AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲದಕ್ಕೂ ಬಂದ್‌ ಅಂತಿಮ ನಿರ್ಧಾರವಲ್ಲ; ಡಿಸೆಂಬರ್ 31ರ ಬಂದ್ ಕೈಬಿಡುವಂತೆ ಬಸವರಾಜ ಬೊಮ್ಮಾಯಿ ಮನವಿ

ಬಂದ್​ಗೆ ಕರೆ ಕೊಡುವುದು ಬೇಡ. ಕೊರೊನಾ ಕೇಸ್ ಜಾಸ್ತಿಯಾಗಿದೆ. ಬೇರೆ ರೂಪದಲ್ಲಿ ಒತ್ತಡವನ್ನ ಹೇರಿ. ಎಂಇಎಸ್ ಬ್ಯಾನ್ ಮಾಡುವ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಹುಬ್ಬಳ್ಳಿಯಲ್ಲಿ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಎಲ್ಲದಕ್ಕೂ ಬಂದ್‌ ಅಂತಿಮ ನಿರ್ಧಾರವಲ್ಲ; ಡಿಸೆಂಬರ್ 31ರ ಬಂದ್ ಕೈಬಿಡುವಂತೆ ಬಸವರಾಜ ಬೊಮ್ಮಾಯಿ ಮನವಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
TV9 Web
| Updated By: ganapathi bhat|

Updated on:Dec 29, 2021 | 6:06 PM

Share

ಹುಬ್ಬಳ್ಳಿ: ಎಲ್ಲದಕ್ಕೂ ಬಂದ್‌ ಅಂತಿಮ ನಿರ್ಧಾರವಲ್ಲ. ಕನ್ನಡ ವಿರೋಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ. ಬಂದ್‌ ನಡೆಸುವುದು ಬೇಡ, ಬೇರೆ ರೂಪದಲ್ಲಿ ಒತ್ತಡ ಹಾಕಿ. ಎಂಇಎಸ್ ಬ್ಯಾನ್‌ ಮಾಡುವ ಬಗ್ಗೆ ಪರಿಶೀಲನೆ ನಡೆಸಿದ್ದೇವೆ ಎಂದು ಡಿಸೆಂಬರ್ 31ರ ಬಂದ್‌ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಡಿಸೆಂಬರ್ 31ರ ಬಂದ್ ಕೈಬಿಡುವಂತೆ ಸಿಎಂ ಬೊಮ್ಮಾಯಿ ಮನವಿ ಮಾಡಿದ್ದಾರೆ. ಬಂದ್‌ಗೆ ಕರೆ ನೀಡಿರುವ ಹೋರಾಟಗಾರರಿಗೆ ಸಿಎಂ ಮನವಿ ಮಾಡಿಕೊಂಡಿದ್ದಾರೆ.

ಕನ್ನಡ ವಿರೋಧಿಗಳಿಗೆ ಕಠಿಣ ಕ್ರಮ ಕೈಗೊಂಡಿದ್ದೇವೆ. ಬಂದ್​ಗೆ ಕರೆ ಕೊಡುವುದು ಬೇಡ. ಕೊರೊನಾ ಕೇಸ್ ಜಾಸ್ತಿಯಾಗಿದೆ. ಬೇರೆ ರೂಪದಲ್ಲಿ ಒತ್ತಡವನ್ನ ಹೇರಿ. ಎಂಇಎಸ್ ಬ್ಯಾನ್ ಮಾಡುವ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಹುಬ್ಬಳ್ಳಿಯಲ್ಲಿ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಸಿಎಂ ಕುರ್ಚಿಗೆ ಕಾಂಗ್ರೆಸ್ ನಾಯಕರು ಟವೆಲ್​ ಹಾಕುತ್ತಿದ್ದಾರೆ: ಸಿ.ಟಿ. ರವಿ ವಾಗ್ದಾಳಿ ಕಾಂಗ್ರೆಸ್​ ಅಧಿಕಾರಕ್ಕೆ ಬರುವ ಬಗ್ಗೆ ತಿರುಕನ ಕನಸು ಕಾಣುತ್ತಿದೆ. ಸಿಎಂ ಕುರ್ಚಿಗೆ ಕಾಂಗ್ರೆಸ್ ನಾಯಕರು ಟವೆಲ್​ ಹಾಕುತ್ತಿದ್ದಾರೆ. ಅವರು ಹಾಕುವ ಟವೆಲ್ ಮುಖ ಒರೆಸಿಕೊಳ್ಳಲು ಬರುತ್ತದೆ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ನಾಯಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ. ಮೇಕೆದಾಟು ಯೋಜನೆಗಾಗಿ ಒತ್ತಾಯಿಸಿ ಪಾದಯಾತ್ರೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅಧಿಕಾರದಲ್ಲಿದ್ದಾಗ ಯಾಕೆ ಮೇಕೆದಾಟು ಯೋಜನೆ ಮಾಡಲಿಲ್ಲ. ಹಿಂದೂಗಳು ದೇಶಭಕ್ತರೇ ಹೊರತು ದೇಶ ವಿರೋಧಿಗಳಲ್ಲ ಎಂದು ಸಿ.ಟಿ. ರವಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Deceber 31 Karnataka Bandh: MES ವಿರುದ್ಧ ಪ್ರತಿಭಟನೆ, ವಾಟಾಳ್ ನಾಗರಾಜ್ ವಶಕ್ಕೆ ಪಡೆದ ಬೆಳಗಾವಿ ಪೊಲೀಸರು

ಇದನ್ನೂ ಓದಿ: ಇಂತಹ ಮುಖ್ಯಮಂತ್ರಿಯನ್ನು ಎಲ್ಲಿಯೂ ನೋಡಿಲ್ಲ; ಬಸವರಾಜ ಬೊಮ್ಮಾಯಿಗೆ ಅರುಣ್ ಸಿಂಗ್ ಹೊಗಳಿಕೆ

Published On - 2:50 pm, Wed, 29 December 21