ಧಾರವಾಡ: ಸೇವಾ ನ್ಯೂನ್ಯತೆ ಎಸಗಿದ ಹೋಟೆಲ್, ಮೇಕ್ ಮೈ ಟ್ರಿಪ್‌, ಓಯೋಗೆ ದಂಡ; ಗ್ರಾಹಕರ ಆಯೋಗದಿಂದ ಮಹತ್ತರ ಆದೇಶ

ಸೇವಾ ನ್ಯೂನ್ಯತೆ ಎಸಗಿದ ಹೋಟೆಲ್ ಸೇರಿ ಮೇಕ್ ಮೈ ಟ್ರಿಪ್‌, ಓಯೋಗೆ ಧಾರವಾಡ ಜಿಲ್ಲಾ ಗ್ರಾಹಕರ ವೇದಿಕೆ ಬರೋಬ್ಬರಿ 11.38 ಲಕ್ಷ ರೂ. ದಂಡ ವಿಧಿಸಿದೆ.

ಧಾರವಾಡ: ಸೇವಾ ನ್ಯೂನ್ಯತೆ ಎಸಗಿದ ಹೋಟೆಲ್, ಮೇಕ್ ಮೈ ಟ್ರಿಪ್‌, ಓಯೋಗೆ ದಂಡ; ಗ್ರಾಹಕರ ಆಯೋಗದಿಂದ ಮಹತ್ತರ ಆದೇಶ
ಸೇವಾ ನ್ಯೂನ್ಯತೆ ಎಸಗಿದ ಹೋಟೆಲ್, ಮೇಕ್ ಮೈ ಟ್ರಿಪ್‌, ಓಯೋಗೆ ದಂಡ ಹಾಕಿದ ಗ್ರಾಹಕರ ಆಯೋಗ
Follow us
| Updated By: ರಮೇಶ್ ಬಿ. ಜವಳಗೇರಾ

Updated on:Feb 16, 2023 | 7:19 PM

ಧಾರವಾಡ: ಸೇವಾ ನ್ಯೂನ್ಯತೆ ಎಸಗಿದ ಹೋಟೆಲ್, ಮೇಕ್ ಮೈ ಟ್ರಿಪ್‌, ಓಯೋ(MakeMy Trip, Oyo)ಗೆ ಜಿಲ್ಲಾ ಗ್ರಾಹಕರ ಆಯೋಗವು 11.38 ಲಕ್ಷ ರೂ. ದಂಡ ವಿಧಿಸಿದೆ. ಹುಬ್ಬಳ್ಳಿಯ ವಿದ್ಯಾನಗರ ಮೂಲದ ದೀಪಕ್ ರತನ್ ಹಾಗೂ ಸ್ನೇಹಿತರು ಸೇರಿ ಒಟ್ಟು 21 ಜನರು ಪ್ರವಾಸಕ್ಕೆ ಹೋಗಿದ್ದರು. ಈ ವೇಳೆ ಮುಂಚಿತವಾಗಿ ಬುಕ್ ಮಾಡಿದರೂ ರೂಮ್ ನೀಡದೆ. 21 ಜನರ ಕುಟುಂಬವೊಂದಕ್ಕೆ ತೊಂದರೆ ನೀಡಿರುವ ಹಿನ್ನೆಲೆ, ಹೋಟೆಲ್ ಹಾಗೂ ಬುಕ್ ಮಾಡಿಕೊಂಡ ಎರಡು ಕಂಪನಿಗಳಿಗೆ ಇದೀಗ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗವು ದಂಡ ವಿಧಿಸಿದೆ.

2019ರ ಡಿಸೆಂಬರ್‌ನಲ್ಲಿ ದೀಪಕ್ ಹಾಗೂ ಸ್ನೇಹಿತರು ಮೇಕ್ ಮೈ ಟ್ರಿಪ್ ಹಾಗೂ ಓಯೋ ಕಂಪನಿ ಮೂಲಕ ಆನ್‌ಲೈನ್ ಹಣ ಸಂದಾಯ ಮಾಡಿ, ಮಹಾರಾಷ್ಟ್ರದ ಲಾವಾಸಾದಲ್ಲಿನ ಹೋಟೆಲ್ ಅನಂತ ರೆಸಿಡೆನ್ಸಿಯಲ್ಲಿ ಡಿ. 23 ರಿಂದ 25ರವರೆಗೆ ಒಟ್ಟು ಎಂಟು ರೂಮ್‌ಗಳನ್ನು ಬುಕ್ ಮಾಡಿದ್ದರು. ನಂತರ ಅಲ್ಲಿಗೆ ಹೋಗಿ ಅನಂತ ರೆಸಿಡೆನ್ಸಿಯಲ್ಲಿ ವಿಚಾರಿಸಿದಾಗ ರೂಮ್‌ ಇಲ್ಲ ಎಂದು ಮ್ಯಾನೇಜರ್ ಹೇಳಿದ್ದಾರೆ. ಬಳಿಕ 5 ಮಹಿಳೆಯರು, 11 ಮಕ್ಕಳು ಸೇರಿ 21 ಜನ ವಾಹನದಲ್ಲಿಯೇ ಮಲಗಿದ್ದಾರೆ. ಈ ಕುರಿತು ಅನಂತ ರೆಸಿಡೆನ್ಸಿ ಹೋಟೆಲ್, ಮೇಕ್ ಮೈ ಟ್ರಿಪ್ ಹಾಗೂ ಓಯೋ ಕಂಪನಿಗಳ ವಿರುದ್ಧ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು. ಇದೀಗ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗವು ಒಂದು ತಿಂಗಳೊಳಗಾಗಿ ಒಟ್ಟು 11.38 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ಹೊರಡಿಸಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:24 pm, Wed, 15 February 23