AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಂಡತಿಯನ್ನ ಕೊಲೆ ಮಾಡಿದ್ದ ರೌಡಿಯನ್ನು ಕೊನೆಗೂ ಹುಬ್ಬಳ್ಳಿ ಪೊಲೀಸರು ಮಾಸ್ಟರ್ ಪ್ಲ್ಯಾನ್ ಹಾಕಿ ಸಿನಿಮೀಯ ಶೈಲಿಯಲ್ಲಿ ಬಂಧಿಸಿದರು

ಇಲ್ಲಿಯವರೆಗೂ ನಾನು ಯಾರ ಕೈಗೂ ಸಿಕ್ಕಿರಲಿಲ್ಲ. ಇವನಿಂದ ನನ್ನ ಬಂಧನ ಆಗಿದೆ ಎಂದು ಕಲ್ಲಿನಿಂದ ಪಿಎಸ್‌ಐಗೆ ಹಲ್ಲೆ ಮಾಡಿದ್ದಾನೆ. ಇದರಿಂದಾಗಿ ಸತೀಶ್ ಗೋನಾ ಮೇಲೆ ಇನ್ಸ್ಪೆಕ್ಟರ್ ರಫೀಕ ತಹಶಿಲ್ದಾರ ಫೈರಿಂಗ್ ಮಾಡಿದ್ದಾರೆ.

ಹೆಂಡತಿಯನ್ನ ಕೊಲೆ ಮಾಡಿದ್ದ ರೌಡಿಯನ್ನು ಕೊನೆಗೂ ಹುಬ್ಬಳ್ಳಿ ಪೊಲೀಸರು ಮಾಸ್ಟರ್ ಪ್ಲ್ಯಾನ್ ಹಾಕಿ ಸಿನಿಮೀಯ ಶೈಲಿಯಲ್ಲಿ ಬಂಧಿಸಿದರು
ರೌಡಿಯನ್ನು ಕೊನೆಗೂ ಹುಬ್ಬಳ್ಳಿ ಪೊಲೀಸರು ಮಾಸ್ಟರ್ ಪ್ಲ್ಯಾನ್ ಹಾಕಿ ಸಿನಿಮೀಯ ಶೈಲಿಯಲ್ಲಿ ಬಂಧಿಸಿದರು
ಶಿವಕುಮಾರ್ ಪತ್ತಾರ್
| Edited By: |

Updated on:Nov 27, 2023 | 11:59 AM

Share

ಆತ ನಟೋರಿಯಸ್ ರೌಡಿ, ಹಲವು ಪೊಲೀಸ್ ಠಾಣೆಗೆ ಬೇಕಾದಂತ ಕ್ರಿಮಿನಲ್. ಆತನ‌ ಮೇಲೆ ವಾರಂಟ್ ಜಾರಿಯಾಗಿತ್ತು. ಆದ್ರೂ ಕೋರ್ಟ್‌ಗೆ ಹಾಜರಾಗದೆ, ಪೊಲೀಸರ ಕಣ್ತಪ್ಪಿಸಿ ತಿರುಗಾಡುತ್ತಿದ್ದ. ಆ ನಟೋರಿಯಸ್ ರೌಡಿಯನ್ನ‌‌ ಕೊನೆಗೂ ಪೊಲೀಸರು ಮಾಸ್ಟರ್ ಪ್ಲ್ಯಾನ್ ಮಾಡಿ ಖೆಡ್ಡಾಕ್ಕೆ ಕೆಡವಿದ್ದಾರೆ (arrested). ಸತೀಶ್ ಗೋನಾ… ಈತ ನಟೋರಿಯಸ್ ರೌಡಿ (Hubballi Rowdy)… ಇತನ‌ ಮೇಲೆ ಹುಬ್ಬಳ್ಳಿಯ ಅನೇಕ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಗೆ ಯತ್ನ, ಕಿಡ್ನಾಪ್​, ಬೆದರಿಕೆ, ವಸೂಲಿ ಸೇರಿದಂತೆ ಅನೇಕ ಪ್ರಕರಣಗಳು ಈತನ ಮೇಲಿವೆ. ಈ ಸತೀಶ್ ಗೋನಾ ಕಳೆದ ಎರಡೂ ವರ್ಷಗಳ ಹಿಂದೆ ತಾಳಿ ಕಟ್ಟಿದ ಹೆಂಡತಿಯನ್ನೇ (wife) ಬರ್ಬರವಾಗಿ ಕೊಲೆ ಮಾಡಿದ್ದ. ಪೆಟ್ರೋಲ್ ಸುರಿದು ಪತ್ನಿಯನ್ನೇ ಕೊಲೆ ಮಾಡಿ ಪರಾರಿಯಾಗಿದ್ದ.

ಅಲ್ಲಿಂದ ಇಲ್ಲಿಯವರೆಗೂ ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸುತ್ತಲೆ ಇದ್ದರು. ಖಾಕಿ ಪಡೆ ಬೀಸಿದ ಬಲೆಗೆ ಬೀಳದೆ, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಾ ಇದ್ದ. ಈತನ ಮೇಲೆ ಕೋರ್ಟ್‌ ವಾರಂಟ್ ಸಹ ಜಾರಿ ಮಾಡಿತ್ತು. ಕೋರ್ಟ್‌ಗೂ ಈ ನಟೋರಿಯಸ್ ರೌಡಿ ಹಾಜರಾಗಿರಲಿಲ್ಲ. ಹೀಗಾಗಿ ಈತನನ್ನ ಹೇಗಾದ್ರೂ ಮಾಡಿ ಬಂಧಿಸಬೇಕೆಂದು ಪೊಲೀಸರು ತೀರ್ಮಾನ ಮಾಡ್ತಾರೆ. ಅದರಂತೆ ಮೊನ್ನೆ ಶನಿವಾರ ಅದಕ್ಕೆ ಸಮಯ ಕೂಡಿ ಬರುತ್ತದೆ.

ನಟೋರಿಯಸ್ ರೌಡಿ ಸತೀಶ ಗೋನಾ ವ್ಯಕ್ತಿ ಓರ್ವನಿಗೆ ಪೋನ್ ಮಾಡಿ ನಿನ್ನ ಮರ್ಡರ್ ಮಾಡ್ತೇನಿ ಅಂತ ಅವಾಜ್ ಹಾಕಿರ್ತಾನೆ. ಸಾರ್ವಜನಿಕ ಸ್ಥಳದಲ್ಲಿಯೇ ಕೈಯಲ್ಲಿ ತಲ್ವಾರ ಹಿಡಿದು ಕೊಲೆ ಮಾಡಲು ಹೊಂಚು ಹಾಕುತ್ತಾ ಹುಬ್ಬಳ್ಳಿಯ ಗದಗ ರಸ್ತೆಯ ರೇಲ್ವೆ ಬ್ರಿಜ್ ಬಳಿ ಕಾಯುತ್ತಾ ಕುಳಿತಿದ್ದ. ಈ ಕುರಿತು ಶಹರ‌ ಠಾಣೆ ಪೊಲೀಸರಿಗೆ ಮಾಹಿತಿ ಬರುತ್ತದೆ.‌ ವಿಷಯ ತಿಳಿದ ಸಬ್ ಇನ್ಸ್ಪೆಕ್ಟರ್ ವಿನೋದ ದೊಡ್ಡಲಿಂಗಪ್ಪನವರ ಆ್ಯಂಡ್ ಟೀಮ್ ನಟೋರಿಯಸ್ ರೌಡಿ ಸತೀಶನನ್ನ ಸಿನಿಮೀಯ ರೀತಿಯಲ್ಲಿ ಅರೆಸ್ಟ್ ಮಾಡಿದಾರೆ. ಸಿನಿಮೀಯ ರೀತಿಯಲ್ಲಿ ಅರೆಸ್ಟ್ ಮಾಡುವ ದೃಶ್ಯ ಸಿಸಿಟಿವಿಯಲ್ಲಿಯೂ ಸೆರೆಯಾಗಿದೆ. ಅರೆಸ್ಟ್ ಮಾಡಿದ ಪೊಲೀಸರು ವಿಚಾರಣೆ ನಡೆಸಿ ಸಾಯಂಕಾಲ ಸ್ಥಳ ಮಹಜರು ಮಾಡಲು ಕರೆತಂದಿದ್ದಾರೆ. ಇದೇ ಸಮಯದಲ್ಲಿ ಪಿಎಸ್‌ಐ ಮೇಲೆ ಸೇಡು ತೀರಿಸಿಕೊಳ್ಳಲು ನಟೋರಿಯಸ್ ರೌಡಿ ಮುಂದಾಗಿದ್ದಾನೆ. ಇಲ್ಲಿಯವರೆಗೂ ನಾನು ಯಾರ ಕೈಗೂ ಸಿಕ್ಕಿರಲಿಲ್ಲ. ಇವನಿಂದ ನನ್ನ ಬಂಧನ ಆಗಿದೆ ಎಂದು ಕಲ್ಲಿನಿಂದ ಪಿಎಸ್‌ಐಗೆ ಹಲ್ಲೆ ಮಾಡಿದ್ದಾನೆ. ಇದರಿಂದಾಗಿ ಸತೀಶ್ ಗೋನಾ ಮೇಲೆ ಇನ್ಸ್ಪೆಕ್ಟರ್ ರಫೀಕ ತಹಶಿಲ್ದಾರ ಫೈರಿಂಗ್ ಮಾಡಿದ್ದಾರೆ.

ನಟೋರಿಯಸ್ ರೌಡಿ ಹಲ್ಲೆಯಿಂದ ಕೂದಲೆಳೆಯ ಅಂತರದಲ್ಲಿ ಪಿಎಸ್‌ಐ ವಿನೋದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾರಣಾಂತಿಕವಾಗಿ ಹಲ್ಲೆಗೊಳಗಾದ ಪಿಎಸ್‌ಐ‌ಗೆ ಕಿಮ್ಸ್‌ನಲ್ಲಿ ಚಿಕಿತ್ಸೆ ಮುಂದುವರಿದಿದೆ. ಆರೋಪಿ ಮೇಲೆ ಐದು ಪ್ರಕರಣಗಳಿವೆ, ಈತ ನಟೋರಿಯಸ್ ರೌಡಿ ಶೀಟರ್. ಆರೋಪಿ ಬಂಧನಕ್ಕೆ ಕೋರ್ಟ್ ವಾರೆಂಟ್ ಇತ್ತು. ಎರಡು ವರ್ಷಗಳಿಂದ ಆರೋಪಿ ಸತೀಶ್ ಗೋನಾ ತಲೆ ಮರೆಸಿಕೊಂಡಿದ್ದ.

ಪುಡಿ ರೌಡಿ, ನಟೋರಿಯಸ್ ರೌಡಿಗಳ ಮೇಲೆ ಪೊಲೀಸರು ಬಿಗಿ ಹಿಡಿತ ಇಟ್ಟಿದ್ದರು. ವಾರೆಂಟ್ ಕಾರ್ಯಗತ ಮಾಡಲು ಪೊಲೀಸರು ಹೋಗಿರ್ತಾರೆ. ಆಗ ಅಲ್ಲಿ ತಲ್ವಾರ್ ಸಿಗುತ್ತೆ ಅದನ್ನ ಠಾಣೆಗೆ ತಂದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ರಾತ್ರಿ 9 ಗಂಟೆ ಸುಮಾರಿಗೆ ಸ್ಥಳ ಮಹಜರು ಮಾಡೋಕೆ ಪೊಲೀಸರು ತೆರಳಿದ್ದರು. ಹುಬ್ಬಳ್ಳಿಯ ಟೌನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ತಂಡ ತೆರಳಿತ್ತು. ಪಿಎಸ್ಐ ವಿನೋದ ಮೇಲೆ ಆರೋಪಿ ಕಲ್ಲಿನಿಂದ ದಾಳಿ ಮಾಡಿದ್ದಾನೆ‌. ಈ ವೇಳೆ ಇನ್ಸ್ಪೆಕ್ಟರ್ ರಫೀಕ್ ತಹಶೀಲ್ದಾರ್ ಮೂರು ಸುತ್ತಿನ ಗುಂಡು ಹಾರಿಸಿದ್ದಾರೆ. ಗಾಳಿಯಲ್ಲಿ ಎರಡು ಹಾರಿಸಿ, ಒಂದು ಗುಂಡು ಕಾಲಿಗೆ ಹಾರಿಸಿದ್ದಾರೆ. ಘಟನೆ ಹಿನ್ನೆಲೆ ಕಿಮ್ಸ್ ಆಸ್ಪತ್ರೆಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಭೇಟಿ ನೀಡಿ PSI ವಿನೋದ ಅವರ ಆರೋಗ್ಯ ವಿಚಾರಣೆ ಮಾಡಿದ್ದಾರೆ.

ಕಳೆದ ಹದಿನೈದು ದಿನಗಳಿಂದ ಅವಳಿನಗರದಲ್ಲಿ ಪೊಲೀಸರು ಖಡಕ್ ಕಾರ್ಯಾಚರಣೆ ಮಾಡುತ್ತಿದ್ದಾರೆ. ರೌಡಿಗಳು ಮತ್ತು ಪುಡಿ ರೌಡಿಗಳಿಗೆ ಬಿಸಿ ಮುಟ್ಟಿಸುವ ಕೆಲಸ‌ ಮಾಡುತ್ತಿದ್ದಾರೆ. ಈ ನಡುವೆ ನಟೋರಿಯಸ್ ರೌಡಿ ಕಾಲಿಗೆ ಪೊಲೀಸರು ಗುಂಡೇಟು ಹಾಕಿದ್ದಾರೆ. ಇದು ಸಣ್ಣಪುಟ್ಟ ವಿಷಗಳಿಗೆ ಬಾಲ ಬಿಚ್ಚುವ ರೌಡಿಗಳಿಗೆ ಎಚ್ಚರಿಕೆ ಗಂಟೆಯಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:52 am, Mon, 27 November 23

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ