ವಚನಾನಂದಶ್ರೀ ವಿರುದ್ಧದ ಪೋಕ್ಸೋ ಪ್ರಕರಣದ ತನಿಖಾಧಿಕಾರಿ ವರ್ಗಾವಣೆ, ಕಾರಣವೇನು?

ದಾವಣಗೆರೆಯ ಹರಿಹರ (Harihara) ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ (Vachananand Shri) ಸುತ್ತ ಈಗ ಪೋಕ್ಸೋ ಉರುಳು ಬಿಗಿಗೊಂಡಿದ್ದು, ಪ್ರಕರಣದ ತನಿಖೆ ಸಹ ಚುರುಕುಗೊಂಡಿದೆ. ಈಗಾಗಲೇ ವಚನಾನಂದಶ್ರೀಗಳನ್ನು ಠಾಣೆಗೆ ಕರೆಯಿಸಿ ಎರಡು ಬಾರಿ ವಿಚಾರಣೆಗೊಳಪಡಿಸಿದ್ದಾರೆ. ಇದರ ಮಧ್ಯೆ ಇದೀಗ ವಚನಾನಂದಶ್ರೀ ವಿರುದ್ಧದ ಪೋಕ್ಸೋ ಕೇಸ್‌ನ ತನಿಖಾಧಿಕಾರಿ ಏಕಾಏಕಿ ವರ್ಗಾವಣೆಗೊಂಡಿದ್ದಾರೆ. ತನಿಖೆ ನಡೆಯುವ ಮಧ್ಯೆದಲ್ಲೇ ವರ್ಗಾವಣೆ ಮಾಡಿರುವುದು ನಾನಾ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.

ವಚನಾನಂದಶ್ರೀ ವಿರುದ್ಧದ ಪೋಕ್ಸೋ ಪ್ರಕರಣದ ತನಿಖಾಧಿಕಾರಿ ವರ್ಗಾವಣೆ, ಕಾರಣವೇನು?
ವಚನಾನಂದಶ್ರೀ , ಪಿಎಸ್‌ಐ ಮಂಜುಳಾ
Edited By:

Updated on: May 19, 2026 | 7:15 PM

ದಾವಣಗೆರೆ, (ಮೇ 19): ಹರಿಹರ (Harihara) ಪಂಚಮಸಾಲಿ ಪೀಠದ ವಚನಾನಂದಶ್ರೀ (Vachananand Shri) ವಿರುದ್ಧ ಫೋಕ್ಸೋ ಪ್ರಕರಣದ ತನಿಖೆ ಮುಂದುವರೆದಿದ್ದು, ಈಗಾಗಲೇ ಆರೋಪಿ ಸ್ಥಾನದಲ್ಲಿರುವ ವಚನಾನಂದ ಸ್ವಾಮೀಜಿಯನ್ನು ಎರಡು ಬಾರಿ ವಿಚಾರಣೆಗೊಳಪಡಿಸಲಾಗಿದೆ. ಪ್ರಕರಣದ ತನಿಖೆ ಚುರುಕೊಂಡಿರುವ ನಡುವೆ ತನಿಖಾಧಿಕಾರಿ ವರ್ಗಾವಣೆಯಾಗಿದೆ. ಹೌದು… ವಚನಾನಂದಶ್ರೀ ವಿರುದ್ಧದ ಪೋಕ್ಸೋ ಕೇಸ್‌ನ ತನಿಖಾಧಿಕಾರಿಯಾಗಿದ್ದ ಹರಿಹರ ಗ್ರಾಮಾಂತರ ಠಾಣೆ ಪಿಎಸ್‌ಐ ಮಂಜುಳಾ ಅವರನ್ನ ದಿಢೀರ್ ವರ್ಗಾವಣೆ ಮಾಡಿ ದಾವಣಗೆರೆ  (Davanagere) ಎಸ್‌ಪಿ H.T.ಶೇಖರ್ ಆದೇಶ ಹೊರಡಿಸಿದ್ದಾರೆ.

ಮುಖ್ಯಾಂಶ

  • ಪಂಚಮಸಾಲಿ ಪೀಠದ  ವಚನಾನಂದಶ್ರೀ ವಿರುದ್ಧದ ಪೋಕ್ಸೋ ಕೇಸ್‌ನ ತನಿಖಾಧಿಕಾರಿ ವರ್ಗಾವಣೆ
  • ದಾವಣಗೆರೆ ಜಿಲ್ಲೆಯ  ಹರಿಹರ ಗ್ರಾಮಾಂತರ ಠಾಣೆ ಪಿಎಸ್‌ಐ ಮಂಜುಳಾ ದಿಢೀರ್ ವರ್ಗಾವಣೆ ಮಾಡಿ ಎಸ್ಪಿ H.T.ಶೇಖರ್ ಆದೇಶ.
  • ಮಂಜುಳಾ ಜಾಗಕ್ಕೆ ಆಜಾದ್‌ನಗರ ಠಾಣೆ ಪಿಎಸ್‌ಐ ಜಯರತ್ನಮ್ಮ ನೇಮಕ
  • ವಚನಾನಂದಶ್ರೀ ವಿರುದ್ಧದ ಕೇಸ್‌ನ ತನಿಖಾ ಜವಾಬ್ದಾರಿ ಹೊತ್ತ ಜಯರತ್ನಮ್ಮ

ಮಂಜುಳಾ ಜಾಗಕ್ಕೆ ಜಯರತ್ನಮ್ಮ ನೇಮಕ

ಪ್ರಕರಣದ ತನಿಖೆ ಸರಿಯಾಗಿ ಮಾಡುತ್ತಿಲ್ಲ ಎಂದು ಹರಿಹರ (Harihara) ಪಂಚಮಸಾಲಿ ಪೀಠ ಟ್ರಸ್ಟ್​​ನ ಪದಾಧಿಕಾರಿಗಳು ಪೂರ್ವ ವಲಯ ಐಜಿಪಿ ಬಿ.ಆರ್.ರವಿಕಾಂತೇಗೌಡ ಅವರಿಗೆ ದೂರು ನೀಡಿದ್ದು, ಈ ದೂರಿನ ಮೇರೆಗೆ ತನಿಖಾಧಿಕಾರಿಯನ್ನು ಬದಲಾವಣೆ ಮಾಡುವಂತೆ ಎಸ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಇದರ ಮೇರೆಗೆ ದಾವಣಗೆರೆ ಎಸ್ಪಿ H.T.ಶೇಖರ್ ಅವರು ಪಿಎಸ್‌ಐ ಮಂಜುಳಾ ಅವರನ್ನು ವರ್ಗಾವಣೆ ಮಾಡಿದ್ದು, ಇವರ ಜಾಗಕ್ಕೆ  ದಾವಣಗೆರೆಯ ಆಜಾದ್‌ನಗರ ಠಾಣೆಯ ಪಿಎಸ್‌ಐ ಜಯರತ್ನಮ್ಮ ಅವರನ್ನ ನೇಮಕ ಮಾಡಿ ಆದೇಶ ಹೊಡಿಸಿದ್ದಾರೆ.

ಇದನ್ನೂ ನೋಡಿ: ಪೋಕ್ಸೋ ಕೇಸ್: ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ

ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಪೋಸ್ಕೋ ಪ್ರಕರಣದ ತನಿಖಾಧಿಕಾರಿ ಆಗಿದ್ದ ಎಸ್ ಐ ಮಂಜುಳಾ ಅವರನ್ನ ದಾವಣಗೆರೆ ಅಜಾದ್ ನಗರ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು, ಇವರ ಸ್ಥಾನಕ್ಕೆ ದಾವಣಗೆರೆ ಅಜಾದ್ ನಗರ ಠಾಣೆ ಎಸ್ ಐ ಜಯರತ್ನಮ್ಮ ಅವರನ್ನ ನೇಮಕ ಮಾಡಲಾಗಿದ್ದು, ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣದ ತನಿಖೆ ಜವಾಬ್ದಾರಿಯನ್ನು ಜಯರತ್ನಮ್ಮ ಅವರಿಗೆ ನೀಡಲಾಗಿದೆ.

ಶ್ರೀಗಳನ್ನ ಎರಡು ಬಾರಿ ವಿಚಾರಣೆ ನಡೆಸಿದ್ದ ಮಂಜುಳಾ

ವಚನಾನಂದ ಸ್ವಾಮೀಜಿ ವಿರುದ್ಧ ಮಕ್ಕಳ ಮೇಲಿನ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಇದರ ಬೆನ್ನಲ್ಲೇ ಹರಿಹರ ಗ್ರಾಮಾಂತರ ಠಾಣೆ ಪಿಎಸ್‌ಐ ಮಂಜುಳಾ ಅವರ ವಚನಾನಂದಶ್ರೀ ವಿರುದ್ಧ ಫೋಕ್ಸೋ ಪ್ರಕರಣ ದಾಖಲಿಸಿದ್ದರು. ಅಲ್ಲದೇ ಪ್ರಕರಣದ ತನಿಖೆ ಸಲುವಾಗಿ ಸ್ವಾಮೀಜಿಯನ್ನು ಹರಿಹರ ಠಾಣೆಗೆ 2 ಸಲ ಕರೆಸಿಕೊಂಡು ವಿಚಾರಣೆ ನಡೆಸಿದ್ದರು. ಇದೀಗ ಹೊಸ ತನಿಖಾಧಿಕಾರಿ ಬಂದಿದ್ದು, ಯಾವ ರೀತಿ ತನಿಖೆ ನಡೆಯುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:13 pm, Tue, 19 May 26

Follow Us