ಅಂಜಲಿ ಕೊಲೆ ಪ್ರಕರಣ; ಇಂತಹ ಪಾಪಿ ಮಗ ಯಾರಿಗೂ ಬೇಡ-ಆರೋಪಿ ವಿಶ್ವ ತಾಯಿ
ಅಂಜಲಿ ಹತ್ಯಗೆ ವಾಣಿಜ್ಯ ನಗರಿ ಹುಬ್ಬಳ್ಳಿ ಬೆಚ್ಚಿ ಬಿದ್ದಿದೆ. ಪೊಲೀಸರ ನಿರ್ಲಕ್ಷ್ಯದಿಂದ ಅಂಜಲಿ ಕೊಲೆಯಾಗಿದೆ ಎನ್ನುವ ಗಂಭೀರ ಆರೋಪದ ನಡುವೆ, ಆರೋಪಿ ವಿಶ್ವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಘಟನೆ ಕುರಿತು ಆರೋಪಿಯ ತಾಯಿ ಅವರು ಪ್ರತಿಕ್ರಿಯಿಸಿದ್ದು, ‘ನನಗೆ ಇವನೊಬ್ಬನೇ ಮಗ, ಏನು ಕೆಲಸ ಮಾಡುತ್ತಿದ್ದನೋ ಗೊತ್ತಿಲ್ಲ. ನ್ಯಾಯಾಲಯ ಅವನಿಗೆ ಏನು ಶಿಕ್ಷೆ ಕೊಡುತ್ತದೆಯೋ ಕೊಡಲಿ ಎಂದಿದ್ದಾರೆ.
ಹುಬ್ಬಳ್ಳಿ, ಮೇ.18: ಮನೆಗೆ ನುಗ್ಗಿ ಅಂಜಲಿ(Anjali) ಅಂಬಿಗೇರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ‘ಇಂತಹ ಪಾಪಿ ಮಗ ಯಾರಿಗೂ ಬೇಡ ಎಂದು ಆರೋಪಿ ವಿಶ್ವನ ತಾಯಿ ಶ್ವೇತಾ ಎಂಬುವವರು ಹೇಳಿದ್ದಾರೆ. ಹುಬ್ಬಳ್ಳಿ(Hubli)ಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ‘ನನಗೆ ಇವನೊಬ್ಬನೇ ಮಗ, ಏನು ಕೆಲಸ ಮಾಡುತ್ತಿದ್ದನೋ ಗೊತ್ತಿಲ್ಲ. ನ್ಯಾಯಾಲಯ ಅವನಿಗೆ ಏನು ಶಿಕ್ಷೆ ಕೊಡುತ್ತದೆಯೋ ಕೊಡಲಿ, ‘ನನ್ನ ಮಗ ವಿಶ್ವ ಮಾಡಿದ ತಪ್ಪಿಗೆ ನಾವೆಲ್ಲ ಶಿಕ್ಷೆ ಅನುಭವಿಸುತ್ತಿದ್ದೇವೆ. ಮೊದಲು ವಿಶ್ವ ಚೆನ್ನಾಗಿದ್ದ, 4 ವರ್ಷದ ನಂತರ ಹೀಗೆ ಆಗಿದ್ದಾನೆ. ಅಂತಹ ಮಗ ನನಗೆ ಬೇಡ, ಅವನನ್ನ ನೋಡಲು ಹೋಗುವುದಿಲ್ಲ ಎಂದರು.
ಘಟನೆ ವಿವರ
ಹುಬ್ಬಳ್ಳಿ ನಗರದ ವೀರಾಪುರ ಓಣಿಯಲ್ಲಿರುವ ಅಂಜಲಿಯನ್ನು ಕೊಲೆ ಮಾಡಲು ಆಟೋದಲ್ಲಿ ಬಂದಿದ್ದ ಆರೋಪಿ ವಿಶ್ವ, ಬೆಳಗಿನ ಜಾವ 5.30 ರ ಸುಮಾರಿಗೆ ಕೊಲೆ ಮಾಡಿ ನಂತರ ಅಲ್ಲಿಂದ ಆಟೋವನ್ನ ಅಲ್ಲಿಯೆ ಬಿಟ್ಟು ಭಯದಿಂದಲೇ ಗೋಕುಲ್ ರಸ್ತೆಯಲ್ಲಿನ ಹೊಸ ಬಸ್ ನಿಲ್ದಾಣಕ್ಕೆ ಓಡಿ ಹೋಗಿದ್ದ. ನಿನ್ನೆ(ಮೇ.17) ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೇಸ್ನಲ್ಲಿ ಈಗಾಗಲೇ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ:ಹುಬ್ಬಳ್ಳಿ ಅಂಜಲಿ ಕೊಲೆಗಾರ ರೈಲಿನಲ್ಲೂ ಚಾಕು ಹಾಕಿದ: ಹಂತಕನ ನೈಜ ಘಟನೆ ಬಿಚ್ಚಿಟ್ಟ ಮಹಿಳೆ
ಒಟ್ಟಾರೆ ಒಂದು ತಿಂಗಳ ಅವಧಿಯಲ್ಲಿ ನಡೆದ ನೇಹಾ, ಅಂಜಲಿ ಕೊಲೆ ಕೇಸ್ಗಳು ಸರ್ಕಾರಕ್ಕೆ ಮುಜುಗರ ತಂದಿಟ್ಟಿದ್ದಂತೂ ನಿಜ. ಸರ್ಕಾರದ ವಿರುದ್ದ ಬಿಜೆಪಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದು, ಇತ್ತ ದಿಂಗಾಲೇಶ್ವರ ಸ್ವಾಮೀಜಿ ನೇಹಾ, ಅಂಜಲಿ ಕೊಲೆ ಆರೋಪಿಗಳಿಗೆ ಎನ್ಕೌಂಟರ್ ಮಾಡಬೇಕು ಎಂದಿದ್ದಾರೆ. ಅಂಜಲಿ ಕೊಲೆ ಕೇಸ್ ಇನ್ಯಾವ ತಿರುವು ಪಡೆದುಕೊಳ್ಳತ್ತದೆ ಎಂದು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:36 pm, Sat, 18 May 24