AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಂಗು ಬೆಲೆ ಗಗನಕ್ಕೆ: ಎಳನೀರು ದರ ಏರಿಕೆಗೆ ಕಾರಣ ರಿವೀಲ್​

ಬೇಸಿಗೆ ಬಂದರೆ ಸಾಕು ಎಳನೀರಿನ ಬೆಲೆ ಗಗನಕ್ಕೆ ಏರುತ್ತದೆ. ಆದರೆ, ಈ ಚಳಿಗಾಲದಲ್ಲೂ ಎಳನೀರಿನ ಬೆಲೆ ಅಧಿಕವಾಗಿದೆ. ಒಂದು ಎಳನೀರಿನ ಕಾಯಿಗೆ 40 ರಿಂದ 60 ರೂಪಾಯಿ ಇದೆ. ದಿಢೀರನೆ ಬೆಲೆ ಏರಿಕೆಯಿಂದ ಜನರು ಕಂಗಾಲ ಆಗಿದ್ದಾರೆ. ಹಾಗಿದ್ದರೆ ಬೆಲೆ ಏರಿಕೆಗೆ ಕಾರಣವೇನು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ತೆಂಗು ಬೆಲೆ ಗಗನಕ್ಕೆ: ಎಳನೀರು ದರ ಏರಿಕೆಗೆ ಕಾರಣ ರಿವೀಲ್​
ತೆಂಗು ಬೆಳೆಗೆ ರೋಗ
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Nov 19, 2024 | 10:57 AM

Share

ದಾವಣಗೆರೆ, ನವೆಂಬರ್​ 19: ಕಂದು ಹುಳು ಕಾಟದಿಂದ ಹರಿಹರ (Harihar) ತಾಲೂಕಿನ ರೈತರು (Farmers) ರೋಸಿ ಹೋಗಿದ್ದಾರೆ. ಇಲ್ಲಿನ ರೈತರ ಮೂಲ ಬೆಳೆಯಾದ ತೆಂಗಿಗೆ ಹುಳು ಕಾಟ ಶುರುವಾಗಿದೆ. ಕಂದು ಹುಳುಗಳು ತೆಂಗಿನ ಗರಿಗಳನ್ನು ತಿಂದು ಹಾಳು ಮಾಡುತ್ತವೆ. ಇದರಿಂದ, ಕೈಗೆ ಬಂದ ಬಳೆ ಬಾಯಿಗೆ ಬರದಂತಾಗಿದೆ. ಕಳೆದ ನಾಲ್ಕು ವರ್ಷಗಳಿಂದ ರೈತರಿಗೆ ಇದೇ ಬಾಧೆಯಾಗಿದೆ. ಅಲ್ಲದೇ ಈ ಕಂದು ಹುಳುಗಳು ದಿನಕ್ಕೆ ಸಾವಿರಾರು ಮೊಟ್ಟೆ ಹಾಕುವುದರಿಂದ, ಇವುಗಳ ಸಂತತಿ ಅಧಿಕವಾಗುತ್ತ ಹೋಗುತ್ತದೆ. ಇದರಿಂದ, ಬೆಳೆಗಳು ನಾಶವಾಗುತ್ತವೆ.

ಈ ಹುಳುಗಳನ್ನು ನಿಯಂತ್ರಿಸಲು ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಔಷಧಿ ಹಾಕಿದರೂ, ಯಾವುದೇ ಪ್ರಯೋಜನವಾಗಿಲ್ಲ. ರೈತರ ಸಂಕಷ್ಟಕ್ಕೆ ಪರಿಹಾರ ನೀಡಲು, ತೋಟಗಾರಿಕಾ ಇಲಾಖೆ ಮುಂದಾಗಿ, ಕಂದು ಹುಳು ತಿಂದು ಹಾಕುವ ಮತ್ತೊಂದು ಹುಳು ಅಭಿವೃದ್ಧಿ ಪಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಅಂತ ರೈತರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಈರುಳ್ಳಿ ಬೆಲೆ ದಿಢೀರ್ ಇಳಿಕೆ, ಕ್ವಿಂಟಾಲ್​ಗೆ 4000 ಇದ್ದ ದರ 2000 ರೂ.ಗೆ ಕುಸಿತ, ರೈತರು ಕಂಗಾಲು

ಹೌದು, ಕಂದು ಹುಳುಗಳನ್ನು ನಾಶಕ್ಕೆ ತೋಟಗಾರಿಕೆ ಇಲಾಖೆ ಅಭಿವೃದ್ಧಿ ಪಡಿಸಿರುವ ಹುಳವನ್ನು ಬಿಟ್ಟರೂ, ಅಷ್ಟೊಂದು ಪ್ರಯೋಜನವಾಗಿಲ್ಲ ಎಂದು ರೈತರು ಹೇಳುತ್ತಿದ್ದಾರೆ. ಕಂದು ಹುಳು ಕಾಟದಿಂದ 10 ಸಾವಿರ ಕಾಯಿ ಬೆಳೆಯವ ತೋಟದಲ್ಲಿ, 3 ಸಾವಿರ ಕಾಯಿ ಬೆಳೆಯುತ್ತಿವೆ. ಶೇ70ರಷ್ಟು ಇಳುವರಿಗೆ ಹೊಡೆತ ಬಿದ್ದಿದೆ.

ತೆಂಗು

ಹೀಗಾಗಿ ತೆಂಗು ಬೆಳೆಗಾರರು ಬಂದಷ್ಟು ಬರಲು ಅಂತ ಸುಮ್ಮನಾಗಿದ್ದಾರೆ. ಕೆಲವರು ತೆಂಗಿನ ತೋಟಗಳನ್ನ ತೆಗೆದು ಅಡಿಕೆ ಮತ್ತು ಭತ್ತ ಬೆಳೆಯುತ್ತಿದ್ದಾರೆ. ಇನ್ನೂ ಕೆಲವರು ನಗರ ಪ್ರದೇಶಕ್ಕೆ ಹತ್ತಿರವಿದ್ದ ಜಮೀನುಗಳನ್ನು ನಿವೇಶನಗಳಾಗಿ ಪರಿವರ್ತಿಸಿ ಮಾರಾಟ ಮಾಡಲು ಮುಂದಾಗಿದ್ದಾರೆ. ವಿಜ್ಞಾನ ಇಷ್ಟು ಬೆಳೆದರೂ ಕಂದು ಬಣ್ಣದ ಹುಳು ನಿಯಂತ್ರಣಕ್ಕೆ ಸಾಧ್ಯವಾಗುತ್ತಿಲ್ಲ ಎಂಬುವುದೇ ಆತಂಕದ ವಿಚಾರ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್