ಧಾರವಾಡ ರಸ್ತೆಯಲ್ಲಿ ಬೆಲೆ ಬಾಳುವ ನಿವೇಶನದಲ್ಲಿ ಈ ಸ್ನಾತಕೋತ್ತರ ಕೃಷಿ ಪದವೀಧರ ದಶಕದಿಂದ ಪುಷ್ಪ ಕೃಷಿಯಲ್ಲಿ ತೊಡಗಿದ್ದಾರೆ!

ವಿಶೇಷ ಅಂದರೆ, ಇವರ ಹೂವಿನ ತೋಟದಲ್ಲಿ ಎಲ್ಲ ಕೆಲಸಗಳನ್ನು ಮಹಿಳೆಯರೇ ನಿರ್ವಹಿಸುತ್ತಿದ್ದಾರೆ. ಒಟ್ಟು 8 ಜನ ಮಹಿಳೆಯರು ಐದಾರು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದು, ಪುರುಷ ಕಾರ್ಮಿಕರಿಗೆ ಈ ಹೂವಿನ ತೋಟದಲ್ಲಿ ಪ್ರವೇಶವೇ ಇಲ್ಲ.

ಧಾರವಾಡ ರಸ್ತೆಯಲ್ಲಿ ಬೆಲೆ ಬಾಳುವ ನಿವೇಶನದಲ್ಲಿ ಈ ಸ್ನಾತಕೋತ್ತರ ಕೃಷಿ ಪದವೀಧರ ದಶಕದಿಂದ ಪುಷ್ಪ ಕೃಷಿಯಲ್ಲಿ ತೊಡಗಿದ್ದಾರೆ!
ಬೆಲೆ ಬಾಳುವ ನಿವೇಶನದಲ್ಲಿ ಈ ಸ್ನಾತಕೋತ್ತರ ಕೃಷಿ ಪದವೀಧರ ದಶಕದಿಂದ ಪುಷ್ಪ ಕೃಷಿಯಲ್ಲಿ ತೊಡಗಿದ್ದಾರೆ!
TV9kannada Web Team

| Edited By: sadhu srinath

Nov 24, 2022 | 2:50 PM

ಸಾಮಾನ್ಯವಾಗಿ ನಗರಕ್ಕೆ ಹೊಂದಿಕೊಂಡು, ಮುಖ್ಯ ರಸ್ತೆ ಪಕ್ಕದಲ್ಲಿಯೇ ಜಾಗ ಇದ್ದು ಬಿಟ್ಟರೆ ಅದಕ್ಕೆ ಬಂಗಾರದ ಬೆಲೆ ಇರುತ್ತೆ. ಹೀಗಾಗಿ ಅಲ್ಲಿ ವಾಣಿಜ್ಯ ಸಂಕೀರ್ಣ ಸೇರಿದಂತೆ ಏನೆಲ್ಲ ಮಾಡಬಹುದು ಅಂತಾ ಭೂ ಮಾಲೀಕರು ಲೆಕ್ಕಾಚಾರಕ್ಕೆ ಇಳಿಯುತ್ತಾರೆ. ಆದರೆ ಧಾರವಾಡದಲ್ಲಿ (Dharwad) ಓರ್ವ ಯುವಕ ತಮ್ಮ ಬೆಲೆ ಬಾಳುವ ಜಾಗದಲ್ಲಿ ಏನು ಮಾಡಿದ್ದಾನೆ ಅನ್ನೋದನ್ನು ಕೇಳಿದರೆ ಅಚ್ಚರಿಯಾಗುತ್ತೆ. ಎಂ.ಎಸ್ಸಿ ಅಗ್ರಿ ಮಾಡಿರೋ ಆತ ಇವತ್ತು ಲಕ್ಷ ಲಕ್ಷ ರೂಪಾಯಿ ಆದಾಯ (Income) ಗಳಿಸುತ್ತಿದ್ದಾನೆ. ಅಷ್ಟಕ್ಕೂ ಆತ ಮಾಡುತ್ತಿರೋದಾದರೂ ಏನು ಅಂದರೆ…

ಅಲ್ಲಿ ಬಣ್ಣ ಬಣ್ಣದ ಹೂವುಗಳು ನಳನಳಿಸುತ್ತಿವೆ- ಬಿಳಿ, ಹಳದಿ, ಕೆಂಪು, ಕೇಸರಿ ವರ್ಣದ ಬಗೆಬಗೆಯ ಹೂವುಗಳ ಲೋಕ ಅದು; ಅವುಗಳನ್ನು ಕೀಳುತ್ತಿರೋ ಮಹಿಳೆಯರು ಆ ಹೂ ತೋಟದ ಅಂದವನ್ನು ಹೆಚ್ಚಿಸಿದ್ದಾರೆ. ಇಂತಹ ಬಣ್ಣಬಣ್ಣದ ಲೋಕ ಇರೋದು ಧಾರವಾಡದಲ್ಲಿ. ನಗರದ ನರೇಂದ್ರ ಕ್ರಾಸ್ ಬಳಿಯ ಪಾಲಿ ಹೌಸ್ ನಲ್ಲಿ ಇಂಥದ್ದೊಂದು ಲೋಕ ಅನಾವರಣಗೊಂಡಿದೆ (Floriculture).

ಧಾರವಾಡ-ಬೆಳಗಾವಿ ಮುಖ್ಯ ರಸ್ತೆಯ ಪಕ್ಕದಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ತಲೆ ಎತ್ತಿದ್ದರೆ ಅವುಗಳ ಪಕ್ಕದಲ್ಲಿಯೇ ಒಂದೂವರೆ ಎಕರೆ ಜಮೀನನ್ನು ಚೆನ್ನಬಸವ ಪಟ್ಟಣಶೆಟ್ಟಿ ಅನ್ನೋರು ಹೂವುಗಳನ್ನು ಬೆಳೆಸಲು ಬಳಸಿಕೊಂಡಿದ್ದಾರೆ! ಎಂ.ಎಸ್ಸಿ. ಅಗ್ರಿ ಮುಗಿಸಿರೋ ಚೆನ್ನಬಸವ ಅವರು ತಮಗಿದ್ದ ಒಂದೂವರೆ ಎಕರೆ ಭೂಮಿಯಲ್ಲಿ ಏನಾದರೂ ಮಾಡಲು ನಿರ್ಧರಿಸಿದರು. ಕೂಡಲೇ ಅವರ ತಲೆಯಲ್ಲಿ ಬಂದಿದ್ದು ಪುಷ್ಪೋದ್ಯಮ. ಕೂಡಲೇ ಅದರಲ್ಲಿನ ಸುಮಾರು 12 ಗುಂಟೆ ಜಾಗೆಯಲ್ಲಿ ಜರ್ಬೆರಾ ಹೂವನ್ನು ಬೆಳೆಯಲು ನಿರ್ಧರಿಸಿದರು. 2009 ರಲ್ಲಿಯೇ ಈ ನಿರ್ಧಾರ ಮಾಡಿ, ಮಹಾರಾಷ್ಟ್ರದ ಪುಣೆಯಿಂದ ಹೂವಿನ ಸಸಿಗಳನ್ನು ಖರೀದಿಸಿ ತಂದು, ಸುಮಾರು 8 ಸಾವಿರದಷ್ಟು ಸಸಿಗಳನ್ನು ಬೆಳೆಸಿದರು. ಅವತ್ತು ಶುರುವಾದ ಅವರ ಈ ಪುಷ್ಪೋದ್ಯಮ ಇವತ್ತು ಅವರಿಗೆ ವರ್ಷಕ್ಕೆ 10 ಲಕ್ಷ ರೂಪಾಯಿ ಆದಾಯ ನೀಡುತ್ತಿದೆ.

ಇನ್ನು ತಮ್ಮನ್ನು ತಾವು ಪುಷ್ಪೋದ್ಯಮಿ ಅಂತಾನೇ ಹೇಳಿಕೊಳ್ಳುವ ಚನ್ನಬಸವ ಅವರು, ಈ ಉದ್ಯಮವನ್ನು ಚೆನ್ನಾಗಿ ನಡೆಸಿದಂತೆಲ್ಲಾ ನಾನು ಆದಾಯ ತೆಗೆಯುತ್ತಿದ್ದೇನೆ ಎನ್ನುತ್ತಾರೆ. ಅಲ್ಲದೇ ರಾಸಾಯನಿಕಗಳನ್ನು ಬಳಸದೇ, ಮಜ್ಜಿಗೆಯಂಥ ವಸ್ತುಗಳನ್ನು ಸಹ ಈ ಹೂವುಗಳಿಗೆ ಸಿಂಪಡಣೆ ಮಾಡಿ, ರೋಗಗಳು ಬರದಂತೆ ತಡೆಯುತ್ತಿದ್ದಾರೆ.

ಇನ್ನೊಂದು ವಿಶೇಷ ಅಂದರೆ, ಇವರ ಹೂವಿನ ತೋಟದಲ್ಲಿ ಎಲ್ಲ ಕೆಲಸಗಳನ್ನು ಮಹಿಳೆಯರೇ ನಿರ್ವಹಿಸುತ್ತಿದ್ದಾರೆ. ಒಟ್ಟು 8 ಜನ ಮಹಿಳೆಯರು ಐದಾರು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದು, ಪುರುಷ ಕಾರ್ಮಿಕರಿಗೆ ಈ ಹೂವಿನ ತೋಟದಲ್ಲಿ ಪ್ರವೇಶವೇ ಇಲ್ಲ. ಹೀಗಾಗಿ ಮಹಿಳೆಯರಿಗೇ ಉದ್ಯೋಗವನ್ನೂ ನೀಡಿದ್ದು, ಮದುವೆ ಸೀಜನ್ ಇದ್ದಾಗ ಒಂದು ಹೂವಿಗೆ 15 ರೂಪಾಯಿಯವರೆಗೂ ಬೆಲೆ ಬರುತ್ತದೆ. ಹುಬ್ಬಳ್ಳಿ-ಧಾರವಾಡ ಮಾತ್ರವಲ್ಲದೇ ಬೆಳಗಾವಿ, ಬೆಂಗಳೂರಿಗೂ ಸಹ ಹೂವುಗಳನ್ನು ಕಳುಹಿಸಿಕೊಡಲಾಗುತ್ತೆ ಎನ್ನುತ್ತಾರೆ ಪುಷ್ಪೊದ್ಯಮಿ ಚನ್ನಬಸವ ಪಟ್ಟಣಶೆಟ್ಟಿ.

ನಗರದಲ್ಲಿ ಭೂಮಿ ಇದ್ದರೆ ಸಾಕು ಜನರು ಕಟ್ಟಡ ಕಟ್ಟಲು ಬಳಸಿಕೊಳ್ಳುತ್ತಾರೆ. ಆದರೆ ತಾನು ಕಲಿತ ವಿದ್ಯೆಯನ್ನೇ ಆಧರಿಸಿ ಅದೇ ಚಟುವಟಿಕೆ ಮಾಡುವ ಮೂಲಕ ಚನ್ನಬಸವ ಅವರು ಬೇರೆಯವರಿಗೆ ಮಾದರಿಯಾಗಿ ಹೊರಹೊಮ್ಮಿದ್ದಾರೆ. ಹೂವಿನಿಂದ ಹೀಗೂ ಕೂಡ ಲಾಭ ಗಳಿಸಬಹುದು ಅನ್ನೋದನ್ನು ಸಾಧಿಸಿ ತೋರಿಸಿದ್ದಾರೆ ಎನ್ನುತ್ತಾರೆ ಇಲ್ಲಿನ ಕೂಲಿಕಾರಳಾದ ಮಂಜುಳಾ ಅವರು. (ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ 9, ಧಾರವಾಡ)

Also Read:  ಹಿಂದುಳಿದ ಚಾಮರಾಜನಗರ ಜಿಲ್ಲೆಯಲ್ಲಿ ಬಡವರಿಗೆ ಆಸರೆಯಾಗಿದ್ದ ಇಂದಿರಾ ಕ್ಯಾಂಟಿನ್ ಬಂದ್!

Also Read: ನ. 27 ರಂದು ಪ್ರಲ್ಹಾದ ಜೋಶಿ ಜನ್ಮದಿನ -ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್, ಸಂಭ್ರಮಾಚರಣೆ ಬೇಡ ಎಂದು ಜೋಶಿ ಮನವಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada