AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ಮಿಠಾಯಿಗಾಗಿ ಹೋಯ್ತು ಉದ್ಯಮಿಯ ಪ್ರಾಣ; ನಾಲ್ವರು ಆರೋಪಿಗಳ ಬಂಧನ

ಪರಮೇಶ್​ನನ್ನು ಕೊಲೆ ಮಾಡಲು ಮನೆ ಮುಂದೆ ಬಸವರಾಜ್ ತಂಡ ಇಡೀ ದಿನ ಹೊಂಚು ಹಾಕಿದ್ದು, ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಈ ಸಂಬಂಧ ಬಸವರಾಜ್, ಹನುಮಂತ್, ಕುಮಾರ, ನಯಾಜ್​ನನ್ನು ಬಸವನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ದಾವಣಗೆರೆ: ಮಿಠಾಯಿಗಾಗಿ ಹೋಯ್ತು ಉದ್ಯಮಿಯ ಪ್ರಾಣ; ನಾಲ್ವರು ಆರೋಪಿಗಳ ಬಂಧನ
ಬಸವರಾಜ್ ಮತ್ತು ಹನುಮಂತ್
TV9 Web
| Updated By: preethi shettigar|

Updated on: Aug 13, 2021 | 11:49 AM

Share

ದಾವಣಗೆರೆ: ರಿಯಲ್ ಎಸ್ಟೇಟ್ ಸೇರಿದಂತೆ ಹಲವಾರು ವ್ಯವಹಾರ ಮಾಡುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಎಲ್ಲರೊಂದಿಗೆ ಅನ್ಯೋನ್ಯವಾಗಿ ಇದ್ದ ಉದ್ಯಮಿ ಸೀಮೆಎಣ್ಣೆ ಪರಮೇಶಿಯನ್ನು ರಾತ್ರೋರಾತ್ರಿ ಕೊಲೆ ಮಾಡಲಾಗಿತ್ತು. ಈ ಕೊಲೆಗೆ ಕಾರಣ ಮಿಠಾಯಿ ಎನ್ನುವುದು ತಡವಾಗಿ ಬೆಳಕಿಗೆ ಬಂದಿದೆ. ಕೇವಲ ಮಿಠಾಯಿಗಾಗಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾರಾ ಎಂದು ಹುಬ್ಬೆರಿಸುವವರಿಗೆ ಇಲ್ಲಿದೆ ಉತ್ತರ.

ದಾವಣಗೆರೆ ನಗರದ ಬಸವರಾಜ ಪೇಟೆಯಲ್ಲಿ ಕೊಲೆಯಾದ ವ್ಯಕ್ತಿ ಸೀಮೆಎಣ್ಣೆ ಪರಮೇಶಿ( 45). ಇತ ರಿಯಲ್ ಎಸ್ಟೇಟ್ ಸೇರಿದಂತೆ ಹಲವಾರು ವ್ಯವಹಾರದಲ್ಲಿ ಪಳಗಿದ್ದ. ಕಾಂಗ್ರೆಸ್ ಮುಖಂಡ ಹಾಗೂ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಸೀಮೆಎಣ್ಣೆ ಮಲ್ಲೇಶ ಅವರ ಸ್ವಂತ ಅಳಿಯ. ಈ ಹಿಂದೆ ಇವರೆಲ್ಲಾ ಸೀಮೆಎಣ್ಣೆ ವ್ಯವಹಾರ ಮಾಡುತ್ತಿದ್ದರು. ಇದೇ ಕಾರಣಕ್ಕೆ ಇವರಿಗೆ ಸೀಮೆಎಣ್ಣೆ ಎಂಬ ಹೆಸರು ಬಂದಿದೆ. ರಾತ್ರಿ ವೇಳೆ ಪರಮೇಶಿ ಸ್ನೇಹಿತರ ಜೊತೆ ಮಾತಾಡಿ ಅವರ ಮನೆಯಿಂದ ತನ್ನ ಮನೆಗೆ ಹೋಗಲು ಬೈಕ್ ಹತ್ತಿದ್ದಾರೆ. ಹೀಗೆ ಬೈಕ್ ಹತ್ತಿದ್ದೇ ತಡ ನಾಲ್ವರು ದುಷ್ಕರ್ಮಿಗಳು ಬಂದು ನೇರವಾಗಿ ಪರಮೇಶಿ ಮೇಲೆ ದಾಳಿ ಮಾಡಿದ್ದಾರೆ.ಪರಮೇಶಿ ಕೆಳಗೆ ಬಿಳುತ್ತಿದ್ದಂತೆ ಜೊತೆಗೆ ತಂದಿದ್ದ ಭಾರಿ ಗಾತ್ರದ ಕಲ್ಲು ತೆಗೆದುಕೊಂಡು ಪರಮೇಶಿ ಕಥೆ ಮುಗಿಸಿ ಬಿಟ್ಟಿದ್ದರು.

ಬಸವರಾಜ್​ ಮತ್ತು ಹನುಮಂತ್​ ದೇವಸ್ಥಾನ ಒಂದರಲ್ಲಿ ಪೂಜೆ ಮಾಡುವ ಉಸ್ತುವಾರಿ, ಜೊತೆಗೆ ಅಕ್ರಮ ಪಡಿತರ ಅಕ್ಕಿ ಮಾರಾಟ ಮಾಡುವುದರಲ್ಲಿ ಎತ್ತಿದ ಕೈ. ಇದೇ ಹಣದಲ್ಲಿ ಇವರ ಶೋಕಿ ನಡೆದಿದ್ದು, ದೇವಸ್ಥಾನ ಪೂಜೆ ಸಂಬಂಧ ಮಿಠಾಯಿ ಅಂಗಡಿಯವನಿಗೆ ಪಟ್ಟಿ ಕೇಳಿದ್ದಾರೆ. ಇದನ್ನು ಕೊಟ್ಟಿಲ್ಲ, ಇದೇ ವಿಚಾರಕ್ಕೆ ಮಿಠಾಯಿ ಅಂಗಡಿಯವನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮಿಠಾಯಿ ಅಂಗಡಿ ಮಾಲೀಕ ಶೆಟ್ರು, ರಿಯಲ್ ಎಸ್ಟೇಟ್ ಪರಮೇಶ್ ಬಳಿ ಬಂದು ಈ ವಿಚಾರ ಹೇಳಿದ್ದಾರೆ. ಆಗ ಪರಮೇಶ್ ಪಂಚಾಯಿತಿ ಮಾಡಿ ಬಸವರಾಜ್ ಮತ್ತು ಹನುಮಂತ್​ಗೆ ಬೈಯ್ದು ಬುದ್ದಿವಾದ ಹೇಳಿದ್ದಾರೆ. ಆದರೂ ಮಾತು ಕೇಳದ ಇವರು ಗಾಂಧಿನಗರದ ಅಜಯ್​ಗೆ ಹೊಡೆದಿದ್ದಾರೆ ಎಂದು ಪರಮೇಶ್​ ಸ್ನೇಹಿತ ತಿಳಿಸಿದ್ದಾರೆ.

ಗಾಂಧಿನಗರದ ಗಾರೆ ಮಂಜ, ಬಸವರಾಜ್​ನ ಮನೆಗೆ ನುಗ್ಗಿ ಹೆಂಡತಿ ಮಕ್ಕಳಿಗೂ ಹೊಡೆದಿದ್ದಾರೆ. ಇವರೆಡು ಗುಂಪಿನ ನಡುವೆ ಪದೇ ಪದೇ ಗಲಾಟೆ ಸಂಭವಿಸುತ್ತಲೇ ಇದ್ದವು. ನಾನು ಇಲ್ಲದ ವೇಳೆ ಮನೆಗೆ ನುಗ್ಗಿದ್ದಾರೆ. ಇದಕ್ಕೆಲ್ಲ ಪರಮೇಶ್​ನೇ ಕಾರಣ. ಗಾರೆ ಮಂಜನನ್ನು ಪರಮೇಶ್ ಬಚ್ಚಿ ಇಟ್ಟಿದ್ದಾನೆ ಎಂದು ಸಿಟ್ಟಿಗೆದ್ದವರೇ ಬಂದು ಪರಮೇಶ್​ನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ ಎಂದು ಪರಮೇಶ್​ ಸ್ನೇಹಿತ ತಿಳಿಸಿದ್ದಾರೆ.

ಇನ್ನೂ ಪರಮೇಶ್​ನನ್ನು ಕೊಲೆ ಮಾಡಲು ಮನೆ ಮುಂದೆ ಬಸವರಾಜ್ ತಂಡ ಇಡೀ ದಿನ ಹೊಂಚು ಹಾಕಿದ್ದು, ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಈ ಸಂಬಂಧ ಬಸವರಾಜ್, ಹನುಮಂತ್, ಕುಮಾರ, ನಯಾಜ್​ನನ್ನು ಬಸವನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಮಿಠಾಯಿ ಅಂಗಡಿಯಿಂದ ಶುರುವಾಗಿ ಬಳಿಕ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಪರಮೇಶ್​ನನ್ನು ಬಲಿ ಪಡೆದಿದ್ದು ಮಾತ್ರ ವಿಪರ್ಯಾಸ. ಇನ್ನೂ ಈ‌ ಕೊಲೆಯಿಂದ ದಾವಣಗೆರೆ ಬೆಚ್ಚಿ‌ ಬಿದ್ದಿದೆ. ಮೇಲಾಗಿ ಪ್ರತಿಕಾರದ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ನಿರಂತರವಾಗಿ ಪೊಲೀಸರು ಆ ಪ್ರದೇಶದಲ್ಲಿ ಕಾವಲು ಮಾಡುತ್ತಿದ್ದಾರೆ.

ವರದಿ: ಬಸವರಾಜ್ ದೊಡ್ಮನಿ

ಇದನ್ನೂ ಓದಿ: ಬಿಗಿ ಉಡುಪು ಧರಿಸಿದ್ದಕ್ಕೆ ಯುವತಿಯ ಹತ್ಯೆ; ಕೊಲೆ ಮಾಡಿದ್ದು ನಾವಲ್ಲ ಎಂದ ತಾಲಿಬಾನ್ ಉಗ್ರರು

ಯೋಗೀಶ್​ ಗೌಡ ಹತ್ಯೆ ಪ್ರಕರಣ: ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದರೂ ಸದ್ಯಕ್ಕೆ ಇಲ್ಲ ರಿಲೀಫ್