ರಾಜ್ಯದ ಎರಡನೇ ಅತಿ ದೊಡ್ಡ ಮಹಾನಗರ ಪಾಲಿಕೆ ಎನಿಸಿಕೊಂಡಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ (Hubli-Dharwad Municipal Corporation) ಮೇಯರ್, ಉಪ ಮೇಯರ್ ಚುನಾವಣೆ (Mayor, Deputy Mayor Election) ಇಂದು ನಡೆದಿದ್ದು, ನಿರೀಕ್ಷೆಯಂತೆ ಹು-ಧಾ ಗದ್ದುಗೆ ಬಿಜೆಪಿ ತಕ್ಕೆಗೆ ಬಿದ್ದಿದೆ. ಈ ಮಹಾನಗರ ಪಾಲಿಕೆ ಚುನಾವಣೆ ಇಷ್ಟೊಂದು ಸದ್ದು ಮಾಡಲು ಕಾರಣ ಏನು. ಈ ಮಹಾನಗರ ಪಾಲಿಕೆಯ ಬಲಾಬಲ ಏನು ಇಲ್ಲಿದೆ ಮಾಹಿತಿ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮೊದಲು 67 ವಾರ್ಡಗಳಿದ್ದವು. ನಂತರ ಕೆಲವು ವಾರ್ಡನಗಳನ್ನು ವಿಸ್ತೀರಣದ ಆಧಾರದ ಮೇಲೆ ಮರು ವಿಂಗಡಣೆ ಮಾಡಿದ್ದು, ಸದ್ಯ 82 ವಾರ್ಡಗಳಿದ್ದು, 8,11,537 ಮತದಾರರು ಇದ್ದಾರೆ. ಈ 82 ವಾರ್ಡಗಳಿಗೆ ಎಂಟು ತಿಂಗಳ ಹಿಂದೆ ಸೆಪ್ಟೆಂಬರ್ 3 2021 ರಲ್ಲಿ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ 420 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಅಭ್ಯರ್ಥಿಗಳು ಎಲ್ಲ 82 ವಾರ್ಡ್‍ಗಳಲ್ಲಿ ಕಣದಲ್ಲಿದ್ದರು. ಜೆಡಿಎಸ್ 49, ಸಿಪಿಐ (ಎಮ್) 1, ಬಿಎಸ್‍ಪಿ 7, ಎಎಪಿ 1, ಉತ್ತಮ ಪ್ರಜಾಕೀಯ 11, ಕರ್ನಾಟಕ ರಾಷ್ಟ್ರ ಸಮಿತಿ 4, ಎಐಎಮ್‍ಐಎಂ 12, ಎಸ್‍ಡಿಪಿಐ 4, ಕರ್ನಾಟಕ ಶಿವಸೇನೆ 4, ಕರ್ನಾಟಕ ಜನಸೇವೆ ಪಾರ್ಟಿ 1, ಪಕ್ಷೇತರ 122 ಸೇರಿದಂತೆ ಒಟ್ಟು 420 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಇದನ್ನು ಓದಿ: ಅಂಚೆ ಇಲಾಖೆಯಲ್ಲಿ ಉದ್ಯೋಗ: 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ
ಸೆಪ್ಟೆಂಬರ್ 7 ರಂದು ಚುನಾವಣೆ ಫಲಿತಾಂಶ ಪ್ರಕಟಗೊಂಡಿತ್ತು. ಚುನಾವಣೆಯಲ್ಲಿ 82 ಸ್ಥಾನಗಳ ಪೈಕಿ ಈ ಬಾರಿ ಬಿಜೆಪಿ 39 ಕಾಂಗ್ರೆಸ್ 33 ಪಕ್ಷೇತರ 06 ಎಐಎಂಐಎಂ 03 ಜೆಡಿಎಸ್ 01ರಲ್ಲಿ ಗೆಲವು ದಾಖಲಿಸಿದೆ. ಈ ಫಲಿತಾಂಶ ಅತಂತ್ರವಾಗಿ ಹೊರ ಹೊಮ್ಮಿತ್ತು. ಏಕೆಂದರೆ ಮಹಾನಗರ ಪಾಲಿಕೆಯ ಬಹುಮತ 42 ಇದ್ದು ಯಾವ ಪಕ್ಷಕ್ಕು ಬಹುಮತ ಬರಲ್ಲಿಲ್ಲ. ಅತಂತ್ರದ ಸ್ಥತಿ ನಿರ್ಮಾಣವಾಗಿತ್ತು. ಆದರೆ ನಾವು ಇಲ್ಲಿ ನೆನಪು ಇಟ್ಟುಕೊಳ್ಳಬೇಕಾದ ಸಂಗತಿ ಅಂದರೆ ಮೇಯರ್ ಆಯ್ಕೆಗೆ ನಾಲ್ವರು ಶಾಸಕರು, ನಾಲ್ವರು ಎಂ.ಎಲ್.ಸಿ. ಹಾಗೂ ಓರ್ವ ಸಂಸದರು ಕೂಡ ಮತ ಚಲಾಯಿಸಬಹುದು. ಇದು ಬಿಜೆಪಿ ಮೇಯರ್ ಆಯ್ಕೆಗೆ ವರವಾಗಿದೆ. ಹೇಗೆಂದರೆ ನಾಲ್ವರು ಶಾಸಕರ ಪೈಕಿ ಮೂವರು ಬಿಜೆಪಿ, ಇಬ್ಬರು ಎಂ.ಎಲ್.ಸಿ. ಹಾಗೂ ಓರ್ವ ಸಂಸದ ಸೇರಿ ಆರು ಜನಪ್ರತಿನಿಧಿಗಳು ಬಿಜೆಪಿ ಪಾಲಿಗೆ ವರವಾಗಿದ್ದಾರೆ. ಇನ್ನು ಕಾಂಗ್ರೆಸ್ಗೆ ಇಬ್ಬರು ವರವಾಗಿದ್ದಾರೆ.
6 ಪಕ್ಷೇತರ ಅಭ್ಯರ್ಥಿಗಳಲ್ಲಿ ಮೂವರು ಬಿಜೆಪಿಗೆ ಸೇರ್ಪಡೆ ಹಿನ್ನೆಲೆ ಬಿಜೆಪಿ ಬಲ 42 ಆಗಿದೆ. ಪಕ್ಷೇತರರಾಗಿದ್ದ ದುರ್ಗಮ್ಮ ಬೀಜವಾಡ, ಚಂದ್ರಿಕಾ ಮೇಸ್ತ್ರಿ ಹಾಗೂ ಕಿಷನ್ ಬೆಳಗಾವಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಪ್ರದೀಪ ಶೆಟ್ಟರ ಹಾಗೂ ಎಸ್.ವಿ. ಸಂಕನೂರ ವಿಶೇಷ ಮತ ಚಲಾಯಿಸಿದ್ದಾರೆ. ಒಟ್ಟ 48 ಮತಗಳು ಬಿಜೆಪಿ ಪಾಳಯಕ್ಕೆ ಬಂದಿವೆ. ಇನ್ನು ಎರಡು ಮತಗಳು ತಿಳಿದು ಬಂದಿಲ್ಲ.
ಇದನ್ನು ಓದಿ: ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್ಪೋಗೆ ಎರಡನೆ ದಿನ; ಎಕ್ಸ್ಪೋಗೆ ಭೇಟಿ ನೀಡಿ, ಚಿನ್ನ ಗೆಲ್ಲಿ
ಮೇಯರ್ ಚುನಾವಣೆ
ಇಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಮಧ್ಯಾಹ್ನ 1.30ಕ್ಕೆ ಕೈ ಎತ್ತುವ ಮೂಲಕ ಮೇಯರ್ ಆಯ್ಕೆ ಪ್ರಕ್ರಿಯೆ ನಡೆದಿದೆ. ಬಿಜೆಪಿ ಅಭ್ಯರ್ಥಿ ಈರೇಶ ಅಂಚಟಗೇರಿ ಪರ 50 ಮತ ಹಾಕಿದ್ದರೇ, ಈರೇಶ್ ವಿರುದ್ದ 35 ಮತ ಚಲಾಯಿಸಿದ್ದು, 3 ತಟಸ್ಥವಾಗಿವೆ ಬಿಜೆಪಿ ಉಪಮೇಯರ್ ಅಭ್ಯರ್ಥಿ ಉಮಾ ಮುಕುಂದ್ ಪರ 51, ವಿರುದ್ಧ-35, ತಟಸ್ಥ 03 ಮತ ಪಡೆಯುವ ಮೂಲಕ ಗೆಲವು ಸಾಧಿಸಿದ್ದಾರೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:48 pm, Sat, 28 May 22