ಧಾರವಾಡ: ಸಿಡಿಲು ಬಡಿದು 15 ಕುರಿಗಳು ಸಾವು; ಕುರಿಗಾಹಿ ಆಸ್ಪತ್ರೆಗೆ ದಾಖಲು
ಜೆಸಿಬಿ ಯಂತ್ರ ಬಳಸಿ ಹತ್ತು ಸಾವಿರಕ್ಕೂ ಹೆಚ್ಚು ಗುಂಡಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ತೆಗೆಸಿದ್ದಾರೆ. ಇದೇ ವೇಳೆ ಬೆಳೆದುನಿಂತ ಮರಗಳನ್ನು ಕಡಿದು ಹಾಕಿದ್ದಾರೆ. ಗಿಡ ನೆಡುವ ನೆಪದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೇ ಮರಗಳ ಬಲಿ ಪಡೆಯುತ್ತಿರುವ ಬಗ್ಗೆ ಆರೋಪ ಕೇಳಿಬಂದಿದೆ.
ಧಾರವಾಡ: ಜಿಲ್ಲೆಯಲ್ಲಿ ಮಳೆ ಅಬ್ಬರ ಹಿನ್ನೆಲೆ ಸಿಡಿಲು ಬಡಿದು 15 ಕುರಿಗಳು ಸಾವನ್ನಪ್ಪಿದ ದುರ್ಘಟನೆ ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದ ಬಳಿ ನಡೆದಿದೆ. ಘಟನೆಯಲ್ಲಿ ಕುರಿಗಾಹಿಗೆ ಗಂಭೀರ ಗಾಯವಾಗಿದೆ. ದೇವರಾಜ್ ಪೂಜಾರ ಗಾಯಗೊಂಡ ಕುರಿಗಾಹಿ. ಅವರನ್ನು ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನವಲಗುಂದ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ದಾವಣಗೆರೆ: ಕಾಮಗಾರಿ ನೆಪದಲ್ಲಿ ಮರಗಳ ಮಾರಣಹೋಮ
ಕಾಮಗಾರಿ ನೆಪದಲ್ಲಿ ಮರಗಳ ಮಾರಣಹೋಮ ಮಾಡಿದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಅಣಬೂರು ಅರಣ್ಯ ಪ್ರದೇಶದಲ್ಲಿ ನಡೆದಿದೆ. ಅರಣ್ಯ ಇಲಾಖೆಯಿಂದ ಮರಗಳ ಮಾರಣಹೋಮವಾಗಿದೆ. 25 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆದು ನಿಂತ ವಿಶಿಷ್ಟ ಕುರುಚಲು ಅರಣ್ಯ ನಾಶವಾಗಿದೆ. ಅಣಬೂರ ಮೀಸಲು ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ. ಅರಣ್ಯದ ಮಧ್ಯಭಾಗದಲ್ಲಿ ಗಿಡಗಳನ್ನು ನೆಡಲು ಗುಂಡಿ ತೋಡುವ ನೆಪದಲ್ಲಿ ಸಾವಿರಾರು ಮರಗಳ ಮಾರಣಹೋಮ ಮಾಡಲಾಗಿದೆ. ಜೆಸಿಬಿ ಯಂತ್ರ ಬಳಸಿ ಹತ್ತು ಸಾವಿರಕ್ಕೂ ಹೆಚ್ಚು ಗುಂಡಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ತೆಗೆಸಿದ್ದಾರೆ. ಇದೇ ವೇಳೆ ಬೆಳೆದುನಿಂತ ಮರಗಳನ್ನು ಕಡಿದು ಹಾಕಿದ್ದಾರೆ. ಗಿಡ ನೆಡುವ ನೆಪದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೇ ಮರಗಳ ಬಲಿ ಪಡೆಯುತ್ತಿರುವ ಬಗ್ಗೆ ಆರೋಪ ಕೇಳಿಬಂದಿದೆ.
ದಾವಣಗೆರೆ: ಎರಡು ಬೈಕ್ ಪರಸ್ಪರ ಡಿಕ್ಕಿ. ಇಬ್ಬರು ಬೈಕ್ ಸವಾರರ ಸಾವು
ಎರಡು ಬೈಕ್ ಪರಸ್ಪರ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗಾ ಗ್ರಾಮದ ಪೆಟ್ರೋಲ್ ಬಂಕ್ ಬಳಿ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಓರ್ವ ಹಿಂಬದಿಯ ಸವಾರನಿಗೆ ಗಾಯವಾಗಿದೆ. ಪ್ರಶಾಂತ್ (35), ದರ್ಶನ್ (20) ಸಾವನ್ನಪ್ಪಿದ ಬೈಕ್ ಸವಾರರು. ಶಿವಮೊಗ್ಗದ ಮಾರಿಕಾಂಭಾ ಹಬ್ಬಕ್ಕೆ ತೆರಳುತ್ತಿದ್ದ ಹರಗುವಳ್ಳಿ ಗ್ರಾಮದ ಪ್ರಶಾಂತ್ ಹಾಗೂ ಶಿವಮೊಗ್ಗ ಕಡೆಯಿಂದ ಸವಳಂಗ ಕಡೆ ಬರುತ್ತಿದ್ದ ಶಿವಮೊಗ್ಗ ತಾಲೂಕಿನ ಹುಣಸೋಡ ಗ್ರಾಮದ ದರ್ಶನ್ ಮೃತಪಟ್ಟಿದ್ದಾರೆ. ಹಿಂಬದಿ ಸವಾರ ಯೋಗೇಶ್ ಎಂಬವರಿಗೆ ಗಾಯವಾಗಿದ್ದು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಂಡ್ಯ: ಮಾಜಿ ಶಾಸಕನಿಗೆ ನಕಲಿ ಫೇಸ್ಬುಕ್ ಅಕೌಂಟ್ ಕಾಟ
ಶ್ರೀರಂಗಪಟ್ಟಣದ ಮಾಜಿ ಶಾಸಕನಿಗೆ ನಕಲಿ ಫೇಸ್ಬುಕ್ ಅಕೌಂಟ್ ಕಾಟ ಹೆಚ್ಚಿದೆ. ರಮೇಶ್ ಬಂಡೀಸಿದ್ದೇಗೌಡ ಹೆಸರಲ್ಲಿ ಕಿಡಿಗೇಡಿಗಳು ನಕಲಿ ಫೇಸ್ಬುಕ್ ಖಾತೆ ತೆರೆದಿದ್ದಾರೆ. ರಮೇಶ್ ಬಂಡಿಸಿದ್ದೇಗೌಡ, ಶ್ರೀರಂಗಪಟ್ಟಣ ಮಾಜಿ ಶಾಸಕ ಆಗಿದ್ದಾರೆ. ನಕಲಿ ಫೇಸ್ಬುಕ್ ಖಾತೆ ತೆರೆದು ಕಿಡಿಗೇಡಿಗಳು ಹಣ ಕೇಳಿದ್ದಾರೆ. ನಕಲಿ ಖಾತೆ ನಂಬಿ ಹಣ ಹಾಕದಂತೆ ರಮೇಶ್ ಬಂಡಿಸಿದ್ದೇಗೌಡ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ರಮೇಶ್ ಬಂಡಿಸಿದ್ದೇಗೌಡ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ನೆಲಮಂಗಲ: ಬಡವರ ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಕೊಂಡು ಹೆಚ್ಚಿನ ಬೆಲೆಗೆ ಮಾರಾಟ; ಆರೋಪಿ ಬಂಧನ
ಬಡವರ ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ ಮಾಡಿದ ಘಟನೆ ನಡೆದಿದೆ. ಬಾಗಲಗುಂಟೆ ಪೊಲೀಸರಿಂದ ಅರೋಪಿ ನಯಾಜ್ (35) ಬಂಧಿಸಲಾಗಿದೆ. ದಾಸರಹಳ್ಳಿಯಲ್ಲಿ ಬಡವರು ವಾಸಿಸುವ ಏರಿಯಾಗಳೆ ಟಾರ್ಗೆಟ್ ಮಾಡಿ 1 ಕೆಜಿ ಅಕ್ಕಿಗೆ 12 ರೂಪಾಯಿಯಂತೆ ಖರೀದಿ ಮಾಡುತ್ತಿದ್ದ ಅಸಾಮಿ, ಬಳಿಕ ಪಾಲಿಷ್ ಮಾಡಿ ಹೆಚ್ಚಿನ ಬೆಲೆಗೆ ಮಾರಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಮಲ್ಲಸಂದ್ರದ ರಮೇಶ್ ರಸ್ತೆಯಲ್ಲಿ ಅಕ್ಕಿ ಖರೀದಿಸುವ ವೇಳೆ ಬಲೆಗೆ ಬಿದ್ದಿದ್ದಾನೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಮುಸ್ಲಿಮರಿಗೆ ಯಾವುದೇ ವಸ್ತು ಮಾರಾಟ ಮಾಡುವುದಿಲ್ಲ ಎಂದು ಹಿಂದೂ ವ್ಯಾಪಾರಿಗಳ ಅಂಗಡಿ ವಿರುದ್ಧ ತಪ್ಪು ಸಂದೇಶ; ದೂರು ದಾಖಲು
ಇದನ್ನೂ ಓದಿ: ಬೆಂಗಳೂರು: ಟ್ರಾನ್ಸ್‌ಫಾರ್ಮರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಯುವತಿ ಸಾವು; ಬೆಸ್ಕಾಂ ಅಧಿಕಾರಿಗಳ ವಿರುದ್ಧ ಎಫ್‌ಐಆರ್
Published On - 11:45 am, Fri, 25 March 22