ಹಳೇ ಹುಬ್ಬಳ್ಳಿ ಕೇಸ್ ಹಿಂಪಡೆದಿದ್ದಕ್ಕೆ ಜೋಶಿ ವಾಗ್ದಾಳಿ: ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾದ ಬಿಜೆಪಿ
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವೋಟ್ಗಾಗಿ ಭಯೋತ್ಪಾದಕರಿಗೂ ಸಪೋರ್ಟ್ ಮಾಡುತ್ತಾರೆ. ಭಯೋತ್ಪಾದಕರಿಗೂ ಸಪೋರ್ಟ್ ಮಾಡಲು ಹಿಂಜರಿಯಲ್ಲ. ಮುಖ್ಯಮಂತ್ರಿಗಳಿಗೆ ನಾಚಿಕೆ, ಮಾನ ಮರ್ಯಾದೆ ಇದೆಯಾ? ದೇಶದಲ್ಲಿ ಕೋರ್ಟ್ ಇದೆಯೋ ಇಲ್ವೋ ಎಂದು ವಾಗ್ದಾಳಿ ಮಾಡಿದ್ದಾರೆ.
ಹುಬ್ಬಳ್ಳಿ, ಅಕ್ಟೋಬರ್ 12: ಹಳೇ ಹುಬ್ಬಳ್ಳಿ ಕೇಸ್ ಹಿಂಪಡೆದಿದ್ದಕ್ಕೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ಈ ವಿಚಾರ ಸದ್ಯ ಆರೋಪ ಪ್ರತ್ಯಾರೋಪಗಳು ಕಾರಣವಾಗಿದೆ. ಇದೀಗ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಪ್ರತಿಕ್ರಿಯಿಸಿದ್ದು, ಮುಖ್ಯಮಂತ್ರಿಗಳಿಗೆ ನಾಚಿಕೆ, ಮಾನ ಮರ್ಯಾದೆ ಇದೆಯಾ? ದೇಶದಲ್ಲಿ ಕೋರ್ಟ್ ಇದೆಯೋ ಇಲ್ವೋ ಎಂದು ವಾಗ್ದಾಳಿ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೋಟ್ಗಾಗಿ ಭಯೋತ್ಪಾದಕರಿಗೂ ಸಪೋರ್ಟ್ ಮಾಡುತ್ತಾರೆ. ಭಯೋತ್ಪಾದಕರಿಗೂ ಸಪೋರ್ಟ್ ಮಾಡಲು ಹಿಂಜರಿಯಲ್ಲ. ಅಧಿಕಾರ ಇದೆ ಅಂತಾ ಸಿದ್ದರಾಮಯ್ಯನವರು ಮಾತಾಡಿದ್ದಾರೆ. ಅಧಿಕಾರ ಜನ ಕೊಟ್ಟಿದ್ದು, ಸಂಯಮ, ವಿವೇಚನೆಯಿಂದ ಬಳಸಬೇಕು ಎಂದು ಕಿಡಿಕಾರಿದ್ದಾರೆ.
ಇಸ್ಲಾಮಿಕ್ ಮತಾಂಧತೆಯ ಶಕ್ತಿಗಳಿಗೆ ಸಪೋರ್ಟ್
ಒಂದು ಕಾಲದಲ್ಲಿ 400 ಸ್ಥಾನ ಇದ್ದವರು ಇಂದು ನಿಮ್ಮ ಸ್ಥಿತಿ ಏನಾಗಿದೆ. ಇವತ್ತಿಗೂ ಲೋಕಸಭೆಯಲ್ಲಿ ನೀವು 100 ಸೀಟ್ ದಾಟಿಲ್ಲ. ಇದಕ್ಕೆಲ್ಲ ನಿಮ್ಮ ತುಷ್ಟೀಕರಣ ಕಾರಣ. ದಲಿತ ಶಾಸಕನ ಮನೆಗೆ ಬೆಂಕಿ ಹಚ್ಚಿದರೂ ಸಾಫ್ಟ್ ಕಾರ್ನರ್, ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಾಟೆ ಬಗ್ಗೆ ಏನು ಮಾತಾಡಿದರು. ಸಿದ್ದರಾಮಯ್ಯ ಅಧಿಕಾರ ಉಳಿಸಿಕೊಳ್ಳಲು ಸಂಪೂರ್ಣವಾಗಿ ಇಸ್ಲಾಮಿಕ್ ಮತಾಂಧತೆಯ ಶಕ್ತಿಗಳನ್ನು ಸಪೋರ್ಟ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯ ಸರ್ಕಾರ ಯಾರ ಯಾರ ಮೇಲಿನ ಕೇಸ್ ವಾಪಸ್ ಪಡೆದಿದೆ? ಇಲ್ಲಿದೆ ಪಟ್ಟಿ
ಹಳೇ ಹುಬ್ಬಳ್ಳಿ ಗಲಭೆಯಲ್ಲಿ ಅಮಾಯಕರ ಬಂಧನವಾಗಿದ್ರೆ ಪೊಲೀಸ್ ಸಿಬ್ಬಂದಿ ಮೇಲೆ ಏನು ಕ್ರಮ ತೆಗೆದುಕೊಳ್ತೀರಿ? ಠಾಣೆ ಮೇಲೆ ಕಲ್ಲು ತೂರಿದವರು ಅಮಾಯಕರಾ? ನಾಳೆ ಹೋರಾಟದ ಬಗ್ಗೆ ಜಿಲ್ಲಾಧ್ಯಕ್ಷರ ಜತೆ ಮಾತಾಡುತ್ತೇನೆ ಎಂದಿದ್ದಾರೆ.
ಸರ್ಕಾರದ ವಿರುದ್ಧ ಹೋರಾಟಕ್ಕೆ ಅಣಿಯಾದ ಬಿಜೆಪಿ: ಸ್ಥಳೀಯ ಶಾಸಕರಿಂದ ಸಭೆ
ಸರ್ಕಾರ ಹಳೇ ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆದ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿ ಮುಂದಾಗುತ್ತಿದೆ. ಈ ವಿಚಾರವಾಗಿಯೇ ಇಂದು ಹುಬ್ಬಳ್ಳಿಯ ಬಿಜೆಪಿ ಕಚೇರಿಯಲ್ಲಿ ಸ್ಥಳೀಯ ಶಾಸಕರ ಸಭೆ ಮಾಡಲಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದ ಕಾಂಗ್ರೆಸ್ ಸರ್ಕಾರ; ಕಿಡಿಕಾರಿದ ಬಿಜೆಪಿ ನಾಯಕರು
ಬಿಜೆಪಿ ಜಿಲ್ಲಾಧ್ಯಕ್ಷ ನೇತೃತ್ವದಲ್ಲಿ ಬಿಜೆಪಿ ಶಾಸಕರ ಮೀಟಿಂಗ್ ಮಾಡಲಾಗಿದ್ದು, ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್, ಶಾಸಕರಾದ ಮಹೇಶ್ ಟೆಂಗಿನಕಾಯಿ, ಎಂಆರ್ ಪಾಟೀಲ್ ಸೇರಿ ಸಭೆಯಲ್ಲಿ ಜಿಲ್ಲಾ ಬಿಜೆಪಿ ಮುಖಂಡರು ಉಪಸ್ಥಿತಿರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.