ಕಾಂಗ್ರೆಸ್​​ನವರೇ ಆಗಿರಲಿ, ನಮ್ಮ‌‌ ಕುಟುಂಬದವರೇ ಆಗಿರಲಿ ಅಂತವರನ್ನ ಕ್ಷಮಿಸಲ್ಲ: ಶಾಸಕ ಪ್ರಸಾದ್ ಅಬ್ಬಯ್ಯ

ಹುಬ್ಬಳ್ಳಿಯಲ್ಲಿ ಅಕ್ರಮ ಆಹಾರ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ, ಅಕ್ರಮದಲ್ಲಿ ನನ್ನ ಕುಟುಂಬ ಸದಸ್ಯರು ಭಾಗಿಯಾದರೂ ಬಿಡುವ ಪ್ರಶ್ನೆ ‌ಇಲ್ಲ ಎಂದು ಹೇಳಿದ್ದಾರೆ. ಮುಸ್ಲಿಮರು ಈ ದೇಶದ ಪ್ರಜೆಗಳಲ್ವಾ, ಈ ನೆಲದಲ್ಲಿ ಹುಟ್ಟಿಲ್ವಾ? ಎಂದು ಮುಸ್ಲಿಂ ಬಜೆಟ್​ ಎಂದು ಬಿಜೆಪಿ ನಾಯಕರ ಟೀಕೆಗೆ ತಿರುಗೇಟು ಕೊಟ್ಟಿದ್ದಾರೆ.

ಕಾಂಗ್ರೆಸ್​​ನವರೇ ಆಗಿರಲಿ, ನಮ್ಮ‌‌ ಕುಟುಂಬದವರೇ ಆಗಿರಲಿ ಅಂತವರನ್ನ ಕ್ಷಮಿಸಲ್ಲ: ಶಾಸಕ ಪ್ರಸಾದ್ ಅಬ್ಬಯ್ಯ
ಕಾಂಗ್ರೆಸ್​​ನವರೇ ಆಗಿರಲಿ, ನಮ್ಮ‌‌ಕುಟುಂಬದವರೇ ಆಗಿರಲಿ ಅಂತವರನ್ನ ಕ್ಷಮಿಸಲ್ಲ: ಶಾಸಕ ಪ್ರಸಾದ್ ಅಬ್ಬಯ್ಯ
Updated By: ಗಂಗಾಧರ​ ಬ. ಸಾಬೋಜಿ

Updated on: Mar 08, 2025 | 3:12 PM

ಹುಬ್ಬಳ್ಳಿ, ಮಾರ್ಚ್​​ 08: ಮಕ್ಕಳು, ಬಾಣಂತಿಯರು ತಿನ್ನುವ ಅನ್ನಕ್ಕೆ (food) ಕಣ್ಣ ಹಾಕಿದವರು ಕಾಂಗ್ರೆಸ್​​ನವರೇ ಆಗಿರಲಿ, ನಮ್ಮ‌‌ಕುಟುಂಬದ ಸದಸ್ಯನೇ ಆಗಿರಲಿ ಅಂತವರನ್ನು ಕ್ಷಮಿಸಲ್ಲ ಎಂದು ಕಾಂಗ್ರೆಸ್​​ ಶಾಸಕ ಪ್ರಸಾದ್ ಅಬ್ಬಯ್ಯ (Abbayya Prasad) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ರಮ ಅಹಾರ ಸಂಗ್ರಹ ಕೇಸ್​ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಪ ಬಿಜೆಪಿಯವರು ಅಬ್ಬಯ್ಯ ಅವರ ಕಾಲ್ ಡಿಟೇಲ್ಸ್ ತೆಗೆಯರಿ ಅರ್ಥ ಆಗತ್ತೆ ಎನ್ನುತ್ತಿದ್ದಾರೆ. ನನ್ನ ಕಾಲ್ ರೆಕಾರ್ಡ್ ಏನು ತೆಗೆಯುತ್ತೀರಿ, ನಿಮ್ಮ ರೆಕಾರ್ಡ್ ‌ಮೊದಲು ನೋಡಿ. ನಿಮಗೆ ನಾಚಿಕೆ ಆಗಬೇಕು. ನನ್ನ ರೆಕಾರ್ಡ್ ಹುಬ್ಬಳ್ಳಿ ಜನರಿಗೆ ಗೊತ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ನಿಮ್ಮ ಹಿಸ್ಟರಿ ಹುಬ್ಬಳ್ಳಿ ಧಾರವಾಡ ಜನರಿಗೆ ಗೊತ್ತಿದೆ. ಪೊಲೀಸ್ ಕಮೀಷನರ್ ಎಲ್ಲೋ ಒಂದು ಕಡೆ ಎಡವಿದಾರೆ. ಕಳ್ಳರು, ಸುಳ್ಳರು ಎಲ್ಲ ಪಕ್ಷದಲ್ಲಿ ಇರುತ್ತಾರೆ. ಅದು ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಈಗಾಗಲೇ ವಜಾ ಮಾಡಿದ್ದೇವೆ. ಪ್ರಧಾನಿ ಮೋದಿ ಹಿಡಕೊಂಡು‌ ಜೋಶಿವರೆಗೂ ಬರೀ ಜಾತಿ ಧರ್ಮದ ಮೇಲೆ ಅವರ ಅಸ್ತಿತ್ವ. ಮುಸ್ಲಿಂ ಪಾಕಿಸ್ತಾನ‌ ಬಿಟ್ಟರೇ ಅವರಿಗೆ ಬೇರೆ ಏನೂ‌ ಇಲ್ಲ ಎಂದು ಕಿಡಿಕಾರಿದ್ದಾರೆ.

ಮುಸ್ಲಿಮರು ಈ ದೇಶದ ಪ್ರಜೆಗಳಲ್ವಾ, ಈ ನೆಲದಲ್ಲಿ ಹುಟ್ಟಿಲ್ವಾ?

ಮುಸ್ಲಿಂ ಬಜೆಟ್​ ಎಂದು ಬಿಜೆಪಿ ನಾಯಕರ ಟೀಕೆ ವಿಚಾರವಾಗಿ ಮಾತನಾಡಿದ ಅವರು, ಮುಸ್ಲಿಮರು ಈ ದೇಶದ ಪ್ರಜೆಗಳಲ್ವಾ, ಈ ನೆಲದಲ್ಲಿ ಹುಟ್ಟಿಲ್ವಾ? ಅವರು ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ ಅಲ್ವಾ. ಮುಖ್ಯಮಂತ್ರಿ ಸಿದ್ದರಾಮಯ್ಯ ಅದ್ಭುತ ಬಜೆಟ್ ಕೊಟ್ಟಿದ್ದಾರೆ. ಬಿಜೆಪಿ ನಾಯಕರು ಬೇಕಾಬಿಟ್ಟಿಯಾಗಿ ಮಾತನಾಡುತ್ತಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ
ಹೃದಯಾಘಾತದಿಂದ ಬಟ್ಟೆ ಅಂಗಡಿ ಸಿಬ್ಬಂದಿ ಸಾವು, ಕೊನೇ ಕ್ಷಣದ ಸಿಸಿಟಿವಿ ದೃಶ್ಯ
ಪೌಷ್ಟಿಕ ಆಹಾರ ಅಕ್ರಮ ಸಾಗಾಟ: ಕಿಂಗ್​ಪಿನ್ ಕೈ ನಾಯಕಿಗೆ ದರ್ಗಾದಲ್ಲಿ ಆಶ್ರಯ?
ಅಂಗನವಾಡಿ ಆಹಾರ ಅಕ್ರಮವಾಗಿ ಸಂಗ್ರಹ: 18 ಅಂಗನವಾಡಿ ಕಾರ್ಯಕರ್ತೆಯರ ಬಂಧನ
ಹುಬ್ಬಳ್ಳಿ: ಮಕ್ಕಳ ಅನ್ನಕ್ಕೂ ಕನ್ನ ಹಾಕಿದ ‘ಕೈ’ ನಾಯಕಿ

ಇದನ್ನೂ ಓದಿ: ಹುಬ್ಬಳ್ಳಿ ಪೌಷ್ಟಿಕ ಆಹಾರ ಅಕ್ರಮ ಸಾಗಾಟ ಪ್ರಕರಣ: ಕಿಂಗ್​ಪಿನ್ ಕಾಂಗ್ರೆಸ್ ನಾಯಕಿ ದರ್ಗಾದಲ್ಲಿ ತಲೆಮರೆಸಿಕೊಂಡಿರುವ ಶಂಕೆ

ಅಲ್ವಸಂಖ್ಯಾತರು ಅಂದರೆ ‌ಮುಸ್ಲಿಂ ಅಲ್ಲ, ಜೈನ್, ಸಿಖ್ಖರೂ ಬರುತ್ತಾರೆ. ಬಿಜೆಪಿಯವರು ಯಾವ ಕಾರಣಕ್ಕೆ ಹಲಾಲ್ ಬಜೆಟ್ ಅಂತಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಕೊಟ್ಟಿದ್ದು ಕೇವಲ ಒಂದು ಪರ್ಸೆಂಟ್. ಬಸವರಾಜ ಬೊಮ್ಮಾಯಿ ಕೂಡ ಒಂದು ಪರ್ಸೆಂಟ್ ಕೊಟ್ಟಿದ್ದರು. ಹಾಗಾದರೆ ಅವರು‌‌ ಕೊಟ್ಟಿದ್ದು‌ ಹಲಾಲ್ ಬಜೆಟ್​ ನಾ? ಕೇಂದ್ರ ಸರ್ಕಾರ ಬಾಂಗ್ಲಾದೇಶ, ಅಫ್ಘಾನಿಸ್ತಾನಕ್ಕೆ ಹಣ ಕೊಡುತ್ತೆ. ಅದು ಯಾವ ಬಜೆಟ್​ ಎಂದು ಪ್ರಸಾದ್ ಅಬ್ಬಯ್ಯ ವಾಗ್ದಾಳಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:12 pm, Sat, 8 March 25