ಜನರು

Published On - 10:04 am, Thu, 10 March 22

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ