ಹುಟ್ಟೂರಿನಲ್ಲಿಯೇ ಎಂಎಲ್​ಸಿ ರವಿಕುಮಾರ್ ವಿರುದ್ಧ ಭುಗಿಲೆದ್ದ ಆಕ್ರೋಶ, ಅನುದಾನ ನೀಡಿದರೂ ಕಾಮಗಾರಿಗಳಾಗುತ್ತಿಲ್ಲ ಎಂದು ತರಾಟೆ

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹುಚ್ಚಂಗಿಪುರದ ಸಣ್ಣ ಹಳ್ಳಿಯ ಶಾಲೆಯನ್ನ ರವಿಕುಮಾರ ದತ್ತು ತೆಗೆದುಕೊಂಡಿದ್ದಾರೆ. ಆದ್ರೆ ಇಲ್ಲಿ ಕೈಗೊಂಡ ಬಹುತೇಕ ಕಾಮಗಾರಿಗಳು ಯಡವಟ್ಟಾಗಿವೆ. ಗುತ್ತಿಗೆದಾರರ ಕಿತಾಪತಿಗೆ ಗ್ರಾಮಸ್ಥರು ರವಿಕುಮಾರ ಮೇಲೆ ಸಿಟ್ಟಾಗುವಂತಾಗಿದೆ.

ಹುಟ್ಟೂರಿನಲ್ಲಿಯೇ ಎಂಎಲ್​ಸಿ ರವಿಕುಮಾರ್ ವಿರುದ್ಧ ಭುಗಿಲೆದ್ದ ಆಕ್ರೋಶ, ಅನುದಾನ ನೀಡಿದರೂ ಕಾಮಗಾರಿಗಳಾಗುತ್ತಿಲ್ಲ ಎಂದು ತರಾಟೆ
ವಿಳಂಬವಾಗುತ್ತಿರುವ ಕಾಮಗಾರಿ
Follow us
ಆಯೇಷಾ ಬಾನು
|

Updated on: Mar 28, 2023 | 9:15 AM

ದಾವಣಗೆರೆ: ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ ಅಂದ್ರೆ ಬಿಜೆಪಿ ಪಕ್ಷದ ಹಾಗೂ ಆರ್​ಎಸ್​ಎಸ್ ಕಟ್ಟಾ ಬೆಂಬಲಿಗರಿಗೆ ಗೌರವ. ಹತ್ತಾರು ವರ್ಷ ಎಬಿವಿಪಿಯಲ್ಲಿ ದುಡಿದ ನಂತರ ಬಿಜೆಪಿಗೆ ಬಂದು ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಜೊತೆಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೂಡಾ ಆಗಿದ್ದಾರೆ. ರವಿಕುಮಾರ ಅವಿವಾಹಿತ. ತಾವು ನಂಬಿದ ಸಿದ್ಧಾಂತಕ್ಕಾಗಿ ದುಡಿಯುವ ನಾಯಕ. ಇಂತಹ ನಾಯಕನ ಹುಟ್ಟೂರಿನಲ್ಲಿ ಆ ನಾಯಕನ ವಿರುದ್ಧವೇ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹುಚ್ಚಂಗಿಪುರದ ಸಣ್ಣ ಹಳ್ಳಿಯ ಶಾಲೆಯನ್ನ ರವಿಕುಮಾರ ದತ್ತು ತೆಗೆದುಕೊಂಡಿದ್ದಾರೆ. ಆದ್ರೆ ಇಲ್ಲಿ ಕೈಗೊಂಡ ಬಹುತೇಕ ಕಾಮಗಾರಿಗಳು ಯಡವಟ್ಟಾಗಿವೆ. ಗುತ್ತಿಗೆದಾರರ ಕಿತಾಪತಿಗೆ ಗ್ರಾಮಸ್ಥರು ರವಿಕುಮಾರ ಮೇಲೆ ಸಿಟ್ಟಾಗುವಂತಾಗಿದೆ.

ರವಿಕುಮಾರ್​ ದತ್ತು ಪಡೆದ ಗ್ರಾಮದಲ್ಲಿ ಕಾಮಗಾರಿ ಆರಂಭವಾಗದೇ ಹಾಳಾಗುತ್ತಿವೆ ಕಟ್ಟಡ ಸಾಮಗ್ರಿ

ಹುಚ್ಚಂಗಿಪುರ, ಅತಿ ಹಿಂದುಳಿದ ಪ್ರದೇಶಕ್ಕೆ ಸೇರಿದ ಗ್ರಾಮ. ಇದು ಬಿಜೆಪಿ ವಿಧಾನ ಪರಿಷತ್ ಸದಸ್ಯ ರವಿ ಕುಮಾರ್ ಹುಟ್ಟೂರು. ಪೂರ್ವಜನರ ಕಾಲದಿಂದ ಇವರ ಮನೆತನಕ್ಕೆ 16 ಎಕರೆ ಜಮೀನು ಇದೆ. ಇದು ಎಲ್ಲ ಮಳೆಯಾಶ್ರಿತ ಪ್ರದೇಶ. ಮೆಕ್ಕೆಜೋಳ, ಶೇಂಗಾ ಸೇರಿದಂತೆ ಕೆಲ ಬೆಳೆಗೆ ಮಾತ್ರ ಸೀಮಿತ. ಗ್ರಾಮಸ್ಥರ ಪ್ರಕಾರ ರವಿಕುಮಾರ್, ಹೈಸ್ಕೂಲ್ ಶಿಕ್ಷಣದ ಬಳಿಕ ಹುಬ್ಬಳ್ಳಿ ಧಾರವಾಡ ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡರು. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಪೂರ್ಣಾವಧಿ ಕಾರ್ಯಕರ್ತರಾಗಿ ಕೆಲ್ಸ ಮಾಡಿದರು. ನಂತರ ಬಿಜೆಪಿಗೆ ಬಡ್ತಿ ಪಡೆದು ಈಗ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಮೇಲಾಗಿ ಪಕ್ಷದ ನೀತಿ ನಿಯಮಗಳ ಸಿದ್ಧತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಇಂತಹ ಪುಟ್ಟ ಗ್ರಾಮದಿಂದ ಹೋದ ರವಿಕುಮಾರಗೆ ತನ್ನ ಗ್ರಾಮದ ಬಗ್ಗೆ ಅಪಾರ ಪ್ರೀತಿ. ಇದೇ ಕಾರಣಕ್ಕೆ ಗ್ರಾಮವನ್ನ ದತ್ತು ತೆಗೆದುಕೊಂಡು ಕೆಲ ಅಭಿವೃದ್ಧಿ ಕಾರ್ಯಗಳನ್ನ ತಮ್ಮ ಅನುದಾನದಲ್ಲಿ ಆರಂಭಿಸಿದರು. ಹೀಗೆ ಕಾಮಗಾರಿ ಆರಂಭಿಸಿ ಬೆಂಗಳೂರು ಮೂಲಕ ಗುತ್ತಿಗೆದಾರನಿಗೆ ವಹಿಸಿ ಹೋದ್ರು. ಆದ್ರೆ ಕಾಮಗಾರಿ ಮಾತ್ರ ವಹಿಸಿದ ಕೆಲ್ಸ ನಿಯತ್ತಾಗಿ ಮಾಡಿಲ್ಲ. ಕೋಟಿ ಕೋಟಿ ಹಣದ ಕಾಮಗಾರಿ ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ ಎಂಎಲ್ ಸಿ ರವಿಕುಮಾರ ವಿರುದ್ಧ ಗ್ರಾಮಸ್ಥ ನಾಗರಾಜ್ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಕೇಸರಿ ಪಡೆಗೆ ಮತ್ತೊಂದು ಶಾಕ್​: ಕಾಂಗ್ರೆಸ್​ನತ್ತ ಮುಖ ಮಾಡಿದ ಬಿಜೆಪಿ ಹಾಲಿ ಶಾಸಕ, ಮಾತುಕತೆ ಫೈನಲ್​

ಮೊದಲು ಒಂದು ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ಆರಂಭಿಸಲಾಗಿತ್ತು. ಇದಾದ ಮೇಲೆ ಇನ್ನಷ್ಟು ಅನುಧಾನ ನೀಡಿ ಶಾಲಾ ಕೊಠಡಿ ನಿರ್ಮಿಸಲು ನಿರ್ಧರಿಸಲಾಗುತ್ತು. ಆದ್ರೆ ಇದೆಲ್ಲಾ ಎಷ್ಟು ಹಣದಲ್ಲಿ ಮಾಡಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಮಾತ್ರ ಸ್ಥಳೀಯರಿಗೆ ಇಲ್ಲಾ. ವಾಸ್ತವದಲ್ಲಿ ಶಾಲೆಗಳ ಕೊಠಡಿಗಳು ಪೂರ್ವವಾಗಿಲ್ಲ. ಇದು ಶುರುವಾಗಿ ಒಂದು ವರ್ಷವಾಗಿದೆ. ಬಹುತೇಕ ಕಾಮಗಾರಿ ಅರ್ಧಕ್ಕೆ ನಿಂತಿದೆ. ಈ ಬಗ್ಗೆ ಸಂಬಂಧಿಸಿದ ಇಂಜಿನಿಯರ್ ಹಾಗೂ ಗುತ್ತಿಗೆದಾರರನ್ನ ಕೇಳಿದ್ರೆ ಎಲ್ಲ ಕಾಮಗಾರಿ ಮುಕ್ತಾಯ ಎನ್ನುತ್ತಿದ್ದಾರೆ ಎಂದು ಶಾಲಾ ಎಸ್​ಡಿಎಂಸಿ ಸದಸ್ಯ ಬಾಲರಾಜ್ ಆರೋಪ ಮಾಡಿದ್ದಾರೆ.

ಹೀಗೆ ಹೋರಾಟದ ಮೂಲಕ ಬದುಕು ರೂಪಿಸಿಕೊಂಡು ಇತರರಿಗೆ ಮಾದರಿಯಾದ ರವಿಕುಮಾರ್ ಅವರು ತನ್ನ ಹುಟ್ಟೂರಿಗೆ ನ್ಯಾಯ ಒದಗಿಸಲು ಆಗುತ್ತಿಲ್ಲ. ನೀಡಿದ ಸರ್ಕಾರದ ಅನುದಾನ ಸದ್ಭಳಕೆ ಆಗಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿಚಾರ ರವಿಕುಮಾರ ಅವರ ಗಮನಕ್ಕೆ ಬಂದಿಲ್ಲ. ಬಂದವರೇ ಅವರು ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ಗ್ರಾಮಸ್ಥರಿಗೆ ಇದೆ. ಹುಟ್ಟೂರನ್ನ ದತ್ತು ಪಡೆದು ಗುತ್ತಿಗೆದಾರರಿಗೆ ಲಾಭ ಮಾಡಿದಂತಾಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಗ್ರಾಮದಲ್ಲಿ ಒಂದು ಮನೆ ಕಟ್ಟಿಸಿದ್ದಾರೆ. ತಾಯಿ ಮತ್ತು ತಮ್ಮ‌ ಆ ಮನೆಯಲ್ಲಿ ಇರುತ್ತಾರೆ.‌ ಪಕ್ಷದ ನಿಷ್ಠಾವಂತ ನಾಯಕನಿಗೆ ತನ್ನೂರಿಗೆ ನ್ಯಾಯ ಕೊಡಿಸಲು ಆಗುತ್ತಿಲ್ಲ. ಬಹುತೇಕ ಸಾಮಗ್ರಿಗಳು ಹಾಳಾಗುತ್ತಿವೆ.‌ ಸಭೆ ಸಮಾರಂಭದಲ್ಲಿ ತನ್ನೂರಿನ ಬಗ್ಗೆ ಹೇಳುವ ರವಿಕುಮಾರ ಅವರಿಗೆ ವಾಸ್ತವ ಸ್ಥಿತಿ ಗೊತ್ತೆ ಆಗಿಲ್ಲ ಎಂಬುದು ದುರಂತ.

ವರದಿ: ಬಸವರಾಜ್ ದೊಡ್ಮನಿ, ಟಿವಿ9 ದಾವಣಗೆರೆ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ