ಹುಬ್ಬಳ್ಳಿಯಲ್ಲಿ ಒಬ್ಬ ವಿಶಿಷ್ಟ ಪಕ್ಷಿ ಪ್ರೇಮಿ: ದುಡಿದ ಹಣದಲ್ಲಿಯೇ ನಿತ್ಯ ಸಾವಿರಾರು ಪಾರಿವಾಳಗಳಿಗೆ ಆಹಾರ

Hubballi News: ಹುಬ್ಬಳ್ಳಿಯ ಕಂಚಗಾರ ಗಲ್ಲಿಯಲ್ಲಿ ಒಬ್ಬ ವಿಶಿಷ್ಟ ಪಕ್ಷಿ ಪ್ರೇಮಿ ಇದ್ದಾರೆ. ಅವರ ಹೆಸರು ವಿಕಾಸ್. ಇವರು ನಿತ್ಯ ಸಾವಿರಾರು ಪಾರಿವಾಳಗಳಿಗೆ ಅಹಾರ ಹಾಕ್ತೀದಾರೆ. ಎಸ್ ವಿಕಾಸ್ ಅಡವಿ ಪಾರಿವಾಳಗಳಿಗೆ ಅಕ್ಷರಶಃ ಅನ್ನದಾತ ಎಂದರೆ ತಪ್ಪಾಗಲಿಕಿಲ್ಲ.

ಹುಬ್ಬಳ್ಳಿಯಲ್ಲಿ ಒಬ್ಬ ವಿಶಿಷ್ಟ ಪಕ್ಷಿ ಪ್ರೇಮಿ: ದುಡಿದ ಹಣದಲ್ಲಿಯೇ ನಿತ್ಯ ಸಾವಿರಾರು ಪಾರಿವಾಳಗಳಿಗೆ ಆಹಾರ
ಪಕ್ಷಿ ಪ್ರೇಮಿ ವಿಕಾಸ್
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on: Aug 21, 2023 | 9:17 PM

ಹುಬ್ಬಳ್ಳಿ, ಆಗಸ್ಟ್​ 21: ಆತ ಸಣ್ಣ ಪೇಪರ್ ತಯಾರಿಕೆ ಅಂಗಡಿ ಮಾಲೀಕ. ಕೆಲಸದ ಜೊತೆಗೆ ಆತ ಪಕ್ಷಿ ಮೇಲಿರುವ ಕಾಳಜಿ (bird lover) ಎಂತಹವರನ್ನು ಹುಬ್ಬೇರಿಸುತ್ತಿದೆ. ಅಂಗಡಿಯಲ್ಲಿ ಕೆಲಸ ಮಾಡುತ್ತಾ, ಆತ ನಿತ್ಯ ಸಾವಿರಾರು ಪಕ್ಷಿಗಳಿಗೆ ಆಹಾರ ಹಾಕುತ್ತಾನೆ. ದುಡಿದ ಹಣದಲ್ಲಿಯೇ ನಿತ್ಯ ಸಾವಿರಾರು ಪಾರಿವಾಳಗಳಿಗೆ ಆತ ಅನ್ನ ನೀಡುತ್ತಿದ್ದಾನೆ. ಆತ ಬಂದನೆಂದರೆ ಸಾಕು ಪಾರಿವಾಳಗಳು ಆಹಾರಕ್ಕಾಗಿ ಹಿಂಡು ಹಿಂಡಾಗಿ ಬರುತ್ತವೆ. ಸಾವಿರಾರು ಪಾರಿವಾಳಗಳು ಹಿಂಡು ಹಿಂಡಾಗಿ ಅಹಾರ ಸೇವಿಸುವ ದೃಶ್ಯ ಮೈರೋಮಾಚಂನಗೊಳಿಸತ್ತೆ.

ಹುಬ್ಬಳ್ಳಿಯ ಕಂಚಗಾರ ಗಲ್ಲಿಯಲ್ಲಿ ಒಬ್ಬ ವಿಶಿಷ್ಟ ಪಕ್ಷಿ ಪ್ರೇಮಿ ಇದ್ದಾರೆ. ಅವರ ಹೆಸರು ವಿಕಾಸ್. ಇವರು ನಿತ್ಯ ಸಾವಿರಾರು ಪಾರಿವಾಳಗಳಿಗೆ ಅಹಾರ ಹಾಕ್ತೀದಾರೆ. ಎಸ್ ವಿಕಾಸ್ ಅಡವಿ ಪಾರಿವಾಳಗಳಿಗೆ ಅಕ್ಷರಶಃ ಅನ್ನದಾತ ಎಂದರೆ ತಪ್ಪಾಗಲಿಕಿಲ್ಲ. ದಿನಕ್ಕೆ ಸುಮಾರು 250 ಕೆಜಿ ಅಷ್ಟು ಗೋದಿ ಪುಠಾಣಿಯನ್ನ ವಿಕಾಸ ಪಾರಿವಾಳಕ್ಕೆ ಆಹಾರ ಹಾಕುವ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸ್ಮಾರಕವಾದ ಹತ್ತೇ ವರ್ಷದಲ್ಲಿ ಭೂತ ಬಂಗಲೆ ಆದ ಡಾ ಗಂಗೂಬಾಯಿ ಹಾನಗಲ್​ ಮನೆ: ಅಭಿವೃದ್ಧಿಗಾಗಿ ಕಾಯುತ್ತಿರುವ ಜನರು

ಕಂಚಗಾರ ಗಲ್ಲಿಯಲ್ಲಿರೋ ದೊಡ್ಡ ಕಟ್ಟಡದ ಮೇಲೆ ಬಂದು ತಟ್ಟೆ ಶಬ್ದಮಾಡಿದರೆ ಸಾಕು ಪಾರಿವಾಳಗಳು ನಮಗೆ ಊಟ ಬಂದಿದೆ ಎಂದ ಎಲ್ಲಿದ್ದರೂ ಹಿಂಡು ಹಿಂಡಾಗಿ ಓಡೋಡಿ ಬರುತ್ತೇವೆ. ಸಾವಿರಾರು ಪಾರಿವಾಳಗಳಿಗೆ ವಿಕಾಸ್ ನಿತ್ಯ ಅನ್ನ ನೀಡುವ ಕಾಯಕದಲ್ಲಿ ತೊಡಗಿದ್ದಾರೆ. ಪಕ್ಷಿಗಳೆಂದರೆ ವಿಕಾಸ್​ಗೆ ಅಚ್ಚು ಮೆಚ್ಚು ದಿನವೊಂದಕ್ಕೆ ಬರೋಬ್ಬರಿ 250 ಕೆಜಿ ಅಷ್ಟು ಅಹಾರ ಹಾಕೋದು ಸುಲಭದ ಮಾತಲ್ಲ. ಆದರೆ ವಿಕಾಸ್ ಪಕ್ಷಿಗಳಿಗೆ ಅಹಾರ ಹಾಕೋದ್ರಲ್ಲಿ ಖುಷಿ ಪಡ್ತೀದಾರೆ. ಬೆಳೆಗ್ಗೆ 11 ಗಂಟೆಗೆ ವಿಕಾಸ್ ಕಟ್ಡಡದ ಮೇಲೆ ಬಂದು ತಟ್ಟೆ ಶಬ್ದ ಮಾಡಿದರೆ ಸಾಕು ಹಾರಾಡುವ ಪಾರಿವಾಳಗಳೆಲ್ಲ‌ ಓಡೋಡಿ ಬಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ.

ಮೂಲತಃ ಹುಬ್ಬಳ್ಳಿ ನಿವಾಸಿಯಾಗಿರೋ ವಿಕಾಸ್ ಪೇಪರ್ ಅಂಗಡಿ ಮಾಲೀಕ ಝರಾಕ್ಸ್ ಪೇಪರ್ ತಯಾರಿಕಾ ಕೆಲಸ ಮಾಡ್ತಾನೆ. ಆದರೆ ಕಳೆದ ಹತ್ತು ವರ್ಷಗಳಿಂದ ಪಾರಿವಾಳಕ್ಕೆ ಊಟ ಹಾಕುವ ಕೆಲಸ ಮಾಡುತ್ತಾರೆ ಅಂದರೆ ನೀವು ನಂಬಬೇಕು. ಮೊದ ಮೊದಲು ಕೇವಲ 50 ರಿಂದ 100 ಪಾರಿವಾಳಗಳು ಬರ್ತಿದ್ವು. ಇದೀಗ ಸಾವಿರಾರು ಪಾರಿವಾಳಗಳು ಬರುತ್ತಿವೆ.

ಇದನ್ನೂ ಓದಿ: Chaturthi 2023: ಹುಬ್ಬಳ್ಳಿಯಲ್ಲಿ ಗಣೇಶನ ವಿಗ್ರಹಗಳನ್ನು ತಯಾರಿಸುತ್ತಿರುವ ಮುಸ್ಲಿಂ ಮಹಿಳೆ

ಅಷ್ಟು ಪಾರಿವಾಳಗಳಿಗೆ ವಿಕಾಸ್ ಹೊಟ್ಟೆ ತುಂಬಿಸೋ ಕೆಲಸ ಮಾಡ್ತೀದಾರೆ. ವಿಕಾಸ್ ಮಾರುಕಟ್ಡೆಯಿಂದ ಗೋದಿ, ಪುಠಾಣಿ ಖರೀದಿ ಮಾಡಿ ಪಾರಿವಾಳಗಳಿಗೆ ಹಾಕ್ತಾರೆ. ನಿತ್ಯವೂ ಇದೆ ಕಾಯಕ. ಇವರಿಗೆ ಅವರ ಸಮಾಜದ ಕೆಲವರು ಸಹಾಯ ಮಾಡ್ತೀದಾರೆ. ಜೈನ ಸಮಾಜದ ಯುವಕರು ಇವರ ಜೊತೆ ಸೇರಿಕೊಂಡಿದ್ದು ಆಕಸ್ಮಾತ್ ಮನೆಯಲ್ಲಿ ಕಾರ್ಯಕ್ರಮ ಇದ್ರೆ, ಅವತ್ತು ಪಾರಿವಾಳಗಳಿಗೆ ಕಾಳುಗಳನ್ನ ಹಾಕ್ತಾರೆ. ಹೀಗೆ ಕಳೆದ 10 ವರ್ಷಗಳಿಂದ ವಿಕಾಸ್ ಸಾವಿರಾರು ಪಕ್ಷಿಗಳಿಗೆ ಅನ್ನದಾತ ಆಗಿದ್ದಾರೆ.

ಇಂದಿನ‌ ಅಧುನಿಕ ಯುಗದಲ್ಲಿ ಒಂದು ತುತ್ತ ಊಟ ಕೇಳಿದ್ರೂ ಇಲ್ಲ ಅನ್ನೋರೆ ಜಾಸ್ತಿ. ಅಂತದ್ದರಲ್ಲಿ ನಿತ್ಯ ಸಾವಿರಾರು ಪಾರಿವಾಳಗಳಿಗೆ ಊಟ ಹಾಕೋದು ಗ್ರೇಟ್. ಯಾವುದೇ ಪ್ರತಿಫಲಾಕ್ಷೆಯಿಲ್ಲದೆ ವಿಕಾಸ್ ಮೂಕ ಪಕ್ಷಿಗಳಿಗೆ ಆಶ್ರಯದಾತನಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು