ನೇಹಾ ಹಂತಕ ಫಯಾಜ್​ ಕಾಲೇಜಿನಿಂದಲೇ ಅಮಾನತು: ಮುತಾಲಿಕ್ ಎಂಟ್ರಿ ಬೆನ್ನಲ್ಲೇ ಈ ನಿರ್ಧಾರ

ನೇಹಾ ಹಿರೇಮಠ ಹತ್ಯಾ ಪ್ರಕರಣದ ಆರೋಪಿ ಫಯಾಜ್ ಅವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಪ್ರಮೋದ್ ಮುತಾಲಿಕ್ ಅವರು ಪಿ.ಸಿ. ಜಾಬಿನ್ ಕಾಲೇಜಿಗೆ ಭೇಟಿ ನೀಡಿದ್ದಾರೆ. ಇದರ ಬೆನ್ನಲ್ಲೇ ಕಾಲೇಜ್ ಆಡಳಿತ ಮಂಡಳಿ ಫಯಾಜ್​ನ​ನ್ನು ಅಮಾನತುಗೊಳಿಸಿದೆ. ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ನಿನ್ನೆ ತಾನೇ ಮುತಾಲಿಕ್ ಆಗ್ರಹಿಸಿದ್ದರು.

ನೇಹಾ ಹಂತಕ ಫಯಾಜ್​ ಕಾಲೇಜಿನಿಂದಲೇ ಅಮಾನತು: ಮುತಾಲಿಕ್ ಎಂಟ್ರಿ ಬೆನ್ನಲ್ಲೇ ಈ ನಿರ್ಧಾರ
ನೇಹಾ ಹಂತಕ ಫಯಾಜ್​ ಕಾಲೇಜಿನಿಂದಲೇ ಅಮಾನತು: ಮುತಾಲಿಕ್ ಎಂಟ್ರಿ ಬೆನ್ನಲ್ಲೇ ಈ ನಿರ್ಧಾರ
Edited By:

Updated on: Jan 31, 2025 | 4:45 PM

ಹುಬ್ಬಳ್ಳಿ, ಜನವರಿ 31: ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ (Neha Hiremath) ಕೊಲೆ ಕೇಸ್ ಮತ್ತೆ ಮುನ್ನೆಲೆಗೆ ಬಂದಿದೆ. ಸಿಬಿಐಗೆ ಕೇಸ್​ ವಹಿಸುವಂತೆ ನಿನ್ನೆ ಆಗ್ರಹಿಸಿದ್ದ ಮುತಾಲಿಕ್, ಇಂದು ಆರೋಪಿ ಫಯಾಜ್ ಓದಿತ್ತಿದ್ದ ಕಾಲೇಜ್​​ಗೆ ಭೇಟಿ ನೀಡಿದ್ದಾರೆ. ಇದುವರೆಗೂ ಫಯಾಜ್​ ನನ್ನ ಏಕೆ ಅಮಾನತ್ತು ಮಾಡಿಲ್ಲವೆಂದು ಪ್ರಿನ್ಸಿಪಾಲ್​ರನ್ನು ತರಾಟೆ ತೆಗೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಫಯಾಜ್​​ನನ್ನು ಅಮಾನತು ಮಾಡಲಾಗಿದ್ದು, ಪರೀಕ್ಷೆಗೂ ಅವಕಾಶ ಕೊಡದಿರಲು ಕಾಲೇಜ್ ಆಡಳಿತ ಮಂಡಳಿ ನಿರ್ಧರಿಸಿದೆ.

ಪಿಸಿ ಜಾಬಿನ್ ಕಾಲೇಜ್ ಪ್ರಿನ್ಸಿಪಾಲ್ ಎಲ್.ಡಿ ಹೊರಕೇರಿ ಹೇಳಿದ್ದಿಷ್ಟು

ಪಿಸಿ ಜಾಬಿನ್ ಕಾಲೇಜ್​ನಲ್ಲಿ ಫಯಾಜ್ 2022 ರಲ್ಲಿ​​ ಬಿಸಿಎ ವ್ಯಾಸಂಗ ಮಾಡತಿದ್ದ. ಐದು ಮತ್ತು ಆರನೇ ಸೆಮಿಸ್ಟರ್​ನಲ್ಲಿ ಕೆಲ ವಿಷಯಗಳಲ್ಲಿ ಫೇಲ್ ಆಗಿದ್ದ ಫಯಾಜ್, ಇನ್ನೂ ಮುಂದೆ ಕಾಲೇಜ್​ಗೆ ನಾವು ಬರಲು ಅನುಮತಿ ಕೊಡಲ್ಲ. ನಾವು ಪರಿಪೂರ್ಣವಾಗಿ ಆತನನ್ನು ಅಮಾನತು ಮಾಡಿದ್ದೇವೆ ಎಂದು ಪಿಸಿ ಜಾಬಿನ್ ಕಾಲೇಜ್ ಪ್ರಿನ್ಸಿಪಾಲ್ ಎಲ್.ಡಿ ಹೊರಕೇರಿ ಹೇಳಿದ್ದಾರೆ.

ಫಯಾಜ್ ಅಮಾನತು ನಮಗೆ‌ ಸಮಾಧಾನ ತಂದಿದೆ ಎಂದ ಮುತಾಲಿಕ್

ಈ ಬಗ್ಗೆ ಮಾತನಾಡಿರುವ ಪ್ರಮೋದ್ ಮುತಾಲಿಕ್, ನೇಹಾ ಹಿರೇಮಠ ಕೊಲೆಯಾಗಿ ಒಂಬತ್ತು ತಿಂಗಳು ಕಳೆದಿದೆ. ಒಂಬತ್ತು ತಿಂಗಳು ಕಳೆದರೂ ಕಳಂಕಿತನನ್ನ ಕಾಲೇಜಿನಿಂದ ಅಮಾನತು ಮಾಡಿರಲಿಲ್ಲ. ಈ ಕುರಿತು ಕಾಲೇಜು ಆಡಳಿತ ಮಂಡಳಿಯನ್ನ ಪ್ರಶ್ನೆ ಮಾಡಲಾಯಿತು. ನಾವು ಪ್ರಶ್ನೆ ಮಾಡಿದ ನಂತರ ಇದೀಗ ಫಯಾಜ್ ನನ್ನ ಅಮಾನತು ಮಾಡಿ‌ ಆದೇಶ ಮಾಡಿದ್ದಾರೆ. ಕೊಲೆಯಾಗಿ 24 ಗಂಟೆಯೊಳಗಾಗಿ ಮಾಡಬೇಕಾಗಿದ್ದ ಕೆಲಸ ಇಂದು ಮಾಡಿದ್ದಾರೆ. ಇದು ಹೋರಾಟ ಮಾಡುವಂತಹ ಕೆಲಸ ಅಲ್ಲ. ಇದು ಕಾಲೇಜಿನ ಜವಾಬ್ದಾರಿ. ಇಂದು ನಾವು ಪ್ರಶ್ನೆ ಮಾಡಿದ ನಂತರ ಫಯಾಜ್​ನನ್ನ ಕಾಲೇಜಿನಿಂದ ಅಮಾನತು ಮಾಡಿದ್ದಾರೆ. ಇದು ನಮಗೆ‌ ಸಮಾಧಾನ ತಂದಿದೆ ಎಂದಿದ್ದಾರೆ.

ನಿನ್ನೆ ತಾನೇ ಸಿಬಿಐಗೆ ಕೇಸ್​ ವಹಿಸುವಂತೆ ಆಗ್ರಹಿಸಿದ್ದ ಮುತಾಲಿಕ್, ಇಂದು ಮತ್ತೊಂದು ಹೋರಾಟ ಆರಂಭಿಸಿದ್ದರು. ಫಯಾಜ್​ನನ್ನ ಅಮಾನತು ಮಾಡದ ಪ್ರಿನ್ಸಿಪಾಲ್​ರನ್ನು ತರಾಟೆಗೆ ತೆಗೆದುಕೊಂಡಿದ್ದರು.  ಕೊಲೆ ಮಾಡಿದವನನ್ನ ನೀವು ಕಾಲೇಜ್​ ಅಲ್ಲಿ ಇಟ್ಕೊಂಡಿರುವುದು ಹೇಗೆ? ಕೂಡಲೇ ಆತನನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದರು. ನಾವು ಇಂದು ಒಂದು ನಿರ್ಣಯ ಮಾಡುತ್ತೇವೆ ಎಂದು ಪ್ರಿನ್ಸಿಪಾಲ್ ಹೇಳಿದ್ದರು. ಅಮಾನತು ಮಾಡದೆ ಹೋದರೆ ನಾವು ಧರಣಿ ಮಾಡುವುದಾಗಿ ಮುತಾಲಿಕ್ ಎಚ್ಚರಿಸಿದ್ದರು.

ಇದನ್ನೂ ಓದಿ: ಪಠ್ಯ ಕೈಬಿಟ್ಟರಷ್ಟೇ ಸಾಲದು, ಆ ಲೇಖಕನಿಗೆ ಗುಂಡು ಹೊಡೆಯಬೇಕು ಎಂದ ಪ್ರಮೋದ್ ಮುತಾಲಿಕ್

ನೇಹಾ ಹಿರೇಮಠ ಕೊಲೆ ವಿಚಾರವಾಗಿ ನಿನ್ನೆಯಿಂದ ಮತ್ತೊಂದು ಸುತ್ತಿನ ಹೋರಾಟ ಆರಂಭಿಸಿದ ಮುತಾಲಿಕ್, ನೇಹಾ ಕೊಲೆಯಲ್ಲಿ ಪ್ರಭಾವಿ ಶಾಸಕನ ಕೈವಾಡ ಇದೆ ಎಂದು ಆರೋಪಿಸಿದ್ದಾರೆ. ಇದೀಗ ಫಯಾಜ್ ಅಮಾನತು ಮಾಡುವಂತೆ ಆಗ್ರಹಿಸಿ ಪಿಸಿ ಜಾಬಿನ್ ಕಾಲೇಜ್​ಗೆ ಭೇಟಿ ನೀಡಿದ್ದರು. ಏಪ್ರಿಲ್ 18 ರಂದು ನೇಹಾ ಕೊಲೆ ನಡೆದಿದ್ದ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:35 pm, Fri, 31 January 25