ಲಿಂಗಾಯತ ಹಾಗೂ ಒಕ್ಕಲಿಗರ ಮೀಸಲಾತಿಯಲ್ಲಿ ತಿರುಗಾಮುರಗಾ: ಶಾಮನೂರು ಶಿವಶಂಕರಪ್ಪ
ರಾಜ್ಯ ಸರ್ಕಾರ ಲಿಂಗಾಯತರಿಗೆ ಮೀಸಲಾತಿ ನೀಡಿದ್ದು ಅರ್ಥವಾಗಿಲ್ಲ. ಎಲ್ಲ ತಿರುಗಾಮುರಗಾ ಆಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ದಾವಣಗೆರೆ: ರಾಜ್ಯ ಸರ್ಕಾರ ನಿನ್ನೆ (ಡಿ. 29) ರಂದು ಲಿಂಗಾಯತ ಪಂಚಮಸಾಲಿ (panchamasali) ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ 2D ಪ್ರತ್ಯೇಕ ಕೆಟಗರಿ ಮಾಡಿತ್ತು. ಈ ಸಂಬಂಧ ಗುರುವಾರ ಬೆಳಗಾವಿಯಲ್ಲಿ ನಡೆದ ಸಚಿವ ಸಂಪುಟದಲ್ಲಿ (Belagavi Cabinet Meeting) ತೀರ್ಮಾನ ಕೈಗೊಂಡಿತ್ತು. ಈ ಕುರಿತು ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ, ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ ರಾಜ್ಯ ಸರ್ಕಾರ ಲಿಂಗಾಯತರಿಗೆ ಮೀಸಲಾತಿ ನೀಡಿದ್ದು ಅರ್ಥವಾಗಿಲ್ಲ. ಎಲ್ಲ ತಿರುಗಾಮುರಗಾ ಆಗಿದೆ ಎಂದಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಲಿಂಗಾಯತ ಪಂಚಮಸಾಲಿಗೆ ಮೀಸಲಾತಿ ವಿಚಾರಕ್ಕೆ ಪ್ರತ್ಯೇಕ ಕೆಟಗೆರಿ ರಚನೆ ಮಾಡಿದ ಕುರಿತು ಸೂಕ್ತ ಮಾಹಿತಿ ಪಡೆದು ಮಾತಾಡುವೆ ಎಂದರು.
ಇದನ್ನೂ ಓದಿ: ಮೀಸಲಾತಿ ಪರಿಹರಿಸಲು ಬೊಮ್ಮಾಯಿ ಸರ್ಕಾರದ ಹೊಸ ಸೂತ್ರ
ಇದು ಕೇವಲ ಚುನಾವಣಾ ಗಿಮಿಕ್: ಸಿದ್ದರಾಮಯ್ಯ
ಈ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ ಲಿಂಗಾಯತ, ಒಕ್ಕಲಿಗರಿಗೆ ಮೀಸಲಾತಿ ಹಂಚಿಕೆಯಲ್ಲಿ ಗೊಂದಲಗಳಿವೆ. ಇದು ಕೇವಲ ಚುನಾವಣಾ ಗಿಮಿಕ್. ಇಂದಿರಾ ಸುಹಾನಿ ಕೇಸ್ನಲ್ಲಿ ಮೀಸಲಾತಿ ಶೇ.50ರಷ್ಟು ಮೀರುವಂತಿಲ್ಲ. ಈಗ ಎಲ್ಲ ಮೀಸಲಾತಿ ಸೇರಿ ಶೇ.65.9ರಷ್ಟು ಆಗುತ್ತದೆ, ಇದು ಹೇಗೆ? ಎಂದು ಪ್ರಶ್ನಿಸಿದರು.
ಕಳಸಾ ಬಂಡೂರಿ DPRಗೆ ಒಪ್ಪಿಗೆ ನೀಡಿದ್ದು ಕೂಡ ಚುನಾವಣಾ ಗಿಮಿಕ್. ಮೊದಲೇ ಯಾಕೆ ಡಿಪಿಆರ್ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿಲ್ಲ. ಅಮಿತ್ ಶಾ ರಾಜ್ಯ ಪ್ರವಾಸದಿಂದ ದೊಡ್ಡ ಬದಲಾವಣೆ ಏನೂ ಆಗಲ್ಲ. ಪಶ್ಚಿಮ ಬಂಗಾಳ ಚುನಾವಣೆ ಸಂದರ್ಭದಲ್ಲಿ ಅಲ್ಲೇ ಠಿಕಾಣಿ ಹೂಡಿದ್ದರು. ಆದರೆ ಅಲ್ಲಿ ಎನಾಯಿತು ಎಂದು ವಾಗ್ದಾಳಿ ಮಾಡಿದರು.
ಒಕ್ಕಲಿಗ ಹಾಗೂ ಲಿಂಗಾಯತರಿಗೆ ಪ್ರತ್ಯೇಕ ಕೆಟಗರಿ
ಬೆಳಗಾವಿ: ಕರ್ನಾಟಕದಲ್ಲಿ ಎರಡು ಪ್ರಬಲ ಸಮುದಾಯದವಾಗಿರುವ ಒಕ್ಕಲಿಗ ಹಾಗೂ ಲಿಂಗಾಯತ ಪಂಚಮಸಾಲಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎರಡು ಪ್ರತ್ಯೇಕ ಕೆಟಗರಿ ಮಾಡಿದೆ. 3Aನಲ್ಲಿದ್ದ ಒಕ್ಕಲಿಗರಿಗೆ ಹೊಸದಾಗಿ 2C ಕೆಟಗರಿ ಹಾಗೂ 3Bನಲ್ಲಿದ್ದ ಲಿಂಗಾಯತರಿಗೆ 2D ಕೆಟಗರಿ ರಚಿಸಲು ಇಂದು(ಡಿಸೆಂಬರ್ 29) ಬೆಳಗಾವಿಯಲ್ಲಿ ನಡೆದ ಸಚಿವ ಸಂಪುಟದಲ್ಲಿ ತೀರ್ಮಾನಿಸಿದೆ.
ಇದನ್ನೂ ಓದಿ: ಸಿದ್ದೇಶ್ವರ ಸ್ವಾಮೀಜಿ ಅನಾರೋಗ್ಯ ವಿಚಾರ, ಹರಿದು ಬಂದ ಜನರು
3ಎನಲ್ಲಿದ್ದ ಒಕ್ಕಲಿಗರಿಗೆ 2ಸಿ ಮೀಸಲಾತಿ ನೀಡಲು ಸಮ್ಮತಿಸಲಾಗಿದೆ. ಇನ್ನು 3ಬಿನಲ್ಲಿದ್ದ ಲಿಂಗಾಯತರಿಗೆ 2ಡಿ ಮೀಸಲಾತಿ ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನವಾಗಿದೆ. 2Aನಲ್ಲಿರುವ 102 ಪಂಗಡಗಳ ಮೀಸಲಾತಿಗೆ ಯಾವುದೇ ಧಕ್ಕೆ ಆಗಲ್ಲ. 2ಎ ನಲ್ಲಿರುವ 102 ಪಂಗಡಗಳ ಮೀಸಲಾತಿ ಟಚ್ ಮಾಡುವುದಿಲ್ಲ. ಯಾವುದೇ ಸಮುದಾಯದ ಮೀಸಲಾತಿಯಲ್ಲಿ ಬದಲಾಗಲ್ಲ. EWSನಲ್ಲಿರುವ ಶೇ.10ರಷ್ಟು ಮೀಸಲಾತಿಯಲ್ಲಿ ಎಷ್ಟು ಉಳಿಯುತ್ತೋ ಅದನ್ನು 2ಸಿ ಹಾಗೂ 2ಡಿಗೆ ಶಿಫ್ಟ್ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ