ಧಾರವಾಡದಲ್ಲಿ ಮಹಿಳೆ ದುರಂತ ಸಾವು: ನೀರು ಕಾಯಿಸುವಾಗ ಇರಲಿ ಎಚ್ಚರಿಕೆ!

ಧಾರವಾಡದ ದೇವರ ಹುಬ್ಬಳ್ಳಿ ಗ್ರಾಮದಲ್ಲಿ ನೀರು ಕಾಯಿಸುವಾಗ ವಿದ್ಯುತ್ ಸ್ಪರ್ಶಿಸಿ ಓರ್ವ ಗೃಹಿಣಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಬಕೆಟ್‌ನಲ್ಲಿ ಕಾಯಿಲ್ ಮೂಲಕ ನೀರು ಕಾಯಿಸುತ್ತಿದ್ದಾಗ ಆಕಸ್ಮಿಕವಾಗಿ ಸ್ಪರ್ಶಿಸಿ ಈ ದುರ್ಘಟನೆ ಸಂಭವಿಸಿದೆ. ಹೀಗಾಗಿ ಮನೆಯಲ್ಲಿ ವಿದ್ಯುತ್ ಉಪಕರಣಗಳನ್ನು ಬಳಸುವಾಗ ಅತ್ಯಂತ ಎಚ್ಚರಿಕೆ ವಹಿಸುವುದು ಮುಖ್ಯ.

ಧಾರವಾಡದಲ್ಲಿ ಮಹಿಳೆ ದುರಂತ ಸಾವು: ನೀರು ಕಾಯಿಸುವಾಗ ಇರಲಿ ಎಚ್ಚರಿಕೆ!
ನಿವೇದಿತಾ ನಾಯ್ಕರ್
Image Credit source: tv9 kannada
Edited By:

Updated on: Apr 02, 2026 | 7:22 PM

ಧಾರವಾಡ, ಏಪ್ರಿಲ್​ 02: ಮನೆಯಲ್ಲಿ ನೀರು ಕಾಯಿಸುವಾಗ ವಿದ್ಯುತ್​ ಸ್ಪರ್ಶಿಸಿ ಗೃಹಿಣಿ ಬಾತ್ರೂಮ್​​ನಲ್ಲೇ ಸಾವನ್ನಪ್ಪಿರುವಂತಹ (death) ಘಟನೆ ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ. ನಿವೇದಿತಾ ನಾಯ್ಕರ್(24) ಮೃತ ಗೃಹಿಣಿ. ನಿವೇದಿತಾ ನಾಯ್ಕರ್ ಎರಡು ಮಕ್ಕಳ ತಾಯಿ. ಸದ್ಯ ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ನಿವೇದಿತಾ ನಾಯ್ಕರ್​​ ಬಕೆಟ್​​ನಲ್ಲಿ ಕ್ವಾಯಿಲ್ ಮೂಲಕ ನೀರು ಕಾಯಿಸಲು ಇಟ್ಟಿದ್ದರು. ಈ ವೇಳೆ ಆಕಸ್ಮಿಕವಾಗಿ ಬಕೆಟ್​ ಮುಟ್ಟಿದ್ದಾರೆ. ಈ ವೇಳೆ ವಿದ್ಯುತ್​ ಸ್ಪರ್ಶದಿಂದ ನಿವೇದಿತಾ ಬಾತ್ರೂಮ್​​ನಲ್ಲೇ ಸಾವನ್ನಪ್ಪಿದ್ದಾರೆ.

ವಿದ್ಯುತ್ ಕಂಬ ಬಿದ್ದು ಕಾರ್ಮಿಕ ದುರ್ಮರಣ

ವಿದ್ಯುತ್ ಕಂಬ ಬಿದ್ದು ಕಾರ್ಮಿಕ ದುರ್ಮರಣ ಹೊಂದಿರುವಂತಹ ಘಟನೆ ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಖತಗಾಂವ್​ನಲ್ಲಿ ನಡೆದಿದೆ. ಔರಾದ್ ತಾಲೂಕಿನ ಅಲ್ಲಾಪುರದ ನಿವಾಸಿ ಜಿಂಟಪ್ಪಾ(19) ಮೃತ ಕಾರ್ಮಿಕ. ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಣಕಾಸಿನ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ: ಪತಿಯಿಂದಲೇ ದಾರುಣವಾಗಿ ಪತ್ನಿಯ ಹತ್ಯೆ

ಹೊಸದಾಗಿ ವಿದ್ಯುತ್ ಕಂಬ ಅಳವಡಿಸುವಾಗ ಅವಘಡ ಸಂಭವಿಸಿದೆ. ಗುತ್ತಿಗೆದಾರನ ನಿರ್ಲಕ್ಷ್ಯಕ್ಕೆ ಕೂಲಿ ಕಾರ್ಮಿಕ ಜಿಂಟಪ್ಪಾ ಬಲಿಯಾಗಿದ್ದು, ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಂಬಂಧಿಕರಿಂದ ಕಮಲನಗರ ಪೊಲೀಸ್ ಠಾಣೆ ದೂರು ನೀಡಲಾಗಿದೆ.

ಅಪರಿಚಿತ ವಾಹನ ಡಿಕ್ಕಿಯಿಂದ ಬೈಕ್ ಸವಾರರಿಬ್ಬರ ಸಾವು

ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸಾವನ್ನಪ್ಪಿರುವಂತಹ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹನಗವಾಡಿಯ ಸಮೀಪ ಸಾಸ್ವಿಹಳ್ಳಿ ಆನವೇರಿ ರಸ್ತೆಯಲ್ಲಿ ನಡೆದಿದೆ. ನವೀನ್ ಎನ್ ಎಂ (33) ಹಾಗೂ ಶಶಿಕುಮಾರ್ (32) ಮೃತ ಬೈಕ್ ಸವಾರರು.

ಇದನ್ನೂ ಓದಿ: ಬೆಂಗಳೂರಿನಲ್ಲೊಂದು ಹೃದಯವಿದ್ರಾವಕ ಘಟನೆ: ಬಕೆಟ್ ನೀರಿನಲ್ಲಿ ಮುಳುಗಿ ಮಗು ಸಾವು, ಬೇಸರದಿಂದ ತಾಯಿ ಆತ್ಮಹತ್ಯೆ

ಅಪರಿಚಿತ ವಾಹನ ಡಿಕ್ಕಿ ರಭಸಕ್ಕೆ ನವೀನ್ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಶಶಿಕುಮಾರ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಸಾವನ್ನಪ್ಪಿದ್ದಾರೆ. ಸ್ವಗ್ರಾಮದಿಂದ ಕಾರ್ಯ ನಿಮಿತ್ಯ ಆನವೇರಿಗೆ ಬೈಕ್ ತೆರಳುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಅಪಘಾತ ಮಾಡಿದ ಚಾಲಕ ವಾಹನ ಸಹಿತ ಪರಾರಿ ಆಗಿದ್ದು, ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಮಾಡಿದ ವಾಹನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us