ಗ್ರೀನ್ ಪಟಾಕಿ ತುಂಬಾ ಸೇಫ್ ಅಂದುಕೊಂಡಿದ್ದೀರಾ? ಟಿವಿ9 ಬಯಲು ಮಾಡುತ್ತಿದೆ ಹಸಿರು ಪಟಾಕಿಯ ಭಯಾನಕ ಸತ್ಯ!

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪಟಾಕಿ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಆದರೆ ಗ್ರೀನ್ ಪಟಾಕಿ ಹೊಡೆಯಲು ಅವಕಾಶ ನೀಡಿದೆ. ಹೀಗಾಗಿ ಮಾಧ್ಯಮಗಳು ಗ್ರೀನ್ ಪಟಾಕಿಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿವೆ. ಸದ್ಯ ಇದೀಗ ಗ್ರೀನ್ ಪಟಾಕಿಯಿಂದಲೂ ಮಹಾ ಕಂಟಕ ಎದುರಾಗಲಿದೆ ಎಂಬುವ ಸತ್ಯ ಬಯಲಾಗಿದೆ. ಬಾಲ್ಯದಲ್ಲಿ ಅಪ್ಪ ಕೊಡಿಸುತ್ತಿದ್ದ ಪಟಾಕಿಗಳು ಮಕ್ಕಳಿಗೆ ಸಂತೋಷವನ್ನು ಹೆಚ್ಚಿಸುತ್ತಿದ್ದವು. ಆದರೆ ಈಗ ಎಲ್ಲವೂ ಕಳಪೆಯಾಗಿವೆ. ಬೆಳಕಿನ ಹಬ್ಬ ಜೀವನದಲ್ಲಿ ಕತ್ತಲನ್ನ ಆವರಿಸುವಂತೆ ಮಾಡಬಹುದು. ಗ್ರೀನ್ ಪಟಾಕಿ ಕೂಡ […]

ಗ್ರೀನ್ ಪಟಾಕಿ ತುಂಬಾ ಸೇಫ್ ಅಂದುಕೊಂಡಿದ್ದೀರಾ? ಟಿವಿ9 ಬಯಲು ಮಾಡುತ್ತಿದೆ ಹಸಿರು ಪಟಾಕಿಯ ಭಯಾನಕ ಸತ್ಯ!

Updated on: Nov 14, 2020 | 10:24 AM

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪಟಾಕಿ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಆದರೆ ಗ್ರೀನ್ ಪಟಾಕಿ ಹೊಡೆಯಲು ಅವಕಾಶ ನೀಡಿದೆ. ಹೀಗಾಗಿ ಮಾಧ್ಯಮಗಳು ಗ್ರೀನ್ ಪಟಾಕಿಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿವೆ. ಸದ್ಯ ಇದೀಗ ಗ್ರೀನ್ ಪಟಾಕಿಯಿಂದಲೂ ಮಹಾ ಕಂಟಕ ಎದುರಾಗಲಿದೆ ಎಂಬುವ ಸತ್ಯ ಬಯಲಾಗಿದೆ.

ಬಾಲ್ಯದಲ್ಲಿ ಅಪ್ಪ ಕೊಡಿಸುತ್ತಿದ್ದ ಪಟಾಕಿಗಳು ಮಕ್ಕಳಿಗೆ ಸಂತೋಷವನ್ನು ಹೆಚ್ಚಿಸುತ್ತಿದ್ದವು. ಆದರೆ ಈಗ ಎಲ್ಲವೂ ಕಳಪೆಯಾಗಿವೆ. ಬೆಳಕಿನ ಹಬ್ಬ ಜೀವನದಲ್ಲಿ ಕತ್ತಲನ್ನ ಆವರಿಸುವಂತೆ ಮಾಡಬಹುದು. ಗ್ರೀನ್ ಪಟಾಕಿ ಕೂಡ ಡೇಂಜರ್ ಅಂತೆ. ಲ್ಯಾಬ್ ಟೆಸ್ಟ್​ನಲ್ಲಿ ಸ್ಫೋಟಕ ಸತ್ಯ ಬಯಲಾಗಿದೆ. ಬೆಳಕಿನ ಹಬ್ಬಕ್ಕೆ ಪಟಾಕಿ ಬೇಕು ಅನ್ನೋರಿಗೆ ಶಾಕಿಂಗ್ ನ್ಯೂಸ್. ಗ್ರೀನ್ ಪಟಾಕಿಯಿಂದಲೂ ಜನರ ಉಸಿರು ನಿಲ್ಲುತ್ತಂತೆ. ಈ ಎಲ್ಲಾ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ..

ಹಸಿರು ಪಟಾಕಿಯಿಂದ ಆಗುವ ಅನಾಹುತಗಳೇನು?
ಹಸಿರು ಪಟಾಕಿಯಿಂದ ಮನುಷ್ಯನ ದೇಹದ ಮೇಲೆ ದುಷ್ಪರಿಣಾಮಗಳಾಗುತ್ತವೆಯಂತೆ. ಗ್ರೀನ್ ಪಟಾಕಿಯಲ್ಲಿ ಇರಬಾರದ ವಿಷಯುಕ್ತ ಕೆಮಿಕಲ್ಸ್ ಹೆಚ್ಚಿವೆಯಂತೆ. ಗ್ರೀನ್ ಪಟಾಕಿಯಿಂದ ಮನುಷ್ಯನ ನರಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗೂ ಶ್ವಾಸಕೋಶಕ್ಕೆ ತೊಂದರೆಯಾಗಿ ಅಸ್ತಮಾ ರೋಗಿಗಳು ಹೆಚ್ಚಾಗ್ತಾರಂತೆ.

ಸರ್ಕಾರ ಹೇಳ್ತಿರೋ ಗ್ರೀನ್ ಪಟಾಕಿ ಅಸಲಿಯತ್ತು ಏನು ಗೊತ್ತಾ?
ಇಷ್ಟು ದಿನ ಸರ್ಕಾರ ಬಿಲ್ಡಪ್ ಕೊಟ್ಟಿರೋದು ಇದೇ ಪಟಾಕಿ ಬಗ್ಗೆ ಹಸಿರು ಪಟಾಕಿ ಮಾಲಿನ್ಯ ಮುಕ್ತ ಅಂತಾ ಹೇಳಲಾಗುತ್ತೆ. ಆದ್ರೆ ಗ್ರೀನ್ ಪಟಾಕಿಗಳನ್ನ ಟೆಸ್ಟ್ ಮಾಡಿಸಿದಾಗ ಅಸಲಿಯತ್ತು ಬಯಲಾಗಿದೆ. ಗ್ರೀನ್ ಪಟಾಕಿಗಳಲ್ಲೂ ಭಾರಿ ವಿಷಯುಕ್ತ ಕೆಮಿಕಲ್ ಅಂಶಗಳು ಇರುವುದು ಪತ್ತೆಯಾಗಿವೆ. ಗ್ರೀನ್ ಪಟಾಕಿಯಲ್ಲಿರೋ ಆ ಕೆಮಿಕಲ್​ಗಳು ಜನರ ಉಸಿರನ್ನೇ ನಿಲ್ಲಿಸುತ್ತೆ. ದೇಹದ ಒಂದೊಂದೇ ಅಂಗಾಗಳನ್ನ ಕೊಂದುಬಿಡುತ್ತೆ. ಇಂಥಾ ಭಯಾನಕ ಕೆಮಿಕಲ್ ಅಂಶಗಳಿರುವ ಗ್ರೀನ್ ಪಟಾಕಿಗಳಿಂದ ಜೀವಕ್ಕೆ ಕುತ್ತು ಪಕ್ಕಾ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಗ್ರೀನ್ ಪಟಾಕಿಯಲ್ಲಿರುವಂಥಾ ಭಯಾನಕ ರಾಸಾಯನಿಕ ಯಾವುದು?
ಗ್ರೀನ್ ಪಟಾಕಿಯಲ್ಲಿ 20 ರಿಂದ 25 ರೀತಿಯ ರಾಸಾಯನಿಕಗಳನ್ನು ಬಳಸಲಾಗುತ್ತೆ. ಆ ಕೆಮಿಕಲ್ಸ್ ದೇಹವನ್ನೇ ನಾಶ ಮಾಡುವಷ್ಟು ಡೇಂಜರಸ್. ಗ್ರೀನ್ ಪಟಾಕಿಯಲ್ಲಿ ನಿಗದಿತ ಪ್ರಮಾಣಕ್ಕಿಂತ 10 ಪಟ್ಟು ಜಾಸ್ತಿ ರಾಸಾಯನಿಕ ಕಣಗಳಿವೆ. ತುಂಬಾ ಡೇಂಜರಸ್ ಆಗಿರುವ ಅಲ್ಯುಮಿನಿಯಂ, ಬೇರಿಯಂ ಕ್ರೋಮಿಯಂ, ಗ್ಯಾಲಿಯಂ, ಲೆಡ್, ಮೆಗ್ನಿಷಿಯಂ, ಮ್ಯಾಂಗನೀಸ್, ನಿಕ್ಕೇಲ್, ಜಿಂಕ್, ಲೆಡ್, ವೆನಾಡಿಯಂನಂಥಾ ಕೆಮಿಕಲ್ಸ್​ಗಳನ್ನ ಬಳಸಲಾಗುತ್ತೆ. ಈ ಕೆಮಿಕಲ್ಸ್​ನಿಂದ 60 ವರ್ಷ ಬದುಕೋ ವ್ಯಕ್ತಿ 30 ವರ್ಷಕ್ಕೆ ಸಾಯಬಹುದು. ಕೆಮಿಕಲ್ಸ್ ದೇಹ ಸೇರಿದ್ರೆ ಶ್ವಾಸಕೋಶ ಢಮಾರ್ ಆಗುತ್ತೆ. ದೇಹದ ಒಂದೊಂದು ಪಾರ್ಟ್​ಗೂ ಡ್ಯಾಮೇಜ್ ಫಿಕ್ಸ್. ಇವು ಹೆಚ್ಚು ಟಾಕ್ಸಿಕ್ ಉತ್ಪತ್ತಿ ಮಾಡುವ ಡೇಂಜರಸ್ ಕೆಮಿಕಲ್ಸ್ ಎಂದು ತಜ್ಞರು ತಿಳಿಸಿದ್ದಾರೆ.

ಪಟಾಕಿಯಲ್ಲಿರೋ ಬೇರಿಯಂ ಕೆಮಿಕಲ್​ನಿಂದ ಏನಾಗುತ್ತೆ ಗೊತ್ತಾ?
ಗ್ರೀನ್ ಪಟಾಕಿಯ ಒಂದೊಂದು ಕೆಮಿಕಲ್ ದೇಹದ ಮೂಲೆ ಮೂಲೆಗೂ ಅಪಾಯ ತಂದೊಡ್ಡುತ್ತೆ. ಪಟಾಕಿಯಲ್ಲಿರೋ ಬೇರಿಯಂ ಕೆಮಿಕಲ್​ನಿಂದ ಹತ್ತಾರು ಆರೋಗ್ಯ ಸಮಸ್ಯೆಗಳಾಗುತ್ತವೆ. ಆ ಕೆಮಿಕಲ್ ದೇಹಕ್ಕೆ ಸೇರಿದ್ರೆ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತೆ. ಕಿಡ್ನಿ ಡ್ಯಾಮೇಜ್ ಕೂಡ ಆಗಬಹುದು. ಬೇರಿಯಂ ದೇಹಕ್ಕೆ ಸೇರಿದ್ರೆ ಲಿವರ್ ಕೂಡಾ ಸರಿಯಾಗಿ ವರ್ಕ್ ಆಗಲ್ಲ. ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು ಉಸಿರಾಟಕ್ಕೆ ಸಮಸ್ಯೆಯಾಗುತ್ತೆ.

ಇನ್ನು ಗ್ರೀನ್ ಪಟಾಕಿಯಲ್ಲಿರುವ ಅಲ್ಯುಮಿನಿಯಂ ನರಗಳ ಮೇಲೆ ದುಷ್ಪರಿಣಾಮ ಬೀರುತ್ತೆ. ನರಗಳು ಡ್ಯಾಮೇಜ್ ಆಗಿ ಮೂರ್ಛೆ ತಪ್ಪಿ ಹೋಗುವ ಕಾಯಿಲೆ ಬರುತ್ತೆ. ನೆನಪಿನ ಶಕ್ತಿ ಕಡಿಮೆಯಾಗುತ್ತೆ, ನಡುಕವುಂಟಾಗುತ್ತೆ ಅಲ್ಯೂಮಿನಿಯಂನಿಂದಾಗಿ ಸ್ಟ್ರೋಕ್ ಹೊಡೆಯುತ್ತೆ.

ಕ್ರೋಮಿಯಂ ಬೀರುವ ದುಷ್ಪರಿಣಾಮಗಳು ಯಾವುವು?
ಕ್ರೋಮಿಯಂನಿಂದ ದೇಹದ ಅಂಗಾಂಗಳ ಮೇಲೆ ಹೆಚ್ಚಿನ ಎಫೆಕ್ಟ್ ಆಗುತ್ತೆ. ಅಸ್ತಮಾ, ಚರ್ಮರೋಗ, ಲಿವರ್, ಕಿಡ್ನಿ, ಶ್ವಾಸಕೋಶ ಡ್ಯಾಮೇಜ್ ಆಗುವ ಸಾಧ್ಯತೆ ಹೆಚ್ಚಿರುತ್ತೆ.

Published On - 9:20 am, Sat, 14 November 20