ಚಿನ್ನಾಭರಣವಿದ್ದ ವ್ಯಾನಿಟಿ ಬ್ಯಾಗ್​​ ಆಟೋದಲ್ಲೇ ಬಿಟ್ಟು ಹೋದ ಮಹಿಳೆ, ಆಟೋ ಚಾಲಕ ಏನು ಮಾಡಿದ ಗೊತ್ತಾ?

ಆಟೋ ಪ್ರಯಾಣಿಕ ವೀಣಾ ಅವರು ಸಂಬಂಧಿಕರ ಮದುವೆ ಮುಗಿಸಿಕೊಂಡು ಮಗಳನ್ನ ಹಾಸ್ಟೆಲ್ ಗೆ ಬಿಟ್ಟು ಬರುವಾಗ ಈ ಪ್ರಸಂಗ ನಡೆದಿದೆ. ಇನ್ನು, ದಾವಣಗೆರೆಯ ಭಾಷಾನಗರದ ನಿವಾಸಿ ಮುಕ್ತಿಯಾರ್ ವ್ಯಾನಿಟಿ ಬ್ಯಾಗ್ ವಾಪಸ್ಸು ಮಾಡಿದ ಪ್ರಾಮಾಣಿಕ ಆಟೋ ಚಾಲಕ.

ಚಿನ್ನಾಭರಣವಿದ್ದ ವ್ಯಾನಿಟಿ ಬ್ಯಾಗ್​​ ಆಟೋದಲ್ಲೇ ಬಿಟ್ಟು ಹೋದ ಮಹಿಳೆ, ಆಟೋ ಚಾಲಕ ಏನು ಮಾಡಿದ ಗೊತ್ತಾ?
ಚಿನ್ನಾಭರಣವಿದ್ದ ವ್ಯಾನಿಟಿ ಬ್ಯಾಗ್​​ ಆಟೋದಲ್ಲೇ ಬಿಟ್ಟುಹೋದ ಮಹಿಳೆ, ಆಮೇಲೆ?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Dec 22, 2023 | 4:24 PM

ದಾವಣಗೆರೆ: ಮಹಿಳಾ ಪ್ರಯಾಣಿಕರೊಬ್ಬರು ಆಟೋ ರಿಕ್ಷಾದಿಂದದ ಇಳಿಯುವಾಗ ಗಡಿಬಿಡಿಯಲ್ಲಿ ಮರೆತು ವ್ಯಾನಿಟಿ ಬ್ಯಾಗ್ ಬಿಟ್ಟು ಇಳಿದುಹೋಗಿದ್ದರು. ಆದರೆ ಆ ಆಟೋ ರಿಕ್ಷಾ ಚಾಲಕ ಸ್ವಯಂ ಪ್ರೇರಿತವಾಗಿ ಪೊಲೀಸ್ ಠಾಣೆಗೆ ತೆರಳಿ, ತನ್ನ ಆಟೋದಲ್ಲಿ ಸಂಚರಿಸಿದ ಮಹಿಳಾ ಪ್ರಯಾಣಿಕರೊಬ್ಬರು ತಮ್ಮ ಬ್ಯಾಗ್ ಬಿಟ್ಟು ಹೋಗಿದ್ದಾರೆ. ತಗೊಳೀ ಇದೇ ಬ್ಯಾಗ್. ಅದನ್ನ ಮಹಿಳೆಗೆ ಮರಳಿಸಿಬಿಡಿ ಎಂದು ಪೊಲೀಸರ ಎದುರು ವೃತ್ತಾಂತ ಹೇಳಿದ್ದಾರೆ. ಅಂದಹಾಗೆ, ಸದರಿ ಮಹಿಳೆಯು ದಾವಣಗೆರೆ ನಗರದ ರಾಮಂಡ ಕೋ ಸರ್ಕಲ್ ಬಳಿ ಆಟೋದಲ್ಲಿ ಬ್ಯಾಗ್ ಬಿಟ್ಟು ಇಳಿದಿದ್ದರು.

ಆಟೋ ಚಾಲಕನ ಪ್ರಾಮಾಣಿಕತೆಗೆ ಮೆಚ್ಚಿದ ಪೊಲೀಸರು ಸದರಿ ಮಹಿಳೆಯನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಈ ಮಧ್ಯೆ ಬ್ಯಾಗ್ ನಲ್ಲಿ ಚಿನ್ನ, ನಗದು ಹಣ ಹಾಗೂ ಕೆಲ ದಾಖಲೆಗಳಿರುವುದನ್ನು ಗಮನಿಸಿದ್ದಾರೆ. ಆಟೋ ರಿಕ್ಷಾದಲ್ಲಿ ತಮ್ಮ ಅಮೂಲ್ಯ ಬ್ಯಾಗ್ ಬಿಟ್ಟು ಇಳಿದುಹೋಗಿರುವ ಮಹಿಳೆ ಚನ್ನರಾಯಪಟ್ಟಣದ ನಿವಾಸಿಯಾಗಿದ್ದು ವೀಣಾ ಎಂಬುದು ಅವರ ಹೆಸರು.‌

ಆಟೋ ಪ್ರಯಾಣಿಕ ವೀಣಾ ಅವರು ಸಂಬಂಧಿಕರ ಮದುವೆ ಮುಗಿಸಿಕೊಂಡು ಮಗಳನ್ನ ಹಾಸ್ಟೆಲ್ ಗೆ ಬಿಟ್ಟು ಬರುವಾಗ ಈ ಪ್ರಸಂಗ ನಡೆದಿದೆ. ಇನ್ನು, ದಾವಣಗೆರೆಯ ಭಾಷಾನಗರದ ನಿವಾಸಿ ಮುಕ್ತಿಯಾರ್ ವ್ಯಾನಿಟಿ ಬ್ಯಾಗ್ ವಾಪಸ್ಸು ಮಾಡಿದ ಪ್ರಾಮಾಣಿಕ ಆಟೋ ಚಾಲಕ. ಆಟೋ ಚಾಲಕ ಮುಕ್ತಿಯಾರ್ ಅವರು ಬಸವನಗರ ಪೊಲೀಸ್ ಠಾಣೆಯ ಇನ್ಸ್​​ಪೆಕ್ಟರ್​​​​ ಗುರುಬಸವ ಸಮ್ಮುಖದಲ್ಲಿ ಪ್ರಯಾಣಿಕರಾದ ವೀಣಾಗೆ ಬ್ಯಾಗ್ ವಾಪಸ್ಸು ಮಾಡಿದ್ದಾರೆ. ಇದೇ ವೇಳೆ ದಾವಣಗೆರೆ ಪೊಲೀಸ್ ಸಿಬ್ಬಂದಿ ಆಟೋ ಚಾಲಕ ಮುಕ್ತಿಯಾರ್ ಗೆ ಸನ್ಮಾನ ಮಾಡಿದ್ದಾರೆ.

ಥಾಣೆ: ಪೊಲೀಸರ ನೆರವಿನಿಂದ ಮಹಿಳೆಯ 4 ಲಕ್ಷ ರೂ ವಸ್ತುಗಳ ಹಿಂದಿರುಗಿಸಿದ ಆಟೋ ಚಾಲಕ

ತನ್ನ ಆಟೋ ರಿಕ್ಷಾದಲ್ಲಿ ಬ್ಯಾಗ್ ಮರೆತು ಹೋಗಿದ್ದ ಮಹಿಳೆಯೊಬ್ಬರ ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ ಅನ್ನು ಪೊಲೀಸರ ನೆರವಿನೊಂದಿಗೆ ವಾಪಸ್ ನೀಡಿದ ರಿಕ್ಷಾ ಚಾಲಕನೊಬ್ಬ ಪ್ರಾಮಾಣಿಕತೆ ಮೆರೆದಿದ್ದಾನೆ. ಥಾಣೆಯ ಕಲ್ಯಾಣದಲ್ಲಿ (Chikan Ghar, Kalyan West, Thane) ಈ ಪ್ರಸಂಗ ಬೆಳಕಿಗೆ ಬಂದಿದೆ.

Auto driver return valuables of Rs 4 lakh of woman with help of police in Kalyan

ರಿಕ್ಷಾ ಚಾಲಕ ಮೋಹನ್ ರಾಥೋಡ್ ಅವರನ್ನು ಥಾಣೆಯ ಮಹಾತ್ಮ ಫುಲೆ ಪೊಲೀಸರು ಸನ್ಮಾನಿಸಿದರು. ಬ್ಯಾಗ್​ ಕಳೆದುಕೊಂಡಿದ್ದ ಮಹಿಳೆಯು ರಿಕ್ಷಾ ಚಾಲಕ ಮತ್ತು ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ. ಥಾಣೆ ನಿವಾಸಿ ನಮ್ರತಾ ದೇಶಮುಖ್ ಮದುವೆ ಸಮಾರಂಭಕ್ಕೆ ಮುರ್ಬಾದ್‌ಗೆ ಹೋಗುತ್ತಿದ್ದರು. ಅದಕ್ಕೂ ಮುನ್ನ ಆಕೆ ತನ್ನ ಸಂಬಂಧಿಕರನ್ನು ಭೇಟಿಯಾಗಲು ಕಲ್ಯಾಣ್ ವೆಸ್ಟ್‌ನ ಚಿಕನ್‌ಘರ್ ಪ್ರದೇಶಕ್ಕೆ ಹೋಗುತ್ತಿದ್ದರು.

ಕಲ್ಯಾಣ್ ರೈಲ್ವೇ ನಿಲ್ದಾಣದಲ್ಲಿ ಲೋಕಲ್‌ನಿಂದ ಇಳಿದ ನಂತರ ನಮ್ರತಾ ಚಿಕನ್‌ಘರ್‌ಗೆ ರಿಕ್ಷಾವನ್ನು ತೆಗೆದುಕೊಂಡು ರಿಕ್ಷಾದ ಹಿಂದಿನ ಸೀಟಿನಲ್ಲಿ ಮೂರು ಬ್ಯಾಗ್‌ಗಳಲ್ಲಿ ಒಂದನ್ನು ಇಟ್ಟಿದ್ದರು. ಚಿಕನ್​​​ಘರ್ ತಲುಪಿದ ನಂತರ ನಮ್ರತಾ ಎರಡು ಚೀಲಗಳೊಂದಿಗೆ ಇಳಿದಿದ್ದಾರೆ. ತಮ್ಮ ಆಭರಣದ ಬ್ಯಾಗ್ ರಿಕ್ಷಾದಲ್ಲಿ ಮರೆತು ಹೋಗಿರುವುದು ಆಕೆಗೆ ನಂತರ ಅರಿವಿಗೆ ಬಂದಿದೆ. ತಕ್ಷಣ ಮಹಾತ್ಮ ಫುಲೆ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಿದ್ದಾರೆ.

ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಶೈಲೇಶ್ ಸಾಲ್ವಿ ಅವರು ಸಿಸಿಟಿವಿಯನ್ನು ಪರಿಶೀಲಿಸುವಂತೆ ತಂಡಕ್ಕೆ ಸೂಚಿಸಿದ್ದಾರೆ. ಅದರಿಂದ ಅವರಿಗೆ ರಿಕ್ಷಾದ ಸಂಖ್ಯೆ ಪತ್ತೆಯಾಗಿದೆ. ರಿಕ್ಷಾ ಚಾಲಕನನ್ನು ಸಂಪರ್ಕಿಸಿದಾಗ ರಿಕ್ಷಾ ಚಾಲಕ ಮೋಹನ್ ರಾಥೋಡ್ ಸದರಿ ಬ್ಯಾಗ್ ರಿಕ್ಷಾದಲ್ಲಿಯೇ ಇದೆ. ಬ್ಯಾಗ್ ಹಿಂತಿರುಗಿಸಲು ಮಹಿಳೆಯನ್ನು ಹುಡುಕುತ್ತಿದ್ದೇನೆ ಎಂದು ಪ್ರಾಮಾಣಿಕವಾಗಿ ಪೊಲೀಸರಿಗೆ ಹೇಳಿದ್ದಾನೆ. ಅದರಂತೆ ಠಾಣೆಗೆ ಬಂದು ವಾಪಸ್ ಮಾಡಿದ್ದಾನೆ ಎಂದು timesofindia.indiatimes.com ವರದಿ ಮಾಡಿದೆ.

ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ