Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದ ಕಾಂಗ್ರೆಸ್​ ಸರ್ಕಾರ; ಕಿಡಿಕಾರಿದ ಬಿಜೆಪಿ ನಾಯಕರು

ಅದು ದೇಶದಲ್ಲಿ ಸದ್ದು‌ ಮಾಡಿದ್ದ ಗಲಭೇ ಕೇಸ್, ಒಂದು ವಾಟ್ಸಪ್ ಸ್ಟೇಟಸ್​ನಿಂದ ಹೊತ್ತುಕೊಂಡ ಬೆಂಕಿ. ಅಂದು ರಾತ್ರಿ ದೊಡ್ಡ ಪ್ರಮಾಣದಲ್ಲಿ ಗಲಭೆಗೆ ಕಾರಣವಾಗಿತ್ತು. ಗಲಭೆಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದು, ಪೊಲೀಸ್ ಠಾಣೆ ಮೇಲೆ ಗಲಭೆಕೋರರು ಕಲ್ಲು ಎಸೆದಿದ್ದರು. ಈ ಗಲಭೆ ಇಡೀ ದೇಶದ್ಯಾಂತ ಚರ್ಚೆಗೆ ಕಾರಣವಾಗಿತ್ತು. ಈ ಗಲಭೆಯಲ್ಲಿ ಭಾಗಿಯಾದ ಬರೋಬ್ಬರಿ 150 ಕ್ಕೂ ಹೆಚ್ಚು ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಇದೀಗ ನಿನ್ನೆ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಹಳೇ ಹುಬ್ಬಳ್ಳಿ ಗಲಭೇ ಸೇರಿ ಕೆಲ ಕೇಸ್​ಗಳನ್ನು ವಾಪಸ್ ಪಡೆಯಲು ನಿರ್ಧಾರ ಮಾಡಿದೆ. ಈ ಸರ್ಕಾರದ ನಿರ್ಧಾರದ ವಿರುದ್ದ ಕೆರಳಿ ಕೆಂಡವಾದ ಕೇಸರಿ ಕಲಿಗಳು, ಹೋರಾಟದ ಕರೆ ನೀಡಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದ ಕಾಂಗ್ರೆಸ್​ ಸರ್ಕಾರ; ಕಿಡಿಕಾರಿದ ಬಿಜೆಪಿ ನಾಯಕರು
ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದ ಕಾಂಗ್ರೆಸ್​ ಸರ್ಕಾರ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 11, 2024 | 8:01 PM

ಹುಬ್ಬಳ್ಳಿ, ಅ.11: 2022 ಎಪ್ರೀಲ್ 16 ರ ರಾತ್ರಿ ವಾಣಿಜ್ಯ ನಗರಿ ಖ್ಯಾತಿಯ ಹುಬ್ಬಳ್ಳಿ(Hubballi)ಯಲ್ಲಿ ದೊಡ್ಡ ಗಲಭೆಯೊಂದು ನಡೆದಿತ್ತು. ಒಂದು ವಾಟ್ಸಪ್ ಸ್ಟೇಟಸ್ ವಿಚಾರವಾಗಿ ಹೊತ್ತಿಕೊಂಡ ಗಲಾಟೆ, ದೊಡ್ಡ ಮಟ್ಟದ ಸದ್ದು ಮಾಡಿತ್ತು. ಹೆಚ್ಚು ಕಡಿಮೆ ಎರಡು ವರ್ಷದ ಬಳಿಕ ಇದೀಗ ಆ ಗಲಭೆ ಮತ್ತೆ ಮುನ್ನೆಲೆಗೆ ಬಂದಿದೆ. ಹೌದು, ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ ಗಲಭೆ ಕೇಸ್ ಇದೀಗ ರಾಜಕೀಯದಲ್ಲಿ ಮತ್ತೆ ಸಂಚಲನ ಸೃಷ್ಟಿ ಮಾಡಿದೆ. ಸರ್ಕಾರದ ಒಂದು ನಿರ್ಧಾರ, ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.  ನಿನ್ನೆ(ಗುರುವಾರ) ನಡೆದ ಕ್ಯಾಬಿನೆಟ್​ ಮೀಟಿಂಗ್​ನಲ್ಲಿ ಕ್ರಿಮಿನಲ್​ ಕೇಸ್ ​ಹಿಂಪಡೆಯುವ ಬಗ್ಗೆ ಒಪ್ಪಿಗೆ ನೀಡಲಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಆರೋಪಿಗಳ ಪ್ರಕರಣವನ್ನು ಸರ್ಕಾರ ವಾಪಸ್​ ಪಡೆದಿದೆ.

ಮುಸ್ಲಿಂ ನಾಯಕರ ಓಲೈಕೆಗೆ ಮುಂದಾಯ್ತ ಕಾಂಗ್ರೆಸ್​?

ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ ಗ್ಯಾಂಗ್‌ ಕೇಸ್ ವಾಪಸ್ ತಗೆದುಕೊಳ್ಳಲು ತೀರ್ಮಾನ ‌ಮಾಡಲಾಗಿದೆ. ಈ ನಿರ್ಧಾರದಿಂದ ಸರ್ಕಾರ, ಮುಸ್ಲಿಂ ನಾಯಕರ ಓಲೈಕೆಗೆ ಮುಂದಾಯ್ತು ಎನ್ನುವ ಅನುಮಾನ ಮೂಡಿದೆ. ವಾಟ್ಸಪ್‌ನಲ್ಲಿ ಸ್ಟೇಟಸ್ ವಿಚಾರವಾಗಿ ನಡೆದ ಗಲಭೆ ವಿಕೋಪಕ್ಕೆ ಹೋಗಿತ್ತು. ಮುಸ್ಲಿಂ ಧರ್ಮದ ಬಗ್ಗೆ ಸ್ಟೇಟಸ್​ ಹಾಕಿದ್ದ ಯುವಕನನ್ನ ಬಂಧಿಸಿದ್ದರು. ಇದರಿಂದ ಠಾಣೆಗೆ ಮುತ್ತಿಗೆ ಹಾಕಿದ್ದ ಸುಮಾರು 150ರ ತಂಡ, ಪೊಲೀಸರ ಹಲ್ಲೆಗೆ ಮುಂದಾಗಿದ್ದರು.

ಇದನ್ನೂ ಓದಿ:ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ಸು ಪಡೆಯುವ ಸರ್ಕಾರದ ನಿರ್ಧಾರ ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ

ಸರ್ಕಾರದ ನಿರ್ದಾರಕ್ಕೆ ಜೋಶಿ ಫುಲ್ ಗರಂ

ಪೊಲೀಸ್‌ ಠಾಣೆಯ ಮುಂದೆ ಗಲಾಟೆ ಮತ್ತು ದಾಂಧಲೆ ನಡೆಸಿದ್ದರು. ಇದು ದೇಶದಲ್ಲಿ ದೊಡ್ಡ ಸುದ್ದಿಯಾಗಿತ್ತು. ಬಿಜೆಪಿ ಈ ಗಲಭೆ ಖಂಡಿಸಿ ಬಿದೀಗಿಳಿದು ಹೋರಾಟ ಮಾಡಿತ್ತು. ಗಲಭೆ ಕೇಸ್​ನಲ್ಲಿ ಬಂಧನವಾಗಿತ್ತು. ಇದೀಗ ಗಲಭೆಯ ಪ್ರಕರಣವನ್ನು ಸರ್ಕಾರ ವಾಪಸ್ ಪಡೆಯಲು ನಿರ್ಧಾರ ಮಾಡಿದೆ. ಇದಕ್ಕೆ ಕೇಸರಿ ಕಲಿಗಳು ಕೆರಳಿ ಕೆಂಡವಾಗಿದ್ದಾರೆ. ‘ಸರ್ಕಾರ ಭಯೋತ್ಪಾದಕರಿಗೆ ಬೆಂಬಲವಾಗಿ ನಿಂತಿದೆ ಎಂದು ಕೇಂದ್ರ ಸಚಿವರು ಆರೋಪಿಸಿದ್ದು, ಸರ್ಕಾರದ ನಿರ್ಧಾರಕ್ಕೆ ಹುಬ್ಬಳ್ಳಿಯಲ್ಲಿ ಜೋಶಿ ಫುಲ್ ಗರಂ ಆಗಿದ್ದಾರೆ. ‘ನಾವು ಹೋರಾಟ ಮಾಡ್ತೀವಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಕಾನೂನು ಹೋರಾಟ ಹಾಗೂ ಸರ್ಕಾರದ ನಿರ್ದಾರ‌ ಖಂಡಸಿ ಪ್ರತಿಭಟನೆ ಮಾಡ್ತೀವಿ ಎಂದಿದ್ದಾರೆ. ಇದೇ 13 ರಂದು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಮಾಡೋದಾಗಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.

ಸರ್ಕಾರದ ನಿರ್ಧಾರಕ್ಕೆ ಬಿಜೆಪಿ‌ ನಾಯಕರು ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಇದೇ 13 ರಂದು ಹುಬ್ಬಳ್ಳಿಯಲ್ಲಿ ಮೊದಲ ಹಂತದ ಹೋರಾಟ ನಡೆಯಲಿದೆ. ಇದಾದ ಬಳಿಕ ಬಿಜೆಪಿ ರಾಜ್ಯದ್ಯಂತ ಹೋರಾಟ ಮಾಡೋ ಪ್ಲ್ಯಾನ್ ಮಾಡಿದೆ. ಒಂದು ಕಡೆ ಬಿಜೆಪಿ ಹೋರಾಟದ ಕರೆ ನೀಡಿದ್ರೆ, ಇತ್ತ ಅಂಜುಮನ್ ಸಂಸ್ಥೆ ಸರ್ಕಾರ ನಿರ್ಧಾರ ಸ್ವಾಗತ ಮಾಡಿದ್ದಾರೆ. ಬಿಜೆಪಿ ಮೇಲೆ ದೇಶದ್ರೋಹದ ಕೇಸ್ ಹಾಕಬೇಕು, ಅಲ್ಲಿ ದೊಡ್ಡ ಗಲಾಟೆಯಾಗಿಲ್ಲ. ದೇಶದ್ರೋಹದ ಕೆಲಸ ಮಾಡಿಲ್ಲ. ಬಂಧಿತರ ಪೈಕಿ ಬಹುತೇಕರು ಅಮಾಯಕರು, ಅವರ್ಯಾರು ಬಿಜೆಪಿ RSS ಕಚೇರಿ ಸುಟ್ಟು ಹಾಕಿಲ್ಲ ಎಂದು ಅಂಜುಮನ್ ಮುಖಂಡರ ವಾದವಾಗಿದೆ.

ಒಟ್ಟಾರೆ ಸರ್ಕಾರ ನಿರ್ಧಾರಕ್ಕೆ ಬಿಜೆಪಿ ನಾಯಕರು ಅಸಮಾಧಾನ ಗೊಂಡಿದ್ದಾರೆ. ಹುಬ್ಬಳ್ಳಿಯಿಂದ ಹೋರಾಟದ ಎಚ್ಚರಿಕೆ ನೀಡಿದ್ದು, ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಸ್ಲಿಂರ ಒಲೈಕೆಗೆ ಮುಂದಾಯ್ತಾ ಎನ್ನುವ ಪ್ರಶ್ನೆ ಎದ್ದಿದ್ದು, ಬಿಜೆಪಿ ಹೋರಾಟ ಯಾವ ಹಂತಕ್ಕೆ ಹೋಗತ್ತೆ ಕಾದು ನೋಡಬೇಕಾಗಿದೆ. ಸರ್ಕಾರದ ಸಚಿವರು ಇದನ್ನ ಹೇಗೆ ಸಮರ್ಥನೆ ಮಾಡಿಕೊಳ್ಳುತ್ತಾರೆ ಎನ್ನವುದು ಕೂತುಹಲವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್