AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಳು ಕೊಡುತ್ತೇನೆಂದ 71 ವರ್ಷದ ನಿವೃತ್ತ ನೌಕರ: ನಾಗ್ಪುರದಿಂದ ಹುಬ್ಬಳ್ಳಿಗೆ ಮಹಿಳೆ: ಮುಂದೇನಾಯ್ತು..!

ಕೆಲವೊಮ್ಮೆ ನಮ್ಮ ಊಹೆಗೂ ಮೀರಿದ ವಿಚಿತ್ರ ಘಟನೆಗಳು ನಡೆಯುತ್ತಿರುತ್ತದೆ. 70 ವರ್ಷದ ಶ್ರೀಮಂತ ವ್ಯಕ್ತಿಯ ಜೊತೆಗೆ 21 ರ ಯುವತಿ ಮದುವೆ, ತಂದೆಯೇ ಮಗಳನ್ನು ಮದುವೆಯಾಗುವ ಪದ್ದತಿ ಸೇರಿದಂತೆ ಅನೇಕ ಚಿತ್ರ ವಿಚಿತ್ರ ಸನ್ನಿವೇಷಗಳು ಜರುಗುತ್ತವೆ. ಅದರಂತೆ ಇದೀಗ ‘ನಾಗ್ಪುರ ಮಹಿಳೆಗೆ ಮೋಸ ಮಾಡಿದ 71 ವರ್ಷದ ನಿವೃತ್ತ ನೌಕರನಿಗೆ ಧರ್ಮದೇಟು ಕೊಟ್ಟ ಘಟನೆ ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ. ಈ ಕುರಿತು ಒಂದು ವರದಿ ಇಲ್ಲಿದೆ.

ಬಾಳು ಕೊಡುತ್ತೇನೆಂದ 71 ವರ್ಷದ ನಿವೃತ್ತ ನೌಕರ: ನಾಗ್ಪುರದಿಂದ ಹುಬ್ಬಳ್ಳಿಗೆ ಮಹಿಳೆ:  ಮುಂದೇನಾಯ್ತು..!
ನಿವೃತ್ತ ರೈಲ್ವೆ ನೌಕರ ರಾಮಯ್ಯ, ರಾಧಿಕಾ
ಶಿವಕುಮಾರ್ ಪತ್ತಾರ್
| Edited By: |

Updated on: Oct 10, 2024 | 7:24 PM

Share

ಹುಬ್ಬಳ್ಳಿ, ಅ.10: ಹಲವು ಊಹೆಗೂ ಮೀರಿದ ವಿಚಿತ್ರ, ವಿಶೇಷ ಘಟನೆಗಳು ನಡೆಯುತ್ತಿರುತ್ತದೆ. 70 ವರ್ಷದ ಶ್ರೀಮಂತ ವ್ಯಕ್ತಿಯ ಜೊತೆಗೆ 21 ರ ಯುವತಿ ಮದುವೆ, ತಂದೆಯೇ ಮಗಳನ್ನು ಮದುವೆಯಾಗುವ ಪದ್ದತಿ ಸೇರಿದಂತೆ ಅನೇಕ ಚಿತ್ರ ವಿಚಿತ್ರ ಸನ್ನಿವೇಷಗಳು ಜರುಗುತ್ತವೆ. ಅದರಂತೆ ಇದೀಗ ‘ನನಗೆ ಡಿವೋರ್ಸ್ ಆಗಿದೆ ಎಂದು ನಂಬಿಸಿ ಮಹಿಳೆಗೆ ಮೋಸ ಮಾಡಿದ 71 ವರ್ಷದ ನಿವೃತ್ತ ನೌಕರನಿಗೆ ಧರ್ಮದೇಟು ಕೊಟ್ಟ ಘಟನೆ ಹುಬ್ಬಳ್ಳಿ(Hubli)ಯ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ.

ಮಹಿಳೆಗೆ ನಂಬಿಸಿ ಹಣ ದೋಚಿದ 71 ವರ್ಷದ ನಿವೃತ್ತ ನೌಕರ

ಹೌದು, ನಾಗ್ಪುರ ಮೂಲದ ರಾಧಿಕಾ ಎಂಬ ಮಹಿಳೆಗೆ ನಂಬಿಸಿ ಮೋಸ ಮಾಡಿದ ನಿವೃತ್ತ ರೈಲ್ವೆ ನೌಕರ ರಾಮಯ್ಯ ಎಂಬಾತನಿಗೆ ಧರ್ಮದೇಟು ಕೊಡಲಾಗಿದೆ. ‘ನನಗೆ ಡಿವೋರ್ಸ್ ಆಗಿದೆ, ನಿನಗೆ ಬಾಳು ಕೊಡುತ್ತೇನೆ ಎಂದು ರಾಧಿಕಾಳಿಗೆ ನಿವೃತ್ತ ನೌಕರ ಚನಂಬಿಸಿದ್ದ. ಬಳಿಕ ಆಕೆಯಿಂದ ಹಣವನ್ನು ದೋಚಿದ್ದಾನೆ. ಹೀಗಾಗಿ ಇಂದು ನಾಗ್ಪುರದಿಂದ  ಹುಬ್ಬಳ್ಳಿಗೆ ಬಂದಿದ್ದ ರಾಧಿಕಾ ಬಳಿ ಮತ್ತೆ ಹಣ ಕೇಳಿದ್ದಾನೆ. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಮಹಿಳೆ ರಾಮಯ್ಯನಿಗೆ ನಡು ರಸ್ತೆಯಲ್ಲಿಯೇ ಧರ್ಮದೇಟು ನೀಡಿದ್ದಾಳೆ. ಬಳಿಕ ಆತನನ್ನು ಕರೆದುಕೊಂಡು ಹೋಗಿ ಹುಬ್ಬಳ್ಳಿ ಉಪನಗರ ಪೊಲೀಸರಿಗೆ ಒಪ್ಪಿಸಿದ್ದಾಳೆ.

ಇದನ್ನೂಓದಿ:ಲವ್,ಸೆಕ್ಸ್,ದೋಖಾ: ಗಂಡ ಬಿಟ್ಟಿದ್ದ ಮಹಿಳೆಗೆ ಬಾಳು ಕೊಡ್ತೀನಿ ಎಂದು ಕಾರು ಚಾಲಕನಿಂದ ಮೋಸ

ಇಬ್ಬರು ಪರಿಚಯವಾಗಿದ್ದೇಗೆ?

ಇನ್ನು ಇಬ್ಬರ ನಡುವೆ ಪರಿಚಯ ಹೇಗೆ ಆಯಿತು ನೋಡುವುದಾದರೆ, ‘ಮಹಿಳೆ ರಾಧಿಕಾಗೆ ಹುಬ್ಬಳ್ಳಿಯಲ್ಲಿ ಪರಿಚಯಸ್ಥರು ಇರುತ್ತಾರೆ. ಹೀಗಾಗಿ ಅವಾಗವಾಗ ರಾಧಿಕಾ ಅವರು ನಾಗ್ಪುರದಿಂದ ಹುಬ್ಬಳ್ಳಿಗೆ ಆಗಮಿಸಿ, ಕೆಲದಿನಗಳ ಕಾಲ ಇಲ್ಲಿಯೇ ವಾಸ್ತವ್ಯ ಹೂಡಿ ಹೋಗುತ್ತಿರುತ್ತಾರೆ. ಈ ವೇಳೆ ಹುಬ್ಬಳ್ಳಿಯ ರಾಧಿಕಾ ಪರಿಚಯಸ್ಥರ ಮನೆಗೆ ನಾಗ್ಪುರ ಕೂಡ ಆಗಮಿಸಿರುತ್ತಾನೆ. ಈ ವೇಳೆ ಇಬ್ಬರಿಗೂ ಪರಿಚಯವಾಗಿ, ಕೆಲ ದಿನಗಳ ನಂತರ ರಾಧಿಕಾ ಬಳಿ, ‘ ನನಗೆ ಡಿವೋರ್ಸ್ ಆಗಿದೆ. ನಿನಗೆ ಬಾಳು ಕೊಡುತ್ತೇನೆ ಎಂದು ನಂಬಿಸಿ ಹಣ ಪೀಕಲು ಶುರು ಮಾಡುತ್ತಾನೆ. ಸಧ್ಯ ಆತನನ್ನು ಹುಬ್ಬಳ್ಳಿ ಪೊಲೀಸರಿಗೆ ಒಪ್ಪಿಸಿದ್ದು, ಹೆಚ್ಚಿನ ಮಾಹಿತಿ ತನಿಖೆ ಬಳಿಕ ಗೊತ್ತಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್