Hubli-Dharwad Municipal Corporation Mayor Election: ಸಭೆಗಳ ಮೇಲೆ ಸಭೆ ನಡೆಸುತ್ತಿರುವ ಬಿಜೆಪಿ; ಯಾರಿಗೆ ಒಲಿಯಲಿದೆ ಹು-ಧಾ ಗದ್ದುಗೆ?

| Updated By: ವಿವೇಕ ಬಿರಾದಾರ

Updated on: May 28, 2022 | 11:03 AM

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆ  ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ‌ ಸಭೆಗಳ ಮೇಲೆ ಸಭೆ ಮಾಡುತ್ತಿದೆ. ನಿನ್ನೆ ತಡರಾತ್ರಿ ವರೆಗೂ ನಡೆದ ಸಭೆ ನಡೆದಿದ್ದು, ಇಂದು ಮತ್ತೆ  ಬಿಜೆಪಿ ಕೋರ್ ಕಮಿಟಿ ಸಭೆ ಸೇರಿದೆ.

Hubli-Dharwad Municipal Corporation Mayor Election: ಸಭೆಗಳ ಮೇಲೆ ಸಭೆ ನಡೆಸುತ್ತಿರುವ ಬಿಜೆಪಿ; ಯಾರಿಗೆ ಒಲಿಯಲಿದೆ ಹು-ಧಾ ಗದ್ದುಗೆ?
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
Image Credit source: Hubballi
Follow us on

ಹುಬ್ಬಳ್ಳಿ:  ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ (Hubli-Dharwad Municipal Corporation) (Mayor, Deputy Mayor Election) ಮೇಯರ್, ಉಪ ಮೇಯರ್ ಚುನಾವಣೆ  ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಾವು ಏರಿದ್ದು, ಯಾವ ಪಕ್ಷ ಮಹಾನಗರ ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿಯುತ್ತೆ ಕಾದು ನೋಡಬೇಕಿದೆ.  ಈ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ‌ (BJP) ಸಭೆಗಳ ಮೇಲೆ ಸಭೆ ಮಾಡುತ್ತಿದೆ. ನಿನ್ನೆ ತಡರಾತ್ರಿ ವರೆಗೂ ನಡೆದ ಸಭೆ ನಡೆದಿದ್ದು, ಇಂದು ಮತ್ತೆ  ಬಿಜೆಪಿ ಕೋರ್ ಕಮಿಟಿ ಸಭೆ ಸೇರಿದೆ. ಹುಬ್ಬಳ್ಳಿ ಖಾಸಗಿ ಹೋಟೆಲ್​ನಲ್ಲಿ ಬಿಜೆಪಿ ನಾಯಕರ ಸಭೆ ನಡೆದಿದೆ. ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕುರಿತು ಸಮಾಲೋಚನೆ ನಡೆದಿದೆ. ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ಜಗದೀಶ್ ಶೆಟ್ಟರ್​ ಮತ್ತು ಅರವಿಂದ ಬೆಲ್ಲದ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ.

ಇದನ್ನು ಓದಿ:  ಕಾಂಗ್ರೆಸ್​ನವರಿಂದ ಹಿಂದೂ ಸಮಾಜ ಒಡೆಯುವ ಕೆಲಸ ಆಗುತ್ತಿದೆ : ಬಿ. ಸಿ ನಾಗೇಶ್

 ಇಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಸ್ಥಾನಕ್ಕೆ  ಚುನಾವಣೆ  ನಡೆಯಲಿದ್ದು, ಬೆಳಗ್ಗೆ 9.30ರಿಂದ 11 ಗಂಟೆವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.  ಮಧ್ಯಾಹ್ನ 1ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯುಲಿದ್ದು, ಹಾಗೇನಾಮಪತ್ರ  ಹಿಂಪಡೆಯಲು ಅವಕಾಶ ನೀಡಲಾಗಿದೆ.  ಮಧ್ಯಾಹ್ನ 1.30ಕ್ಕೆ ಕೈ ಎತ್ತುವ ಮೂಲಕ ಮೇಯರ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಚುನಾವಣೆಯ ಅಧಿಕಾರಿಯಾಗಿ ಬಿಸ್ವಾಸ್ ಕಾರ್ಯ ನಿರ್ವಹಿಸಲಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ 82 ವಾರ್ಡ್​ಗಳಿದ್ದು, ಗೆಲುವಿಗೆ ಮ್ಯಾಜಿಕ್ ನಂಬರ್ 42 ಅವಶ್ಯಕತೆ ಇದೆ. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬೆಜೆಪಿಯಿಂದ  39, ಕಾಂಗ್ರೆಸ್ 33, ಜೆಡಿಎಸ್ 1, AIMIN 3 ಹಾಗೂ 6ಜನ ಪಕ್ಷೇತರರು ಆಯ್ಕೆಯಾಗಿದ್ದರು.

ಇದನ್ನೂ ಓದಿ
ಗೌರಿ ಲಂಕೇಶ್​ ಹತ್ಯೆ ಪ್ರಕರಣ: ಜುಲೈ 4ರಿಂದ ನಿರಂತರ ವಿಚಾರಣೆ ಆರಂಭ
ಮಂಗಳೂರಿನಲ್ಲಿ ಕಾಲೇಜಿಗೆ ಮತ್ತೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು; ತರಗತಿಗೆ ಪ್ರವೇಶ ನಿರಾಕರಿಸಿದ ಪ್ರಾಂಶುಪಾಲೆ
Monkeypox: ಮಂಕಿಪಾಕ್ಸ್​ ವೈರಸ್ ಕುರಿತು ಜನರ ಸಂದೇಹಗಳಿಗೆ ಇಲ್ಲಿದೆ ವೈದ್ಯರಿಂದ ಉತ್ತರ
World Menstrual Hygiene Day 2022: ಸ್ತ್ರೀಯರು ಈ ಸಲಹೆಗಳನ್ನು ತಪ್ಪೆದೇ ಅನುಸರಿಸಿ, ಈ ತಪ್ಪು ಮಾಡಲೇ ಬೇಡಿ

ಇದನ್ನು ಓದಿ: IPL 2022: RCB ಪರ ಸಿರಾಜ್​ ಒಬ್ಬರೇ 500 ರನ್​, ಕೊಹ್ಲಿ, ಮ್ಯಾಕ್ಸಿಗೂ ಸಾಧ್ಯವಾಗಿಲ್ಲ..!

6 ಪಕ್ಷೇತರ ಅಭ್ಯರ್ಥಿಗಳಲ್ಲಿ ಮೂವರು ಬಿಜೆಪಿಗೆ ಸೇರ್ಪಡೆ ಹಿನ್ನೆಲೆ ಬಿಜೆಪಿ ಬಲ 42 ಆಗಿದೆ. ಪಕ್ಷೇತರರಾಗಿದ್ದ ದುರ್ಗಮ್ಮ ಬೀಜವಾಡ, ಚಂದ್ರಿಕಾ ಮೇಸ್ತ್ರಿ ಹಾಗೂ ಕಿಷನ್ ಬೆಳಗಾವಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ವಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಪ್ರದೀಪ ಶೆಟ್ಟರ ಹಾಗೂ ಎಸ್.ವಿ. ಸಂಕನೂರ ಶೇಷ ಮತ ಚಲಾಯಿಸಲಿದ್ದಾರೆ. ಈ ಮೂಲಕ ಪಾಲಿಕೆ ಬಿಜೆಪಿ ಸದಸ್ಯರ ಬಲ 42 ವಿಶೇಷ ಜನಪ್ರತಿನಿಧಿಗಳ ಮತ 6 ಒಟ್ಟು ಬಿಜೆಪಿಗೆ ಸಲ್ಲಲಿವೆ  ಒಟ್ಟ 48 ಮತಗಳು ಬಿಜೆಪಿ ಬೀಳಲಿದ್ದು, ಬಿಜೆಪಿ ಸ್ಪಷ್ಟ ಬಹುಮತದತ್ತ ಸಾಗಲಿದೆ.  ಇನ್ನು ಕಾಂಗ್ರೆಸ್, ಜೆಡಿಎಸ್, ಪಕ್ಷೇತರರು ಒಟ್ಟಾ ಸೇರಿದರೂ ಬಿಜೆಪಿಯನ್ನ ಮಣಿಸೋದು ಕನಸಿನ ಮಾತಾಗಿದ್ದು, ಕಾಂಗ್ರೆಸ್, ಜೆಡಿಎಸ್ ಪಕ್ಷದ ಸದಸ್ಯರು ಒಳಹೊಡೆತ ಕೊಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ