ಶಾಸಕರಿಗಾಗಿ ಚರ್ಚಿಸಲು ಭವನ ಸ್ಥಾಪನೆಗೆ ಚಿಂತನೆ: ಯುಟಿ ಖಾದರ್

ದೆಹಲಿಯಲ್ಲಿ ಶಾಸಕರಿಗೆ ಕಾನ್​ಸ್ಟಿಟ್ಯೂಷನ್ ಕ್ಲಬ್, ಐಎಎಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳಿಗೂ ಕ್ಲಬ್ ಇರುವಂತೆ ಕರ್ನಾಟಕದ ಶಾಸಕರಿಗೆ ಚರ್ಚೆ ನಡೆಸಲು ಒಂದು ಕಟ್ಟಡ ಬೇಕಾಗಿದೆ ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ. ಅಲ್ಲದೆ, ಬಾಲಬ್ರೂಯಿ ಒಂದು ಇತಿಹಾಸ ಉಳ್ಳ ಪ್ರಸಿದ್ಧವಾದ ಕಟ್ಟಡವಾಗಿದ್ದು, ಇದಕ್ಕೆ ಯಾವುದೇ ಹನಿ ಮಾಡದೆ ವಿಧಾನಮಂಡಲ ಸಂಸ್ಥೆ ಸ್ಥಾಪಿಸಲಾಗುವುದು ಎಂದರು.

ಶಾಸಕರಿಗಾಗಿ ಚರ್ಚಿಸಲು ಭವನ ಸ್ಥಾಪನೆಗೆ ಚಿಂತನೆ: ಯುಟಿ ಖಾದರ್
ಯುಟಿ ಖಾದರ್
Follow us
Anil Kalkere
| Updated By: Rakesh Nayak Manchi

Updated on: Jan 29, 2024 | 9:36 PM

ಬೆಂಗಳೂರು, ಜ.29: ಶಾಸಕರು ಒಂದೆಡೆ ಕುಳಿತುಕೊಂಡು ಚರ್ಚೆ ಮಾಡಲು ಒಂದು ಕಟ್ಟಡ ಬೇಕಾಗಿದ್ದು, ಇದಕ್ಕಾಗಿ ಭವನ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ (UT Khader) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಾಲಬ್ರೂಯಿ ಒಂದು ಇತಿಹಾಸ ಉಳ್ಳ ಪ್ರಸಿದ್ಧವಾದ ಕಟ್ಟಡವಾಗಿದ್ದು, ಇದಕ್ಕೆ ಯಾವುದೇ ಹನಿ ಮಾಡದೆ ವಿಧಾನಮಂಡಲ ಸಂಸ್ಥೆ ಸ್ಥಾಪಿಸಲಾಗುವುದು ಎಂದರು.

ಶಾಸಕರು ಎಲ್ಲೋ ಒಂದು ಕಡೆ ಕುಳಿತು ಚರ್ಚೆ ಮಾಡಲು ಆಗಲ್ಲ. ಶಾಸಕರು ಒಂದು ಕುಳಿತು ಚರ್ಚೆಮಾಡಲು ಸಂಸ್ಥೆಯ ಅಗತ್ಯವಿದೆ. ಪಾರ್ಲಿಮೆಂಟ್ ಸದಸ್ಯರಿಗೆ ಕಾನ್​ಸ್ಟಿಟ್ಯೂಷನ್ ಕ್ಲಬ್ ಅಂತಿದೆ. ದೆಹಲಿಯಲ್ಲಿ ಶಾಸಕರಿಗೆ ಕಾನ್​ಸ್ಟಿಟ್ಯೂಷನ್ ಕ್ಲಬ್ ಇದೆ. ಐಎಎಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳಿಗೂ ಕ್ಲಬ್ ಇದೆ ಎಂದರು.

ಇದನ್ನೂ ಓದಿ: ಕೆರಗೋಡು ಹನುಮ ಧ್ವಜ ಗಲಭೆ ಪ್ರಕರಣ: ನಮ್ಮ ಇಂಟಲಿಜೆನ್ಸಿ ಫೇಲಾಗಿದೆ ಎಂದು ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್

ಶಾಸಕರು ಚರ್ಚೆಮಾಡಲು ಜಾಗಬೇಕೆನ್ನುವುದು ಬಹುದಿನದ ಬೇಡಿಕೆಯಾಗಿದೆ. ಬಾಲಬ್ರೂಯಿ ಕಟ್ಟಡದ ಬಳಿ ನಿರ್ಮಾಣಕ್ಕೆ ಚಿಂತಿಸಲಾಗಿದೆ. ಒಂದು ಇತಿಹಾಸ ಉಳ್ಳ ಪ್ರಸಿದ್ಧವಾದ ಬಾಲಬ್ರೂಯಿ ಕಟ್ಟಡಕ್ಕೆ ಯಾವುದೇ ಹನಿಯಾಗದಂತೆ ನೋಡಿಕೊಂಡು ಭವನ ನಿರ್ಮಾಣಕ್ಕೆ ಚಿಂತಿಸಲಾಗಿದೆ. ಶಾಸಕರೇ ಮಾಡುವುದಾಗಿ ತೀರ್ಮಾನ ಮಾಡುತ್ತಿದ್ದೇವೆ ಎಂದರು.

ಸಾರ್ವಜನಿಕವಾಗಿ ಅಥವಾ ಹೋಟೆಲ್​ನಲ್ಲಿ ಕುಳಿತುಕೊಂಡು ಚರ್ಚೆ ಮಾಡಲು ಆಗಲ್ಲ. ಹೀಗಾಗಿ ಶಾಸಕರು ಚರ್ಚೆ ಮಾಡಲೆಂದೇ ಈ ಭವನ ನಿರ್ಮಾಣ ಮಾಡಲಾಗುತ್ತಿದ್ದು, ಸಾರ್ವಜನಿಕರಿಗೆ ಇಲ್ಲಿ ಪ್ರವೇಶ ಇರುವುದಿಲ್ಲ. ಹಣ ಎಷ್ಟು ಖರ್ಚು ಆಗುತ್ತೆ ಅಂತ ಗೊತ್ತಿಲ್ಲ. ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ